ಅಪರಿಚಿತರಿಂದ ಹಣ ₹5 ಕೋಟಿ ಗಳಿಕೆ :ಆನ್‌ಲೈನ್‌ನಲ್ಲಿ ಶ್ರೀಮಂತರಾಗುವ ರಹಸ್ಯ ಹಂಚಿಕೊಂಡ ಮಹಿಳೆ

ದೊಡ್ದದಾದ ಬಂಗಲೆ ಇರಬೇಕು, ಮನೆ ಮುಂದೆ ಐಷಾರಾಮಿ ಕಾರುಗಳಿರಬೇಕು, ಕೈಯಲ್ಲಿ ಬೇಕಾದಷ್ಟು ಹಣವಿರಬೇಕು ಎಂಬ ಕನಸು ಯಾರು ಕಾಣೋದಿಲ್ಲ ಹೇಳಿ ಇದು ಮನುಷ್ಯನ ಸ್ವಾಭಾವಿಕ ಬಯಕೆ.. ಕೈ ತುಂಬಾ ಹಣ ಗಳಿಸಬೇಕು ಎನ್ನುವುದು ಪ್ರತಿಯೊಬ್ಬ ತನ್ನ ಜೀವನದಲ್ಲಿ ಕನಿಷ್ಟ ನೂರಕ್ಕೂ ಹೆಚ್ಚು ಬಾರಿಯಾದರೂ ಅಂದುಕೊಂಡಿರುತ್ತಾರೆ. ಎಲ್ಲಾ ಕನಸುಗಳು ನನಸಾಗುವುದಿಲ್ಲ ಎಂದು ನಾವು ವಾಸ್ತವಿಕ ವಿಚಾರ ಅರಿತು ಬದುಕುತ್ತಿರುತ್ತೇವೆ. ಆದರೆ ಒಂದು ವೇಳೆ ಈ ಕನಸು ನಿಜವಾದರೆ? ನಮ್ಮೆಲ್ಲರ ಈ ಸಹಜ ಬಯಕೆಯನ್ನು ಓರ್ವ ಮಹಿಳೆ ನನಸಾಗಿಸಿದ್ದಾಳೆ. ಮಾತ್ರವಲ್ಲ ಡ್ರೀಮ್ ಲೈಫ್ ನಿಜ ಜೀವನವಾಗಿಸಿದ ಗುಟ್ಟನ್ನು ಹಂಚಿಕೊಂಡಿದ್ದಾಳೆ.

ಫ್ಯಾಂಟಸಿಯನ್ನು ತನ್ನ ಪೂರ್ಣ ಪ್ರಮಾಣದ ವಾಸ್ತವಕ್ಕೆ ತಿರುಗಿಸಿದ ತನ್ನ ಅಸಾಮಾನ್ಯ ವೃತ್ತಿಯೊಂದಿಗೆ ಇಂಟರ್ನೆಟ್‌ನ ಗಮನವನ್ನು ಸೆಳೆದಿರುವ ಈಕೆಯ ಹೆಸರು ಬ್ಲೇರ್ ರಿಚರ್ಡ್ಸ್‌.

₹5 ಕೋಟಿ ಗಳಿಕೆ: ಶ್ರೀಮಂತರಾಗುವ ರಹಸ್ಯ ಹಂಚಿಕೊಂಡ ಮಹಿಳೆ

ವೃತ್ತಿಯಲ್ಲಿ 'spoiled brat' ಎಂದು ಸ್ವಯಂಘೋಷಿತವಾಗಿ ತಮ್ಮನ್ನು ತಾವು ಕರೆದುಕೊಳ್ಳುವ ಬ್ಲೇರ್ ರಿಚರ್ಡ್ಸ್ ಅವರು ತಮ್ಮ "ಫಿನ್ ಸಬ್‌ಸ್" ನಿಂದ ಹಣವನ್ನು ಬೇಡಿಕೆಯಿಡುವ ಮೂಲಕ ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಹಂಚಿಕೊಂಡಾಗ ನೆಟಿಜನ್‌ಗಳನ್ನು ಬೆಚ್ಚಿಬೀಳಿಸಿದ್ದಾರೆ. ಬ್ಲೇರ್ ಅವರು 'ಫಿನ್ ಸಬ್' ಮೂಲಕ ಸಂಪೂರ್ಣ ವೃತ್ತಿಯನ್ನು ನಿರ್ಮಿಸಿದ್ದಾರೆ.

ವಿಚಿತ್ರ ವೃತ್ತಿಯ ಮೂಲಕ ಬ್ಲೇರ್ ಗಳಿಸಿದೆಷ್ಟು?

ಇನ್ಸ್ಟಾಗ್ರಾಮ್ ವೀಡಿಯೋದಲ್ಲಿ ಬ್ಲೇರ್ ಅವರು ಕೇವಲ ನಾಲ್ಕು ವರ್ಷಗಳಲ್ಲಿ ಅವರು 700,000 ಡಾಲರ್‌ಗಳ (ಸುಮಾರು 5 ಕೋಟಿ ರೂಪಾಯಿಗಳು) ಅಗಾಧವಾದ ಆದಾಯವನ್ನು ಗಳಿಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ.

'spoiled brat' ಆಗಿರುವುದಕ್ಕೆ ಸಂಭಾವನೆ ಪಡೆಯಿರಿ.!

ಬ್ಲೇರ್ ಹಂಚಿಕೊಂಡ ಪ್ರಕಾರ ಹಣ ಸಂಪಾದಿಸುವ ರಹಸ್ಯ ಯಾವುದು ಎಂಬುವುದರ ಬಗ್ಗೆ ನಿಮಗೆ ಕುತೂಹಲವಿದೆಯೇ?

ಬ್ಲೇರ್ ಪ್ರಕಾರ, ಪ್ರಮುಖ ಅಂಶವೆಂದರೆ "ಫಿನ್ ಸಬ್‌ಗಳನ್ನು" ಆಕರ್ಷಿಸುವುದು. ಈ ಪದದ ಅರ್ಥವೇನೆಂದು ಯೋಚಿಸುತ್ತಿದ್ದರೆ, ಅರ್ಬನ್ ಡಿಕ್ಷನರಿಯ ಪ್ರಕಾರ, 'ಫಿನ್ ಸಬ್' ಎಂದರೆ " ಪ್ರಭುಗಳು ಎಂದುಕೊಂಡವರು (ಡಾಮ್/ಡಾಮ್ಮೆ, ಮಾಸ್ಟರ್/ಮಿಸ್ಟ್ರೆಸ್,) ತಮ್ಮ ಹಣಕಾಸನ್ನು ನಿಯಂತ್ರಿಸಲು ಮತ್ತು ತಮ್ಮ ಹಣವನ್ನು ಖರ್ಚು ಮಾಡಲು ಆನಂದಿಸುವ ಯಾರಾದರೂ ವ್ಯಕ್ತಿಗಳು ಆಗಿರಬಹುದು. ಇನ್ನು ಸರಳವಾಗಿ ಹೇಳುವುದಾದರೆ, ಈ ವ್ಯಕ್ತಿಗಳು ಅಪರಿಚಿತರು ತಮ್ಮ" ಪ್ರಭುಗಳು" ಎಂದುಕೊಂಡವರಿಗೆ ಯಾವುದೇ ಪ್ರಶ್ನೆಗಳಿಲ್ಲದೆ ಹಣವನ್ನು ನೀಡಲು ಸಂತೋಷಪಡುತ್ತಾರೆ. ಬ್ಲೇರ್ ಇದರ ಮೂಲಕ ಇದರಿಂದ ಸಂಪೂರ್ಣ ವೃತ್ತಿಯನ್ನು ನಿರ್ಮಿಸಿದ್ದಾರೆ.

'professional spoiled brat' ಎಂದರೇನು?

ಬ್ಲೇರ್ ತನ್ನ ಕೆಲಸವು ಫಿನ್ ಸಬ್‌ಗಳನ್ನುಆಕರ್ಷಿಸುವ ಸಾಮಾಜಿಕ ಮಾಧ್ಯಮ ಪುಟಗಳನ್ನು ರಚಿಸುವುದನ್ನು ಒಳಗೊಂಡಿದೆ ಎಂದು ವಿವರಿಸಿದರು.

"ಇಂತವರನ್ನು ಆಕರ್ಷಿಸಲು ಬ್ರಾಂಡ್ ಮಾಡಲಾದ ಒಂದು ಅಡ್ಡಹೆಸರಿನಡಿಯಲ್ಲಿ ಸಾಮಾನ್ಯ ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ಅಭಿಮಾನಿ ಸೈಟ್‌ಗಳನ್ನು ರಚಿಸುವ ಮೂಲಕ ನಾನು ಕಳೆದ 4 ವರ್ಷಗಳಲ್ಲಿ, $700k (ಬರೋಬ್ಬರಿ ೫ ಕೋಟಿ) ಗಳಿಸಿದ್ದೇನೆ" ಎಂದು ಹೇಳಿಕೊಂಡಿದ್ದಾಳೆ.

ನೀವು spoiled brat ಜೀವನವನ್ನು ಕಳೆಯಬಹುದು! ನಾನು ಈ ರೀತಿಯ ಪ್ರೇಕ್ಷಕರನ್ನು ಆಕರ್ಷಿಸಲು ವಿಶೇಷವಾಗಿ ವಿನ್ಯಾಸಗೊಳಿದ್ದೇನೆ. ಸಾಮಾಜಿಕ ಮಾಧ್ಯಮ ಪುಟಗಳು ಮತ್ತು ಅಭಿಮಾನಿ ಸೈಟ್‌ಗಳನ್ನು ಮಾಡಿದ್ದೇನೆ. ನೀವು ಕೂಡಾ ಈ ರೀತಿ ಮಾಡಬಹುದು. ಅದು ಕೇವಲ ನಿಮ್ಮ ಫೋನ್‌ನಿಂದ! ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬ್ಲೇರ್ ಹೇಳಿದ್ದಾರೆ. ಬ್ಲೇರ್ ಅವರು ಇದಕ್ಕಾಗಿ ಸಾಕ್ಷಿಯನ್ನು ಹಂಚಿಕೊಂಡಿದ್ದು ಅವರು ಕೇಳಿಕೊಂಡಿದ್ದಕ್ಕಾಗಿ ಕೇಳಿದ್ದಕ್ಕಾಗಿ ಒಬ್ಬ ವ್ಯಕ್ತಿ ಕೇವಲ ಒಂದು ಗಂಟೆಯಲ್ಲಿ ನೂರಾರು ಡಾಲರ್‌ಗಳನ್ನು ಕಳುಹಿಸಿರುವುದನ್ನು ಪುರಾವೆ ಹಂಚಿಕೊಂಡಿದ್ದಾರೆ. ಜೊತೆಗೆ ಅಪರಿಚಿತ ಬಳಿ ಹಣ ಕೇಳಲು ಹಿಂಜರಿಯದಿರಿ ಎಂಬ ಸಲಹೆಯನ್ನು ಕೊಡುತ್ತಾರೆ ಬ್ಲೇರ್.

ನೆಟಿಜನ್‌ಗಳು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಇಲ್ಲಿದೆ:

ಇವರ ಪೋಸ್ಟ್ ಗೆನೆಟಿಜನ್‌ಗಳು ಅವಳ ಪೋಸ್ಟ್‌ನಲ್ಲಿ ಕಾಮೆಂಟ್‌ಗಳಲ್ಲಿ ಸುರಿಮಳೆಗೈದಿದ್ದಾರೆ. ; ಕೆಲವರು ಅದರ ಕಲ್ಪನೆಯಿಂದ ಆಕರ್ಷಿತರಾದಾಗ, ಇನ್ನು ಕೆಲವರು ಅವರು ಗಳಿಸಿದ ಹಣದ ಬಗ್ಗೆ"ಅಸೂಯೆ" ಪಟ್ಟುಕೊಂಡರೆ , ಇತರರು ಇದು ನಿಜವಾಗಿಯೂ ಕಾರ್ಯನಿರ್ವಹಿಸುತ್ತದೆಯೇ ಎಂದು ಆಶ್ಚರ್ಯಪಟ್ಟಿದ್ದಾರೆ.

"ಡ್ಯಾಮ್, ನಾನು ಈ ಬಗ್ಗೆ ತುಂಬಾ ಅಸೂಯೆ ಪಡುತ್ತಿದ್ದೇನೆ ಏಕೆಂದರೆ ನಾನು ಆರ್ಥಿಕವಾಗಿ ತುಂಬಾ ಕಷ್ಟಪಡುತ್ತೇನೆ, lol," ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಒಟ್ಟಾರೆ ನೋಡುವುದಾದಎವ್ ಬ್ಲೇರ್ ತಮ್ಮ ಚಾಣಕ್ಯತೆಯಿಂದ ಹಣ ಸಂಪಾದಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈಕೆಯ ನಡೆಗೆ ನೆಟ್ಟಿಗರು ಶ್ಲಾಘಿಸಬೇಕೇ ಅಥವಾ ಮುಜುಗರಪಡಬೇಕೇ ಎಂದು ಗೊತ್ತಾಗದೇ ಗೊಂದಲಕ್ಕೀಡಾಗಿರುವುದಂತು ಸತ್ಯ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+