ದೀಪಾವಳಿಯ (Deepavali) ಮುನ್ನ ಬರುವ ಹಬ್ಬವೇ ಧನ್ತೇರಸ್. ಈ ಹಬ್ಬ ದೀಪಾವಳಿ ಹಬ್ಬದ ಆರಂಭ ಎಂದು ಪರಿಗಣಿಸಲಾಗುತ್ತದೆ. ಧನ್ತೇರಸ್ ಅಥವಾ ಧನತ್ರಯೋದಶಿಯು (Dhanteras) ಸಂಪತ್ತು, ಆರೋಗ್ಯ ಮತ್ತು ಅದೃಷ್ಟದ ಪ್ರತೀಕವಾಗಿ ಗುರುತಿಸಲ್ಪಟ್ಟಿದೆ. ಆದ್ದರಿಂದ ಈ ದಿನವನ್ನು ಅತ್ಯಂತ ಶುಭ ಎಂದು ಹೇಳಲಾಗುತ್ತದೆ. ಈ ವರ್ಷ 2025 ರಲ್ಲಿ, ಅಕ್ಟೋಬರ್ 18, ಶನಿವಾರದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷ ಕೂಡಾ ಧನ್ತೇರಸ್ ದಿನದಂದು ಜನರು ಚಿನ್ನ, ಬೆಳ್ಳಿ, ಪಾತ್ರೆಗಳು ಅಥವಾ ಇತರ ಅಮೂಲ್ಯ ವಸ್ತುಗಳನ್ನು ಖರೀದಿಸುವ ಪ್ಲಾನ್ ಮಾಡಿಟ್ಟುಕೊಂಡಿರುತ್ತಾರೆ. ಏಕೆಂದರೆ ಈ ದಿನ ಹೂಡಿಕೆಯನ್ನು ಉತ್ತಮ ಮತ್ತು ಧನ್ತೇರಸ್ ಲಕ್ಷ್ಮಿ ದೇವಿಗೆ (Lord Laxmi) ಅರ್ಪಿಸಲಾಗಿರುವುದರಿಂದ ಶುಭ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ.

ಇನ್ನು ಧನ್ತೇರಸ್ ಮುನ್ನಾ ದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದೆ. ಧನತ್ರಯೋದಶಿ ಹಬ್ಬದ ಮೊದಲು ಬೆಳ್ಳಿಯ ಬೆಲೆಯಲ್ಲಿ ಪ್ರತಿ ಕೆ.ಜಿ.ಗೆ ಸುಮಾರು 4,000 ರೂಪಾಯಿಗಳಷ್ಟು ಕಡಿಮೆಯಾಗಿದೆ. ಆದ್ದರಿಂದ ಧನ್ತೇರಸ್ ಅಥವಾ ಧನತ್ರಯೋದಶಿಯಂದು ಬೆಳ್ಳಿ ಖರೀದಿಸುವವರಿಗೆ ಇದೇ. ಒಳ್ಳೆಯ ಟೈಮ್
ಧನ್ತೇರಸ್ ಹಬ್ಬದ ಮಹತ್ವ
ಧನ್ತೇರಸ್ ಅಥವಾ ಧನತ್ರಯೋದಶಿ ಹಬ್ಬವನ್ನು ಹಲವು ಕಡೆ ಬಹಳ ಮಹತ್ವವನ್ನು ಹೊಂದಿದೆ. ಆದ್ರೆ ಕರ್ನಾಟಕದಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಧನ್ತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಈ ಹಬ್ಬವನ್ನು ಸಮುದ್ರ ಮಂಥನದ ಸಮಯದಲ್ಲಿ ಅಮೃತ ಕಲಶದೊಂದಿಗೆ ಸಾಗರದಿಂದ ಹೊರಬಂದ, ಆಯುರ್ವೇದ ಮತ್ತು ಆರೋಗ್ಯದ ದೇವರು ಎಂದು ಕರೆಯಲ್ಪಡುವ ಧನ್ವಂತರಿಯನ್ನು ಪೂಜಿಸಿ, ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೇ ಈ ಧನ್ತೇರಸ್ ಹಬ್ಬದಂದು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನೂ ಪೂಜಿಸಲಾಗುತ್ತದೆ.
ಪಂಚಾಂಗದ ಪ್ರಕಾರ, ಧನತ್ರಯೋದಶಿ ಮುಹೂರ್ತವು ಅಕ್ಟೋಬರ್ 18 ರ ಮಧ್ಯಾಹ್ನದಿಂದ ಅಕ್ಟೋಬರ್ 19 ರ ಮಧ್ಯಾಹ್ನದವರೆಗೆ ಇರುತ್ತದೆ. ಆದರೆ, ಖರೀದಿ ಮತ್ತು ಪೂಜೆಗೆ ಅತ್ಯಂತ ಶುಭ ಸಮಯವು ಪ್ರದೋಷ ಕಾಲದಲ್ಲಿರುತ್ತದೆ, ಅಂದರೆ ಸಂಜೆ 5:48 ರಿಂದ ರಾತ್ರಿ 8:19 ರವರೆಗೆ ಇರುತ್ತದೆ ಎನ್ನಲಾಗಿದೆ.
ಅದರಲ್ಲೂ, ವೃಷಭ ಲಗ್ನವು ಸಂಜೆ 7:15 ರಿಂದ ರಾತ್ರಿ 9:11 ರವರೆಗೆ ಇರುವುದರಿಂದ, ಇದನ್ನು ಬಹಳ ಒಳ್ಳೆಯ ಕಾಲ ಎಂದು ಪರಿಗಣಿಸಲಾಗಿದೆ. ಇನ್ನು ಲಕ್ಷ್ಮಿ ಪೂಜೆಯ ಮುಹೂರ್ತವು ಸಂಜೆ 7:15 ರಿಂದ ರಾತ್ರಿ 8:19 ರವರೆಗೆ ಇರುವುದರಿಂದ, ಈ ಮುಹೂರ್ತದಲ್ಲಿ ದೇವಿ ಲಕ್ಷ್ಮಿ ಮತ್ತು ಭಗವಾನ್ ಧನ್ವಂತರಿಯನ್ನು ಆರಾಧಿಸುವುದರಿಂದ ವಿಶೇಷ ಫಲ ಸಿಗಲಿದೆ.
ಇದೇ ಸಮಯ ಒಳ್ಳೆಯದು
ಅಮೃತ ಕಾಲದಲ್ಲೂ ಚಿನ್ನ ಖರೀದಿಸಿದರೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಅಂದರೆ ಅಮೃತ ಕಾಲ, ಇದನ್ನು ಚಿನ್ನ, ಬೆಳ್ಳಿ ಖರೀದಿಸಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಟೋಬರ್ 18 ರಂದು ಬೆಳಿಗ್ಗೆ 8:50 ರಿಂದ 10:33 ರವರೆಗೆ ಅಮೃತ ಕಾಲ ಇರುತ್ತದೆ. ಈ ಅವಧಿಯಲ್ಲಿ ಚಿನ್ನ, ಬೆಳ್ಳಿ ಜೊತೆಗೆ ಇತರ ಅಮೂಲ್ಯ ವಸ್ತುಗಳನ್ನು ಖರೀದಿಸಿದರೆ ಅದೃಷ್ಟ ಮನೆ ಮಾಡುತ್ತದೆ ಎನ್ನಲಾಗಿದೆ.


Click it and Unblock the Notifications