8ನೇ ವೇತನ ಆಯೋಗದ (8th Pay Commission) ಘೋಷಣೆಗಾಗಿ ಇಡೀ ದೇಶವೇ ಕಾದುಕುಳಿತಿದೆ. ಪ್ರತೀ 10 ವರ್ಷಗಳಿಗೊಮ್ಮೆ ರಚನೆಯಾಗುವ ಈ ವೇತನ ಆಯೋಗ, ಕೇಂದ್ರ ಸರ್ಕಾರಿ ನೌಕರರ, ಪಿಂಚಣಿದಾರರ ಭತ್ಯೆ (DA, DR, HRA) ಮತ್ತು ಪಿಂಚಣಿಯನ್ನು ಪರಿಷ್ಕರಿಸುತ್ತದೆ. ಇದು ದೇಶದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಂಬಳ ಹೆಚ್ಚಳ ಮಾಡುವುದಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಆಯೋಗ ರಚನೆ ಮಾಡಿದ್ದು, ಅಲ್ಲದೇ ವರದಿ ಸಲ್ಲಿಕೆಗೆ ಗಡುವನ್ನೂ ನೀಡಿದೆ. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ (Social Media) ನಿವೃತ್ತ ನೌಕರರಿಗೆ ಸಿಗುವ ಡಿಎ ಮತ್ತ ವೇತನ ಆಯೋದ ಪರಿಷ್ಕರಣೆ ಬಗ್ಗೆ ಭಾರೀ ವೈರಲ್ ಆಗುತ್ತಿದೆ. ಇದೀಗ ಈ ಬಗ್ಗೆ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡು, ವದಂತಿಗಳಿಗೆ ತೆರೆ ಎಳೆದಿದೆ.

ಕೇಂದ್ರ ಸರ್ಕಾರದ ನಿವೃತ್ತ ನೌಕರರ ತುಟ್ಟಿಭತ್ಯೆ (DA) ಹೆಚ್ಚಳ ಮತ್ತು ವೇತನ ಆಯೋಗದ ಪ್ರಯೋಜನಗಳನ್ನು 'ಹಣಕಾಸು ಕಾಯ್ದೆ 2025'ರ ಅಡಿಯಲ್ಲಿ ತೆಗೆದು ಹಾಕಲಾಗಿದೆ ಎಂಬ ಸುದ್ದಿಗಳು ವಾಟ್ಸಾಪ್, ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿತ್ತು. ಆದರೆ ಇದನ್ನು ಪರಿಶೀಲಿಸಿದ ಸರ್ಕಾರದ ಸತ್ಯಾಂಶ ಪರಿಶೀಲನಾ ಘಟಕ (PIB Fact Check) ಶನಿವಾರ ಸುಳ್ಳು ಎಂದು ಘೋಷಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪಿಐಬಿ ಫ್ಯಾಕ್ಟ್ ಚೆಕ್, ತನ್ನ 'ಎಕ್ಸ್' ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶವೊಂದು, ಕೇಂದ್ರ ಸರ್ಕಾರವು ನಿವೃತ್ತ ನೌಕರರ ಪಿಂಚಣಿ ನಂತರದ ತುಟ್ಟಿಭತ್ಯೆ ಹೆಚ್ಚಳ ಹಾಗೂ ವೇತನ ಆಯೋಗದ ಪರಿಷ್ಕರಣೆಗಳಂತಹ ಸೌಲಭ್ಯಗಳನ್ನು ಹಣಕಾಸು ಕಾಯ್ದೆ 2025ರ ಅಡಿ ಹಿಂಪಡೆದಿದೆ ಎಂದು ಹೇಳಿದೆ. ಈ ಹೇಳಿಕೆ #ಸುಳ್ಳು!" ಎಂದು ಹೇಳಿದೆ.
ಪಿಐಬಿ, ಸಿ.ಸಿ.ಎಸ್ (ಪಿಂಚಣಿ) ನಿಯಮಗಳು, 2021 ರ ನಿಯಮ 37 ಅನ್ನು ಉಲ್ಲೇಖಿಸಿದೆ. ಈ ನಿಯಮ ತಿದ್ದುಪಡಿಯ ಪ್ರಕಾರ, ದುರ್ನಡತೆಯಿಂದಾಗಿ ವಜಾಗೊಂಡ ಸಾರ್ವಜನಿಕ ವಲಯದ ಉದ್ಯಮದ ನೌಕರರ ನಿವೃತ್ತಿ ಸೌಲಭ್ಯಗಳನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಎಲ್ಲಾ ನಿವೃತ್ತರ ಸೌಲಭ್ಯಗಳನ್ನು ಹಿಂಪಡೆಯಲಾಗುತ್ತದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇನು?
"ಹೊಸ ನಿಯಮಗಳ ಪ್ರಕಾರ, ಪಿಂಚಣಿದಾರರು ಇನ್ನು ಮುಂದೆ ತುಟ್ಟಿಭತ್ಯೆ (DA) ಹೆಚ್ಚಳ ಅಥವಾ ಮುಂಬರುವ 8ನೇ ವೇತನ ಆಯೋಗ ಸೇರಿದಂತೆ ಮುಂದಿನ ವೇತನ ಆಯೋಗದ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ. ಹಣಕಾಸು ಕಾಯ್ದೆ 2025ರಲ್ಲಿ, ನಿವೃತ್ತ ನೌಕರರ ಆರ್ಥಿಕ ಸೌಲಭ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಸರ್ಕಾರಕ್ಕಿಲ್ಲ ಎಂದು ಹೇಳಲಾಗಿದೆ. ಇದರರ್ಥ ವೇತನ ಆಯೋಗದ ಸೌಲಭ್ಯಗಳು ಮತ್ತು ತುಟ್ಟಿಭತ್ಯೆ ಹೆಚ್ಚಳ ಈಗಾಗಲೇ ನಿವೃತ್ತರಾದವರಿಗೆ ಅನ್ವಯಿಸುವುದಿಲ್ಲ." ಎಂದು ಬರೆಯಲಾಗಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಇದೀಗ ಕೇಂದ್ರ ಸರ್ಕಾರ ಬ್ರೇಕ್ ನೀಡಿದ್ದು, ನಿವೃತ್ತ ನೌಕರರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನೂ 8ನೇ ವೇತನ ಆಯೋಗದ ಜಾರಿ ದಿನಾಂಕ ಇನ್ನೂ ನಿರ್ಧರಿಸಿಲ್ಲ. ಸಾಮಾನ್ಯವಾಗಿ 2026 ಜನವರಿ 1 ರಿಂದ ಜಾರಿಗೆ ಬರಬಹುದು ಎಂದು ನಿರೀಕ್ಷೆಯಿದೆ. ಆದರೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications