ವಿಶ್ವದಾದ್ಯಂತ ಪ್ರತಿ ವಾರ ಸರಾಸರಿ ನಾಲ್ಕು ಹೊಸ ಬಿಲಿಯನೇರ್‌ಗಳು ಸೃಷ್ಟಿಯಾಗುತ್ತಿದ್ದು, ವರ್ಷಕ್ಕೆ ಒಟ್ಟು 204 ಬಿಲಿಯನೇರ್‌ಗಳು ಹುಟ್ಟಿಕೊಂಡಿದ್ದಾರೆ.! ಹೌದು ಬಡವರು ಬಡವರಾಗಿಯೇ ಉಳಿಯುತ್ತಿದ್ದು, ಶ್ರೀಮಂತರು ಅತಿ ಸಿರಿವಂತರಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಿದ ಆಕ್ಸ್‌ಫ್ಯಾಮ್ ವರದಿಯ ಪ್ರಕಾರ ಉಳ್ಳವರು ಮತ್ತು ಇಲ್ಲದವರ ನಡುವಿನ ಅಸಮಾನತೆ ಹೆಚ್ಚುತ್ತಿದ್ದು, ವಿಶ್ವದ ಶ್ರೀಮಂತರಲ್ಲಿ ಸಂಪತ್ತಿನ ಬೃಹತ್ ಜಿಗಿತವನ್ನು ಕಾಣಬಹುದಾಗಿದೆ.
ಪ್ರತಿ ವರ್ಷ ವಿಶ್ವದ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೊದಲ ದಿನದಂದು ಆಕ್ಸ್‌ಫ್ಯಾಮ್ ಇಂಟರ್‌ನ್ಯಾಶನಲ್ ತನ್ನ "ಅಸಮಾನತೆಯ ವರದಿ"ಯನ್ನು ಪ್ರಕಟಿಸುತ್ತದೆ . ಇದು ತನ್ನ ವರದಿಯಲ್ಲಿ ಜಗತ್ತಿನಲ್ಲಿ ಅಸಮಾನತೆ ಹೆಚ್ಚಾಗುತ್ತಿದೆ. ಹೀಗಾಗಿ ಶ್ರೀಮಂತರಿಗೆ ತೆರಿಗೆ ಹಾಕಿ ಸಮಾನತೆ ತರಬೇಕು ಎಂದು ಸಲಹೆ ನೀಡಿದೆ.

ಅಲ್ಲದೆ 2023ಕ್ಕೆ ಹೋಲಿಸಿದರೆ ಮೂರು ಪಟ್ಟು ವೇಗವಾಗಿ ಬಿಲಿಯನೇರ್‌ಗಳ ಸಂಪತ್ತು ಹೆಚ್ಚಾಗುತ್ತಿದ್ದು, 2024 ರಲ್ಲಿ, ಬಿಲಿಯನೇರ್‌ಗಳ ಸಂಪತ್ತು 2 ಟ್ರಿಲಿಯನ್ ಡಾಲರ್‌ಗಳಷ್ಟು ಭಾರೀ ಏರಿಕೆಯಾಗಿದೆ. ಇದಲ್ಲದೇ ಪ್ರತಿ ವಾರ ಸರಾಸರಿ ನಾಲ್ಕು ಹೊಸ ಬಿಲಿಯನೇರ್‌ಗಳು ಹುಟ್ಟಿಕೊಂಡಿದ್ದು, ವರ್ಷಕ್ಕೆ ಒಟ್ಟು 204 ಬಿಲಿಯನೇರ್‌ಗಳು ಸೃಷ್ಟಿಯಾಗಿದ್ದಾರೆ. ಏಷ್ಯಾದಲ್ಲಿ ಸಿರಿವಂತರ ಸಂಪತ್ತು 25ಲಕ್ಷ ಕೋಟಿ ಏರಿಕೆಯಾಗಿದ್ದು, ಒಟ್ಟಾರೆ ಬಿಲಿಯನೇರ್ ಗಳ ಸಂಖ್ಯೆ 2,769ಕ್ಕೆ ತಲುಪಿದೆ ಎಂದು ಆಕ್ಸ್‌ಫ್ಯಾಮ್ ಹೇಳಿದ್ದು,ಇಂದಿನಿಂದ ಒಂದು ದಶಕದೊಳಗೆ ಕನಿಷ್ಠ ಐದು ಟ್ರಿಲಿಯನೇರ್‌ಗಳು ಇರುತ್ತಾರೆ ಎಂದು ಭವಿಷ್ಯ ನುಡಿದಿದೆ.
ಈ ನಡುವೆ, ಆರ್ಥಿಕ ಅಸಮಾನತೆ ಗಮನಾರ್ಹವಾಗಿ ಉಳಿದಿಕೊಂಡಿದೆ ಎಂದು ವರದಿ ತಿಳಿಸಿದ್ದು ಆರ್ಥಿಕ, ಹವಾಮಾನ ಮತ್ತು ಜಾಗತಿಕ ಸಂಘರ್ಷಗಳ ಹೊರತಾಗಿಯೂ, ಬಡತನದಲ್ಲಿ ಬದುಕುತ್ತಿರುವ ಜನರ ಸಂಖ್ಯೆ 1990 ರಿಂದ ಬಹುತೇಕ ಬದಲಾಗಿಲ್ಲ ಎನ್ನುವುದನ್ನು ಗಮನಿಸಿದೆ. ವಿಶ್ವಬ್ಯಾಂಕ್ ಡೇಟಾದ ಪ್ರಕಾರ, 2023 ರಲ್ಲಿ 3.6 ಶತಕೋಟಿ ಜನರು ಅಂದರೆ ವಿಶ್ವದ ಅರ್ಧದಷ್ಟು ಜನಸಂಖ್ಯೆ ದಿನಕ್ಕೆ 6.85 ಡಾಲರ್‌ಗಿಂತ ಕಡಿಮೆ ಗಳಿಕೆಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದೆ.
ಟೇಕರ್ಸ್ ನಾಟ್ ಮೇಕರ್ಸ್:
400 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಈಲಾನ್ ಮಸ್ಕ್ ಶೀಘ್ರದಲ್ಲೇ ಟ್ರಿಲಿಯನೇರ್ ಸ್ಥಾನವನ್ನುಪಡೆದುಕೊಳ್ಳಬಹುದು ಆಕ್ಸ್‌ಫ್ಯಾಮ್ ಭವಿಷ್ಯ ನುಡಿದಿದ್ದು, ಪ್ರಸ್ತುತ ಪ್ರವೃತ್ತಿಯನ್ನು ಗಮನಿಸಿದ್ರೆ ಕೇವಲ ಒಂದು ವರ್ಷದ ಹಿಂದೆ ಒಬ್ಬ ಟ್ರಿಲಿಯನೇರ್ ಹುಟ್ಟುಕೊಳ್ಳಬಹುದು ಎಂಬ ಅಂಡಾಜು ಹಿಂದಿಕ್ಕಿ 2034 ರ ವೇಳೆಗೆ ವಿಶ್ವವು ತನ್ನ ಮೊದಲ ಐದು ಟ್ರಿಲಿಯನೇರ್‌ಗಳನ್ನು ಕಾಣಬಹುದು ಎಂದು ಊಹಿಸಲಾಗಿದೆ.
ಆಕ್ಸ್‌ಫ್ಯಾಮ್ ವರದಿಯಲ್ಲಿ " ಸಾಂಕ್ರಾಮಿಕವು ಸಂಪತ್ತಿನ ಅಸಮಾನತೆಯನ್ನು ವೇಗಗೊಳಿಸುವಲ್ಲಿನ ಪಾತ್ರವನ್ನು ಒತ್ತಿಹೇಳಿದ್ದು, 2020 ಮತ್ತು 2023 ರ ನಡುವೆ ಬಿಲಿಯನೇರ್‌ಗಳ ಸಂಪತ್ತು ದ್ವಿಗುಣಗೊಂಡರೆ, ಆ ಒಂದೇ ಅವಧಿಯಲ್ಲಿ ಐದು ಬಿಲಿಯನ್ ಜನರು ಬಡವರಾಗಿದ್ದಾರೆ ಎಂದು ಹೇಳಿದೆ. ಈ ಅಸಮಾನತೆ ಗ್ಲೋಬಲ್ ಸೌತ್‌ನಲ್ಲಿ ಹೆಚ್ಚು ತೀವ್ರವಾಗಿದೆ, ಅಲ್ಲಿ ಆಫ್ರಿಕಾ, ಏಷ್ಯಾ ಮತ್ತು ಮಧ್ಯಪ್ರಾಚ್ಯದಂತಹ ಪ್ರದೇಶಗಳಲ್ಲಿ ಅತಿ ಶ್ರೀಮಂತ 1% ಜನರು ಎಲ್ಲಾ ಆದಾಯದಲ್ಲಿ 20% ಪಡೆಯುತ್ತಾರೆ.
ವರದಿಯು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ಕಾರ್ಮಿಕರು, ಅವರು ಜಾಗತಿಕ ಕಾರ್ಮಿಕ ಶಕ್ತಿಯ ಶೇಕಡಾ 90 ರಷ್ಟಿದ್ದಾರೆ ಆದರೆ ಇವರು ಜಾಗತಿಕ ಆದಾಯದ ಕೇವಲ 21% ಪಡೆಯುತ್ತಾರೆ ಎಂದು ಬಹಿರಂಗಪಡಿಸಿದೆ. ಇದಲ್ಲದೆ, ಜಾಗತಿಕ ಜನಸಂಖ್ಯೆಯ ಐದನೇ ಒಂದು ಭಾಗವನ್ನು ಮಾತ್ರ ಪ್ರತಿನಿಧಿಸುವುದರ ಹೊರತಾಗಿಯೂ, ಗ್ಲೋಬಲ್ ನಾರ್ತ್ ಜಾಗತಿಕ ಸಂಪತ್ತಿನ ಮೂರನೇ ಎರಡು ಭಾಗವನ್ನು ನಿಯಂತ್ರಿಸುತ್ತದೆ ಎಂದು ಹೇಳಿದೆ.
"ಟೇಕರ್ಸ್ ನಾಟ್ ಮೇಕರ್ಸ್" ಎಂಬ ಶೀರ್ಷಿಕೆಯ ಈ ವರದಿಯು ಜಾಗತಿಕ ನಾಯಕರು ಭೂರಾಜಕೀಯ, ಆರ್ಥಿಕ ಬೆಳವಣಿಗೆ ಮತ್ತು ಶಕ್ತಿ ಪರಿವರ್ತನೆ ಮುಂತಾದ ವಿಷಯಗಳನ್ನು ಚರ್ಚಿಸಲು ಒಟ್ಟುಗೂಡುವ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಆಕ್ಸ್‌ಫ್ಯಾಮ್ ಪ್ರಕಾರ, 2024 ರಲ್ಲಿ ವಿಶ್ವದ 10 ಶ್ರೀಮಂತ ವ್ಯಕ್ತಿಗಳು ಪ್ರತಿದಿನ ಸರಾಸರಿ 100 ಮಿಲಿಯನ್ ಡಾಲರ್‌ಗಳನ್ನು ಗಳಿಸಿದ್ದು ಈ ಸಂಪತ್ತು ಅಪಾರವಾಗಿದ್ದು, 99% ಕಳೆದುಕೊಂಡರೂ ಸಹ ಅವರು ಇನ್ನೂ ಬಿಲಿಯನೇರ್‌ಗಳಾಗಿ ಉಳಿಯುತ್ತಾರೆ.!


Click it and Unblock the Notifications