ಇತ್ತೀಚೆಗೆ ಚಿನ್ನದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸ್ವಲ್ಪ ಮಟ್ಟಿಗೆ ಇಳಿಕೆ ಕಂಡರೂ, ಏರಿಕೆ ಪ್ರಮಾಣಕ್ಕೆ ಹೋಲಿಸಿದ್ರೆ ತುಂಬಾನೇ ಕಡಿಮೆ. ಆದ್ದರಿಂದ ಈ ವರ್ಷವಂತೂ ಚಿನ್ನ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ. ಈ ಮಧ್ಯೆ ಚಿನ್ನದ ಬೆಲೆ ಮುಂದಿನ ವರ್ಷದಲ್ಲಿ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? ಎಂಬ ಕುತೂಹಲದಲ್ಲೂ ಜನ ಇದ್ದಾರೆ.

ಇದೀಗ ಆರ್ಥಿಕ ತಜ್ಞ ಹಾಗೂ "Rich Dad, Poor Dad" ಪುಸ್ತಕದ ಲೇಖಕ ರಾಬರ್ಟ್ ಕಿಯೋಸಾಕಿ ಅವರು ಚಿನ್ನದ ಬೆಲೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಹೆಚ್ಚುತ್ತಿರುವ ಸಾಲ ಮತ್ತು ಫೆಡರಲ್ ರಿಸರ್ವ್‌ನ ನಿರಂತರ ಹಣದ ಮುದ್ರಣದಿಂದ ಡಾಲರ್ ಮೌಲ್ಯ ಕುಸಿಯುತ್ತದೆ ಎಂದು ಹೇಳಿದ್ದಾರೆ. 1971 ರಿಂದ ಚಿನ್ನವನ್ನು ಸಂಗ್ರಹಿಸುತ್ತಿರುವ ಅವರು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಚಿನ್ನ ಮತ್ತು ಬೆಳ್ಳಿಯಂತಹ ಆಸ್ತಿಗಳ ಮೇಲಿನ ಬೇಡಿಕೆ ಈ ಬೆಲೆ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ.
ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ನಗದು ರೂಪದಲ್ಲಿ ಉಳಿತಾಯ ಮಾಡುವುದಕ್ಕಿಂತ ಹೂಡಿಕೆ, ಆಸ್ತಿಗಳನ್ನು ಗಳಿಸಿದ್ರೆ ಹೆಚ್ಚು ಪ್ರಯೋಜನಕಾರಿ ಎಂದು ಕಿಯೋಸಾಕಿ ಸಲಹೆ ನೀಡಿದ್ದಾರೆ. ಮಾರುಕಟ್ಟೆ ಕುಸಿತ ಕಾಣುವ ಬಗ್ಗೆ ಎಚ್ಚರಿಕೆ ನೀಡಿದರೂ, ಕಿಯೋಸಾಕಿ ಚಿನ್ನ, ಬೆಳ್ಳಿಯಂತಹ ಅಮೂಲ್ಯ ಲೋಹಗಳ ಮೇಲಿನ ಹೂಡಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಕಿಯೋಸಾಕಿ ಸೋಷಿಯಲ್ ಮೀಡಿಯಾ ಪೋಸ್ಟ್!
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿರುವ ಕಿಯೋಸಾಕಿ, "ಚಿನ್ನದ ಬೆಲೆ ಬಗ್ಗೆ ನನ್ನ ಟಾರ್ಗೆಟ್ ಬೆಲೆ $27000 (ಪ್ರತೀ ಔನ್ಸ್‌ಗೆ 23,95,188.90 ಅಥವಾ 10 ಗ್ರಾಂಗೆ 8,44,860 ರೂ.). ಇನ್ನು ಈ ಬೆಲೆಯನ್ನು ನನ್ನ ಸ್ನೇಹಿತ ಜಿಮ್ ರಿಕಾರ್ಡ್ಸ್‌ನಿಂದ ಪಡೆದುಕೊಂಡಿದ್ದೇನೆ. ಅಲ್ಲದೇ ನಾನು ಎರಡು ಚಿನ್ನದ ಗಣಿಗಳನ್ನು ಹೊಂದಿದ್ದೇನೆ. ನಿಕ್ಸನ್ ಅಮೆರಿಕಾ ಡಾಲರ್‌ನಿಂದ ಚಿನ್ನವನ್ನು ತೆಗೆದುಕೊಳ್ಳು ಆರಂಭಿಸಿದ ನಂತರ, ನಾನೂ ಕೂಡಾ 1971 ರಲ್ಲಿ ಚಿನ್ನವನ್ನು ಖರೀದಿಸಲು ಆರಂಭಿಸಿದೆ" ಎಂದು ಹೇಳಿದ್ದಾರೆ.
ಕಿಯೋಸಾಕಿ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, "ಚಿನ್ನಕ್ಕೆ ನನ್ನ ಗುರಿ ಬೆಲೆ $27,000 (ಪ್ರತಿ ಔನ್ಸ್‌ಗೆ ₹23,95,188.90 ಅಥವಾ 10 ಗ್ರಾಂಗೆ ₹8,44,860). ಈ ಬೆಲೆಯನ್ನು ನನ್ನ ಸ್ನೇಹಿತ ಜಿಮ್ ರಿಕಾರ್ಡ್ಸ್‌ನಿಂದ ಪಡೆದಿದ್ದೇನೆ. ನಾನು ಎರಡು ಚಿನ್ನದ ಗಣಿಗಳನ್ನು ಹೊಂದಿದ್ದೇನೆ. ನಿಕ್ಸನ್ ಅಮೆರಿಕನ್ ಡಾಲರ್‌ನಿಂದ ಚಿನ್ನವನ್ನು ಬೇರ್ಪಡಿಸಿದ ವರ್ಷವಾದ 1971 ರಲ್ಲಿ ನಾನು ಚಿನ್ನವನ್ನು ಖರೀದಿಸಲು ಪ್ರಾರಂಭಿಸಿದೆ" ಎಂದು ಹೇಳಿದ್ದಾರೆ.
ಕಿಯೋಸಾಕಿ ಬೆಳ್ಳಿ ದರದ ಬಗ್ಗೆಯೂ ಭವಿಷ್ಯ ಹೇಳಿದ್ದು, ಭಾರೀ ಬೆಲೆ ಏರಿಕೆ ಕಾಣುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. "2026 ರಲ್ಲಿ ಬೆಳ್ಳಿ $100 ತಲುಪಲಿದೆ. ನಾನು ಬೆಳ್ಳಿ ಗಣಿಗಳನ್ನು ಹೊಂದಿದ್ದೇನೆ ಮತ್ತು ಹೊಸ ಬೆಳ್ಳಿ ಲಭ್ಯತೆ ತುಂಬಾ ಕಡಿಮೆ ಎಂದು ಗೊತ್ತಾಗಿದೆ" ಎಂದು ಅವರು ಬರೆದಿದ್ದಾರೆ.


Click it and Unblock the Notifications