ಬೆಂಗಳೂರು, ಜುಲೈ 16: ಆನ್ ಲೈನ್ ಫುಡ್ ಡಿಲಿವರಿ ಅಪ್ಲಿಕೇಶನ್ ಗಳು ಫ್ಲಾಟ್ ಫಾರಂ ಚಾರ್ಜ್ ಹೆಚ್ಚಳ ಮಾಡಿವೆ ಎನ್ನುವುದನ್ನು ಕೇಳುತ್ತಿರುತ್ತೇವೆ. ಫುಡ್ ಡಿಲಿವರಿ ಅಪ್ಲಿಕೇಶನ್ ಗಳು ಭರ್ಜರಿ ಲಾಭ ಬಾಚಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಪ್ಲಾಟ್ ಫಾರಂ ಶುಲ್ಕ ಅಥವಾ ಕನ್ವೀನಿಯನ್ಸ್ ಫೀ.
ಆರ್ಡರ್ ಮಾಡೋವಾಗ, 49 ರೂಪಾಯಿ ಯಾವುದೋ ಶುಲ್ಕ ಅಂತಾ ಹೆಚ್ಚುವರಿಯಾಗಿ ಸೇರಿಸಿರುತ್ತವೆ. ಆರ್ಡರ್ ಮಾಡಬೇಕಾದ ಒಂದು ಡ್ರೆಸ್ ಬೆಲೆ 402 ರೂಪಾಯಿ ಅದಕ್ಕೆ 451 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಹಾಗಿದ್ದರೆ ಯಾವುದು ಈ ಹೆಚ್ಚುವರಿ ಶುಲ್ಕ? ಆನ್ ಲೈನ್ ಅಪ್ಲಿಕೇಶನ್ ಗಳು ವಿಧಿಸುವ ಹೆಚ್ಚುವರಿ ಶುಲ್ಕ ಗಳನ್ನು ನಾವು ತಿಳಿದುಕೊಳ್ಳಬೇಕು.

ಸ್ವಿಗ್ಗಿ, ಝೊಮ್ಯಾಟೋ ದಂತಹ ಆಹಾರ ಪೂರೈಕೆದಾರರು, ಅಜಿಯೋ, ಮೈಂತ್ರಾ ದಂತಹ ಫ್ಯಾಷನ್ ಸೈಟ್ ಗಳು, ಬ್ಲಿಂಕ್ ಇಟ್, ಸ್ವಿಗ್ಗಿ ಇನ್ಸ್ಟಾ ಮಾರ್ಟ್ ನಂತಹ ಕ್ವಿಕ್ ಕಾಮರ್ಸ್ ಆ್ಯಪ್ ಗಳು ಫ್ಲಾಟ್ ಫಾರಂ ಶುಲ್ಕ, ಕನ್ವೀನಿಯನ್ಸ್ ಶುಲ್ಕ ಅಥವಾ ಹ್ಯಾಂಡಲಿಂಗ್ ಶುಲ್ಕ ವಿಧಿಸುತ್ತಿವೆ. ಈ ಶುಲ್ಕ ಎರಡು ರೂಪಾಯಿಯಿಂದ 49 ರೂಪಾಯಿಗಳಷ್ಟಿರತ್ತದೆ. ಇದು ಒಂದೊಂದು ಜಾಲತಾಣಕ್ಕೂ ಬೇರೆ ಬೇರೆ ಆಗಿರುತ್ತದೆ. ಇದನ್ನು ಪ್ರತಿ ಆರ್ಡರ್ ಮೇಲೀ ಪಾವತಿಸಬೇಕು.
ಇದಲ್ಲದೇ ನೀವು ಸಿನಿಮಾ ಅಥವಾ ಕ್ರೀಡಾ ಕಾರ್ಯಕ್ರಮಗಳ ಟಿಕೆಟ್ ಬುಕ್ ಮಾಡಬಹುದಾದ ತಾಣಗಳು, ರೈಲ್ವೆ ಟಿಕೆಟ್, ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಬಹುದಾದ ವೆಬ್ ಸೈಟ್ ಗಳು ಕೂಡ ಈ ಶುಲ್ಕ ವಿಧಿಸ್ತಾ ಇವೆ. ಅವು ಕನ್ವೀನಿಯನ್ಸ್, ಇಂಟರ್ನೆಟ್ ಹ್ಯಾಂಡ್ಲಿಂಗ್ ಚಾರ್ಜಸ್ ಮತ್ತು ಸೇವಾ ಶುಲ್ಕವನ್ನ ವಿಧಿಸುತ್ತಿವೆ. ಈಗ ನಾವು ಪ್ಲಾಟ್ಫಾರಂ ಶುಲ್ಕ ಎಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ.
ಸೇವೆ ಬಳಸಿದ್ದಕ್ಕೆ ಪ್ಲಾಟ್ ಫಾರಂ ಫೀ, ಕನ್ವೀನಿಯನ್ಸ್ ಫೀ, ಫುಲ್ಫಿಲ್ಮೆಂಟ್ ಫೀ ಅಥವಾ ಹ್ಯಾಂಡ್ಲಿಂಗ್ ಫೀ ಗಳನ್ನ ವಿಧಿಸಲಾಗುತ್ತದೆ. ಇದು ಈಗ ನಿಯಮದಂತಾಗಿದೆ. ಇದು ಸಾಗಣೆ ವೆಚ್ಚ ನಿಭಾಯಿಸಲು ಪೂರಕ ಎನ್ನುವುದು ಕಂಪೆನಿಗಳ ವಾದ. ಆನ್ಲೈನ್ ಟಿಕೆಟಿಂಗ್ ಪ್ಲಾಟ್ ಫಾರಂ ಬುಕ್ ಮೈ ಶೋ, ಇಂತಹ ಶುಲ್ಕ ವಿಧಿಸಿದ ಮೊದಲ ಕಂಪೆನಿಯಾಗಿದೆ.
ಪ್ರಸ್ತುತ ಬುಕ್ ಮೈ ಶೋ ಶೇ. 10 ರಿಂದ ಶೇ. 15 ರಷ್ಟನ್ನು ಕನ್ವೀನಿಯನ್ಸ್ ಶುಲ್ಕ ಎಂದು ಪಡೆದುಕೊಳ್ಳುತ್ತಿದೆ. ಈ ಶುಲ್ಕ ಪ್ಲಾಟ್ ಫಾರಂ ನಿಂದ ಪ್ಲಾಟ್ ಫಾರಂ ಗೆ ಭಿನ್ನವಾಗಿರುತ್ತದೆ. ಕಂಪನಿಗಳು ತಮ್ಮ ಲಾಭದಲ್ಲಿ ಕೊಂಚ ಇಳಿಕೆ ಕಂಡರೂ ಬೇರೆ ಇನ್ಯಾವುದೋ ಶುಲ್ಕ ಹೆಚ್ಚಳ ಮಾಡುತ್ತವೆ. ಶಾಪಿಂಗ್ ಮಾಡುವಾಗ ಅಥವಾ ಫುಡ್ ಆರ್ಡರ್ ಮಾಡಬೇಕಿದ್ದರೆ ಒಂದು ಕ್ಷಣ ಇತರೆ ಶುಲ್ಕಗಳ ಮೇಲೆ ಗಮನ ಹರಿಸಿಕೊಳ್ಳಬೇಕು.


Click it and Unblock the Notifications