2024ರ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೊಸ ವರ್ಷದ ಸ್ವಾಗತಕ್ಕೆ ವಿಶ್ವಾದ್ಯಂತ ತಯಾರಿ ಭರದಿಂದ ಸಾಗುತ್ತಿದೆ. ಇನ್ನು ಪ್ರಸಕ್ತ ವರ್ಷದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯಮೋಘ ಸಾಧನೆ ಮಾಡಿದ ಸಾಧಕರನ್ನು ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ತಮ್ಮ ಅಮೋಘ ಸಾಧನೆಯ ಮೂಲಕ ಅವರು ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಕೂಡ ಅವರು ಸ್ಥಾಪಿಸಿದ್ದಾರೆ. ಸದ್ಯ 2024ರಲ್ಲಿ ಮುಖ್ಯ ಪ್ರಶಸ್ತಿ ಪಡೆದುಕೊಂಡ ಸಾಧಕರ ಸಾಧನೆಗಳ ಬಗ್ಗೆ ಅವಲೋಕನ ನಡೆಸೋಣ.
ಪುಲಿಟ್ಜೆರ್ ಪ್ರಶಸ್ತಿಗಳು
ಪುಲಿಟ್ಜರ್ ಪ್ರಶಸ್ತಿಗಳನ್ನು 1917 ರಿಂದ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯವು ನೀಡುತ್ತಿದ್ದು, ಇದು ಪತ್ರಿಕೋದ್ಯಮ ಮತ್ತು ಕಲೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ವಾರ್ಷಿಕವಾಗಿ ಅವರು ಪತ್ರಿಕೆ, ನಿಯತಕಾಲಿಕೆ ಮತ್ತು ಆನ್ಲೈನ್ ಪತ್ರಿಕೋದ್ಯಮ ಸೇರಿದಂತೆ 23 ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.

ಅಕಾಡೆಮಿ ಪ್ರಶಸ್ತಿಗಳು (ಆಸ್ಕರ್)
96ನೇ ಅಕಾಡೆಮಿ ಪ್ರಶಸ್ತಿಗಳನ್ನು ಮಾರ್ಚ್ 10, 2024 ರಂದು ಆಯೋಜಿಸಲಾಗಿದ್ದು, ಇದು ಚಲನಚಿತ್ರೋದ್ಯಮದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಮಾಡಿದವರಿಗೆ ನೀಡಲಾಗುತ್ತದೆ. ಸಮಾರಂಭವನ್ನು ಜಿಮ್ಮಿ ಕಿಮ್ಮೆಲ್ ಆಯೋಜಿಸಿದ್ದು, ವೈವಿಧ್ಯಮಯ ಚಲನಚಿತ್ರಗಳು ಮತ್ತು ಪ್ರತಿಭೆಗಳನ್ನು ಗೌರವಿಸಿದರು. ಸದ್ಯ ಕೆಲವು ವಿಜೇತರ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಇನ್ನು ಈ ಬಾರಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಕ್ರಿಸ್ಟೋಫರ್ ನೋಲನ್ ಅವರ ಓಪನ್ ಹೈಮರ್ ಚಿತ್ರ ಪಾತ್ರವಾಗಿದೆ. ಉತ್ತಮ ನಿರ್ದೇಶಕ ಪ್ರಶಸ್ತಿಯು ಇದೇ ಚಿತ್ರಕ್ಕೆ ಲಭಿಸಿದ್ದು, ಕ್ರಿಸ್ಟೋಫರ್ ನೋಲನ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಿತ್ರದಲ್ಲ ಅತ್ಯುತ್ತಮ ನಟನೆಯ ಮೂಲಕ ಗುರುತಿಸಿಕೊಂಡಿದ್ದ ಸಿಲಿಯನ್ ಮರ್ಫಿ ಅವರು ಉತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಪುವರ್ ಥಿಂಗ್ಸ್ ಚಿತ್ರದಲ್ಲಿ ನಟನೆಗೆ ಎಮ್ಮಾ ಸ್ಟೋನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನೊಬೆಲ್ ಪ್ರಶಸ್ತಿಗಳು
ವಿಶ್ವದಲ್ಲಿ ಪ್ರತಿಷ್ಟಿತ ಪ್ರಶಸ್ತಿಗಳಲ್ಲಿ ನೋಬೆಲ್ ಕೂಡ ಎಂದು ಪರಿಗಣಿಸಲ್ಪಟ್ಟಿದೆ. ಇನ್ನು ನೋಬೆಲ್ ಪ್ರಶಸ್ತಿಯನ್ನು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ಔಷಧ, ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ವಿಜ್ಞಾನಗಳ ಕ್ಷೇತ್ರಗಳಲ್ಲಿ ಮಾನವೀಯತೆಗೆ ಅಸಾಧಾರಣ ಕೊಡುಗೆಗಳಿಗಾಗಿ ನೊಬೆಲ್ ಪ್ರಶಸ್ತಿಗಳನ್ನು ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ನೀಡಿ ಗೌರವಿಸಲಾಗುತ್ತದೆ. ಸದ್ಯ 2024 ರಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಸದ್ಯ ಕೆಳಗೆ ನೀಡಲಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಈ ಬಾರಿ ಹಾನ್ ಕೇಂಗ್ ಅವರಿಗೆ ನೋಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಐತಿಹಾಸಿಕ ಆಘಾತಗಳನ್ನು ಎದುರಿಸುವ ಮತ್ತು ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ಕಾವ್ಯಾತ್ಮಕ ಗದ್ಯ ರಚನೆಗಾಗಿ ಹಾನ್ ಕೇಂಗ್ ಅವರ ಸಾಧನೆಗೆ ಪ್ರಶಸ್ತಿ ಮುಡಿಗೇರಿದೆ.
ಇನ್ನು ನಿಹೋನ್ ಹಿಂದಾಕ್ಯೊ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ. ಜಗತ್ತನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತಗೊಳಿಸುವ ವಿಚಾರದಲ್ಲಿ ನಿಹೋನ್ ನಡೆಸಿದ ಹೋರಾಟಗಳಿಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಭೌತಶಾಸ್ತ್ರದಲ್ಲಿ ಜಾನ್ ಜೆ. ಹಾಪ್ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರು ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಕೃತಕ ನೆಟ್ವರ್ಕ್ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಆವಿಷ್ಕಾರಗಳಿಗಾಗಿ ಪ್ರಶಸ್ತಿ ನೀಡಲಾಗಿದೆ.
ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಡೇವಿಡ್ ಬೇಕರ್ ಅವರಿಗೆ ನೋಬೆಲ್ ಪ್ರಶಸ್ತಿ ಲಭಿಸಿದೆ. ಪ್ರೋಟೀನ್ ರಚನೆಯ ಮುನ್ಸೂಚನೆ ಹಾಗೂ ಕಂಪ್ಯೂಟೇಶನಲ್ ಪ್ರೊಟೀನ್ ವಿನ್ಯಾಸಕ್ಕಾಗಿ ಅವರು ಈ ಸಾಧನೆಗೆ ಪಾತ್ರವಾಗಿದ್ದಾರೆ.
ಮೆಡಿಸಿನ್ ವಿಭಾಗದಲ್ಲಿ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ಪ್ರಶಸ್ತಿ ಪಾತ್ರರಾಗಿದ್ದಾರೆ. ಮೈಕ್ರೋಆರ್ಎನ್ಎಯ ಆವಿಷ್ಕಾರಕ್ಕಾಗಿ ಮತ್ತು ನಂತರದ ಪ್ರತಿಲೇಖನದ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರಕ್ಕಾಗಿ ಪ್ರಶಸ್ತಿ ನೀಡಲಾಗಿದೆ.
ಎಕನಾಮಿಕ್ಸ್ ವಿಭಾಗದಲ್ಲಿ ಡ್ಯಾರನ್ ಅಸೆಮೊಗ್ಲು ಅವರು ಪ್ರಶಸ್ತಿ ಪಾತ್ರರಾಗಿದ್ದಾರೆ. ಸಂಸ್ಥೆಗಳು ಹೇಗೆ ರಚನೆಯಾಗುತ್ತವೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅಧ್ಯಯನದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಅಸೆಮೊಗ್ಲು ಅವರು ಪ್ರಶಸ್ತಿ ಮುಡಿಗೇರಿಸಿದ್ದಾರೆ.
ಗ್ರ್ಯಾಮಿ ಪ್ರಶಸ್ತಿಗಳು
ಫೆಬ್ರವರಿ 4, 2024 ರಂದು ಲಾಸ್ ಏಂಜಲೀಸ್ ನಲ್ಲಿ ನಡೆದ 66 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳು ಸಂಗೀತ ಉದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.ಈ ವರ್ಷದ ಕೆಲವು ಉತ್ತಮ ಸಾಧನೆ ವಿಜೇತರ ಪಟ್ಟಿ ಇಲ್ಲಿದೆ.
ವಿಶ್ವದ ಪ್ರಸಿದ್ದ ಗಾಯಕಿಯರಲ್ಲಿ ಒಬ್ಬರಾಗಿರುವ ಟೇಲರ್ ಸ್ವಿಫ್ಟ್ ಅವರ ಮಿಡ್ನೈಟ್ಸ್ ಆಲ್ಬಮ್ ಗೆ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
ವರ್ಷದ ಹಾಡು ವಿಭಾಗದಲ್ಲಿ 'ಬಾರ್ಬಿ' ಚಿತ್ರದ 'ವಾಟ್ ವಾಸ್ ಐ ಮೇಡ್ ಫಾರ್' ಹಾಡನ್ನು ಹಾಡಿದ ಬಿಲ್ಲಿ ಎಲಿಶ್ ಒ'ಕಾನ್ನೆಲ್ ಮತ್ತು ಫಿನ್ನಿಯಾಸ್ ಒ'ಕಾನ್ನೆಲ್ ಅವರಿಗೆ ಲಭಿಸಿದೆ.
ವರ್ಷದ ರೆಕಾರ್ಡ್ ಪ್ರಶಸ್ತಿಗೆ ಮಿಲೆ ಸಿರೆಸ್ ಅವರ ಫ್ಲವರ್ಸ್ ಹಾಡಿಗೆ ಸಿಕ್ಕಿದೆ
ವರ್ಷದ ಅತ್ಯುತ್ತಮ ಹೊಸ ಸಿಂಗರ್ ಪ್ರಶಸ್ತಿಯನ್ನು ವಿಕ್ಟೋರಿಯಾ ಮೋನೆಟ್ ಅವರು ಮುಡಿಗೇರಿಸಿಕೊಂಡರು.
ಭಾರತದ ಪ್ರಶಸ್ತಿಗಳ ಬಗ್ಗೆ...
2024 ರಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಸೇರಿದಂತೆ ಭಾರತದ ರಾಷ್ಟ್ರಪತಿಗಳು 132 ಪದ್ಮ ಪ್ರಶಸ್ತಿಗಳಿಗೆ ಅನುಮೋದನೆ ನೀಡಿದ್ದಾರೆ. ಪದ್ಮ ಪ್ರಶಸ್ತಿಗಳು ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ, ಇಂಜಿನಿಯರಿಂಗ್, ಇತ್ಯಾದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ಗುರುತಿಸಲು ವಾರ್ಷಿಕವಾಗಿ ಗಣರಾಜ್ಯೋತ್ಸವದಂದು ಘೋಷಿಸಲಾಗುವ ಭಾರತದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications