ಅಬ್ಬಾ.! ಬರೋಬ್ಬರಿ 7ಲಕ್ಷ ಕೋಟಿ ರೂ. ಮೌಲ್ಯದ 1,000 ಮೆಟ್ರಿಕ್ ಟನ್‌ ಚಿನ್ನದ ನಿಕ್ಷೇಪ ಪತ್ತೆ

ಚೀನಾ ದೇಶವು ತನ್ನ ಭವಿಷ್ಯ ಭದ್ರತೆಗಾಗಿ ಪ್ರಮುಖ ಸಂಪನ್ಮೂಲಗಳನ್ನು ಸಾಕಷ್ಟು ಸಂಶೋಧನೆಯಲ್ಲಿ ತೊಡಗಿದ್ದು ಮಹತ್ವದ ಬೆಳವಣಿಗೆ ಕಂಡಿದ್ದು ಬಹುದೊಡ್ಡ ಚಿನ್ನದ ಅದಿರು ನಿಕ್ಷೇಪವನ್ನು ತನ್ನೊಡಲಿನಲ್ಲಿ ಪತ್ತೆ ಹಚ್ಚಿದೆ. ಈ ಆವಿಷ್ಕಾರವು ಚೀನಾದ ಆರ್ಥಿಕತೆಯನ್ನು ಬಲಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಬೃಹತ್ ಚಿನ್ನದ ನಿಕ್ಷೇಪ ಪತ್ತೆ.!

ಕೇಂದ್ರ ಚೀನಾದಲ್ಲಿ ವಿಶ್ವದ ಅತೀ ದೊಡ್ದದಾದ ನಿಕ್ಷೇಪವನ್ನು ಕಂಡುಹಿಡಿಯಲಾಗಿದ್ದು, ಇಲ್ಲಿ ಅಪಾರ ಪ್ರಮಾಣ ಚಿನ್ನಅದಿರು ಇದೆ ಎನ್ನಲಾಗಿದೆ. ಒಂದು ಲೆಕ್ಕಾಚಾರಗಳ ಪ್ರಕಾರ, ಗಣಿಯಲ್ಲಿ 1,000 ಟನ್‌ಗಿಂತಲೂ ಹೆಚ್ಚು ಚಿನ್ನ ಅಡಗಿದೆ ಎನ್ನಲಾಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಈ ಚಿನ್ನದ ಒಟ್ಟು ಮೌಲ್ಯ ಸುಮಾರು 600 ಬಿಲಿಯನ್ ಯುವಾನ್ ಎಂದು ಅಂದಾಜಿಸಲಾಗಿದ

ಅಬ್ಬಾ.! 1,000 ಮೆಟ್ರಿಕ್ ಟನ್‌ ಚಿನ್ನದ ನಿಕ್ಷೇಪ ಪತ್ತೆ

ಇಲ್ಲಿನ ಮಣ್ಣಿನಲ್ಲಿದೆ 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೊನ್ನು

ಚೀನಾದ ಹುನಾನ್ ಪ್ರಾಂತ್ಯದಲ್ಲಿರುವ ಪಿಂಗ್‌ಜಿಯಾಂಗ್ ಕೌಂಟಿಯಲ್ಲಿರುವ ವಾಂಗು ಗಣಿಯಲ್ಲಿ ಬೃಹತ್ ಚಿನ್ನದ ನಿಕ್ಷೇಪವನ್ನು ಕಂಡುಹಿಡಿದಿದೆ. ಭೂಗರ್ಭಶಾಸ್ತ್ರಜ್ಞರು ಅಂದಾಜಿರುವ ಪ್ರಕಾರ ಇಲ್ಲಿ ಒಂದು ಸಾವಿರ ಮೆಟ್ರಿಕ್ ಟನ್ ಚಿನ್ನ ಅತ್ಯುತ್ತಮ ಗುಣಮಟ್ಟದ ಚಿನ್ನ ಸ್ವರ್ಣವಿದೆ ಎನ್ನಲಾಗಿದೆ. ಈ ಶೋಧನೆಯ ಪ್ರಕಾರ ಇಲ್ಲಿ ಸುಮಾರು US$83 ಶತಕೋಟಿ ಮೌಲ್ಯದ ಅಂದರೆ 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೊನ್ನಿನ ಅದಿರು ಇದೆ ಎನ್ನಲಾಗಿದೆ. ಇದು ಇದುವರೆಗೆ ವಿಶ್ವದಲ್ಲಿ ಪತ್ತೆ ಹಚ್ಚಿರುವುದರಲ್ಲೇ ಇರುವ ಅತಿದೊಡ್ಡ ಚಿನ್ನದ ನಿಕ್ಷೇಪವಾಗಿದೆ.

1,000 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿನ ಚಿನ್ನ ಇಲ್ಲಿ ಅಡಗಿರುವುದರಿಂದ ೯೦೦ ಮೆಟ್ರಿಕ್ ಟನ್ ಚಿನ್ನದ ಅದಿರು ಹೊಂದಿರುವ ಆಪ್ರಿಕಾದ ಸೌತ್ ಡೀಪ್ ಗಣಿಯನ್ನು ಚೀನ ಹಿಂದಿಕ್ಕಿ ಜಗತ್ತಿನ ನಂಬರ್ .1 ಸ್ಥಾನಕ್ಕೆ ಏರಿದೆ.

ಹುನಾನ್ ಪ್ರಾಂತ್ಯದ ಭೂವೈಜ್ಞಾನಿಕ ಬ್ಯೂರೋ ಈ ನಿಕ್ಷೇಪವು ಪಿಂಗ್ಜಿಯಾಂಗ್ ಕೌಂಟಿಯಲ್ಲಿದೆ ಎಂದು ಘೋಷಿಸಿದ್ದು, , ಅಲ್ಲಿ ಭೂವಿಜ್ಞಾನಿಗಳು ಭೂಮಿಯ ಮೇಲ್ಮೈ ಯಿಂದ 2 ಕಿಲೋಮೀಟರ್ ಆಳದಲ್ಲಿ 40 ಚಿನ್ನದ ಶಿಲೆಗಳನ್ನು ಗುರುತಿಸಿದ್ದಾರೆ. ಇಲ್ಲಿ ಪ್ರಾಥಮಿಕವಾಗಿ 300 ಟನ್ ಅದಿರು ಇದೆ. ಆದರೆ 3 ಕಿ.ಮೀ ವರೆಗೆ ಆಳಕ್ಕೆ ಸಾಗಿದರೆ 1,000 ಟನ್‌ ಚಿನ್ನದ ಅದಿರು ದೊರೆಯಬಹುದು. ಅಲ್ಲದೇ ಇಲ್ಲಿ 138 ಗ್ರಾಂ ಅತ್ಯುತ್ತಮ ಗುಣಮಟ್ಟದ ಚಿನ್ನ ದೊರೆಯಬಹುದು ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ. ವಿಶ್ವದಲ್ಲಿ ಸದ್ಯ ಪ್ರತಿ ಟನ್ ಅದಿರಿಗೆ 8 ಗ್ರಾಂ ಅತ್ಯುತ್ತಮ ಗುಣಮಟ್ಟದ ಚಿನ್ನ ದೊರೆತರೆ ಅದನ್ನು ಹೈಗ್ರೇಡ್ ಎಂದು ವಿಂಗಡಿಸಲಾಗುತ್ತದೆ.

ಚಿನ್ನದ ನಿಕ್ಷೇಪಗಳು ಹೇಗೆ ಉಂಟಾಗುತ್ತವೆ?

ಚಿನ್ನದ ನಿಕ್ಷೇಪಗಳು ವಿವಿಧ ಭೌಗೋಳಿಕ ಪ್ರಕ್ರಿಯೆಗಳ ಮೂಲಕ ರೂಪುಗೊಳ್ಳುತ್ತವೆ. ಭೂಮಿಯ ಆಳದಲ್ಲಿ ಬಿಸಿಯಾದ ಮತ್ತು ಖನಿಜಗಳಿಂದ ಕೂಡಿದ ದ್ರವಗಳು ಬಂಡೆಗಳಲ್ಲಿನ ಬಿರುಕುಗಳ ಮೂಲಕ ಚಲಿಸುತ್ತವೆ. ಈ ದ್ರವಗಳು ತಮ್ಮೊಂದಿಗೆ ಚಿನ್ನವನ್ನು ಕರಗಿಸಿಕೊಂಡು ಬಂದು, ಭೂಮಿಯ ಮೇಲೆ ಬಂದಾಗ ತಣ್ಣಗಾದಾಗ ಚಿನ್ನವನ್ನು ಬಿಟ್ಟುಬಿಡುತ್ತವೆ. ಈ ರೀತಿಯಾಗಿ ಬಹಳ ಕಾಲದಲ್ಲಿ ಚಿನ್ನದ ನಿಕ್ಷೇಪಗಳು ರೂಪುಗೊಳ್ಳುತ್ತವೆ. ಇದಕ್ಕೆ ಲಕ್ಷಾಂತರ ವರ್ಷಗಳು ಬೇಕಾಗುತ್ತದೆ. ತಾಪಮಾನದ ಕುಸಿತಗಳು ಅಥವಾ ಒತ್ತಡದ ಬದಲಾವಣೆಗಳಂತಹ ಪರಿಸ್ಥಿತಿಗಳಿಂದ ಈ ರೀತಿಯ ಪ್ರಕ್ರಿಯೆ ನಡೆಯುತ್ತದೆ.

ಚೀನಾ ಈಗಾಗಲೇ ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುವ ದೇಶಗಳಲ್ಲಿ ಒಂದು. ಹೂನಾನ್ ಪ್ರಾಂತ್ಯದಲ್ಲಿ ಸಿಕ್ಕಿರುವ ಹೊಸ ಚಿನ್ನದ ಗಣಿಯಿಂದಾಗಿ ಚೀನಾ ಇನ್ನಷ್ಟು ಚಿನ್ನವನ್ನು ಉತ್ಪಾದಿಸಬಹುದು. ಚೀನಾ ಜಗತ್ತಿನಲ್ಲಿ ಉತ್ಪಾದನೆಯಾಗುವ ಚಿನ್ನದಲ್ಲಿ ಸುಮಾರು 10% ಭಾಗವನ್ನು ಉತ್ಪಾದಿಸುತ್ತದೆ. 2024ರಲ್ಲಿ ಚೀನಾ ಬಳಿ 2000 ಟನ್‌ಗಿಂತಲೂ ಹೆಚ್ಚು ಚಿನ್ನ ಇದೆ ಎಂದು ಅಂದಾಜಿಸಲಾಗಿದೆ.

ಜನರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಭಾವಿಸುತ್ತಾರೆ. ಆರ್ಥಿಕ ಪರಿಸ್ಥಿತಿಗಳು ಅಸ್ಥಿರವಾಗಿರುವಾಗ ಜನರು ತಮ್ಮ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಹೀಗಾಗಿ ಚೀನಾದ ಈ ಹೊಸ ಆವಿಷ್ಕಾರದಿಂದಾಗಿ ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+