ಜಗತ್ತಿನಲ್ಲೇ ಅತೀ ಹೆಚ್ಚು ಚಿತ್ರ ನಿರ್ಮಿಸುವ ದೇಶವಾಗಿರುವ ಭಾರತದಲ್ಲಿ ಚಿತ್ರನಟ-ನಟಿಯರನ್ನು ದೇವರ ರೀತಿಯಲ್ಲಿ ನೋಡಲಾಗುತ್ತದೆ. ನಟ-ನಟಿಯರು ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಆರಾದ್ಯ ದೇವರಂತೆ ಪರಿಗಣಿಸಲಾಗುತ್ತದೆ. ಇನ್ನು ಬಾಲಿವುಡ್ ಹಾಗೂ ಉತ್ತರ ಭಾರತದ ಚಿತ್ರದ ನಟರಿಗೆ ಹೋಲಿಕೆ ಮಾಡಿದರೆ ದಕ್ಷಿಣದ ರಾಜ್ಯಗಳಲ್ಲಿ ಈ ಸಂಸ್ಕೃತಿ ಹೆಚ್ಚು ಪ್ರಚಲಿತದಲ್ಲಿದೆ. ಇನ್ನು ಚಿತ್ರ ನಾಯಕ ನಟರಿಗೆ ನೀಡಲಾಗುವ ಸಂಭಾವನೆ ಬಗ್ಗೆ ಬಹುಷಃ ಎಲ್ಲಿರಗೂ ತಿಳಿದಿದೆ. ಕೋಟಿಗಟ್ಟಲೆ ಮೌಲ್ಯದಲ್ಲಿ ನಟರಿಗೆ ಪ್ರತೀ ಚಿತ್ರಕ್ಕೆ ಸಂಭಾವನೆ ನೀಡಲಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಭಾರತದಲ್ಲಿ ಚಿತ್ರದಿಂದಲೇ ಆರ್ಥಿಕ ಚಟುವಟಿಕೆಗಳಿಗೆ ಕೂಡ ಕ್ರಿಯಾಶೀಲತೆಯನ್ನು ಹೊಂದಿದೆ. ಸದ್ಯ ನಾವಿಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಭಾರತೀಯ ನಟರ ಬಗ್ಗೆ ಹೇಳಲಿದ್ದು, ಅಚ್ಚರಿಯ ರೀತಿಯಲ್ಲಿ ದಕ್ಷಿಣ ಭಾರತದ ನಟರೇ ಸಿಂಹಪಾಲು ಪಡೆದಿದ್ದಾರೆ.
1. ಅಲ್ಲು ಅರ್ಜುನ್
ಸದ್ಯ ಪುಷ್ಪಾ-2 ಭರ್ಜರಿ ಗೆಲುವಿನ ಸಂಭ್ರಮಾಚರಣೆಯಲ್ಲಿರುವ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಪುಷ್ಪಾ ಮೊದಲ ಭಾಗ ಭಾರೀ ಪ್ರಸಿದ್ದಿಯೊಂದಿಗೆ ಬಾಕ್ಸ್ ಅಫೀಸ್‌ನಲ್ಲಿ ಧೂಳೆಬ್ಬಿಸಿ, ಅವರನ್ನು ವಿಶ್ವವಿಖ್ಯಾತ ನಟರ ಪಟ್ಟಿಯಲ್ಲಿ ಕೂಡ ತಂದು ನಿಲ್ಲಿಸಿತ್ತು. ಇನ್ನು ಮೂಲಗಳ ಪ್ರಕಾರ ಅಲ್ಲು ಅರ್ಜುನ್ ಪ್ರತೀ ಚಿತ್ರಕ್ಕೆ ಹೆಚ್ಚು ಕಡಿಮೆ ಬರೊಬ್ಬರಿ 300 ಕೋಟಿ ರೂ. ಪಡೆಯುತ್ತಿದ್ದು, ಸಹಜವಾಗಿಯೇ ಅವರನ್ನು ಮೊದಲ ಸ್ಥಾನದಲ್ಲಿ ತಂದು ನಿಲ್ಲಿಸಿದೆ.

2021 ರ ತೆಲುಗು ಚಲನಚಿತ್ರವಾದ ಪುಷ್ಪ: ದಿ ರೈಸ್‌ನಲ್ಲಿ ನಟಿಸಿದ ಪಾತ್ರಕ್ಕಾಗಿ ಭಾರತದಾದ್ಯಂತ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದ್ದಾರೆ. ಪುಷ್ಪ: ದಿ ರೂಲ್ ಚಿತ್ರವು ಈಗಾಗಲೇ ಬಿಡುಗಡೆಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಗಳಿಸುತ್ತಿದೆ. ಈ ಚಲನಚಿತ್ರವು ಶಾರುಖ್ ಖಾನ್ ಅವರ ಜವಾನ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವ ನಿರೀಕ್ಷೆ ಕೂಡ ಇದೆ.
2. ಜೋಸೆಫ್ ವಿಜಯ್
ಥಲಪತಿ ವಿಜಯ್ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿರುವ ಜೋಸೆಫ್ ವಿಜಯ್ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಮೂರು ದಶಕಗಳೇ ಕಳೆದಿವೆ. ಸದ್ಯ ವಿಜಯ್ ಅವರು ಪ್ರತೀ ಚಿತ್ರಕ್ಕೆ ಹೆಚ್ಚು ಕಡಿಮೆ 130 ರಿಂದ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದು, ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. 1984 ರಲ್ಲಿ ವೆಟ್ರಿ ಚಿತ್ರದಲ್ಲಿ ಬಾಲ ಕಲಾವಿದನಾಗಿ 10 ನೇ ವಯಸ್ಸಿನಲ್ಲಿ ಪ್ರಾರಂಭವಾದ ವಿಜಯ್ ಅವರ ಸಿನೆ ಜೀವನವು ಸದ್ಯ ಮೂರು ದಶಕಗಳವರೆಗೆ ವಿಸ್ತರಿಸುತ್ತಿದೆ. ವಿಜಯ್ ಅವರ 2023 ರ ವರಿಸು ಚಲನಚಿತ್ರ ವಿಶ್ವಾದ್ಯಂತ ಸುಮಾರು 300 ಕೋಟಿ ರೂ. ಗಳಿಸಿದ್ದು, ಅಲ್ಲದೆ ʻಲಿಯೋʼ ಸಿನೆಮಾವು ವಿಶ್ವಾದ್ಯಂತ 612 ಕೋಟಿ ರೂ. ಗಳಿಕೆ ಮಾಡಿದೆ.
3. ಶಾರುಖ್ ಖಾನ್
ಎಸ್‌ಆರ್‌ಕೆ ಅಥವಾ ಶಾರುಖ್ ಖಾನ್ ಬಗ್ಗೆ ಹೆಚ್ಚಿನ ಮಾಹಿತಿಯ ಅಗತ್ಯವಿಲ್ಲ. ಬಾಲಿವುಡ್ ಬಾದ್ ಶಾ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಶಾರುಖ್ ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿದ್ದು, ಜಾಗತಿಕ ಮಟ್ಟದ ನಾಯಕ ನಟರಾಗಿದ್ದಾರೆ. ಇನ್ನು ಶಾರುಖ್ ಅವರು ತನ್ನ ಪ್ರತೀ ಚಿತ್ರಕ್ಕೆ 150 ಕೋಟಿ ರೂ.ನಿಂದ 250 ಕೋಟಿ ರೂ. ವರೆಗೆ ಚಾರ್ಜ್ ಮಾಡುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ತೆರೆಕಂಡ ಶಾರುಖ್ ಅವರ ಜವಾನ್ ಮತ್ತು ಪಠಾಣ್ ಚಿತ್ರಗಳು ವಿಶ್ವಾದ್ಯಂತ ಸುಮಾರು 2000 ಕೋಟಿ ರೂ. ಗಳಿಕೆ ಮಾಡಿತ್ತು.
4. ರಜನಿಕಾಂತ್
ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ನಟರುಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ರಜನಿಕಾಂತ್ ವಿದೇಶಗಳಲ್ಲಿ ಅದರಲ್ಲೂ ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ರಜನಿಕಾಂತ್ ಅವರು ಪ್ರತೀ ಸಿನೆಮಾಗೆ ಸುಮಾರು 125ರಿಂದ 275 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.ಅಕ್ಟೋಬರ್ 10 ರಂದು ಬಿಡುಗಡೆಯಾಗಿದ್ದ ವೆಟ್ಟೈಯಾನ್ ಚಿತ್ರಕ್ಕೆ ಅವರು 125 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
5. ಆಮೀರ್ ಖಾನ್
ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿರುವ ಆಮೀರ್ ಖಾನ್ ಅವರು ಕೂಡ ಬಾಲಿವುಡ್ ಖ್ಯಾತನಾಮ ಹಾಗೂ ಹಿರಿಯ ನಟರುಗಳಲ್ಲಿ ಒಬ್ಬರಾಗಿದ್ದಾರೆ. ಆದರೆ 2022ರಲ್ಲಿ ಬಿಡುಗಡೆಯಾದ ಅವರ ಕೊನೆಯ ಚಿತ್ರ ʻಲಾಲ್ ಸಿಂಗ್ ಚಡ್ಡಾʼ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡುವಲ್ಲಿ ವಿಫಲತೆ ಕಂಡಿತ್ತು. ಆದರೂ ಅವರು ಭಾರತದ ಪ್ರಖ್ಯಾತ ನಟರಲ್ಲಿ ಗುರುತಿಸಿಕೊಂಡಿದ್ದಾರೆ. ಖಾನ್ ಅವರು ಪ್ರತೀ ಚಿತ್ರಕ್ಕೆ 100 ಕೋಟಿ ರೂ.ನಿಂದ 275 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
6. ಪ್ರಭಾಸ್
ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಮೂಲಕ ಬಾಲಿವುಡ್ ಹಾಗೂ ಪ್ರಪಂಚದ ಗಮನ ಸೆಳೆದಿದ್ದ ಪ್ರಭಾಸ್ ಈಗಲೂ ಪ್ರಖ್ಯಾತ ನಟರಲ್ಲಿ ಗುರುತಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ಆದಿಪುರುಷ ಚಿತ್ರವು ನಿರೀಕ್ಷಿತ ಮಟ್ಟದಲ್ಲಿ ಗಳಿಕೆಯಲ್ಲಿ ವಿಫಲತೆ ಕಂಡರೂ ಪ್ರಭಾಸ್ ಈಗಲೂ ಬಹುಬೇಡಿಕೆಯ ನಟರುಗಳಲ್ಲಿ ಒಬ್ಬರಾಗಿದ್ದಾರೆ. ಪ್ರಭಾಸ್ ತನ್ನ ಪ್ರತೀ ಚಿತ್ರಕ್ಕೆ 100 ಕೋಟಿ ರೂ.ನಿಂದ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
7. ಅಜಿತ್ ಕುಮಾರ್
ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತೀಯ ನಟರಲ್ಲಿ ಅಜಿತ್ ಕೂಡ ಒಬ್ಬರಾಗಿದ್ದಾರೆ. 2023 ರಲ್ಲಿ ಬಿಡುಗಡೆಯಾದ ಥುನಿವುನಲ್ಲಿ ಅಜಿತ್ ಅವರ ಅಭಿನಯವನ್ನು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು Rs130 ಕೋಟಿ ಗಳಿಸಿದೆ. ಇನ್ನು ಅಜಿತ್ ಅವರು ತನ್ನ ಚಿತ್ರಕ್ಕೆ 105 ಕೋಟಿ ರೂ.ನಿಂದ 165 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
8. ಸಲ್ಮಾನ್ ಖಾನ್
ಬಾಲಿವುಡ್ ನಲ್ಲಿ ಬಾಯ್ ಜಾನ್ ಎಂದು ಗುರುತಿಸಿಕೊಳ್ಳುವ ಸಲ್ಮಾನ್ ಖಾನ್ ಕೂಡ ಪ್ರಸಿದ್ದ ನಟರಲ್ಲಿ ಒಬ್ಬರಾಗಿದ್ದು, ಈಗಲೂ ತನ್ನ ಆದ ಸ್ಟೈಲ್ ಹಾಗೂ ಮಾತುಗಾರಿಕೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಸಲ್ಮಾನ್ ಅವರ ಇತ್ತೀಚಿನ ಬಿಡುಗಡೆಯಾದ ಟೈಗರ್ 3 ಚಿತ್ರವು ವಿಶ್ವಾದ್ಯಂತ 466.63 ಕೋಟಿ ರೂ. ಗಳಿಸಿದೆ. ಇನ್ನು ಸಲ್ಮಾನ್ ಅವರು ತನ್ನ ಚಿತ್ರಕ್ಕೆ 100 ಕೋಟಿ ರೂ.ನಿಂದ 150 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
9. ಕಮಲ್ ಹಾಸನ್
ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸುಮಾರು 220 ಚಿತ್ರಗಳಲ್ಲಿ ನಟಿಸಿರುವ ಕಮಲ್ ಹಾಸನ್ ಕೂಡ ಭಾರತದ ಪ್ರಸಿದ್ದ ನಟರಲ್ಲಿ ಒಬ್ಬರಾಗಿದ್ದಾರೆ. ಕಮಲ್ ತನ್ನ ಚಿತ್ರಕ್ಕೆ 100 ಕೋಟಿ ರೂ.ನಿಂದ 150 ಕೋಟಿ ರೂ. ವರೆಗೆ ಸಂಭಾವನೆ ಪಡೆಯುತ್ತಾರೆ.
10. ಅಕ್ಷಯ್ ಕುಮಾರ್
ಬಾಲಿವುಡ್‌ನಲ್ಲಿ ಸುಮಾರು ಮೂರು ದಶಕಗಳಿಂದ ಮಿಂಚುತ್ತಿರುವ ಅಕ್ಷಯ್ ಕುಮಾರ್ ಯಾವ ರೀತಿಯ ಪಾತ್ರಕ್ಕೂ ಒಗ್ಗಿಕೊಳ್ಳುವ ನಟ. ಅಕ್ಷಯ್ ಕುಮಾರ್ ಅವರ ಹೇರಾ ಫೇರಿ, ಭೂಲ್ ಭುಲೈಯಾ ಮುಂತಾದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಓ ಮೈ ಗಾಡ್ ಎರಡನೇ ಭಾಗದಲ್ಲಿ ಅಕ್ಷಯ್ ಅವರ ಅತಿಥಿ ಪಾತ್ರದ ಚಿತ್ರವು ಬಾಕ್ಸ್ ಅಫೀಸ್‌ನಲ್ಲಿ ಸುಮಾರು 221 ಕೋಟಿ ರೂ. ಗಳಿಕೆ ಮಾಡಿತ್ತು. ಇನ್ನು ಅಕ್ಷಯ್ ಅವರು ಪ್ರತೀ ಚಿತ್ರಕ್ಕೆ 60 ಕೋಟಿ ರೂ.ನಿಂದ 145 ಕೋಟಿ ರೂ. ವರೆಗೆ ಸಂಭಾವನೆ ಪಡೆಯುತ್ತಾರೆ.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications