ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold-Silver Price) ಸದ್ಯಕ್ಕೆ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆಯಾಗುವ ಅಥವಾ ಸ್ಥಿರ ದರದಲ್ಲಿ ಇರಲಿದೆ ಎಂದು ವರದಿಯಾಗಿದೆ. ಸುರಕ್ಷಿತ ಹೂಡಿಕೆಯ ಬೇಡಿಕೆ, ನೀತಿಯ ಅನಿಶ್ಚಿತತೆ, ಮತ್ತು ಹಬ್ಬದ ಖರೀದಿಗಳಂತಹ ಕಾರಣಗಳಿಂದ ಉಂಟಾದ ಬೇಡಿಕೆಯು, ಈ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯ ನಂತರ, ಬುಲಿಯನ್ ಸೀಮಿತ ವ್ಯಾಪ್ತಿಯಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ. ಅಕ್ಟೋಬರ್ 28-29 ರಂದು ನಡೆಯಲಿರುವ ನೀತಿ ಸಭೆಯ ಮೊದಲು ಯುಎಸ್ ಫಂಡಿಂಗ್ ಬಿಲ್, ಪ್ರಮುಖ ಜಾಗತಿಕ ಮಾಹಿತಿ ಬಿಡುಗಡೆಗಳು ಮತ್ತು ಫೆಡರಲ್ ರಿಸರ್ವ್ ಅಧಿಕಾರಿಗಳ ಹೇಳಿಕೆಗಳ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಜೆಎಂ ಫೈನಾನ್ಷಿಯಲ್ ಸರ್ವೀಸಸ್‌ನ ಇಬಿಜಿ - ಕಮಾಡಿಟಿ & ಕರೆನ್ಸಿ ರಿಸರ್ಚ್ ವಿಭಾಗದ ಉಪಾಧ್ಯಕ್ಷ ಪ್ರಣವ್ ಮರ್, ಮಾಧ್ಯಮಕ್ಕೆ ತಿಳಿಸಿದಂತೆ, "ಚಿನ್ನದ ಬೆಲೆಯಲ್ಲೀ ಏರಿಳಿತ ಅಥವಾ ಸ್ಥಿರತೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ. ಏಕೆಂದರೆ ನಡೆಯುತ್ತಿರುವ ಮೂಲಭೂತ ಅಂಶಗಳು ಈಗಾಗಲೇ ಬೆಲೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ."
ಭಾರತದಲ್ಲಿ ಹಬ್ಬದ ಬೇಡಿಕೆ ಮತ್ತು ಬಲವಾದ ಇಟಿಎಫ್ ಖರೀದಿಗಳಿಂದ ಬೆಂಬಲಿತವಾಗಿ ಚಿನ್ನ ಕಳೆದ ವಾರವನ್ನು ಸಕಾರಾತ್ಮಕವಾಗಿ ಕೊನೆಗೊಳಿಸಿತು ಎಂದು ಮರ್ ಹೇಳಿದ್ದಾರೆ. ಕಳೆದ ವಾರ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಫ್ಯೂಚರ್ಸ್ ₹5,644 ಅಥವಾ 4.65% ರಷ್ಟು ಏರಿಕೆ ಕಂಡಿತ್ತು.
ಏಂಜೆಲ್ ಒನ್‌ನ ಡಿವಿಪಿ - ರಿಸರ್ಚ್, ನಾನ್-ಅಗ್ರಿ ಕಮಾಡಿಟೀಸ್ ಮತ್ತು ಕರೆನ್ಸೀಸ್, ಪ್ರಥಮೇಶ್ ಮಾಲ್ಯ ಪ್ರಕಾರ, ನೀತಿಯ ಅನಿಶ್ಚಿತತೆ, ಯುಎಸ್ ಸುಂಕಗಳು, ಮತ್ತು ಅಮೆರಿಕನ್ ಆರ್ಥಿಕತೆಯಲ್ಲಾದ ಏರಿಳಿತಗಳಿಂದಾಗಿ 2025 ರ ಉದ್ದಕ್ಕೂ ಚಿನ್ನದ ಬೆಲೆಗಳ ಏರಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
MCX ನಲ್ಲಿ ಡಿಸೆಂಬರ್ ಡೆಲಿವರಿಗಾಗಿ ಚಿನ್ನದ ಫ್ಯೂಚರ್ಸ್ ಶುಕ್ರವಾರ ₹1,32,294 (10 ಗ್ರಾಂಗೆ) ದಾಖಲೆ ಎತ್ತರವನ್ನು ತಲುಪಿದ ನಂತರ ₹1,27,008 ಕ್ಕೆ ಮುಕ್ತಾಯಗೊಂಡಿತು, ಇದು ಕಳೆದ 5 ದಿನದಲ್ಲಾದ ದಾಖಲೆಯ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.
ಸ್ಮಾಲ್‌ಕೇಸ್‌ನಲ್ಲಿ ಹೂಡಿಕೆ ವ್ಯವಸ್ಥಾಪಕರು ಮತ್ತು ಕ್ವಾಂಟೇಸ್ ರಿಸರ್ಚ್‌ನ ಸ್ಥಾಪಕ ಕಾರ್ತಿಕ್ ಜೋಗಡ್ಲ, ತಿಳಿಸಿದಂತೆ, ಡಾಲರ್‌ನಲ್ಲಾದ ಮತ್ತು ಬಾಂಡ್ ಇಳುವರಿಗಳ ಸಡಿಲಿಕೆ, ಹಾಗೂ ಯುಎಸ್-ಚೀನಾ ವ್ಯಾಪಾರ ಸಮರದಿಂದಾಗಿ ಚಿನ್ನದ ದರದಲ್ಲಿ ಭಾರೀ ಏರಿಕೆ ಕಾಣಲು ಕಾರಣ ಎನ್ನಲಾಗಿದೆ.
"ಚಿನ್ನ ಈ ವಾರ ಹೊಸ ದಾಖಲೆಗೆ ಏರಿತು. MCX ಚಿನ್ನದ ಫ್ಯೂಚರ್ಸ್ ಅಕ್ಟೋಬರ್ 17 ರಂದು 10 ಗ್ರಾಂಗೆ ₹1,32,294 ರ ಅಂತರವನ್ನು ದಾಟಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜೊತೆಗಿನ ಭಾರತದ ಚಿನ್ನದ ಸಂಗ್ರಹವು ಈಗ 100 ಶತಕೋಟಿ ಡಾಲರ್ ದಾಟಿದ್ದು, ಇದು ಚಿನ್ನದ ಮೇಲಿನ ಹೂಡಿಕೆಯ ಆಸಕ್ತಿ ಬಗ್ಗೆ ಜಾಗತಿಕವಾಗಿ ತೋರಿಸಿತು. ಆದ್ದರಿಂದ ಕೆಲವು ತಜ್ಞರು ಚಿನ್ನದ ಬೆಲೆ ಏರಿಕೆಯಾಗುತ್ತೆ ಎಂದು ಹೇಳಿದ್ರೆ, ಇನ್ನೂ ಕೆಲವರು ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.


Click it and Unblock the Notifications