ಕೇಂದ್ರ ಸರ್ಕಾರ (Central Govt) ಇದೀಗ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಇತರ ರಾಜ್ಯಗಳಿಂದ ವಾಹನಗಳ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಸ್ತುತ ಕ್ರಮದ ಪ್ರಕಾರ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ತರಬೇಕೆಂದರೆ ಅಥವಾ ಮರು ನೋಂದಣಿ ಮಾಡಬೇಕೆಂದರೆ, ಮೂಲ ರಾಜ್ಯದ ಆರ್‌ಟಿಓ ನಿಂದ NOC (No Objection Certificate) ಪಡೆಯುವುದು ಕಡ್ಡಾಯವಾಗಿದೆ. ಆದ್ರೆ ಈ ಎನ್‌ಓಸಿ ಪ್ರಕ್ರಿಯೆ ಭಾರೀ ಕಠಿಣವಾಗಿದ್ದು, ಪಡೆಯಲು ದೀರ್ಘ ಸಮಯವೂ ಬೇಕಾಗುತ್ತದೆ ಮತ್ತು ಜನರಿಗೂ ತೊಂದರೆಯಾಗುತ್ತಿದೆ ಎಂಬ ದೂರುಗಳು ಬರುತ್ತಿದೆ. ಈ ಹಿನ್ನೆಲೆ ಇದೀಗ ಕೇಂದ್ರ ಸರ್ಕಾರ (Central Govt) ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಮಾಧ್ಯಮ ವರದಿ ಪ್ರಕಾರ, ನೀತಿ ಆಯೋಗದ ಅಡಿಯಲ್ಲಿ ಈಗಾಗಲೇ ಒಂದು ಉನ್ನತ ಮಟ್ಟದ ಸಮಿತಿ ರಚನೆಯಾಗಿದ್ದು, ಈ ಸಮಿತಿ ಎನ್‌ಓಸಿ ಅಗತ್ಯವನ್ನು ತೆಗೆದುಹಾಕಲು ಮತ್ತು ಸ್ವಯಂ ಚಾಲಿತ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಪ್ರಸ್ತಾವನೆ ಇಟ್ಟಿದೆ ಎನ್ನಲಾಗಿದೆ. ಈ ಕ್ರಮ ಒಂದು ವೇಳೆ ಜಾರಿಗೆ ಬಂದರೆ, ವಾಹನ ಮಾಲೀಕರು ಮೂಲ ರಾಜ್ಯದ ಆರ್‌ಟಿಒ ಬಳಿ ಹೋಗದೆಯೇ, ಆನ್‌ಲೈನ್‌ನಲ್ಲಿ ಅಥವಾ ಸರಳವಾಗಿ ವಾಹನ ವರ್ಗಾವಣೆ ಪ್ರಕ್ರಿಯೆ ಮುಗಿಸಬಹುದು.
ಇದೀಗ ರಸ್ತೆ ಸಾರಿಗೆ ಸಚಿವಾಲಯ, ನೀತಿ ಆಯೋಗದ ಪ್ರಸ್ತಾವನೆ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಸುಧಾರಣೆಯು ತಮ್ಮ ವಾಹನಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನ ದಾಖಲೆಯನ್ನು ವರ್ಗಾಯಿಸುವವರಿಗೆ ಬಹಳ ಅನುಕೂಲವಾಗಲಿದೆ.
ಪ್ರಸ್ತುತ ಎದುರಾಗುತ್ತಿರುವ ಸಮಸ್ಯೆಗಳೇನು?
ಪ್ರಸ್ತುತ ಅಂತರರಾಜ್ಯ ವಾಹನ ವರ್ಗಾವಣೆ ಮಾಡಬೇಕೆಂದರೆ ಯಾವುದೇ ರಸ್ತೆ ತೆರಿಗೆಗಳು, ಚಲನ್‌ಗಳು ಅಥವಾ ಇತರ ಯಾವುದೇ ಬಾಕಿಗಳಿಲ್ಲ ಎಂದು ಖಚಿತ ಪಡಿಸಿಕೊಳ್ಳಲು ಎನ್‌ಓಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಇನ್ನು NOC ಪಡೆಯಲು ಫಾರ್ಮ್ 28 ಸಲ್ಲಿಸಬೇಕಾಗುತ್ತದೆ ಮತ್ತು ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ಪ್ರಕ್ರಿಯೆ ನಡೆಯಲು ಹಲವು ದಿನಗಳು ಬೇಕಾಗುತ್ತದೆ. ಕೆಲವೊಮ್ಮೆ ತಿಂಗಳುಗಳೂ ಬೇಕಾಗಬಹುದು. ಆ ನಂತರವೇ ಹೊಸ ನೋಂದಣಿ ಪ್ರಕ್ರಿಯ ಆರಂಭವಾಗುತ್ತದೆ.
ಹೊಸ ಬದಲಾವಣೆಗಳ ಪ್ರಸ್ತಾಪ ಏನು?
ಎನ್‌ಓಸಿ ಪ್ರಕ್ರಿಯೆಗಳು ಬಹಳ ಸಮಯ ತೆಗೆದುಕೊಳ್ಳುವುದರಿಂದ ಇದೀಗ ಎನ್‌ಓಸಿ ಬದಲಿಗೆ ಆಟೋ ಜನರೇಟೆಡ್ ಕ್ಲಿಯರೆನ್ಸ್ ಸಿಸ್ಟಮ್ ಜಾರಿಗೆ ಬರಲಿದೆ ಎನ್ನಲಾಗಿದೆ. ಅಲ್ಲದೇ ವಾಹನದ ವಿವರಗಳು ಅಂದರೆ ಚೇಸಿಸ್ ನಂಬರ್, ಇಂಜಿನ್ ನಂಬರ್ ಆಧರಿಸಿ ಸ್ವಯಂ ಚಾಲಿತವಾಗಿ ಬಾಕಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಯಾವುದೇ ಬಾಕಿ ಇಲ್ಲದಿದ್ದರೆ, ಹೊಸ ರಾಜ್ಯದ ಆರ್‌ಟಿಓ ಮೂಲಕ ಮರು ನೋಂದಣಿ ಮಾಡುವ ಅವಕಾಶ ನೀಡಲಾಗುತ್ತದೆ. ಅಲ್ಲದೇ ಇದನ್ನು ಪರಿವಾಹನ್ ಪೋರ್ಟಲ್ ಮೂಲಕ ಸುಲಭದಲ್ಲಿ ಮಾಡಬಹುದು.
ಸದ್ಯ ರಸ್ತೆ ಸಾರಿಗೆ ಮತ್ತು ಹೆದ್ದರಿ ಸಚಿವಾಲಯ ಈ ಪ್ರಸ್ತಾಪದ ಮೇಲೆ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದ್ದು, ಇದು ಒಂದು ವೇಳೆ ಜಾರಿಗೆ ಬಂದರೆ ದೇಶಾದ್ಯಂತ ಲಕ್ಷಾಂತರ ವಾಹನ ಮಾಲೀಕರು ನಿಟ್ಟುಸಿರು ಬಿಡುವಂತಾಗಲಿದೆ.


Click it and Unblock the Notifications