ಮೊಬೈಲ್, ಲ್ಯಾಪ್‌ಟಾಪ್, ಸೋಷಿಯಲ್ ಮೀಡಿಯಾ (Social Media) ಎಂಬುವಂತಹದ್ದು ಇತ್ತೀಚಿನ ಯುವಪೀಳಿಗೆಗೆ ದೊಡ್ಡ ವ್ಯಸನವಾಗಿಬಿಟ್ಟಿದೆ. ಒಂದು ಹೊತ್ತಿನ ಊಟವನ್ನಾದರೂ ಬಿಟ್ಟು ಕೂರುವ ಯುವಕರು, ಒಂದು ಕ್ಷಣ ಮೊಬೈಲ್ ಬಿಟ್ಟಿರಲಾರರು ಎಂಬ ಮಟ್ಟಕ್ಕೆ ತಲುಪಿದೆ. ಅದರಲ್ಲೂ ಸೋಷಿಯಲ್ ಮೀಡಿಯಾ ಪ್ರಭಾವ ಸಣ್ಣ ಮಕ್ಕಳ ಮೇಲೂ ಪ್ರಭಾವ ಬೀರುತ್ತಿದೆ. ಈ ಎಲ್ಲಾ ಪ್ರಭಾವಗಳಿಂದಾಗಿ ಇದೀಗ ಹಲವಾರು ದೇಶಗಳು ಮಕ್ಕಳು ಸೋಷಿಯಲ್ ಮೀಡಿಯಾ, ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಈಗಾಗಲೇ ಭಾರತ ಸರ್ಕಾರ (India) ಕೂಡಾ ಎಐ ಸಮ್ಮಿಟ್‌ನಲ್ಲಿ ಸೋಷಿಯಲ್ ಮೀಡಿಯಾ ಬಳಕೆಗೆ ನೀತಿ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಮಧ್ಯೆ ಕರ್ನಾಟಕ ಸರ್ಕಾರವೂ ಮಕ್ಕಳಿಗೆ ಮೊಬೈಲ್ ಫೋನ್ (Mobile) ಬಳಕೆಯನ್ನು ನಿರ್ಬಂಧಿಸುವ ಅಥವಾ ಸೋಷಿಯಲ್ ಮೀಡಿಯಾ (Social Media) ಬಳಕೆಯನ್ನು ನಿಷೇಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಹೌದು, ಕರ್ನಾಟಕದಲ್ಲಿ (Karnataka) ಮಕ್ಕಳು ಮತ್ತು ಯುವ ಜನರಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಫೋನ್‌ಗಳ ಬಳಕೆ ವ್ಯಸನವಾಗಿ ಬದಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್, ಸಾಮಾಜಿಕ ಜಾಲತಾಣಗಳು ಭಾರೀ ಪ್ರಭಾವ ಬೀರಿದೆ. ಈ ಎಲ್ಲಾ ಪರಿಣಾಮಗಳನ್ನು ಗಮನಿಸಿದ ಕರ್ನಾಟಕ ರಾಜ್ಯ ಸರ್ಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ (Children) ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಮೆಗಾ ಪ್ಲಾನ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗಿನ ಸಭೆಯಲ್ಲಿ ಮೊಬೈಲ್ ಬಳಕೆ, ಸೋಷಿಯಲ್ ಮೀಡಿಯಾ ಬಳಕೆ ನಿಷೇಧದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಶೀಘ್ರದಲ್ಲೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಸಭೆಯೊಂದರಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ಮೊಬೈಲ್ ಬ್ಯಾನ್ ವಿಚಾರವಾಗಿ ಸಿಎಂ, ವಿಸಿಗಳಿಂದಗಳು ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಕಾನೂನು ಜಾರಿಯಾದ್ರೆ ಆಸ್ಟ್ರೇಲಿಯಾದಂತೆ ಕರ್ನಾಟಕದಲ್ಲೂ ಸಂಚಲನ ಸೃಷ್ಟಿಸಲಿದೆ. ಆ ಪ್ರಕಾರ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಮಾಡದಂತೆ ನಿಯಮ ಜಾರಿಗೆ ತರುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
"ಇವತ್ತು ಡ್ರಗ್ಸ್, ಸೋಷಿಯಲ್ ಮೀಡಿಯಾಗಳಿಗೆ ಹೆಚ್ಚಿನ ಯುವಕರು ಬಲಿಯಾಗುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯ, ಇತರ ದೇಶಗಳಲ್ಲಿ ಮೊಬೈಲ್ ಬ್ಯಾನ್ ಮಾಡಲಾಗಿದೆ. ಅದೇ ಕ್ರಮವನ್ನು ಇಲ್ಲೂ ಜಾರಿಗೆ ತರಲು ಸರ್ಕಾರ ಚರ್ಚೆ ನಡೆಸುತ್ತಿದೆ. ಈ ಪರಿಣಾಮ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮಾಡುವುದರ ಬಗ್ಗೆ ವಿವಿ ಉಪಕುಲಪತಿಗಳ ಅಭಿಪ್ರಾಯ ಏನು?" ಎಂಬುದನ್ನು ಕೇಳಿದ್ದಾರೆ.
ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ಮಕ್ಕಳಲ್ಲಿ ವ್ಯಸನವಾಗುತ್ತಿದೆ. ಇದರಿಂದ ಮಕ್ಕಳ ಅಧ್ಯಯನದ ಮೇಳೂ ಭಾರೀ ಪರಿಣಾಮ ಬೀರುತ್ತಿದೆ. ಅಲ್ಲದೇ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದೆ ಎನ್ನಲಾಗಿದೆ. ಅಲ್ಲದೇ ಆನ್‌ಲೈನ್ ಗೇಮಿಂಗ್, ಹ್ಯಾಕಿಂಗ್, ಡ್ರಗ್ಸ್ ಸಂಬಂಧಿತ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗಿದ್ದು, ಈ ಎಲ್ಲಾ ಅಕ್ರಮಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಸರ್ಕಾರ ಇದೀಗ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.


Click it and Unblock the Notifications