ಕೇವಲ ಒಂದೇ ಒಂದು ಸೂಪರ್ ಹಿಟ್ ಸಿನಿಮಾ ಸರಣಿಯನ್ನು ಹೊಂದಿರುವ ಸ್ಟಾರ್ ವಿಶ್ವದ ಶ್ರೀಮಂತ ಎಂದರೆ ಯಾರಿಗೆ ತಾನೆ ಅಚ್ಚರಿಯಾಗಲ್ಲ. ಸಾಲು ಸಾಲು ಹಿಟ್ ಸಿನಿಮಾ ಕೊಟ್ಟಿರುವ ವಿಶ್ವದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಟಾಮ್ ಕ್ರೂಸ್, ಶಾರುಖ್ ಖಾನ್ ಮತ್ತು ಡ್ವೇನ್ ಜಾನ್ಸನ್ ಅಂತಹವರು ವಿಶ್ವದ ಶ್ರೀಮಂತ ನಟರು ಎಂದರೆ ಅಚ್ಚರಿಯಾಗಲ್ಲ, ಆದರೆ ಹೆಚ್ಚಾಗಿ ಹೆಸರೇ ಕೇಳಿರದ ನಟರೊಬ್ಬರು ವಿಶ್ವದ ಶ್ರೀಮಂತ ನಟ ಎಂದರೆ ಸಾಮಾನ್ಯವಾಗಿ ಅಚ್ಚರಿಯಾಗುತ್ತದೆ.
ಹೌದು, ವಿಶ್ವದ ಶ್ರೀಮಂತ ನಟರಲ್ಲಿ ಮೊದಲ ಸ್ಥಾನದಲ್ಲಿರುವುದು ಟೈಲರ್ ಪೆರ್‍ರಿ. ನಟ, ಚಲನಚಿತ್ರ ಮತ್ತು ನಾಟಕಕಾರರಾಗಿದ್ದು ಶ್ರೀಮಂತ ನಟ ಎನಿಸಿಕೊಂಡಿದ್ದಾರೆ. 'ಡೈರಿ ಆಫ್ ಎ ಮ್ಯಾಡ್ ಬ್ಲ್ಯಾಕ್ ವುಮನ್' ಸಿನಿಮಾ ಸರಣಿಯ ಮೂಲಕ ಹೆಸರು ಮಾಡಿರುವ ಟೈಲರ್ ಪೆರ್‍ರಿ ನಿವ್ವಳ ಆಸ್ತಿ $1.4 ಬಿಲಿಯನ್ ಆಗಿದೆ. ಭಾರತೀಯ ಮೌಲ್ಯದಲ್ಲಿ ಸುಮಾರು ₹11,764 ಕೋಟಿ. ವಿಶ್ವದ ಯಾವುದೇ ನಟನೊಬ್ಬ ಇಷ್ಟು ಮೊತ್ತದ ಆಸ್ತಿಯನ್ನು ಹೊಂದಿಲ್ಲ.

ಹಾಸ್ಯನಟ ಜೆರ್ರಿ ಸೀನ್‌ಫೆಲ್ಡ್ ಅವರ ನಿವ್ವಳ ಆಸ್ತಿ ಮೌಲ್ಯ $1 ಬಿಲಿಯನ್ (₹8,403 ಕೋಟಿ) ಆಗಿದ್ದು, ಟೈಲರ್ ಪೆರ್‍ರಿ ಬಳಿಕ ಎರಡನೇ ಅತಿ ಶ್ರೀಮಂತ ನಟ ಎನಿಸಿಕೊಂಡಿದ್ದಾರೆ. ಹಾಲಿವುಡ್‌ನ ಸೂಪರ್ ಸ್ಟಾರ್ ನಟ ಡ್ವೇನ್ ಜಾನ್ಸನ್ ಈ ಪಟ್ಟಿಯನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ $890 ಮಿಲಿಯನ್ (₹7,478 ಕೋಟಿ) ಆಗಿದೆ.
ಶಾರುಖ್ ಖಾನ್ ಆಸ್ತಿ ಎಷ್ಟಿದೆ?
ಈ ಪಟ್ಟಿಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ₹ 7,310 ಕೋಟಿ ($ 870 ಮಿಲಿಯನ್) ಅವರ ನಿವ್ವಳ ಆಸ್ತಿ ಮೌಲ್ಯ ಎಂದು ಹೇಳಲಾಗಿದೆ. ಮಿಷನ್ ಇಂಪಾಸಿಬಲ್ ಸಿನಿಮಾ ಸರಣಿ ಮೂಲಕ, ವಿಭಿನ್ನ ಸಾಹಸಗಳಿಂದ ಪ್ರಸಿದ್ಧಿ ಪಡೆದಿರುವ ಟಾಮ್ ಕ್ರೂಸ್ ಅವರ ನಿವ್ವಳ ಮೌಲ್ಯ, $ 800 ಮಿಲಿಯನ್ (₹ 6,722 ಕೋಟಿ) ಆಗಿದ್ದು, ಪಟ್ಟಿಯಲ್ಲಿ ಶ್ರೀಮಂತ ನಟರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಟೈಲರ್ ಪೆರ್‍ರಿ ಆದಾಯದ ಮೂಲ ಯಾವುದು?
ಒಂದೇ ಸಿನಿಮಾ ಮಾಡಿದರೆ ಇಷ್ಟೊಂದು ಹಣ ಗಳಿಸಲು ಸಾಧ್ಯವಿಲ್ಲ, ಆದರೆ ನಟನೆಯೊಂದೆ ಟೈಲರ್ ಪೆರ್‍ರಿ ಅವರಿಗೆ ಆದಾಯದ ಮೂಲವಲ್ಲ. ಸಿನಿಮಾ ರಂಗದಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ. ಫೋರ್ಬ್ಸ್ ವರದಿ ಮಾಡಿರುವ ಪ್ರಕಾರ, ಆತ ನಿರ್ಮಾಪಕನಾಗಿ ಹಲವು ಸಿನಿಮಾಗಳಿಗೆ ಬಂಡವಾಳ ಹಾಕಿದ್ದು ಲಾಭ ಮಾಡಿಕೊಟ್ಟಿವೆ. ನಾಟಕಗಳನ್ನು ಕೂಡ ನಿರ್ದೇಶಿಸುವ ಅವರು ಅಲ್ಲಿಂದಲೂ ಹೆಚ್ಚಿನ ಹಣ ಮಾಡಿದ್ದಾರೆ. ನಿರ್ಮಾಪಕ ಮತ್ತು ನಾಟಕಗಳಿಂದಲೇ ಪೆರ್‍ರಿ ಸುಮಾರು ₹2,679 ಕೋಟಿ ($320 ಮಿಲಿಯನ್) ಗಳಿಸಿದ್ದಾರೆ ಎನ್ನಲಾಗಿದೆ.
ಇಷ್ಟು ಮಾತ್ರವಲ್ಲದೆ ಟೈಲರ್ ಪೆರ್‍ರಿ ತನ್ನದೇ ಸ್ಟುಡಿಯೋವನ್ನು ಹೊಂದಿದ್ದಾರೆ. ಹಾಲಿವುಡ್‌ನಲ್ಲಿ ಸ್ವಂತ ಸ್ಟುಡಿಯೋ ಹೊಂದಿರುವ ಏಕೈಕ ನಟ ಇವರು. ಹೂಡಿಕೆಗಳು, ಆಸ್ತಿಗಳು ಎಲ್ಲವನ್ನು ಮೌಲ್ಯ ಮಾಡಿದಾಗ ಅವರ ಒಟ್ಟು ಮೌಲ್ಯ ₹11,764 ಕೋಟಿ ಎಂದು ಹೇಳಲಾಗಿದೆ.


Click it and Unblock the Notifications