ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ಸೂಪರ್ ಸ್ಟಾರ್ ಗಳಿದ್ದು, ಈ ಚಿತ್ರರಂಗವು ಅತ್ಯುತ್ತಮ ಸಾಹಸ ಸೀನ್ ಗಳು, ವೈಭವಯುತವಾದ ದೃಶ್ಯಗಳು ಮತ್ತು ಭಾವನಾತ್ಮಕ ಕಥಾ ಹಂದರದ ಮೂಲಕ ಹಿಟ್ ಚಿತ್ರಗಳನ್ನು ಒಂದರ ಹಿಂದೆ ಒಂದರಂತೆ ನೀಡುತ್ತಾ ಬಂದಿದೆ. ಇಲ್ಲಿ ಬಾಲಿವುಡ್ ಸ್ಟಾರ್ ಗಳನ್ನು ಮೀರುವಂತ ಸಿರಿವಂತ ನಾಯಕ ನಟರಿದ್ದಾರೆ. ಅದರಲ್ಲೂ ಟಾಲಿವುಡ್ ಇಂಡಸ್ಟ್ರಿ ಬಾಲಿವುಡ್ ಗೆ ಸಮನಾದ ಪೈಪೋಟಿ ನೀಡುತ್ತಿದೆ.
ಇಲ್ಲಿರುವ ಅಗರ್ಭ ಶ್ರೀಮಂತ ನಟರ ಬಗ್ಗೆ ಮಾತನಾಡೋವಾಗ ನಮಗೆ ಥಟ್ಟನೆ ರಜನಿಕಾಂತ್ ಅಥವಾ ಪ್ರಭಾಸ್ ನೆನಪಾಗಬಹುದು. ಆದರೆ ಇಲ್ಲಿಈ ಸ್ಟಾರ್‌ಗಳ ಪೈಕಿ ಓರ್ವ ನಟ ಪ್ರತ್ಯೇಕವಾಗಿ ನಿಂತು ಉದ್ಯಮದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 800 ಕೋಟಿ ಮೌಲ್ಯದ ಆಸ್ತಿ ಸೇರಿದಂತೆ 3050 ಕೋಟಿ ರೂ.ಗಳ ಪ್ರಭಾವಶಾಲಿ ನಿವ್ವಳ ಮೌಲ್ಯದೊಂದಿಗೆ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಎಂದು ಎನಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಶ್ರೀಮಂತ ನಟ ಯಾರು ?
ಈ ಸಿರಿವಂತ ನಟನ ನಿವ್ವಳ ಮೌಲ್ಯ ಹೆಚ್ಚು ಕಡಿಮೆ ಬಾಲಿವುಡ್ ಬಾದ್ ಶಾ ಸಲ್ಮಾನ್ ಖಾನ್ ಅವರಷ್ಟೇ ಇದೆ. ಇವರೇ ನಾಗಾರ್ಜುನ್ ಎಂದು ಖ್ಯಾತರಾದ ನಾಗಾರ್ಜುನ ಅಕ್ಕಿನೇನಿ. ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿರುವ ನಾಗಾರ್ಜುನ್ ಅವರ ಒಟ್ಟು ನಿವ್ವಳ ಮೌಲ್ಯ 3050 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
1959ರ ಆಗಸ್ಟ್ 29ರಂದು ಜನಿಸಿದ ಅಕ್ಕಿನೇನಿ ನಾಗಾರ್ಜುನ ರಾವ್ ತೆಲುಗು ಚಿತ್ರರಂಗದ ಪ್ರಮುಖ ನಟ. ತೆಲುಗು ಚಿತ್ರಗಳಲ್ಲದೆ, ನಾಗಾರ್ಜುನ ಕೆಲವು ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿಯೂ ನಿರ್ಮಿಸಿದ್ದಾರೆ. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹತ್ತು ನಂದಿ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಅವಾರ್ಡ್ ಗಳನ್ನು ಗೆದ್ದ ನಟರಾಗಿದ್ದಾರೆ
ಕೇವಲ ಸಿನಿಮಾದಲ್ಲಿ ನಟಿಸಿ ಶ್ರೀಮಂತರಾದರೇ?
ಶಿವ, ಗಗನಂ, ಶ್ರೀ ರಾಮದಾಸು, ಮತ್ತು ಗೀತಾಂಜಲಿ ಸೇರಿದಂತೆ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿರುವ ನಾಗಾರ್ಜುನ ಅವರು ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕುತೂಹಲಕಾರಿಯಾಗಿ ವಿಚಾರವೆಂದರೆ ನಾಗಾರ್ಜುನ್ ಮಾತ್ರವಲ್ಲದೇ ಟಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಚಲನಚಿತ್ರ ಉದ್ಯಮಗಳಲ್ಲಿ ಶ್ರೀಮಂತ ನಟ ಎಂದು ಪರಿಗಣಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯವು $364 ಮಿಲಿಯನ್ (ರೂ. 3050 ಕೋಟಿ) ಆಗಿದ್ದು, ಭಾರತೀಯ ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.
ನಾಗಾರ್ಜುನ್ ಅವರು ಕೇವಲ ಸಿನಿಮಾ ಮಾಡಿ ಅಷ್ಟೊಂದು ಶ್ರಿಮಂತಿಕೆ ಗಳಿಸಲಿಲ್ಲ. ಸಿನಿಮಾಗಳಿಂದ ಾವರು ಸಂಪಾದಿಸಿದ ಹಣವನ್ನು ಹಲವೆಡೆ ಹೂಡಿದ್ದಾರೆ. ನಾಗಾರ್ಜುನ ಅವರು ತಮ್ಮ ಹಣವನ್ನು ಪ್ರಮುಖವಾಗಿ ರಿಯಲ್ ಎಸ್ಟೇಟ್, ಸಿನಿಮಾ ಮತ್ತು ಕ್ರೀಡಾ ಫ್ರಾಂಚೈಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಾಗಿ ಅವರು ಇಂದು ದಕ್ಷಿಣದ ಶ್ರೀಮಂತ ನಾಯಕರಾಗಿದ್ದಾರೆ. ಇದಲ್ಲದೇ ನಾಗಾರ್ಜುನ ತಮ್ಮ ಒಂದು ಚಿತ್ರಕ್ಕೆ 25 ಕೋಟಿ ರೂ. ಪಡೆಯುತ್ತಾರೆ. ಇದಲ್ಲದೇ ತೆಲುಗು ಬಿಗ್ ಬಾಸ್ ಕಾರ್ಯಕ್ರಮಕ್ಕೂ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡಿದ್ದರು. ನಾಗಾರ್ಜುನ್ ಅವರು ನಟರಲ್ಲದೆ ಸಿನಿಮಾ ನಿರ್ಮಾಪಕರೂ ಹೌದು. ಇದರ ಹೊರತಾಗಿ, ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳು ಸಹ ನಾಗರಾರ್ಜುನ್ ಅವರ N3 ರಿಯಾಲಿಟಿ ಎಂಟರ್‌ಪ್ರೈಸ್‌ನೊಂದಿಗೆ ಸಂಬಂಧ ಹೊಂದಿವೆ.
ಸೂಪರ್ ಸ್ಟಾರ್ ರಜನಿಕಾಂತ್ ಗಿಂತ ಹೇಗೆ ಶ್ರೀಮಂತ?
ನಾಗಾರ್ಜುನ್ ಇಂದು ಅತ್ಯಂತ ಶ್ರೀಮಂತ ಮತ್ತು ಯಶಸ್ವಿ ನಟ. ಆದರೆ ರಜನಿಕಾಂತ್, ಕಮಲ್ ಹಾಸನ್ ಇಡೀ ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆಗಿರುವ ಐಡೆಂಟಿಟಿ ಸೃಷ್ಟಿಸಿಕೊಂಡಿದ್ದಾರೆ. ಈ ವಿಚಾರವಾಗಿ ಯಾರೂ ಇವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ನಿವ್ವಳ ಮೌಲ್ಯ ನಾಗಾರ್ಜುನ್ ಗಿಂತ ಕಡಿಮೆ ಇದೆ. ರಜನಿಕಾಂತ್ ಅವರ ಇಂದಿನ ಆಸ್ತಿ ಕೇವಲ 500 ಕೋಟಿ ರೂ. ಆಗಿದ್ರೆ ತೆಲುಗು ಸೂಪರ್ ಹಿಟ್ ನಟ ಪ್ರಭಾಸ್ ಅವರ ನಿವ್ವಳ ಮೌಲ್ಯವೂ 300 ಕೋಟಿ ರೂ. ಆಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Silver Rate Today: ಮತ್ತೆ ಸ್ಥಿರವಾದ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bus Fare Hike: ಯುಗಾದಿ ಹತ್ತಿರದಲ್ಲಿರೋವಾಗ್ಲೇ ಬಸ್ ಟಿಕೆಟ್ ಹೆಚ್ಚಳದ ಸೂಚನೆ! ಎಷ್ಟಾಗಲಿದೆ ಗೊತ್ತಾ ದರ?

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Power Cut: ಇಂದು ಇಲ್ಲೆಲ್ಲಾ ಇರಲ್ಲ ಕರೆಂಟ್! ಬೆಸ್ಕಾಂ ಇಲಾಖೆಯಿಂದ ಕ್ರಮ



Click it and Unblock the Notifications