ಸಾಧಿಸುವ ಪ್ರಬಲ ಇಚ್ಛೆಯೊಂದನ್ನು ಹೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬ ಮಾತಿಗೆ ನಾವಿಂದು ಹೇಳಹೊರಟಿರುವ ಪ್ರೇಋಣಾದಾಯಕ ಕಥೆಗೆ ಸರಿಹೊಂದುತ್ತದೆ. ಸಾಧಿಸುವ ಏಕಮೇವ ಛಲವನ್ನು ನಾವು ಅಚಲವಾಗಿ ಹೊಂದಿದ್ದರೆ ಯಾವ ಕಾರ್ಯವೂ ಕಠಿಣವಾಗದು ಎಂಬುದನ್ನು ಈ ಮಹಿಳೆ ತೋರಿಸಿಕೊಟ್ಟಿದ್ದಾಳೆ. ಸದ್ಯ ನಾವಿಲ್ಲಿ ಹೇಳಹೊರಟಿರುವ ವಿಷಯ ಕೈನಾಝ್ ಮೆಸ್ಮನ್ ಹರ್‌ಚಂದ್ರೈ ಎಂಬ ಮಹಿಳೆಯ ಬಗ್ಗೆ. 24 ಹರೆಯದಲ್ಲಿದ್ದ ವೇಳೆ ಭೀಕರ ಅಪಘಾತದಲ್ಲಿ ಸಿಲುಕಿ, ಹಾಸಿಗೆ ಹಿಡಿದಿದ್ದ ವೇಳೆ ತಂದೆಯ ಕೊಂಚ ಹಣವನ್ನು ಪಡೆದು ಆರಂಭಿಸಿದ ವ್ಯವಹಾರದಿಂದ ಸದ್ಯ 121 ಕೋಟಿ ರೂ.ಗೂ ಅಧಿಕ ಮೊತ್ತದ ಆದಾಯವನ್ನು ಪಡೆದು, ಸದ್ಯ ಯಶಸ್ವಿ ಉದ್ಯಮಿಯಾಗಿ ಬದಲಾಗಿದ್ದಾರೆ.
ಯಾರೀಕೆ ಕೈನಾಝ್ ಮೆಸ್ಮನ್?
ಜನಪ್ರಿಯ ಬೇಕರಿ ಸರಪಳಿ ಥಿಯೋಬ್ರೊಮಾದ ಸಹ-ಸಂಸ್ಥಾಪಕಿಯಾದ ಕೈನಾಜ್ ಮೆಸ್ಮನ್ ಹರ್‌ಚಂದ್ರೈ ಅವರು ನುರಿತ ಪೇಸ್ಟ್ರಿ ಸೇರಿದಂತೆ ಬೇಕರಿ ಉತ್ಪನ್ನಗಳ ತಯಾರಿಸುವಲ್ಲಿ ಪರಿಣತಿ ಪಡೆದುಕೊಂಡಿದ್ದು, ಸದ್ಯ ಯಶಸ್ವಿ ಉದ್ಯಮಿಯಾಗಿ ಮಾರ್ಪಾಡಾಗಿದ್ದಾರೆ. ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (ಐಎಚ್‌ಎಂ) ಮತ್ತು ದೆಹಲಿಯ ಒಬೆರಾಯ್ ಸೆಂಟರ್ ಆಫ್ ಲರ್ನಿಂಗ್ ಅಂಡ್ ಡೆವಲಪ್‌ಮೆಂಟ್ (ಒಸಿಎಲ್‌ಡಿ) ನಲ್ಲಿ ತರಬೇತಿ ಪಡೆದಿರುವ ಕೈನಾಜ್ ಅಪಘಾತಕ್ಕೂ ಮುನ್ನ ಉದಯಪುರದ ಒಬೆರಾಯ್ ಉದಯವಿಲಾಸ್‌ನಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು. ಆದರೆ 24 ಹರೆಯದಲ್ಲಿದ್ದ ವೇಳೆ ಭೀಕರ ಅಪಘಾತದಲ್ಲಿ ಸಿಲುಕಿದ್ದೇ ಅಲ್ಲದೆ ದೀರ್ಘ ಹೊತ್ತು ನಿಂತುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದಾಗ ಸಹಜವಾಗಿಯೇ ಕೈನಾಝ್ ಅವರಿಗೆ ಸಿಡಿಲು ಬಡಿದಂತಾಗಿತ್ತು. ಆದರೆ ಪ್ರತೀ ಕಠಿಣ ಸಮಯ ಕೂಡ ಅವಕಾಶವನ್ನು ತರುತ್ತದೆ ಎಂಬ ಮಾತಿಗೆ ಕೈನಾಝ್ ಪಾಲಿಗೆ ಕೂಡ ನಿಜವಾಗಿತ್ತು. ಈ ಕಠಿಣ ಸಮಯದಲ್ಲಿ ಕೈನಾಝ್ ಅವರು ತನ್ನ ಸಹೋದರಿ ಟೀನಾ ಮೆಸ್ಮನ್ ವೈಕ್ಸ್ ಜೊತೆಗೂಡಿ ತಮ್ಮ ಉದ್ಯಮಿಯಾಗುವ ಕನಸನ್ನು ನನಸಾಗಿಸಲು ಮುಂದಡಿ ಇಟ್ಟರು. ಇದೇ ಪರಿಣಾಮ 2004 ರಲ್ಲಿ ಥಿಯೋಬ್ರೊಮಾ ಎಂಬ ಯಶಸ್ವಿ ಬೇಕರಿ ಉದ್ಯಮವನ್ನು ಪ್ರಾರಂಭಿಸಲು ಕಾರಣವಾಯಿತು.

ತಂದೆಯಿಂದ ಸಾಲ ಪಡೆದ ಸಹೋದರಿಯರು
ಉದ್ಯಮ ಪ್ರಾರಂಭಿಸುವ ಪ್ರಾರಂಭಿಕ ಹಂತದಲ್ಲಿ ಎಲ್ಲರಿಗೂ ಎದುರಾಗುವ ಸಹಜ ಸಮಸ್ಯೆ ಸಹೋದರಿಯರಿಗೂ ಕಾಡಿತ್ತು. ಅದೇ ಬಂಡವಾಳದ ಸಮಸ್ಯೆ. ಈ ಸಮಯದಲ್ಲಿ ತಂದೆ ತನ್ನ ಮಕ್ಕಳಿಗೆ ನೆರವಾಗಿದ್ದು, ನಿಜಕ್ಕೂ ಶ್ಲಾಘನೀಯ ಕಾರ್ಯ. ಹೀಗೆ ತಂದೆಯಿಂದ ಸುಮಾರು ರೂ 1 ಕೋಟಿ ಸಾಲವನ್ನು ಪಡೆದ ಸಹೋದರಿಯರಿಗೆ ತಂದೆ ಒಂದು ಸಣ್ಣ ಷರತ್ತನ್ನು ಹಾಕಿದ್ದರು.ಮಾಡಿದ ಸಾಲವನ್ನು ಮರುಪಾವತಿ ಮಾಡುವುದರ ಬದಲಾಗಿ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಿ ಎಂಬ ಕಿವಿಮಾತನ್ನು ತಂದೆ ಹೇಳಿದ್ದರು. ಸದ್ಯ ಸುಮಾರು 20 ವರ್ಷಗಳ ನಂತರ, ಥಿಯೋಬ್ರೊಮಾ ಸಂಸ್ಥೆಯು ಬಹಳ ವೇಗವಾಗಿ ಅಭಿವೃದ್ಧಿ ಮುನ್ನಡೆಯುತ್ತಿದ್ದು, ಮುಂಬೈ, ದೆಹಲಿ, NCR, ಪುಣೆ, ಹೈದರಾಬಾದ್ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ 78 ಮಳಿಗೆಗಳನ್ನು ಹೊಂದಿರುವ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ಯಶಸ್ವಿ ಕಂಪೆನಿಯಾಗಿ ರೂಪುಗೊಂಡ ಥಿಯೋಬ್ರೊಮಾ
ಇನ್ನು ಎಲ್ಲಾ ರೀತಿಯಲ್ಲಿ ಕಠಿಣ ಪರಿಶ್ರಮದ ಮೂಲಕ ಸಹೋದರಿಯರು ಆರಂಬಿಸಿದ ಉದ್ಯಮ ನಂತರದ ದಿನಗಳಲ್ಲಿ ಬಹಳ ವೇಗವಾಗಿ ಅಭಿವೃದ್ದಿ ಹೊಂದಿತು. ಪರಿಣಾಮ 2021 ರ ಆರ್ಥಿಕ ವರ್ಷದ ವೇಳೆಗೆ, ಥಿಯೋಬ್ರೊಮಾ ಕಂಪೆನಿ ಸುಮಾರು 121 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿತು. FY23 ರಲ್ಲಿ 351 ಕೋಟಿ ರೂ.ಗೆ ತಲುಪಿತು. ಸದ್ಯ ಥಿಯೋಬ್ರೊಮಾ 200 ಮಳಿಗೆಗಳಿಗೆ ವಿಸ್ತರಿಸಲು ಇವರು ಯೋಜನೆ ಹಾಕಿಕೊಂಡಿದ್ದಾರೆ
ಆರಂಭದ ದಿನಗಳು ಸವಾಲುಗಳಿಂದ ಕೂಡಿದ್ದವು
ಸದ್ಯ ಯಶಸ್ವಿ ಉದ್ಯಮಿಯಾಗಿ ಸಹೋದರಿಯರು ಮುನ್ನಡೆಯುತ್ತಿದ್ದರೂ ಕೈನಾಝ್ ಅವರು ತಮ್ಮ ಆರಂಭಿಕ ಸವಾಲಿನ ದಿನಗಳನ್ನು ಇನ್ನೂ ಮರೆತಿಲ್ಲ. ಆರಂಭಿಕ ಹಂತದಲ್ಲಿ ಎದುರಾದ ಸಮಸ್ಯೆಗಳನ್ನು ಎದುರಿಸಿದ ರೀತಿಯನ್ನು ಕೈನಾಝ್ ಅವರು ಮುಕ್ತವಾಗಿ ತಿಳಿಸುತ್ತಾರೆ. ಅದೂ ಅಲ್ಲದೆ ಉದ್ಯಮದ ಆರಂಭಿಕ ಹಂತದಲ್ಲಿ ಯಾವುದೇ ಯೋಜನೆಗಳನ್ನು ಇಟ್ಟುಕೊಂಡು ನಾವು ಮುನ್ನಡೆದರಲಿಲ್ಲ. ಬಳಿಕ ಎಲ್ಲವೂ ಪರಿಶ್ರಮದ ಮೂಲಕ ಸಾಕಾರವಾಯಿತು ಎಂದು ಕೈನಾಝ್ ತಿಳಿಸುತ್ತಾರೆ.
ಆದಾಯ ದುಪ್ಪಟ್ಟಿನ ಯೋಜನೆ
ಇಬ್ಬರೂ ಕೂಡ ಸದ್ಯ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ದೇಶದ ಇತರೆ ನಗರಗಳಲ್ಲೂ ಉದ್ಯಮ ವಿಸ್ತರಿಸುವ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಈ ಮೂಲಕ ಆದಾಯವನ್ನು ದುಪ್ಪಟ್ಟಾಗಿಸಲು ಎಲ್ಲಾ ರೀತಿಯ ಪರಿಶ್ರಮ ಹಾಕಲು ಮುಂದಾಗಿದ್ದಾರೆ.
More From GoodReturns

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ



Click it and Unblock the Notifications