ಪ್ರಸ್ತುತ ಗೌತಮ್ ಅದಾನಿ ಮತ್ತು ಅವರ ಎಫ್‌ಎಂಸಿಜಿ ವ್ಯವಹಾರ ಅದಾನಿ ವಿಲ್ಮಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬಿಲಿಯನೇರ್ ಆದ ಗೌತಮ್ ಅದಾನಿ ತನ್ನ ಸಂಸ್ಥೆಯಾದ ಅದಾನಿ ವಿಲ್ಮಾರ್‌ನಲ್ಲಿನ ತನ್ನ ಷೇರುಗಳನ್ನು ಅಥವಾ ಪಾಲನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರವಾಗಿ ಗೌತಮ್ ಅದಾನಿ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡದಿದ್ದರೂ ಅಥವಾ ಊಹಾಪೋಹಗಳನ್ನು ದೃಢೀಕರಿಸದಿದ್ದರೂ ಸಹ, ಹೂಡಿಕೆದಾರರು ಅದಾನಿ ವಿಲ್ಮಾರ್ ಷೇರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಸತತವಾಗಿ ಎರಡು ದಿನಗಳಿಂದ ಲಾಭವು ಕುಸಿತವಾಗಿದೆ

ಅದಾನಿ ವಿಲ್ಮಾರ್ ಷೇರುಗಳು ಸುಮಾರು ಶೇಕಡ 1 ರಷ್ಟು ಇಳಿಕೆಯಾಗಿದ್ದು, ಬಿಎಸ್‌ಇಯಲ್ಲಿ 315 ರೂಪಾಯಿಗೆ ತಲುಪಿದೆ. ಈ ಸ್ಟಾಕ್ ತನ್ನ ದಿನದ ಕನಿಷ್ಠ ದರದಲ್ಲಿ ಪ್ರತಿ 315.50 ರೂಪಾಯಿಯಂತೆ ವಹಿವಾಟು ಮುಂದುವರೆಸಿದೆ. ಈ ಸಮಯಕ್ಕೆ ಬಿಎಸ್‌ಇಯಲ್ಲಿ ಸ್ಟಾಕ್ ಸುಮಾರು ಶೇಕಡ 0.63 ರಷ್ಟು ಇಳಿಕೆಯಾಗಿ, 315.40 ರೂಪಾಯಿಗೆ ತಲುಪಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವು 41,000 ಕೋಟಿ ರೂಪಾಯಿ ಆಗಿದೆ.
ಮೂಲಗಳ ಪ್ರಕಾರ, ಅದಾನಿ ಗ್ರೂಪ್ ತನ್ನ ಸಂಪೂರ್ಣ ಅದಾನಿ ವಿಲ್ಮಾರ್‌ನಲ್ಲಿ ಮಾರಾಟ ಮಾಡಲು ಬಹುರಾಷ್ಟ್ರೀಯ ಗ್ರಾಹಕ ಸರಕುಗಳ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಗ್ರೂಪ್ ಮಾರಾಟದಿಂದ 2.5-3 ಬಿಲಿಯನ್ ಡಾಲರ್‌ವರೆಗೆ ಗಳಿಸುವ ನಿರೀಕ್ಷೆಯಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....
ಅದಾನಿ ವಿಲ್ಮಾರ್ ಬಗ್ಗೆ ವಿವರ
ಅದಾನಿ ವಿಲ್ಮಾರ್ ಅನ್ನು 1999 ರಲ್ಲಿ ಗೌತಮ್ ಅದಾನಿ ಸ್ಥಾಪಿಸಿದರು. ಭಾರತೀಯ ಗ್ರಾಹಕರಿಗೆ ಹೆಚ್ಚಿನ ಅಗತ್ಯ ಅಡುಗೆ ಸರಕುಗಳನ್ನು ಒದಗಿಸುವ ಕಂಪನಿಯು ಅದಾನಿ ಗ್ರೂಪ್‌ನ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಮತ್ತು ವಿಲ್ಮಾರ್ ಇಂಟರ್‌ನ್ಯಾಶನಲ್ ಮತ್ತು ಭಾರತದ ಅತಿದೊಡ್ಡ ತಾಳೆ ಎಣ್ಣೆ ಸಂಸ್ಕಾರಕದ ನಡುವಿನ ಜಂಟಿ ಉದ್ಯಮವಾಗಿದೆ.
24 ವರ್ಷ ವಯಸ್ಸಿನ ಎಫ್‌ಎಂಸಿಜಿ ಸಂಸ್ಥೆಯು ಎರಡು ದಶಕಗಳಿಂದ ವ್ಯವಹಾರದಲ್ಲಿದ್ದರೂ, ಅದು 2022 ರಲ್ಲಿ ಮಾತ್ರ ಷೇರು ವಿನಿಮಯ ಕೇಂದ್ರಕ್ಕೆ ಕಾಲಿಟ್ಟಿತು. ಅದಾನಿ ವಿಲ್ಮಾರ್ ಕಳೆದ ವರ್ಷ ಅತ್ಯುತ್ತಮ ಐಪಿಒ ಲೀಸ್ಟಿಂಗ್‌ನಲ್ಲಿ ಇಳಿದು, ಭಾರಿ ನಷ್ಟವನ್ನು ದಾಖಲಿಸಿದೆ.
ಅದಾನಿ ಗ್ರೂಪ್ ಮತ್ತು ಅದಾನಿ ವಿಲ್ಮಾರ್ ಮಾತ್ರ ಈ ವಿಷಯವನ್ನು ದೃಢಪಡಿಸಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಸ್ಟಾಕ್ ಎಕ್ಸ್‌ಚೇಂಜ್‌ಗಳು ಇನ್ನೂ ಯಾವುದೇ ಸ್ಪಷ್ಟೀಕರಣವನ್ನು ಕೇಳಿಲ್ಲ. ಇತರೆ ಸಂಸ್ಥೆಗಳಿಗೆ ಸಹಾಯವಾಗಲೆಂದು ಈ ಸಂಸ್ಥೆಯ ಸ್ಟಾಕ್‌ಗಳನ್ನು ಮಾರಾಟ ಮಾಡಲು ಅದಾನಿ ಸಂಸ್ಥೆ ಮುಂದಾಗಿದೆ ಎಂದು ವರದಿಯಾಗಿದೆ.
ಅದಾನಿ ವಿಲ್ಮಾರ್‌ನ ಷೇರುದಾರರು
ಅದಾನಿ ವಿಲ್ಮಾರ್‌ನ ಷೇರುದಾರರು ಗೌತಮ್ ಶಾಂತಿಲಾಲ್ ಅದಾನಿ, ರಾಜೇಶ್ ಶಾಂತಿಲಾಲ್ ಅದಾನಿ ಮತ್ತು ವಿನೋದ್ ಶಾಂತಿಲಾಲ್ ಅದಾನಿ ಅವರು ಎಸ್.ಬಿ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ನಲ್ಲಿ ಶೇಕಡ 10ಕ್ಕಿಂತ ಹೆಚ್ಚು ಪಾಲನ್ನು ಅದಾನಿ ಫ್ಯಾಮಿಲಿ ಟ್ರಸ್ಟ್ ಹೊಂದಿದೆ.
ಇದಲ್ಲದೆ ಎಇಎಲ್ ಅದಾನಿ ಕಮಾಡಿಟೀಸ್ ಎಲ್‌ಎಲ್‌ಪಿಯಲ್ಲಿ ಶೇಕಡ 99.99 ಅನ್ನು ಹೊಂದಿದೆ. ಇದು ಅದಾನಿ ವಿಲ್ಮಾರ್‌ನಲ್ಲಿ ಶೇಕಡ 43.97 ರಷ್ಟು ಪಾಲನ್ನು ಹೊಂದಿದೆ. ಗೌತಮ್ ಅದಾನಿ, ರಾಜೇಶ್ ಅದಾನಿ ಮತ್ತು ವಿನೋದ್ ಅದಾನಿ ಪ್ರಮುಖ ಮಾಲೀಕರಾಗಿದ್ದಾರೆ. ಪರೋಕ್ಷವಾಗಿ ಒಟ್ಟಾರೆಯಾಗಿ ಕಂಪನಿಯಲ್ಲಿ ಶೇಕಡ 43.97 ರಷ್ಟು ಪಾಲನ್ನು ಹೊಂದಿದ್ದಾರೆ.


Click it and Unblock the Notifications