Economic Survey: ಬಜೆಟ್‌ ಮಂಡನೆಗೂ ಮುನ್ನ ಆರ್ಥಿಕ ಸಮೀಕ್ಷೆ ಮಂಡಿಸುವುದೇಕೆ? ಯಾವಾಗ ಮಂಡಿಸುತ್ತಾರೆ?

ಈಗಾಗಲೇ ಹೊಸ ವರ್ಷದ (New Year) ಆಗಮನವಾಗಿದೆ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹೊಸ ಹೊಸ ನಿಯಮಗಳು, ಹೊಸ ಹೊಸ ಕನಸುಗಳನ್ನ ಇಟ್ಟುಕೊಳ್ಳೋದು ಸಾಮಾನ್ಯ. ಇದೀಗ ಎಲ್ಲರ ಚಿತ್ತ ಫೆಬ್ರವರಿಯಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್‌ ಮೇಲೆ ನೆಟ್ಟಿದೆ. ಹೆಚ್ಚುತ್ತಿರುವ ಹಣದುಬ್ಬರದ ನಡುವೆ, ದುಡಿದ ಹಣದಲ್ಲಿ ಉಳಿತಾಯ ಮಾಡೋದು ಸವಾಲಾಗಿಬಿಟ್ಟಿದೆ. ಈಗಾಗಲೇ ಬಜೆಟ್‌ ಮಂಡನೆಗೆ ತಯಾರಿಗಳು ನಡೆಯುತ್ತಲೇ ಇದೆ. ಈ ಹಿನ್ನೆಲೆ ಫೆಬ್ರವರಿ 1 ರಂದು 2026-27ರ ಹಣಕಾಸು ವರ್ಷದ ಬಜೆಟ್‌ ಮಂಡನೆಯಾಗುವ ಸಾಧ್ಯತೆ ಇದೆ.

ಬಜೆಟ್‌ ಮಂಡನೆಗೂ ಮುನ್ನ ಆರ್ಥಿಕ ಸಮೀಕ್ಷೆ ಮಂಡಿಸುವುದೇಕೆ? ಏನಿದು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ 2026-27ರ ಹಣಕಾಸು ವರ್ಷದ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಆದರೆ ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯವು ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸುತ್ತದೆ. ಅದಾದ ನಂತರ, ಈ ಕುರಿತು ಮುಖ್ಯ ಆರ್ಥಿಕ ಸಲಹೆಗಾರರು ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಹಾಗಿದ್ರೆ ಆರ್ಥಿಕ ಸಮೀಕ್ಷೆ ಎಂದರೇನು? ಇದನ್ನು ಯಾರು ಮತ್ತು ಯಾವಾಗ ಮಂಡಿಸುತ್ತಾರೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಆರ್ಥಿಕ ಸಮೀಕ್ಷೆ ಎಂದರೇನು?
ಆರ್ಥಕ ಸಮೀಕ್ಷೆ ಎಂದರೆ ಭಾರತ ಸರ್ಕಾರ ಹಣಕಾಸು ಸಚಿವಾಲಯದ ಸಹಕಾರಿದಂ ವಾರ್ಷಿಕವಾಗಿ ಸಿದ್ಧಪಡಿಸುವ ಮುಖ್ಯ ದಾಖಲೆಯಾಗಿದೆ. ಇನ್ನು ಇದನ್ನು ಮುಖ್ಯ ಆರ್ಥಿಕ ಸಲಹೆಗಾರ (ChieF Economic Adviser) ನೇತೃತ್ವದಲ್ಲಿ ತಯಾರಿಸಲಾಗುತ್ತದೆ.

ಬಜೆಟ್‌ಗೂ ಮುನ್ನ ರಚಿಸುವ ಆರ್ಥಿಕ ಸಮೀಕ್ಷೆಯು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರ ಮಾರ್ಗದರ್ಶನದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಸಿದ್ಧಪಡಿಸುವ ವಾರ್ಷಿಕ ವರದಿಯಾಗಿರುತ್ತದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಸ್ಥಿತಿಗತಿಯನ್ನು ವಿವರವಾಗಿ ವಿವರಿಸುವ ಒಂದು ಸಮೀಕ್ಷೆಯಾಗಿದೆ. ಇದು ದೇಶದ ಆರ್ಥಿಕ ಪ್ರಗತಿ ಮತ್ತು ಸವಾಲುಗಳ ಬಗ್ಗೆ ಸಮಗ್ರ ನೋಟ ನೀಡುತ್ತದೆ.

ಈ ಸಮೀಕ್ಷೆಯನ್ನು ಭಾಗ ಎ ಮತ್ತು ಭಾಗ ಬಿ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ಭಾಗವು ವರ್ಷದ ಪ್ರಮುಖ ಆರ್ಥಿಕ ಬೆಳವಣಿಗೆಗಳು ಹಾಗೂ ಆರ್ಥಿಕತೆಯ ಸಮಗ್ರ ವಿವರಣೆಯನ್ನು ನೀಡುತ್ತದೆ. ಅದೇ ರೀತಿ ಎರಡನೇ ಭಾಗವು ಸಾಮಾಜಿಕ ಭದ್ರತೆ, ಬಡತನ, ಶಿಕ್ಷಣ, ಆರೋಗ್ಯ ರಕ್ಷಣೆ, ಮಾನವ ಅಭಿವೃದ್ಧಿ ಹಾಗೂ ಹವಾಮಾನದಂತಹ ನಿರ್ದಿಷ್ಟ ಪ್ರಮುಖ ವಿಷಯಗಳನ್ನು ವಿವರಿಸುತ್ತದೆ.

ಯಾವಾಗ ಸಲ್ಲಿಸಲಾಗುತ್ತದೆ?

  • ಕೇಂದ್ರ ಬಜೆಟ್‌ ಮಂಡಿಸುವ ಒಂದು ದಿನ ಮೊದಲು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಡಿಸಲಾಗುತ್ತದೆ.
  • ಅಂದರೆ ಫೆಬ್ರವರಿ 1ಕ್ಕೆ ಬಜೆಟ್‌ ಮಂಡನೆ ಮಾಡುವುದಾದ್ರೆ, ಜನವರಿ 31 ಕ್ಕೆ ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತದೆ.
  • ಹಣಕಾಸು ಸಚಿವರು ಇದನ್ನು ಸಂಸತ್ತಿನಲ್ಲಿ ಮಂಡಿಸುತ್ತಾರೆ ಮತ್ತು ಮುಖ್ಯ ಆರ್ಥಿಕ ಸಲಹೆಗಾರರು ಪತ್ರಿಕಾಗೋಷ್ಠಿ ನಡೆಸಿ ಇದನ್ನು ವಿವರಿಸುತ್ತಾರೆ.

ಮೊದಲ ಆರ್ಥಿಕ ಸಮೀಕ್ಷೆ ಮಂಡನೆಯಾಗಿದ್ದು ಯಾವಾಗ?
ಭಾರತದಲ್ಲಿ ಮೊದಲ ಆರ್ಥಿಕ ಸಮೀಕ್ಷೆಯನ್ನು 1950-51ರಲ್ಲಿ ಮಂಡಿಸಲಾಯಿತು. 1964ರವರೆಗೆ ಈ ವರದಿಯನ್ನು ಕೇಂದ್ರ ಬಜೆಟ್ ಜೊತೆಯಲ್ಲೇ ಮಂಡನೆ ಮಾಡಲಾಗುತ್ತಿತ್ತು. ಆದರೆ ಕ್ರಮೇಣ, ಇದನ್ನು ಪ್ರತ್ಯೇಕಿಸಿ ಬಜೆಟ್ ಮಂಡನೆಗೂ ಮುನ್ನ ಪ್ರಸ್ತುತಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+