ವಿಪ್ರೋ..ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿರುವ ಸಂಸ್ಥೆ. ಈ ಕಂಪನಿಯು ಪ್ರಮುಖವಾಗಿ ಐಟಿ ಸೇವೆಗಳು, ಬಿಸಿನೆಸ್ ಪ್ರಕ್ರಿಯೆ ಸೇವೆಗಳು, ತಂತ್ರಜ್ಞಾನ ಸಲಹಾ ಸೇವೆಗಳು, ಮತ್ತು ಎಂಜಿನಿಯರಿಂಗ್ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಇದೀಗ ಈ ಕಂಪನಿ ಬದಲಾವಣೆ ಜಗದ ನಿಯಮ ಎಂಬುದನ್ನು ಅನುಸರಿಸಿ, ಬದಲಾವಣೆಯತ್ತ ಹೊಸ ಹೆಜ್ಜೆ ಇಡುತ್ತಿದೆ.

ಹೌದು, ವಿಪ್ರೋ ತನ್ನ ಜಾಗತಿಕ ವ್ಯವಹಾರ ವಿಭಾಗಗಳಲ್ಲಿ ಪುನರ್‌ವ್ಯವಸ್ಥೆ ಮಾಡುತ್ತಿದೆ. ವಿಪ್ರೋ ತನ್ನ ಜಾಗತಿಕ ವ್ಯಾಪಾರದ ವಿಂಗಡಣೆಗಳಲ್ಲಿ ಮರುವ್ಯವಸ್ಥೆ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಹೊಸ ವಿನ್ಯಾಸವು ಮುಂಬರುವ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹೊಸ ನಿಯಮದ ಪ್ರಕಾರ ವಿಪ್ರೋ ಹೊಸ ರೂಪದಲ್ಲಿ ಸೇವೆ ಒದಗಿಸಲು ಬರುತ್ತಿದೆ ಎಂದು ಕೂಡ ಹೇಳಬಹುದು. ಅಂದರೆ ಗ್ರಾಹಕರ ಅಗತ್ಯಗಳನ್ನು ಪೂರೈಸಲು, ಆಧುನಿಕ ತಂತ್ರಜ್ಞಾನ-ಆಧಾರಿತ ಪರಿಹಾರಗಳನ್ನು ನೀಡಲು, ಮತ್ತು ಕಂಪನಿಯ ಕಾರ್ಯಪದ್ಧತಿಯನ್ನು ಇನ್ನಷ್ಟು ಸುಧಾರಿಸಲು ಸಹಾಯ ಮಾಡಲಿದೆ.
ಈ ಬದಲಾವಣೆಯ ಹಿಂದಿನ ಕಾರಣಗಳೇನು..?
ಎಲ್ಲರೂ ಗಮನಿಸುವ ಹಾಗೆ ಇತ್ತೀಚಿನ ದಿನಗಳಲ್ಲಿ ಕ್ಲೌಡ್ ತಂತ್ರಜ್ಞಾನ, AI, ಡಿಜಿಟಲ್ ಪರಿವರ್ತನೆ ಮತ್ತು ಸಲಹಾ ಸೇವೆಗಳ ಮೇಲೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇವೆ. ಕಂಪನಿಗಳು ಹೆಚ್ಚು ತಂತ್ರಜ್ಞಾನ-ಚಾಲಿತ, ಗತಿಯುತ, ಮತ್ತು ನೂತನ ಪರಿಹಾರಗಳನ್ನು ಬೇಕೆಂದಿದ್ದಾರೆ. ಇದರಿಂದಾಗಿ, ವಿಪ್ರೋ ತನ್ನ ವ್ಯವಹಾರ ಮಾದರಿಯನ್ನು ಮತ್ತಷ್ಟು ಪ್ರಭಾವಶಾಲಿಯಾಗಿ ಮತ್ತು ನವೀನವಾಗಿ ರೂಪಿಸಲು ಈ ಹೊಸ ಮಾರ್ಗವನ್ನು ಅನುಸರಿಸುತ್ತಿದ ಎನ್ನಲಾಗ್ತಿದೆ.
ಹೊಸ ಜಾಗತಿಕ ವ್ಯವಹಾರ ವಿಭಾಗಗಳು:
1. ತಂತ್ರಜ್ಞಾನ ಸೇವೆಗಳು:
ಈ ತಂತ್ರಜ್ಞಾನ ಸೇವೆಯ ವಿಭಾಗದಲ್ಲಿ ವಿವಿಧ ಉದ್ಯಮಗಳಿಗೆ ತಂತ್ರಜ್ಞಾನ-ಆಧಾರಿತ ಪರಿಹಾರಗಳನ್ನು ಒದಗಿಸುವುದು ಮುಖ್ಯ ಗುರಿಯಾಗಿದ್ದು ಕ್ಲೌಡ್ ತಂತ್ರಜ್ಞಾನ, ಸೈಬರ್ ಭದ್ರತೆ, ಡೇಟಾ ವಿಶ್ಲೇಷಣೆ ಮತ್ತು ಎಂಟರ್‌ಪ್ರೈಸ್ ಅಪ್ಲಿಕೇಶನ್‌ಗಳು ಮುಂತಾದ ತಂತ್ರಜ್ಞಾನ ಸೇವೆಗಳ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದೆ.
2. ವ್ಯವಹಾರ ಪ್ರಕ್ರಿಯೆ ಸೇವೆಗಳು:
ವ್ಯವಹಾರ ಪ್ರಕ್ರಿಯೆ ಸೇವೆಗಳಲ್ಲಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ನವೀನ ತಂತ್ರಜ್ಞಾನ ಪರಿಹಾರಗಳನ್ನು ಒದಗಿಸುವ ಉದ್ದೇಶ ಹೊಂದಿದ್ದು, ಡಿಜಿಟಲ್ ಕಾರ್ಯಾಚರಣೆಗಳು ಮತ್ತು ವ್ಯವಹಾರ ಪ್ರಕ್ರಿಯೆಯ ಪರಿವರ್ತನೆಯಿಂದ ಸೇವೆಗಳ ಮೇಲಿನ ಗಮನ ಹೆಚ್ಚುವದು.
3. ಸಲಹಾ ಸೇವೆಗಳು:
ಈ ಸಲಹಾ ಸೇವೆಯಲ್ಲಿ ವ್ಯವಹಾರ ತಂತ್ರಜ್ಞಾನ ಸಲಹೆ, ತಂತ್ರಜ್ಞಾನ ಪರಿವರ್ತನೆ, ಮತ್ತು ವಿವಿಧ ಸಮರ್ಥನ ಸೇವೆಗಳನ್ನು ಒದಗಿಸಲಾಗುತ್ತದೆ. ಹಾಗೂ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಬಳಸಿಕೊಂಡು ಸಮಗ್ರ ಪರಿಹಾರಗಳನ್ನು ನೀಡುವುದು.
4. ಎಂಜಿನಿಯರಿಂಗ್ ಸೇವೆಗಳು:
ಇಂಜಿನಿಯರಿಂಗ್ ಸೇವಾ ವಿಭಾಗದಲ್ಲಿ R&D ಅಂದರೆ ಸಂಶೋಧನಾ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಆಧಾರಿತ ಎಂಜಿನಿಯರಿಂಗ್ ಸೇವೆಗಳು, ಮತ್ತು ಉತ್ಪನ್ನ ಅಭಿವೃದ್ಧಿ ಮೇಲೆ ಗಮನ ಹರಿಸಲಾಗುತ್ತದೆ. ಇದು ತಂತ್ರಜ್ಞಾನ, ಸಂಶೋಧನೆ, ಮತ್ತು ಹೊಸ ಉತ್ಪನ್ನ ವಿನ್ಯಾಸದ ಮೂಲಕ ಉದ್ಯಮಗಳ ಬೆಳವಣಿಗೆಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ.
5. ಕ್ಯಾಪ್ಕೊ ವ್ಯಾಪಾರದ ಸ್ಥಿತಿ:
ಕ್ಯಾಪ್ಕೋ ವಿಭಾಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ವಿಭಾಗವು ತನ್ನ ಹಿಂದಿನ ಕಾರ್ಯವಿಧಾನವನ್ನು ಮುಂದುವರಿಸಿಕೊಂಡು ಹೋಗಲಿದೆ.
ಮರುವ್ಯವಸ್ಥೆಯಿಂದಾಗುವ ಪ್ರಯೋಜನಗಳೇನು..?
ವಿಪ್ರೋ ಮರುವ್ಯವಸ್ಥೆಯಿಂದ ಹಕರಿಗೆ ಹೆಚ್ಚು ಪ್ರಭಾವ ಬೀರುವ, ತಂತ್ರಜ್ಞಾನ-ಆಧಾರಿತ, ಮತ್ತು ಎಐ-ಸಹಾಯಿತ ಸೇವೆಗಳು ಲಭ್ಯವಾಗಲಿವೆ. ಅಲ್ಲದೇ ಕಂಪನಿಯ ಕಾರ್ಯಪದ್ಧತಿಯ ಪರಿಣಾಮಕಾರಿತ್ವ ಹೆಚ್ಚಾಗಲಿದೆ. ಇದೆಲ್ಲದರ ಜೊತೆಗೆ ವಿಪ್ರೋ ತನ್ನ ಸೇವೆಗಳನ್ನು ಹೆಚ್ಚು ಗತಿಯುತ ಮತ್ತು ಗ್ರಾಹಕೇಂದ್ರಿತವಾಗಿಸಲು ಈ ಹೊಸ ಮಾರ್ಗವನ್ನು ಅನುಸರಿಸುತ್ತಿದೆ.
ಒಟ್ಟಿನಲ್ಲಿ ವಿಪ್ರೋ ತನ್ನ ವ್ಯವಹಾರವನ್ನು ಮತ್ತೆ ವಿನ್ಯಾಸಗೊಳಿಸಲು ಹಾಗೂ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮತ್ತು ತಂತ್ರಜ್ಞಾನ-ಆಧಾರಿತ ಪರಿಹಾರಗಳನ್ನು ಒದಗಿಸಲು ಈ ಮಹತ್ವದ ಹೆಜ್ಜೆ ಹಾಕಿದೆ. ಈ ಹೊಸ ವ್ಯವಸ್ಥೆಯು ಕಂಪನಿಯ ಬೆಳವಣಿಗೆ ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ನೆರವಾಗಲಿದೆ.


Click it and Unblock the Notifications