ಶತಕೋಟಿ ಮೌಲ್ಯದ ಮಹೀಂದ್ರಾ ವ್ಯವಹಾರವನ್ನ ಇನ್ಮುಂದೆ ಯಾರು ನಿಭಾಯಿಸುತ್ತಾರೆ?

ಭಾರತದಲ್ಲಿ ಆಟೋಮೊಬೈಲ್‌ಗಳ ಪ್ರಮುಖ ತಯಾರಕರಲ್ಲಿ ಒಂದಾಗಿರುವ ಮಹೀಂದ್ರಾ & ಮಹೀಂದ್ರಾ ಕಂಪನಿಯ ವ್ಯವಹಾರಗಳನ್ನ ನಿರ್ವಹಿಸುತ್ತಿರುವ ಆನಂದ್‌ ಮಹೀಂದ್ರಾ ದೇಶದ ಜನಪ್ರಿಯ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಅವರು ತಮ್ಮ ವಯವಹಾರದ ಬಗ್ಗೆ ಎಷ್ಟು ಚರ್ಚೆಯಲ್ಲಿದ್ದಾರೋ ಹಾಗೆ ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಬಗ್ಗೆಯೂ ಕೂಡ ಅಷ್ಟೇ ಚರ್ಚೆ ನಡೆಯುತ್ತಿದೆ.

ಆನಂದ್‌ ಮಹೀಂದ್ರಾ ಅವರು ಎಷ್ಟು ಜನಪ್ರಿಯತೆಯನ್ನ ಹೊಂದಿದ್ದಾರೋ ಹಾಗೆ ಅವರು ತಮ್ಮ ಉದ್ಯಮದದಲ್ಲಿ ಅಷ್ಟೇ ಜಾಗರೂಕರು ಅವರು ಎಲ್ಲೇ ಹೋದರು ಮಹೀಂದ್ರ ಕಾರುಗಳನ್ನೇ ಬಳಕೆ ಮಾಡುತ್ತಾರೆ. ಈಗಿನ ಯುವಕರಿಗೆ ತಮ್ಮಕೆಲಸಗಳ ಮೂಲಕ ಮಾದರಿಯ ಉದ್ಯಮಿಯಾಗಿದ್ದಾರೆ. ಅಲ್ಲದೆ ಇವರು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಆನಂದ್‌ ಮಹೀಂದ್ರಾ ಅವರ ಬಗ್ಗೆ ಎಲ್ಲರೂ ತೀಳಿದೇ ಇರುತ್ತಾರೆ ಆದ್ರೆ. ಅವರ ಕುಟುಂಬದ ಬಗ್ಗೆ ತಿಳಿದಿರುವವರು ಅತೀ ಕಡಿಮೆ.

ಮಹೀಂದ್ರಾ ವ್ಯವಹಾರವನ್ನ ಇನ್ಮುಂದೆ ಯಾರು ನಿಭಾಯಿಸುತ್ತಾರೆ?

ಆನಂದ್‌ ಮಹೀಂದ್ರಾ ಕುಟುಂಬ

ಆನಂದ್‌ ಮಹೀಂದ್ರಾ ಅವರು ಮಹೀಂದ್ರ ಮತ್ತು ಮಹೀಂದ್ರಾ ಗ್ರೂಪ್‌ನನ್ನು ನಿಭಾಯಿಸುತ್ತಿದ್ದಾರೆ. ಈ ಕಂಪನಿ 1.9 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಮಹೀಂದ್ರಾ ಗ್ರೂಪ್ ಭಾರತದಲ್ಲಿ ನೆಲೆಗೊಂಡಿರುವ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದೆ. ಇದು ಆಟೋಮೋಟಿವ್, ಏರೋಸ್ಪೇಸ್, ​​ಅಗ್ರಿಬಿಸಿನೆಸ್, ನಿರ್ಮಾಣ, ರಕ್ಷಣೆ, ಇಂಧನ, ಆತಿಥ್ಯ, ಮಾಹಿತಿ ತಂತ್ರಜ್ಞಾನ, ವಿರಾಮ ಮತ್ತು ಆತಿಥ್ಯ, ಮತ್ತು ರಿಯಲ್ ಎಸ್ಟೇಟ್‌ನಂತಹ ಬಹು ವಲಯಗಳನ್ನು ವ್ಯಾಪಿಸಿರುವ ವೈವಿಧ್ಯಮಯ ವ್ಯವಹಾರಗಳನ್ನು ಹೊಂದಿದೆ. ಇನ್ನು ಅವರ ಕುಟುಂಬದಲ್ಲಿ ಅವರ ಪತ್ನಿ ಅನುರಾಧಾ ಮತ್ತು ಇಬ್ಬರು ಪುತ್ರಿಯರಾದ ದಿವ್ಯಾ ಮತ್ತು ಅಲಿಕಾ ಇದ್ದಾರೆ. ಅವರ ಇಬ್ಬರು ಪುತ್ರಿಯರು ವಿದೇಶದಲ್ಲಿ ಇದ್ದಾರೆ. ಹೀಗಾಗಿ ಅವರಿಬ್ಬರಲ್ಲಿ ಮುಂದೆ ಮಹೀಂದ್ರ ಕಂಪನಿಯನ್ನ ಮುನ್ನೆಡುಸುವವರು ಯಾರು ಎಂಬ ಚರ್ಚೆ ಶುರುವಾಗಿದೆ. ಅಲ್ಲದೆ ಅವರ ಮಕ್ಕಳು ವಿದೇಶದಲ್ಲಿ ಇರುವುದರಿಂದ ಅವರುಗಳು ಈ ಸಂಸ್ಥೆಯ ಮಂದಾಳತ್ವವನ್ನ ವಹಿಸುವುದಿಲ್ಲ ಎನ್ನಲಾಗ್ತಿದೆ.

ಆನಂದ್‌ ಮಹೀಂದ್ರಾ ಅವರ ಇಬ್ಬರು ಪುತ್ರಿಯರಾದ ದಿವ್ಯಾ ಮತ್ತು ಅಲಿಕಾ ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಮಗಳು ದಿವ್ಯಾ 2009 ರಲ್ಲಿ ನ್ಯೂಯಾರ್ಕ್‌ನಿಂದ ಡಿಸೈನಿಂಗ್ ಮತ್ತು ವಿಷುಯಲ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನ ಪಡೆದಿದ್ದಾರೆ. ಹಾಗೆ 2015ರಿಂದ ಅವರು ವರ್ವ್ ಮ್ಯಾಗಜೀನ್‌ನಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮೆಕ್ಸಿಕನ್ ಮೂಲದ ಕಲಾವಿದ ಡೋರ್ಡೆ ಜಪಾಟಾ ಎಂಬುವವರನ್ನ ವಿವಹವಾಗಿದ್ದಾರೆ. ಹಾಗೆ ಈಗ ಸಧ್ಯಕ್ಕೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಹಾಗೆ ಮಹೀಂದ್ರಾ ಅವರ ಎರಡನೇ ಮಗಳು ಅಲಿಕಾ ಫ್ರೆಂಚ್ ಮೂಲದ ವ್ಯಕ್ತಿಯನ್ನ ಮದುವೆಯಾಗಿದ್ದಾರೆ.

ಇನ್ನು ಕಂಪನಿಯನ್ನ ಮುಂದ ಯಾರು ನಡೆಸಿಕೊಂಡು ಹೋಗುತ್ತಾರೆ ಎಂಬ ಪ್ರಶ್ನೆಗೆ ಆನಂದ್‌ ಮಹೀಂದ್ರ ಅವರು ಉತ್ತರ ನೀಡಿದ್ರು. ಆ ವೇಳೆ ಅವರು ತಮ್ಮ ಇಬ್ಬರು ಪುತ್ರಿಯರು ಮತ್ತು ಪತ್ನಿ ಮಹೀಂದ್ರಾ ವ್ಯವಹಾರದಿಂದ ದೂರ ಉಳಿದಿದ್ದಾರೆ ಎಂದು ಹೇಳೀದ್ದರು. ಹಗೆ ಆನಂದ್ ಮಹೀಂದ್ರ ಅವರು ತಮ್ಮ ಹೆಣ್ಣುಮಕ್ಕಳಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ ಎಂದು ಹೇಳಿದರು. ಕಂಪನಿಗೆ ಸೇರುವ ವಿಚಾರವಾಗಿ ಅವರು ತಮ್ಮ ಹೆಣ್ಣುಮಕ್ಕಳನ್ನು ಯವತ್ತೂ ಒತ್ತಾಯಿಸಲಿಲ್ಲ. ಅದಲ್ಲದೆ ಅವರ ಹೆಣ್ಣುಮಕ್ಕಳು ಅವರ ಆಯ್ಕೆಯ ಹುಡುಗರನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರ ಮೇಲೆ ಎಂದಿಗೂ ಒತ್ತಡವನ್ನ ಹೇರುವುದಿಲ್ಲ ಎಂದು ಹೇಳಿದ್ದಾರೆ. ಹಾಗೆ ಅವರ ಹೆಣ್ಣುಮಕ್ಕಳು ಅವರ ಆಯ್ಕೆಯನ್ನು ಅವರೇ ನಿರ್ಧರಿಸಬೇಕು ಎಂಬುದು ನನ್ನ ಪ್ರಯತ್ನ ಎಂದು ಅವರು ಹೇಳಿಕೊಂಡಿದ್ದಾರೆ.

ಒಮ್ಮೆ ಅವರಿಗೆ ನಿಮ್ಮ ಹೆಣ್ಣುಮಕ್ಕಳು ಏಕೆ ವ್ಯಾಪಾರದ ಭಾಗವಾಗಿಲ್ಲ ಏಕೆ ಎಂದು ಕೇಳಿದಾಗ ಅವರು ಉತ್ತರಿಸಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಮಹೀಂದ್ರಾ ಆ್ಯಂಡ್ ಮಹೀಂದ್ರಾ ವ್ಯವಹಾರದಲ್ಲಿ ಭಗಿಯಗಿಲ್ಲ ಆದ್ರೆ ಅವರು ಅವರ ತಾಯಿಯ ವ್ಯವಹರದಲ್ಲಿ ಕೈಜೋಡಿಸಿದ್ದಾರೆ. ಅವರ ತಾಯಿ ಒಂದು ಮ್ಯಾಗಜಿನ್‌ ಆರಂಭಿಸಿದ್ದಾರೆ. ಅಲ್ಲದೆ ಆನಂದ್ ಮಹೀಂದ್ರಾ ಅವರ ಪತ್ನಿ ಅನುರಾಧಾ ಈ ಪತ್ರಿಕೆಯ ಸಂಸ್ಥಾಪಕಿ ಮತ್ತು ಸಂಪಾದಕರಾಗಿದ್ದಾರೆ. ಹಾಗೆ ದಿವ್ಯಾ ಅವರು ಪತ್ರಿಕೆಯ ಸೃಜನಶೀಲ ನಿರ್ದೇಶಕರಾಗಿದ್ದು, ಅಲಿಕಾ ಸಂಪಾದಕೀಯ ನಿರ್ದೇಶಕರಾಗಿದ್ದಾರೆ ಎಂದು ಹೇಳಿದ್ದರು.

ಅಲ್ಲದೆ ತಮ್ಮ ಅಜ್ಜ 1945ರಲ್ಲಿ ದೇಶಭಕ್ತಿಯ ಕಾರ್ಯವಾಗಿ ಈ ಕಂಪನಿಯನ್ನ ಅವರು ಆರಂಭಿಸಿದ್ದರು. ತಮ್ಮ ವ್ಯವಹಾರವನ್ನು ಸಾರ್ವಜನಿಕ ಹಣ ಎಂದು ಅವು ಭಾವಿಸುತ್ತಾರೆ. ಹೀಗಾಗಿ ಅವರು ಎಂದೂ ಕೂಡ ಮಹೀಂದ್ರಾ & ಮಹೀಂದ್ರಾ ತನ್ನ ಕುಟುಂಬದ ವ್ಯವಹಾರವಲ್ಲ ಎಂದು ಅವರು ಭಾವಿಸುತ್ತಾರೆ. ಆನಂದ್ ಮಹೀಂದ್ರಾದ ಈ ಬಹು-ಶತಕೋಟಿ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರೆಂದು ಇನ್ನೂ ನಿರ್ಧರಿಸಿಲ್ಲ ಎನ್ನುವುದು ಇಲ್ಲಿ ಖಚಿತವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+