Yash Net Worth: ಅಂದು ಕೈಯಲ್ಲಿದ್ದಿದ್ದೇ 300..ಇಂದು ನೂರಾರು ಕೋಟಿ ಸಂಭಾವನೆ! ಯಶ್‌ ಸಂಪಾದನೆ ಎಷ್ಟು ಗೊತ್ತಾ?

ಸಣ್ಣ ಸಣ್ಣ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿ, ನಾಟಕಗಳಲ್ಲೂ ತನ್ನದೇ ಆದ ಛಾಪು ಮೂಡಿಸಿ ಇಂದು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ನಟ ಯಶ್‌ ಹಾದಿ ನಾವು ನೀವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ..ಸಾಧನೆ ಮಾಡಬೇಕೆಂದು ಮನೆ ಬಿಟ್ಟು ಬಂದಾಗ ಕೈಯಲ್ಲಿದ್ದಿದ್ದು ಬರೀ 300 ರೂಪಾಯಿ. ಆದ್ರೆ ಇವತ್ತು ಕೋಟಿ ಕೋಟಿ ಎಣಿಸ್ತಾರೆ. ಸ್ವಂತ ಪ್ರತಿಭೆ, ಯಾವುದೇ ಬ್ಯಾಗ್ರೌಂಡ್‌ ಇಲ್ಲ,ಇನ್ಫ್ಲುಯೆನ್ಸ್‌ ಅಂತೂ ಜೀವನದಲ್ಲಿ ನಡೆಯಲೇ ಇಲ್ಲ. ಆದ್ರೆ ತನ್ನ ಪ್ರತಿಭೆ ಮೇಲಿದ್ದ ಭರವಸೆಯಂತೂ ಅಪಾರ. ಒಂದಲ್ಲ ಒಂದಿನ ನಾನು ಸ್ಟಾರ್‌ ಆಗೇ ಆಗ್ತೀನಿ. ಗಾಂಧಿ ನಗರದಲ್ಲಿ ನನ್ನ ಕಟೌಟ್‌ ನಿಲ್ಲಿಸ್ತೀನಿ ಅಂದವ್ರು, ಇವತ್ತು ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಇವತ್ತು ನಾವು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ನೋಡುತ್ತಿರುವ ಯಶ್‌ ಅವರ ಯಶೋಗಾಥೆಯನ್ನ ಒಮ್ಮೆ ಎಲ್ಲರೂ ತಿಳಿಯಲೇಬೇಕು. ಕಷ್ಟದ ಹಾದಿಯಲ್ಲಿ ಬಂದ ಯಶ್‌ ಇಂದು ಮಾಡಿರೋ ಸಂಪಾದನೆ ಎಷ್ಟು ಗೊತ್ತಾ? ಒಂದು ಸಿನಿಮಾಗೆ ಈಗ ಅವರು ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಅದರ ತಿಳಿದ ಮೇಲೆ ಅರಗಿಸಿಕೊಳ್ಳೋಕೆ ಒಂದು ಗುಂಡಿಗೆ ಸಾಲದು ಬಿಡಿ.

ರಾಕಿಂಗ್‌ ಸ್ಟಾರ್‌ ಯಶ್‌ ಇಂದಿನ ಸಂಪಾದನೆ ಎಷ್ಟು ಗೊತ್ತಾ?

ಯಶ್ ಅವರು 1986ರಲ್ಲಿ ಕರ್ನಾಟಕದ ಹಾಸನ ಜಿಲ್ಲೆಯ ಭುವನಹಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದ್ರು. ತಂದೆ ಅರುಣ್‌ ಕುಮಾರ್‌ ಗೌಡ ಅವರು ಬಸ್‌ ಚಾಲಕರು, ತಾಯಿ ಪುಷ್ಪಾ ಗೃಹಿಣಿ. ಆಗ ಕಷ್ಟ ಅನ್ನೋದು ಅಂಗೈಯಲ್ಲೇ ಇತ್ತು ಅಂದ್ರೆ ತಪ್ಪಾಗಲಿಕ್ಕಿಲ್ಲ. ಬಾಲ್ಯವನ್ನು ಮೈಸೂರಿನಲ್ಲಿ ಕಳೆದ ಯಶ್‌ಗೆ ತನ್ನ ಶಾಲಾ ದಿನಗಳಿಂದಲೇ ನೃತ್ಯ ಮತ್ತು ನಾಟಕಗಳಲ್ಲಿ ಆಸಕ್ತಿ ಹೆಚ್ಚುತ್ತು. ದೊಡ್ಡ ಸಾಧನೆ ಮಾಡಬೇಕು ಅನ್ನೋ ಅವರ ಛಲ ಇವತ್ತು ಅವರನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಯಶ್ ಇಂದು ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2018ರಲ್ಲಿ ಬಿಡುಗಡೆಯಾದ ಕೆಜಿಎಫ್ ಸಿನಿಮಾ ಅವರ ಜೀವನವನ್ನೇ ಬದಲಿಸಿತು. ಆದರೆ ಈ ಯಶಸ್ಸು ಅವರಿಗೆ ಸುಲಭವಾಗಿ ದೊರಕಲಿಲ್ಲ. ತುಂಬಾ ಕಷ್ಟ, ಶ್ರಮ ಮತ್ತು ತ್ಯಾಗದ ಮೂಲಕವೇ ಅವರು ಈ ಸ್ಥಾನಕ್ಕೆ ಬಂದಿದ್ದಾರೆ.

ತಂದೆಗೆ ಇಷ್ಟವಿಲ್ಲದ ನಟನೆ:

10ನೇ ತರಗತಿಯ ನಂತರ ನಟನಾಗಬೇಕೆಂಬ ಆಸೆಯನ್ನು ಅವರು ಕುಟುಂಬದ ಮುಂದೆ ವ್ಯಕ್ತಪಡಿಸಿದರು. ಆದರೆ ಅವರ ತಂದೆಗೆ ಈ ನಿರ್ಧಾರ ಇಷ್ಟವಾಗಲಿಲ್ಲ. ಮಗ ಓದಿ ಒಳ್ಳೆಯ ಅಧಿಕಾರಿಯಾಗಬೇಕು ಎಂಬುದು ಅವರ ಕನಸಾಗಿತ್ತು. ಬಹಳ ಮಾತುಕತೆ ಮತ್ತು ಮನವೊಲಿಕೆಯ ನಂತರ, 12ನೇ ತರಗತಿ ಪೂರ್ಣಗೊಳಿಸಿದ ಮೇಲೆ ನಟನಾಗಲು ಅವಕಾಶ ನೀಡಿದರು.

ಕೈಯಲ್ಲಿ ಕೇವಲ ಮುನ್ನೂರು, ಆಸೆ ಹತ್ತಾರು:

12ನೇ ತರಗತಿ ಮುಗಿಸಿದ ಯಶ್, ಕೇವಲ 300 ರೂಪಾಯಿಗಳೊಂದಿಗೆ ಬೆಂಗಳೂರಿಗೆ ಬಂದರು. ಆರಂಭದಲ್ಲಿ ಅವರಿಗೆ ಸಾಕಷ್ಟು ಕಷ್ಟಗಳು ಎದುರಾದವು. ಕೆಲ ದಿನಗಳು ಸಹಾಯಕ ನಿರ್ದೇಶಕರಾಗಿ ಕೆಲಸ ಸಿಕ್ಕರೂ, ಆ ಚಿತ್ರ ನಿಂತುಹೋಯಿತು. ಜೀವನ ಸಾಗಿಸಲು ಅವರು ರಂಗಭೂಮಿಯಲ್ಲಿ ಕೆಲಸ ಮಾಡಿದರು. ಅಲ್ಲಿ ನಟರಿಗೆ ಚಹಾ ಮತ್ತು ತಿಂಡಿಗಳನ್ನು ಬಡಿಸುವ ಕೆಲಸ ಮಾಡಿ ದಿನಕ್ಕೆ 50 ರೂಪಾಯಿ ವೇತನ ಪಡೆದರು.

ನಂತರ ಅವರು ನಾಟಕಗಳಲ್ಲಿ ಹಿನ್ನೆಲೆ ನಟರಾಗಿ ಕಾಣಿಸಿಕೊಂಡರು. 2004ರಲ್ಲಿ ಒಂದು ನಾಟಕದಲ್ಲಿ ಬಲರಾಮ್ ಪಾತ್ರದಲ್ಲಿ ಅಭಿನಯಿಸಿದ ನಂತರ ಅವರಿಗೆ ಮೆಚ್ಚುಗೆ ಸಿಕ್ಕಿತು. ಈ ನಡುವೆ ಅವರು ತಮ್ಮ ಬಿಎ ಪದವಿಯನ್ನೂ ಪೂರ್ಣಗೊಳಿಸಿದರು. 2005ರಲ್ಲಿ ಯಶ್ ಅವರಿಗೆ ಉತ್ತರಾಯಣ ಎಂಬ ಕನ್ನಡ ಟಿವಿ ಧಾರಾವಾಹಿಯಲ್ಲಿ ಪಾತ್ರ ಸಿಕ್ಕಿತು. ನಂತರ ನಂದಗೋಕುಲ ಧಾರಾವಾಹಿಯಲ್ಲಿ ಅಭಿನಯಿಸಿದ ಅವರು ಮನೆಮಾತಾದರು. ಇದರಿಂದ ಅವರು ಒಬ್ಬ ಯಶಸ್ವಿ ಟಿವಿ ನಟನಾಗಿ ಗುರುತಿಸಿಕೊಂಡರು.

2007ರಲ್ಲಿ ಜಂಬದ ಹುಡುಗಿ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು. ಆರಂಭದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರೂ, ಮೋಗಿನ ಮನಸು ಸಿನಿಮಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ರಾಧಿಕಾ ಪಂಡಿತ್ ಅವರೊಂದಿಗೆ ಜೋಡಿಯಾಗಿ ಅವರು ಪ್ರೇಕ್ಷಕರ ಮನ ಗೆದ್ದರು. 2018ರಲ್ಲಿ ಬಿಡುಗಡೆಯಾದ ಕೆಜಿಎಫ್ ಮತ್ತು ನಂತರ ಕೆಜಿಎಫ್ 2 ಸಿನಿಮಾಗಳು ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಮಾಡಿವೆ.

ಯಶ್‌ ಅವರ ಗಳಿಕೆ:

ಕೆಜಿಎಫ್‌ ಹಾಗೂ ಕೆಜಿಎಫ್‌ 2 ಮೂಲಕ ದೇಶಾದ್ಯಂತ ಮನೆ ಮಾತಾದ ಯಶ್‌ ಅವರು, ಕೇವಲ ಕೆಜಿಎಫ್ 2 ಚಿತ್ರಕ್ಕೆ ಸುಮಾರು 30 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಈಗ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿರುವ ಅವರು, ರಾಮಾಯಣ ಚಿತ್ರವನ್ನು 4,000 ಕೋಟಿ ರೂ.ನಲ್ಲಿ ನಿರ್ಮಿಸುತ್ತಿದ್ದಾರೆ. ಹಾಗೂ ಮುಂಬರುವ ದಿನಗಳಲ್ಲಿ ರಿಲೀಸ್‌ ಆಗಲಿರುವ ಟಾಕ್ಸಿಕ್‌ ಸಿನಿಮಾ ಕೂಡ ಸಾವಿರಾರು ರೂಪಾಯಿ ಕೋಟಿಗಳದ್ದಾಗಿದೆ ಎನ್ನಲಾಗ್ತಿದೆ. ಹಾಗೆಯೇ ಈಗ ಅವರು ಮಾಡುವ ಒಂದು ಸಿನಿಮಾಗೆ 100 ಕೋಟಿ ರೂ. ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸದ್ಯಕ್ಕೆ ಅವರು ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಪ್ರೆಸ್ಟಿಜ್‌ ಅಪಾರ್ಟ್‌ಮೆಂಟ್‌ ಹಾಗೂ ಹಾಸನಲ್ಲಿ 100 ಎಕರೆ ತೋಟ ಖರೀದಿಸಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಇವರ ನಿವ್ವಳ ಮೌಲ್ಯವು 60 ಕೋಟಿಗೂ ಹೆಚ್ಚಿದೆ ಎನ್ನಲಾಗಿದೆ.

ಇಂದು ಯಶ್ ಅವರ ಜೀವನ ಅನೇಕ ಯುವಕರಿಗೆ ಪ್ರೇರಣೆಯಾಗಿದೆ. ಕಷ್ಟದ ದಿನಗಳನ್ನು ಎದುರಿಸಿ, ಕನಸನ್ನು ಬಿಡದೆ ಶ್ರಮಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದಕ್ಕೆ ಅವರ ಜೀವನವೇ ಉದಾಹರಣೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+