For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ನ ಅತ್ಯಂತ ಕೆಟ್ಟದಾದ ಪರಿಸ್ಥಿತಿ ಬಗ್ಗೆ ಎಚ್ಚರಿಸಿದ WHO

|

ಜಿನೆವಾ: ವಿವಿಧ ದೇಶಗಳು ಕಠಿಣ ಆರೋಗ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ವಿಫಲವಾದರೆ ಜಗತ್ತಿನಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಭಾರೀ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸೋಮವಾರ ಎಚ್ಚರಿಸಿದೆ.

ಹಲವಾರು ದೇಶಗಳು ತಪ್ಪು ದಿಕ್ಕಿನಲ್ಲಿ ಸಾಗುತ್ತಿವೆ. ಹೀಗಾಗಿ ಮಹಾಮಾರಿ ವೈರಸ್ ನಂಬರ್ ಒನ್ ಸಾರ್ವಜನಿಕ ಶತ್ರುವಾಗಿ ಉಳಿದಿದೆ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಮೂಲಭೂತ ಅಂಶಗಳನ್ನು ಅನುಸರಿಸದಿದ್ದರೆ, ಈ ಸಾಂಕ್ರಾಮಿಕ ರೋಗವು ಇನ್ನೂ ಕೆಟ್ಟದಾಗುತ್ತಾ ಹೋಗುತ್ತದೆ ಎಂದು ಅವರು ಹೇಳಿದ್ದಾರೆ.

ಕೊರೊನಾವೈರಸ್‌ನ ಅತ್ಯಂತ ಕೆಟ್ಟದಾದ ಪರಿಸ್ಥಿತಿ ಬಗ್ಗೆ ಎಚ್ಚರಿಸಿದ WHO

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವವನ್ನು ಟೀಕಿಸಿರುವ ಟೆಡ್ರೊಸ್, ಭಾನುವಾರ 230,000 ಹೊಸ ಪ್ರಕರಣಗಳಲ್ಲಿ 80% 10 ರಾಷ್ಟ್ರಗಳಿಂದ ಮತ್ತು 50% ಕೇವಲ ಎರಡು ದೇಶಗಳಿಂದ ಬಂದಿದೆ ಎಂದು ಹೇಳಿದರು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಜಾಗತಿಕವಾಗಿ ಕೊರೊನಾವೈರಸ್ ಸೋಂಕುಗಳು 13 ಮಿಲಿಯನ್ ಆಗಿದ್ದು, ಅರ್ಧ ದಶಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.

Read more about: health ಆರೋಗ್ಯ
English summary

WHO Warned That The Coronavirus Epidemic Is Likely To Worsen

WHO Warned On Monday That The Coronavirus Epidemic Is Likely To Worsen
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X