Gold Rate Prediction: ಚಿನ್ನದ ಬೆಲೆ 70 ಸಾವಿರಕ್ಕೆ ಇಳಿಕೆಯಾಗುತ್ತಾ? ಇಲ್ವಾ? ಇತಿಹಾಸ ಕಂಡ 5 ಭೀಕರ ಕುಸಿತಗಳಿವು!

ಚಿನ್ನದ ಬೆಲೆ (Gold Price) ಇತ್ತೀಚೆಗೆ ಭಾರೀ ಏರಿಕೆ ಕಂಡಿದೆ. ಅದರಲ್ಲೂ ಈ ವರ್ಷವಂತೂ ಚಿನ್ನದ ಬೆಲೆ ಇಳಿಕೆಯಾಗಿದ್ದಕ್ಕಿಂತ ಹೆಚ್ಚಾಗಿ ಏರಿಕೆಯಾಗಿದ್ದೇ ಹೆಚ್ಚು. ಆದ್ದರಿಂದ ಚಿನ್ನದ ಮೇಲಿನ ಹೂಡಿಕೆದಾರರು, ಖರೀದಿದಾರರು ನಿರಂತರ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸುತ್ತಿರುವುದು ಉತ್ತಮ. ಇನ್ನು ಚಿನ್ನದ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? ಎಂದು ತಜ್ಞರು ನಿರಂತರ ಭವಿಷ್ಯ (Gold Prediction) ನುಡಿಯುತ್ತಲೇ ಇದ್ದಾರೆ. ಇನ್ನು ಕಳೆದ ವಾರದಲ್ಲಿ ಚಿನ್ನದ ದರ ಭಾರೀ ಕುಸಿತ ಕಂಡು, ನಂತರ ಮತ್ತೆ ಏರಿಕೆಯ ಹಾದಿ ಹಿಡಿದಿತ್ತು.

ಚಿನ್ನದ ಬೆಲೆ 70 ಸಾವಿರಕ್ಕೆ ಇಳಿಕೆಯಾಗುತ್ತಾ? ಇಲ್ವಾ?

ಈಗಾಗಲೇ ಕೆಲವು ತಜ್ಞರು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತೆ ಎಂದು ಹೇಳಿದರೆ, ಇನ್ನೂ ಕೆಲವರು ಏರಿಕೆಯಾಗಬಹುದು ಎಂದು ಹೇಳಿದ್ದಾರೆ. ಇನ್ನು ಬಂಗಾರ ಪ್ರಿಯರು ಕೂಡಾ ಚಿನ್ನದ ಬೆಲೆ ಕುಸಿಯಬಹುದು ಎಂಬ ಭಾರೀ ನಿರೀಕ್ಷೆಯಲ್ಲಿದ್ದಾರೆ. ಇದೀಗ ಈ ನಿರೀಕ್ಷೆಗಳು ಸುಳ್ಳಾಗುವುದಿಲ್ಲ ಎಂಬುದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹೌದು, ಒಮ್ಮೆ ಏರಿಕೆ ಕಂಡ ಚಿನ್ನದ ಬೆಲೆ ದಿಢೀರ್‌ ಕುಸಿತ ಕಾಣಬಹುದು ಎಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದೇ ರೀತಿ ಇದೀಗ ವಿಶ್ವವನ್ನೇ ಒಮ್ಮ ಬೆಚ್ಚಿಬೀಳಿಸಿದ 5 ಚಿನ್ನದ ಬೆಲೆ ಕುಸಿತ ಕಂಡ ಘಟನೆಗಳು ಇಲ್ಲಿದೆ ಓದಿ.

1869 ಸೆಪ್ಟೆಂಬರ್ 24 - ಯುಎಸ್ "ಬ್ಲಾಕ್ ಫ್ರೈಡೇ":
1869ರ ಸೆಪ್ಟೆಂಬರ್ 24ರಂದು ಅಮೆರಿಕದಲ್ಲಿ "ಬ್ಲಾಕ್ ಫ್ರೈಡೇ" ಎಂದು ಕರೆಯಲಾಗಿತ್ತು. ಏಕೆಂದರೆ ಈ ಸಂದರ್ಭದಲ್ಲಿ ಯುಎಸ್‌ನಲ್ಲಿ ಆರ್ಥಿಕ ಭೀತಿ ಮತ್ತು ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿತ್ತು. ಇದರಿಂದ ಆರ್ಥಿಕತೆಯ ಮೇಲೂ ಭಾರೀ ದೊಡ್ಡ ಪರಿಣಾಮ ಬೀರಿತು. ಇನ್ನು ಈ ದುರಂತಕ್ಕೆ ಹಣಕಾಸು ತಜ್ಞರಾದ ಜೇ ಗೌಲ್ಡ್ ಮತ್ತು ಜೇಮ್ಸ್ ಫಿಸ್ಕ್ ಚಿನ್ನದ ಮಾರುಕಟ್ಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೇ ಪ್ರಮುಖ ಕಾರಣವಾಯಿತು.

1869 ರ ಅಮೆರಿಕ ಅಧ್ಯಕ್ಷ ಯುಲಿಸಸ್ ಎಸ್. ಗ್ರಾಂಟ್ ಅವರ ಸಂಬಂಧಿಯ ಮೂಲಕ ಪಡೆದ ರಹಸ್ಯ ಮಾಹಿತಿಯನ್ನು ಬಳಸಿಕೊಂಡು ಜೇ ಗೌಲ್ಡ್‌ ಮತ್ತು ಜೇಮ್ಸ್‌ ಫಿಸ್ಕ್‌, ದೊಡ್ಡ ಪ್ರಮಾಣದ ಚಿನ್ನವನ್ನು ಖರೀದಿಸಿ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ, ಈ ಯೋಜನೆ ಬಹಿರಂಗಗೊಂಡ ನಂತರ, ಅಧ್ಯಕ್ಷ ಗ್ರಾಂಟ್ ಖಜಾನೆ ಇಲಾಖೆಗೆ $4 ಮಿಲಿಯನ್ ಮೌಲ್ಯದ ಚಿನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಆದೇಶಿಸಿದರು.

ಈ ಬೆನ್ನಲ್ಲೇ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $160 ರಿಂದ $130 ಕ್ಕೆ ಕುಸಿತ ಕಂಡಿತು ಮತ್ತು ಷೇರು ಮಾರುಕಟ್ಟೆಯಲ್ಲೂ ಭಾರಿ ಕುಸಿತ ಕಂಡುಬಂತು.

1980 ಜನವರಿ - $850:
1980ರ ಜನವರಿಯಲ್ಲಿ, ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $850ರ ಕ್ಕೆ ತಲುಪಿತ್ತು. (ಜನವರಿ 21 ರಂದು ಲಂಡನ್ ಫಿಕ್ಸ್ $850). ಆದರೆ, ನಂತರದಲ್ಲಿ ಸಂಭವಿಸಿದ ಭಾರಿ ಕುಸಿತ ಹೊಸ ಇತಿಹಾಸಕ್ಕೆ ಕಾರಣವಾಗಿತ್ತು. ಹೆಚ್ಚಿನ ಹಣದುಬ್ಬರ, ಭೌಗೋಳಿಕ ರಾಜಕೀಯ ಅಸ್ಥಿರತೆ ಮತ್ತು ಯುಎಸ್ ವಿತ್ತೀಯ ನೀತಿಯಲ್ಲಿನ ಪ್ರಮುಖ ಬದಲಾವಣೆಗಳು ಈ ಏರಿಳಿತಕ್ಕೆ ಕಾರಣವಾಯ್ತು ಎನ್ನಲಾಗಿದೆ.

2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು:
2008ರ ಜಾಗತಿಕವಾಗಿ ಕಂಡ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನದ ಬೆಲೆ ಏಳು ತಿಂಗಳಲ್ಲಿ ಮೂರನೇ ಒಂದು ಭಾಗದಷ್ಟು ಕುಸಿತ ಕಂಡಿತ್ತು. ಲಿಕ್ವಿಡಿಟಿ ಬಿಕ್ಕಟ್ಟಿನಿಂದಾಗಿ, ಇತರ ಅಸ್ಥಿರ ಮಾರುಕಟ್ಟೆಗಳಲ್ಲಿನ ನಷ್ಟಗಳನ್ನು ಸರಿದೂಗಿಸಲು ಮತ್ತು ಮಾರ್ಜಿನ್ ಕರೆಗಳನ್ನು ಎದುರಿಸಲು ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಮಾರಾಟ ಮಾಡಿದರು.

ಇದು ಚಿನ್ನದ ಬೆಲೆಯಲ್ಲಿ ತಾತ್ಕಾಲಿಕವಾಗಿ ಭಾರಿ ಕುಸಿತಕ್ಕೆ ಕಾರಣವಾಯಿತು. ಈ ಬಿಕ್ಕಟ್ಟು ಚಿನ್ನದ 'ಸುರಕ್ಷಿತ ಹೂಡಿಕೆ' ಸ್ಥಾನಮಾನವನ್ನೂ ಪ್ರಶ್ನಿಸುವಂತಾಗಿತ್ತು.

2013 ಏಪ್ರಿಲ್ - ಬುಲಿಯನ್ ಮಾರುಕಟ್ಟೆಯಲ್ಲಿ 'ಫ್ಲ್ಯಾಷ್ ಕ್ರ್ಯಾಶ್'
1980ರ ನಂತರದ ಅತಿದೊಡ್ಡ ಚಿನ್ನದ ಬೆಲೆ ಕುಸಿತವು 2013ರ ಏಪ್ರಿಲ್‌ನಲ್ಲಿ ನಡೆದಿತ್ತು. ಈ 'ಫ್ಲ್ಯಾಷ್ ಕ್ರ್ಯಾಶ್' ಜಾಗತಿಕ ಚಿನ್ನದ ಮೌಲ್ಯದಲ್ಲಿ $1 ಟ್ರಿಲಿಯನ್ ನಷ್ಟವನ್ನು ಉಂಟುಮಾಡಿತು. ಸಣ್ಣ ಹೂಡಿಕೆದಾರರಲ್ಲಿ ಜನಪ್ರಿಯವಾಗಿದ್ದ ನಿಧಿಗಳು ಕೆಲವೇ ವಾರಗಳಲ್ಲಿ ತಮ್ಮ ಮೌಲ್ಯದ ಐದನೇ ಒಂದು ಭಾಗ ಕಳೆದುಕೊಂಡಿತ್ತು.

ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $1,580 ರಿಂದ $1,380 ಕ್ಕೆ ಇಳಿಕೆ ಕಂಡಿತ್ತು. ಇದರ ಜೊತೆಗೆ, ಬೆಳ್ಳಿಯ ಬೆಲೆ $28 ರಿಂದ $23 ಕ್ಕೆ, ಮತ್ತು ತಾಮ್ರದ ಬೆಲೆ ಪ್ರತಿ ಟನ್‌ಗೆ $7,500 ರಿಂದ $7,100 ಕ್ಕೆ ಕುಸಿತ ಕಂಡಿತ್ತು. ಇದೇ ಬೆಲೆ ಕುಸಿತ ಚಿನ್ನದ ಮೇಲೆ ಮಾತ್ರವಲ್ಲದೇ ಇತರ ಲೋಹದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿತ್ತು.

2025 ಅಕ್ಟೋಬರ್ - 12 ವರ್ಷಗಳಲ್ಲಿ ಕಂಡ ಅತಿದೊಡ್ಡ ಕುಸಿತ:
ಹೌದು, ಇದೇ ವರ್ಷ ಅಂದರೆ 2025ರ ಅಕ್ಟೋಬರ್ 21ರಂದು, ಜಾಗತಿಕ ಆರ್ಥಿಕ ಮಾರುಕಟ್ಟೆಗಳು ದಾಖಲೆಯ ಮಟ್ಟದಲ್ಲಿ ಏರಿಕೆಗೆ ಸಾಕ್ಷಿಯಾದವು. ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $4,380 ಕ್ಕಿಂತ ಹೆಚ್ಚು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಸುಮಾರು 6% ರಷ್ಟು ಕುಸಿದು $4,082 ಕ್ಕೆ ಇಳಿಯಿತು. ನಂತರ, ಬೆಲೆ $4,125 ಮಟ್ಟದಲ್ಲಿ ಸ್ಥಿರತೆ ಸಾಧಿಸಿತು. ಇದು 2013ರ ನಂತರದ ಅತಿದೊಡ್ಡ ಬೆಲೆ ಕುಸಿತವಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+