ಜನಸಾಮಾನ್ಯರ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲೂ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿದೆ. ಅಲ್ಲದೇ ಅನೇಕ ರಾಜ್ಯಗಳು ಮಹಿಳೆಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು (Women Scheme) ಪರಿಚಯಿಸಿದೆ.

ಅದೇ ರೀತಿ ಜಾರ್ಖಂಡ್ ಸರ್ಕಾರ ಮಹಿಳೆಯರಿಗಾಗಿ 'ಮುಖ್ಯಮಂತ್ರಿ ಮೈಯಾ ಸಮ್ಮಾನ್ ಯೋಜನೆ' ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಅರ್ಹ ಮಹಿಳೆಯರು ಆರ್ಥಿಕ ಸೌಲಭ್ಯವನ್ನು ಪಡೆಯಬಹುದು. ಅಲ್ಲದೇ ಸರ್ಕಾರ ಪ್ರತೀ ಅರ್ಹ ಮಹಿಳೆಗೆ ತಿಂಗಳಿಗೆ ₹2500 ರೂ. ಹಣವನ್ನೂ ಸಹ ನೀಡುತ್ತಿದೆ.
ಈಗಾಗಲೇ ಜಾರ್ಖಂಡ್ ಸರ್ಕಾರ ದುರ್ಗಾ ಪೂಜೆಗೂ ಮುನ್ನ ಈ ಯೋಜನೆಯ 14ನೇ ಕಂತು ಬಿಡುಗಡೆ ಮಾಡಿತ್ತು. ಈಗ 15ನೇ ಕಂತಿಗಾಗಿ ಇಡೀ ರಾಜ್ಯವೇ ಕಾದುಕುಳಿತಿದೆ. ಪ್ರತಿ ತಿಂಗಳ 15ರೊಳಗೆ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹2500 ಜಮೆಯಾಗುತ್ತವೆ. ಇದೀಗ ಕೆಲವೇ ದಿನಗಳಲ್ಲಿ ಮಹಿಳೆಯರ ಖಾತೆಗೆ 2,500 ರೂ. ಜಮಾ ಆಗಲಿದೆ.
ಸೌಲಭ್ಯ ಸಿಗದಿರಲು ಕಾರಣಗಳೇನು?
- ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ.
- ಇ-ಕೆವೈಸಿ ಅಪ್ಡೇಟ್ ಮಾಡದೇ ಇರುವುದು.
- ಆಡ್ ಮಾಡಿದ ಡಾಕ್ಯುಮೆಂಟ್‌ಗಳು ತಪ್ಪಾಗಿರುವುದು ಅಥವಾ ಸಂಪೂರ್ಣವಾಗದೇ ಇರುವುದು.
- ಪಂಚಾಯತ್/ಅಂಗನವಾಡಿ ಮಟ್ಟದಲ್ಲಿ ಪರಿಶೀಲನೆ ಬಾಕಿ ಉಳಿದಿರುವುದು.
- ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದು.
- ಫಲಾನುಭವಿ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಹಣ ಬರುವುದಿಲ್ಲ.
- ಎನ್‌ಪಿಸಿಐ ಮ್ಯಾಪಿಂಗ್ ಪೂರ್ಣಗೊಳ್ಳದಿರುವುದು.
ಹಣ ಸಿಗಬೇಕಾದ್ರೆ ಇಲ್ಲಿದೆ ಹಂತ ಹಂತ ಟಿಪ್ಸ್:
ಇನ್ನು ನಿಮಗೆ ಈ ಯೋಜನೆಯ ಹಣ ಸಿಗಬೇಕೆಂದರೆ ಸರಿಯಾದ ಮಾಹಿತಿಯನ್ನು ನೀಡುವುದು ಮುಖ್ಯ. ಅದಕ್ಕಾಗಿ ಹಂತ ಹಂತದ ಮಾರ್ಗ ದರ್ಶನ ಇಲ್ಲಿದೆ..
1. ಡಿಬಿಟಿ ಸ್ಥಿತಿ ಚೆಕ್ ಮಾಡಿ: ಡಿಬಿಟಿ (Direct Benefit Transfer) ಭಾರತ್ ಪೋರ್ಟಲ್‌ನಲ್ಲಿ ಅಥವಾ ನಿಮ್ಮ ಬ್ಯಾಂಕ್‌ನಲ್ಲಿ ವಹಿವಾಟು ಸಕ್ಸಸ್ ಆಗಿದ್ಯಾ? ಇಲ್ವಾ ಎಂದು ಚೆಕ್ ಮಾಡಿ. ಅಲ್ಲದೇ ಮಿನಿ ಸ್ಟೇಟ್‌ಮೆಂಟ್ ಸಹ ತೆಗೆದುಕೊಳ್ಳಿ.
2. ಇ-ಕೆವೈಸಿ ಅಪ್ಡೇಟ್ ಮಾಡಿ: ಸ್ಥಳೀಯ ಸೇವಾ ಕೇಂದ್ರ ಅಥವಾ ಬ್ಯಾಂಕ್‌ಗೆ ಭೇಟಿ ನೀಡಿ ಆಧಾರ್-ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಅಪ್ಡೇಟ್ ಮಾಡಿ. ಈ ಮೂಲಕ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲಾಗುತ್ತದೆ.
3. ಅಲ್ಲದೇ ಅಂಗನವಾಡಿ ಕೇಂದ್ರ ಅಥವಾ ಪಂಚಾಯತ್ ಕಾರ್ಯದರ್ಶಿಯನ್ನು ಸಂಪರ್ಕಿಸಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
4. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ: ಅಲ್ಲದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ಯಾ? ಇಲ್ವಾ? ಎಂದು ಚೆಕ್ ಮಾಡಿ.
ಈ ಯೋಜನೆಗೆ ಯಾರು ಅರ್ಹರು?
- ಜಾರ್ಖಂಡ್ ರಾಜ್ಯ ನಿವಾಸಿಗಳು ಮಾತ್ರ ಅರ್ಹರಾಗಿರುತ್ತಾರೆ.
- 18 ರಿಂದ 50 ವಯಸ್ಸಿನವರಿಗೆ ಮಾತ್ರ.
- ಆಧಾರ್‌ಗೆ ಲಿಂಕ್ ಮಾಡಲಾದ ಒಂದೇ ಬ್ಯಾಂಕ್ ಖಾತೆ ಹೊಂದಿರಬೇಕು.
- ಕುಟುಂಬ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದರೆ ಮಾತ್ರ ಅರ್ಹರಾಗುತ್ತಾರೆ.
ಯಾವ ಮಹಿಳೆಯರಿಗೆ ಯೋಜನೆಯ ಲಾಭ ಸಿಗುವುದಿಲ್ಲ?
- ಆದಾಯ ತೆರಿಗೆ ಪಾವತಿಸುವ ಕುಟುಂಬದ ಸದಸ್ಯರಿಗೆ ಇದು ಲಭ್ಯವಾಗುವುದಿಲ್ಲ.
- ಸರ್ಕಾರಿ/ಅರೆ-ಸರ್ಕಾರಿ ನೌಕರರು ಅಥವಾ ಪಿಂಚಣಿದಾರ ಮಹಿಳೆಯರು ಇದಕ್ಕೆ ಅರ್ಹರಲ್ಲ.
- ಇಪಿಎಫ್‌ಗೆ ಸಂಬಂಧಿಸಿದ ಮಹಿಳೆಯರು ಈ ಯೋಜನೆಗೆ ಸೇರುವಂತಿಲ್ಲ.
- ಕುಟುಂಬ ಸದಸ್ಯರು ಮಾಜಿ ಶಾಸಕ, ಸಂಸದರಾಗಿದ್ದರೆ ಅರ್ಹರಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications