ಬಾಂಗ್ಲಾದೇಶದಲ್ಲಿ (Bangladesh) ಫೆಬ್ರವರಿ 12, 2026 ರಂದು ನಡೆದ ಸಾರ್ವತ್ರಿಕ ಸಂಸತ್ತು ಚುನಾವಣೆ ಭಾರೀ ಕುತೂಹಲ ಹುಟ್ಟಿಸಿದೆ. ಅತ್ತ ಬಾಂಗ್ಲಾದೇಶದ ಇತಿಹಾಸದಲ್ಲೇ ಈ ಚುನಾವಣೆ ಭಾರೀ ಮಹತ್ವದ ಪಡೆದುಕೊಂಡಿದೆ. 2024ರ ಜುಲೈ-ಆಗಸ್ಟ್‌ನಲ್ಲಿ ಝೆನ್-ಜಿ ವಿದ್ಯಾರ್ಥಿ ದಂಗೆಯ ನಂತರ, ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ಗಡಿಪಾರಿನ ನಂತರ ನಡೆದ ಮೊದಲ ಚುನಾವಣೆಯಲ್ಲೇ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (BNP) ಜಯಭೇರಿ ಸಾಧಿಸಿದೆ. ಈ ಮೂಲಕ ಸುದೀರ್ಘ 17 ವರ್ಷಗಳ ಸುದೀರ್ಘ ನಂತರ, ತಾರೀಖ್ ರೆಹಮಾನ್ (Tarique Rahman) ಬಾಂಗ್ಲಾದೇಶ ರಾಜಕೀಯಕ್ಕೆ ಮತ್ತೆ ರೋಚಕ ಜಯದ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ತಾರಿಕ್ ರೆಹಮಾನ್ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷವನ್ನು (BNP), ರಾಷ್ಟ್ರೀಯ ಚುನಾವಣೆಯಲ್ಲಿ ಭರ್ಜರಿ ಬಹುಮತದೆಡೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. 151 ಸ್ಥಾನಗಳ ಬಹುಮತದ ಗಡಿಯನ್ನು ದಾಟಿ, ಅವರು ಬಾಂಗ್ಲಾದೇಶದ ಮುಂದಿನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ಯಾರು ಈ ತಾರಿಕ್ ರೆಹಮಾನ್?
60 ವರ್ಷದ ರೆಹಮಾನ್, ಮಾಜಿ ಪ್ರಧಾನ ಮಂತ್ರಿ ಖಲೀದಾ ಜಿಯಾ ಅವರ ಪುತ್ರ. ಬಿಎನ್ ಪಕ್ಷದ ಡಾರ್ಕ್ ಪ್ರಿನ್ಸ್ ಎಂದೇ ಗುರುತಿಸಿಕೊಂಡಿದ್ದಾರೆ. ತಾರಿಕ್ ರೆಹಮಾನ್ ಅವರು ಸಾಗಿ ಬಂದ ದಾರಿಯೇ ಬಹಳ ರೋಚಕ, ಏಕೆಂದರೆ ಈತ 2008 ರಿಂದ ಜನವರಿ, 2026 ರವರೆಗೂ ಅಂದರೆ ಬರೋಬ್ಬರಿ 17 ವರ್ಷಗಳ ಕಾಲ ಬಾಂಗ್ಲಾದೇಶದಿಂದ ಸ್ವಯಂ ಗಡೀಪಾರಾಗಿದ್ದರು. ಬಾಂಗ್ಲಾದಿಂದ ಹೊರಬಂದ ತಾರಿಕ್, ನಂತರ ಲಂಡನ್‌ನಲ್ಲಿ ವಾಸ ಮಾಡಿಕೊಂಡು, ತನ್ನ ಬಿಎನ್‌ಪಿ ಪಕ್ಷವನ್ನು ಮುನ್ನಡೆಸುತ್ತಿದ್ದರು. 1988 ರಲ್ಲಿ ಬಿಎನ್‌ಪಿ ಪಕ್ಷಕ್ಕೆ ಸೇರಿದ ಇವರು 2001-2006 ರಲ್ಲಿ ತಾಯಿ ಖಲೀದಾ ಜಿಯಾ ಅವರು ಪ್ರಧಾನಿಯಾಗಿದ್ದಾಗ, ಅವರೊಂದಿಗೆ ಪ್ರಮುಖ ಪಾತ್ರವಹಿಸಿದ್ದರು.
ಇನ್ನು 17 ವರ್ಷಗಳ ಸ್ವಯಂ ಗಡೀಪಾರಿನಿಂದ ಜೀವನ ನಡೆಸುತ್ತಿದ್ದ ತಾರಿಕ್ ರೆಹಮಾನ್, ನಂತರ 2025ರ ಡಿಸೆಂಬರ್ 25 ರಂದು ತಾಯಿಯ ನಿಧನ ಸಮಯದಲ್ಲಿ ಬಾಂಗ್ಲಾದೇಶಜ್ಜೆ ಮರಳಿದರು. ಆ ಬಳಿಕ ಬಿಎನ್‌ಪಿ ಪಕ್ಷದ ನೇತೃತ್ವ ವಹಿಸಿಕೊಂಡು, ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡು, ಬಿಎನ್‌ಪಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಇದೀಗ ಫೆಬ್ರವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡು ಬಾಂಗ್ಲಾದೇಶದ ನೂತನ ಪ್ರಧಾನ ಮಂತ್ರಿಯಾಗಿ ತಾರಿಕ್ ರೆಹಮಾನ್ ಆಯ್ಕೆಯಾಗಿದ್ದಾರೆ.
ಆಸ್ತಿ ಎಷ್ಟು ಗೊತ್ತಾ?
ತಾರಿಕ್ ಅವರನ್ನು ಬಾಂಗ್ಲಾದೇಶದ ಮೂರನೇ ಅತಿ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ನಿವ್ವಳ ಆಸ್ತಿ ಸುಮಾರು $1.7 ಬಿಲಿಯನ್ (ಅಂದಾಜು 21,000 ಕೋಟಿ ಬಾಂಗ್ಲಾದೇಶಿ ಟಾಕಾ, ಅಥವಾ 15,000 ಕೋಟಿಗೂ ಹೆಚ್ಚು ಭಾರತೀಯ ರೂಪಾಯಿ) ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಒಂದು ಡಾಲರ್‌ಗೆ 122.49 ಟಾಕಾ ಮೌಲ್ಯವಿದೆ.
ತಾರಿಕ್ ಅವರ ಸಂಪಾದನೆ ಬಗ್ಗೆ ಸಾರ್ವಜನಿಕ ಮಾಹಿತಿಯಿಂದ ಮಾತ್ರ ವರದಿಯಾಗಿದೆ. ಆದರೆ, 2015ರಲ್ಲಿ 'ವೈಟ್ ಅಂಡ್ ಬ್ಲೂ ಕನ್ಸಲ್ಟೆಂಟ್ಸ್ ಲಿಮಿಟೆಡ್' ಹೆಸರಿನ ಸಾರ್ವಜನಿಕ ಸಂಪರ್ಕ ಹಾಗೂ ಸಂವಹನ ಕಂಪನಿಯನ್ನು ನೋಂದಾಯಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ದಕ್ಷಿಣ ಆಫ್ರಿಕಾದಲ್ಲಿ 1.5 ಕೋಟಿ ಟಾಕಾ ಮೌಲ್ಯದ ಯೋಜನೆಗಳಲ್ಲಿಯೂ ಅವರು ಹೂಡಿಕೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.


Click it and Unblock the Notifications