ಮಹಾಪರಿನಿರ್ವಾಣ ದಿವಸ್‌ ಸಲುವಾಗಿ ಡಿಸೆಂಬರ್ 6 ರಂದು ಷೇರು ಮಾರುಕಟ್ಟೆಗಳು ಮುಚ್ಚಿರುತ್ತವೆಯೇ?

ಮಹಾಪರಿನಿರ್ವಾಣ ದಿವಸ್‌ನ ನಿಮಿತ್ತವಾಗಿ ಮಹಾರಾಷ್ಟ್ರ ಸರ್ಕಾರ ಡಿಸೆಂಬರ್ 6 ರಂದು ಮುಂಬೈ ಮತ್ತು ಅದರ ಉಪನಗರಗಳಿಗೆ ರಜೆ ನೀಡಿದೆ. ಇದು ಸ್ಥಳೀಯ ರಜೆಗಳ ಭಾಗವಾಗಿದೆ, ಅಂದು ಮುಂಬೈನಲ್ಲಿ ಸರ್ಕಾರಿ ಕಚೇರಿ ಮತ್ತು ಅರೆ ಸರ್ಕಾರಿ ಕಚೇರಿಗಳು ತೆರೆಯುವುದಿಲ್ಲ. ಆದರೂ, ಸ್ಟಾಕ್ ಎಕ್ಸ್‌ಚೇಂಜ್‌ಗಳಿಂದ ಯಾವುದೇ ರೀತಿಯ ಅಧಿಸೂಚನೆ ಬಂದಿಲ್ಲ ಮತ್ತು ಸದ್ಯಕ್ಕೆ ಎನ್‌ಎಸ್‌ಇ ಅಥವಾ ಬಿಎಸ್‌ಇ ಯಾವುದೇ ರಜಾ ಸುತ್ತೋಲೆಯನ್ನು ಹೊರಡಿಸಿಲ್ಲ. ಹಾಗಾಗಿ, ಡಿಸೆಂಬರ್ 6 ರಂದು ಸ್ಟಾಕ್‌ ಮಾರುಕಟ್ಟೆಗಳನ್ನು ಮುಚ್ಚುವುದಿಲ್ಲ.

ಡಿಸೆಂಬರ್‌ 6ರಂದು ಅಂಬೇಡ್ಕರ್‌ ಅವರ ಪುಣ್ಯತಿಥಿ ಹಿನ್ನೆಲೆ ಸ್ಟಾಕ್‌ ಮಾರುಕಟ್ಟೆಗಳು ಸಹ ಮುಚ್ಚುತ್ತವಾ ಅಥವಾ ತೆರೆಯುತ್ತವಾ ಎನ್ನುವ ಗೊಂದಲಗಳಿದ್ದವು. ಆದ್ರೆ ಆ ದಿನದಂದು ಸ್ಟಾಕ್‌ ಮಾರುಕಟ್ಟೆಗಳು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎನ್ನುವುದು ತಿಳಿದುಬಂದಿದೆ.

ಡಿಸೆಂಬರ್ 6 ರಂದು ಷೇರು ಮಾರುಕಟ್ಟೆಗಳು ಮುಚ್ಚಿರುತ್ತವೆಯೇ?

ಡಿಸೆಂಬರ್‌ 6ರಂದು ಮಹಾರಾಷ್ಟ್ರದ ಮುಂಬೈ ಮತ್ತು ಅದರ ಉಪನಗರ ಪ್ರದೇಶಗಳಲ್ಲಿನ ಸರ್ಕಾರಿ ಹಾಗು ಅರೆ ಸರ್ಕಾರಿ ಕಚೇರಿಗಳಿಗೆ ಮಾತ್ರ ರಜೆ ಇರುತ್ತದೆ. ಹೀಗಾಗಿ ಅಂದು, ಈ ಕಚೇರಿಗಳು ತೆರೆಯುವುದಿಲ್ಲ. ಅಲ್ಲದೆ ಆ ಭಾಗದ ಬ್ಯಂಕ್‌ಗಳಿಗೂ ರಜೆ ಇರುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಡಿಸೆಂಬರ್ 6 ರಂದು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಬ್ಯಾಂಕಿಂಗ್ ಸಮಯ ಅಥವಾ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

ಇನ್ನು ಮದ್ಯದ ಅಂಗಡಿಗಳು ಕೂಡ ಮುಚ್ಚಲಿವೆ. ಮುಂಬೈ ನಗರದಲ್ಲಿ ಡಿಸೆಂಬರ್ 6 ಅನ್ನು ಒಣ ದಿನ ಎಂದು ಘೋಷಿಸಿದ್ದಾರೆ. ಹೀಗಾಗಿ ಮುಂಬೈನ ಎಲ್ಲಾ ಮದ್ಯದಂಗಡಿಗಳು 6ರಂದು ಬಂದ್ ಆಗಲಿವೆ.

ಡಿಸೆಂಬರ್‌ನಲ್ಲಿ ಸ್ಟಾಕ್ ಮಾರುಕಟ್ಟೆ ರಜಾದಿನಗಳು

ಡಿಸೆಂಬರ್ 6 ರಂದು ವಿನಿಮಯ ಕೇಂದ್ರಗಳಲ್ಲಿ ಎಂದಿನಂತೆ ವ್ಯವಹಾರಗಳಿರುತ್ತವೆ. ಡಿಸೆಂಬರ್‌ನಲ್ಲಿ ಸ್ಟಾಕ್ ಮಾರುಕಟ್ಟೆ ರಜಾದಿನಗಳನ್ನ ನೋಡೋದಾದ್ರೆ, ಕ್ರಿಸ್ಮಸ್ ಕಾರಣ ಡಿಸೆಂಬರ್ 25ರಂದು ಮಾರುಕಟ್ಟೆಗಳನ್ನು ಮುಚ್ಚಲಾಗುತ್ತದೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಮಾತ್ರ ಮಾರುಕಟ್ಟೆಗಳನ್ನು ಮುಚ್ಚಲಾಗುತ್ತದೆ.

ಸ್ಟಾಕ್ ಮಾರುಕಟ್ಟೆಗಳು

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಇವೆರಡೂ ಷೇರು ಮಾರುಕಟ್ಟೆ ರಜೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದ್ರೆ ಎರಡೂ ಕೂಡ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ, ಪ್ರಮಾಣಿತ ವಹಿವಾಟಿನ ಸಮಯಗಳು ಕೂಡ ಜಾರಿ ಇರುತ್ತವೆ.ಇದಲ್ಲದೆ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಸ್ಥಳೀಯ ರಜಾದಿನಗಳಲ್ಲಿ ಷೇರು ಮಾರುಕಟ್ಟೆಗೆ ಕೂಡ ರಜಾದಿನಗಳನ್ನು ಘೋಷಿಸಲು ಸ್ಟಾಕ್ ಎಕ್ಸ್ಚೇಂಜ್‌ಗಳಿಂದ ಇದೊಂದು ರೀತಿಯ ಅಭ್ಯಾಸವಾಗಿ ಬಿಟ್ಟಿದೆ.

ಡಿಸೆಂಬರ್‌ನಲ್ಲಿ ಇತರ ಸಾರ್ವಜನಿಕ ರಜಾದಿನಗಳು

ಡಿಸೆಂಬರ್ 6, 2024ರ ಹೊರತುಪಡಿಸಿ, ಮಹಾರಾಷ್ಟ್ರದಲ್ಲಿ ಎಲ್ಲಾ ರಾಜ್ಯಗಳಂತೆ ಡಿಸೆಂಬರ್ 25, 2024 ರಂದು ಕ್ರಿಸ್ಮಸ್‌ಗಾಗಿ ಸಾರ್ವಜನಿಕ ರಜಾದಿನವನ್ನು ಘೋಷಿಸುತ್ತದೆ. ಈ ದಿನ ಬ್ಯಾಂಕ್‌ಗಳು ಮತ್ತು ಷೇರು ವಿನಿಮಯ ಕೇಂದ್ರಗಳು ಯಾವುದೇ ವಹಿವಾಟನ್ನು ನಡೆಸುವುದಿಲ್ಲ. ನಿಮ್ಮ ಹಣಕಾಸಿನ ವಹಿವಾಟುಗಳನ್ನು ನೀವು ಯೋಜಿಸಲು ಡಿಸೆಂಬರ್ 2024ರಲ್ಲಿ ಷೇರು ಮಾರುಕಟ್ಟೆ ಜೊತೆಗೆ ಬ್ಯಾಂಕ್ ರಜಾದಿನಗಳ ಬಗ್ಗೆ ಕೂಡ ಗಮನಿಸಬಹುದು.

ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಮತ್ತು ರಜೆ ವೇಳಾಪಟ್ಟಿ

ಈಕ್ವಿಟಿಗಳ ವಿಭಾಗದಲ್ಲಿ ಎಲ್ಲಾ ದಿನಗಳಲ್ಲಿ ವ್ಯಾಪಾರ ನಡೆಯುತ್ತದೆ ಅಂದರೆ ಶನಿವಾರ ಮತ್ತು ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ವಿನಿಮಯ ಕೇಂದ್ರಗಳು ಈ ಬಗ್ಗೆ ಮೊದಲೆ ಘೋಷಿಸುತ್ತವೆ. ಅಂತಹ ದಿನಗಳಲ್ಲಿ ಮಾರುಕಟ್ಟೆಯನ್ನು ಮುಚ್ಚಬಹುದು. ಹಾಗೆ ರಜಾದಿನಗಳು ಎಂದು ಘೋಷಿಸಿದ ನಂತರ ಕೂಡ ಆ ದಿನಗಳಲ್ಲಿ ಮಾರುಕಟ್ಟೆಯನ್ನು ತೆರೆಯಲುಬಹುದು. ಅಗತ್ಯವೆಂದು ಭಾವಿಸಿದಾಗ ವ್ಯಾಪಾರದ ಸಮಯವನ್ನು ಮತ್ತೆ ವಿಸ್ತರಿಸಬಹುದು. ಜೊತೆಗೆ ಮುಂದೂಡಬಹುದು ಅಥವಾ ಕಡಿಮೆ ಮಾಡಬಹುದು.

ಮಹಾಪರಿನಿರ್ವಾಣ ದಿವಸ್ 2024

ಡಿಸೆಂಬರ್ 6, 1956 ರಂದು ದೆಹಲಿಯಲ್ಲಿ ನಿಧನರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿಯ ನೆನಪಿಗಾಗಿ ಮಹಾಪರಿನಿರ್ವಾಣ ದಿವಸ್ ಅನ್ನು ಆಚರಿಸಲಾಗುತ್ತದೆ. ಅಪ್ರತಿಮ ಸಮಾಜ ಸುಧಾರಕ ಮತ್ತು ಭಾರತೀಯ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ ಪರಂಪರೆಯನ್ನು ಗೌರವಿಸುವ ದಿನವಾಗಿ ಇದು ಕಾರ್ಯನಿರ್ವಹಿಸುತ್ತದೆ. ಭಾರತೀಯ ಸಮಾಜಕ್ಕೆ ಅವರ ಮಹತ್ವದ ಕೊಡುಗೆಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರ ಅವಿರತ ಹೋರಾಟವನ್ನು ಪ್ರತಿಬಿಂಬಿಸಲು ಈ ದಿನವು ಒಂದು ಸಂದರ್ಭವಾಗಿದೆ. ಅಂದು ಮುಂಬೈನ ದಾದರ್‌ನಲ್ಲಿರುವ ಚೈತ್ಯಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅವರಿಗೆ ಗೌರವವನ್ನ ಸಲ್ಲಿಸುತ್ತಾರೆ. ಬಿ.ಆರ್ ಅಂಬೇಡ್ಕರ್ ಅವರನ್ನ ಅಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು ಹೀಗಾಗಿ ಈ ದಿನವನ್ನು ಮಹಾಪರಿನಿರ್ವಾಣ ದಿವಸ್ ಎಂದು ಕರೆಯಲಾಗುತ್ತದೆ. ದಹಿ ಹಂಡಿ ಮತ್ತು ಗಣೇಶ ಚತುರ್ಥಿಯನ್ನು ಹೊರತುಪಡಿಸಿ ರಾಜ್ಯ ಸರ್ಕಾರವು ಘೋಷಿಸಿದ ಮೂರನೇ ಸ್ಥಳೀಯ ರಜೆ ಇದಾಗಿದೆ.

ಹೀಗಾಗಿ ಡಿಸೆಂಬರ್‌ 6 ರಂದು ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆಗಳಂತಹ ಅಗತ್ಯ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಕೆಲವು ಸರ್ಕಾರಿ ಕಚೇರಿಗಳು ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸುವ ಅನೇಕ ಭಕ್ತರ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಸಾರಿಗೆ ವ್ಯವಸ್ಥೆ ಮತ್ತು ಸಂಚಾರ ಸಲಹೆಗಳು ಜಾರಿಯಲ್ಲಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+