Year Ender 2024: ಅತೀ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್‌ ನಟಿಯರು, ಇಲ್ಲಿ ತಿಳಿಯಿರಿ

ಭಾರತದಲ್ಲಿ ಸಿನಿಮಾಗಳು ಬಹುದೊಡ್ಡ ಪಾತ್ರವನ್ನ ವಹಿಸುತ್ತವೆ. ಹೀಗಾಗಿಯೆ ಭಾರತೀಯ ಸಿನಿಮಾಗಳು ಇಂದು ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಗುರುತಿಸಿಕೊಂಡಿವೆ. ಇಂತಹ ಭಾರತೀಯ ಸಿನಿಮಾ ರಂಗದಲ್ಲಿ ಬಹಳಷ್ಟು ನಟಿಯರು ತಮ್ಮ ನಟನೆ ಮೂಲಕ ಜಗತ್‌ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಈ ನಟಿಯರು ತಮ್ಮ ಪ್ರತೀ ಸಿನಿಮಾಗಳಿಗೆ ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಎಂಬುದನ್ನ ಗಮನಿಸಿದರೆ ನಿಜವಾಗ್ಲೂ ಅಚ್ಚರಿಯಾಗಬಹುದು. ಹೌದು ಭಾರತೀಯ ಚಿತ್ರರಂಗದಲ್ಲಿ ನಟಿಯರು ತಮ್ಮ ಅತ್ಯುತ್ತಮ ನಟೆನೆಯ ಮೂಲಕ ಜನರನ್ನ ಮೋಡಿ ಮಾಡುವುದಲ್ಲದೆ, ತಮ್ಮ ಪ್ರತೀ ಸಿನಿಮಾಗೆ ಅಷ್ಟೇ ಸಂಭಾವನೆಯನ್ನ ಕೂಡ ಪಡೆಯುತ್ತಾರೆ.

ಹಾಗಾದ್ರೆ ಈ 2024ರಲ್ಲಿ ಭಾರತೀಯ ಬಾಲಿವುಡ್‌ ನಟಿಯರು ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಎಂಬುದನ್ನ ನೋಡೋಣ..

1. ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಪ್ರತೀ ಸಿನಿಮಾಗೆ 15 ರಿಂದ 30 ಕೋಟಿಗಳವರೆಗೆ ಸಂಭಾವನೆಯನ್ನ ಪಡೆಯುತ್ತಾರೆ. 2024ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರಾಗಿದ್ದಾರೆ. ಉತ್ತಮ ಸಿನಿಮಾಗಳ ಮೂಲಕ ಜನರನ್ನ ರಂಜಿಸುತ್ತಿರುವ ಅವರು ತಮ್ಮ ಉತ್ತಮ ನಟನೆಗಾಗಿ ಅಧಿಕ ಸಂಭಾವನೆಯನ್ನ ಕೂಡ ಪಡೆಯುತ್ತಾರೆ. ಚೆನ್ನೈ ಎಕ್ಸ್‌ಪ್ರೆಸ್‌, ಪದ್ಮಾವತ್‌ ಹಾಗೆ ಇತ್ತೀಚೆಗೆ ಬಿಡುಗಡೆಯಾದಂತ ಜವಾನ್‌ ಮತ್ತು ಪಟಾನ್‌ ಹಾಗೆ ಕಲ್ಕಿ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಎಲ್ಲರನ್ನ ಮೋಡಿ ಮಾಡಿದ್ದಾರೆ. ಜೊತೆಗೆ ಬಾಲಿವುಡ್‌ ದಿಗ್ಗಜರ ಜೊತೆಗೆ ಪರದೆ ಹಂಚಿಕೊಂಡಿದ್ದಲ್ಲದೆ, ಬಾಲಿವುಡ್‌ನಲ್ಲಿ ತಮ್ಮ ಉತ್ತಮ ನಟೆನೆಯಿಂದಾಗಿ ಪ್ರಖ್ಯಾತಿಯನ್ನ ಹೊಂದಿದ್ದಾರೆ.

ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಯಾರು ಗೊತ್ತಾ?

2. ಕಂಗನಾ ರಣಾವತ್

ಕಾಂಟ್ರವರ್ಸಿ ಕ್ವೀನ್‌ ಎಂದೇ ಪ್ರಖ್ಯತಿ ಹೊಂದಿರುವ ಕಂಗನಾ ರಣಾವತ್‌ ಅತೀ ಹೆಚ್ಚು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುವ ಮೂಲಕ ಜನರನ್ನ ರಂಜಿಸಿದ್ದಾರೆ. ಇನ್ನು ಇವರು 15 ರಿಂದ 27 ಕೋಟಿಗಳ ವರೆಗೆ ಸಂಭಾವನೆಯನ್ನ ಪಡೆಯುತ್ತಾರೆ. ಕ್ವೀನ್‌ ಮತ್ತು ತನು ವೆಡ್ಸ್‌ ಮನು ಸಿನಿಮಾಗಳ ಮೂಲಕ ಪ್ರಖ್ಯತಿ ಹೊಂದಿರುವ ಕಂಗಾನ ಅವರು ಸಾಲು ಸಾಲು ಸಿನಿಮಾಗಳನ್ನ ಮಾಡುವ ಮೂಲಕ ಬಾಲಿವುಡ್‌ನಲ್ಲಿ ಪ್ರಸಿದ್ಧ ನಟಿಯಾಗಿ ಹೊರಹೊಮ್ಮಿದ್ದಾರೆ.

3. ಪ್ರಿಯಾಂಕಾ ಚೋಪ್ರಾ ಜೋನಾಸ್‌

ಅಂತರಾಷ್ಟ್ರೀಯ ಬೆಳ್ಳಿ ಪರದೆಯ ಮೇಲೂ ಕೂಡ ನಟನೆ ಮಾಡಿ ಪ್ರಖ್ಯತಿ ಹೊಂದಿರುವ ಪ್ರಿಯಾಂಕಾ ಚೋಪ್ರಾ ಜೋನಾಸ್‌ ಅವರು 15 ಕೋಟಿಯಿಂದ 25 ಕೋಟಿ ಸಂಭಾವನೆಯನ್ನ ಪಡೆಯುತ್ತಾರೆ. ಮಹಿಳಾ ಆಧರಿತ ಸಿನಿಮಾಗಳನ್ನ ಮಾಡುವ ಮೂಲಕ ಸಾಕಷ್ಟು ಪ್ರಖ್ಯತಿಯನ್ನ ಇವರು ಗಳಿಸಿದ್ದಾರೆ. ಹಾಗೆ ಬಾಜಿರಾವ್‌ ಮಸ್ತಾನಿ, ಮೇರಿ ಕೋಮ್‌ ಸಿನಿಮಾಗಳಂತ ಉತ್ತಮ ಕಥಾಹಂದರವಿರುವ ಸಿನಿಮಾಗಳ ಮೂಲಕ ಬೆಳ್ಳಿ ಪರದೆಯ ಮೇಲೆ ರಾರಾಜಿಸಿದ್ದಾರೆ. ಈ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನ ಇವರು ಹೊಂದಿದ್ದಾರೆ.

4. ಕತ್ರಿನಾ ಕೈಫ್

ಬಾಲಿವುಡ್‌ನಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಿನಿಮಾಗಳನ್ನ ಮಾಡುವ ಮೂಲಕ ಕತ್ರಿನಾ ಕೈಫ್‌ ಅವರು ಸಾಕಷ್ಟು ಪ್ರಸಿದ್ದಿಯನ್ನ ಪಡೆದಿದ್ದಾರೆ. ಇವರು ಪ್ರತೀ ಸಿನಿಮಾಗೆ 15 ಕೋಟಿಗಳಿಂದ 25 ಕೋಟಿಗಳವರೆಗೆ ಸಂಭಾವನೆಯನ್ನ ಪಡೆಯುತ್ತಾರೆ. ಬಾಲಿವುಡ್‌ನ ಘಟಾನುಘಟಿಗಳ ಜೊತೆ ನಟನೆ ಮಾಡುವ ಮೂಲಕ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರನ್ನ ಗಳಿಸಿದ್ದಾರೆ. ಏಕ್‌ ಥಾ ಟೈಗರ್‌, ಜಬ್‌ ತಕ್‌ ಹೈ ಜಾನ್‌ ಸಿನಿಮಾಗಳಂತೆ ಸಾಕಷ್ಟು ಉತ್ತಮ ಸಿನಿಮಾಗಳನ್ನ ನೀಡಿದ್ದಾರೆ.

5. ಆಲಿಯಾ ಭಟ್

ಉತ್ತಮ ಕಥೆಗಳನ್ನ ಆಯ್ಕೆ ಮಾಡುವ ಮೂಲಕ ಅತ್ಯುತ್ತಮ ನಟನೆಯ ಮೂಲಕ ಬಾಲಿವುಡ್‌ನ ಪ್ರಸಿದ್ಧ ನಟಿಯರಲ್ಲಿ ಆಲಿಯಾ ಭಟ್‌ ಕೂಡ ಒಬ್ಬರು. ಇವರು ತಮ್ಮ ಪ್ರತೀ ಚಲನಚಿತ್ರಗಳಿಗೆ 10 ಕೋಟಿಗಳಿಂದ 20 ಕೋಟಿಗಳವರೆಗೆ ಸಂಭಾವನೆಯನ್ನ ಪಡೆಯುತ್ತಾರೆ. ಚಿಕ್ಕ ಪಾತ್ರದಿಂದ ಹಿಡಿದು ದೊಡ್ಡ ಪಾತ್ರಗಳ ವರೆಗೆ ತಮ್ಮ ಅತ್ಯತ್ತಮ ನಟನೆಯ ಮೂಲಕ ಕಥೆಗೆ ಜೀವ ತುಂಬಿಸುವ ಮೂಲಕ ಜನರ ಮನಸ್ಸನ್ನ ಗೆದ್ದಿದ್ದಾರೆ. ಹಾಗೆ ರಾಝಿ, ಗಲ್ಲಿ ಬಾಯ್‌, ಜೊತೆಗೆ ತಮ್ಮ ಇತ್ತೀಚಿನ ಸಿನಿಮಾ ಆದ ಗಂಗುಬಾಯ್‌ ಕಾತ್ಯವಾಡಿ ಸಿನಿಮಾದ ಮೂಲಕ ಮತ್ತಷ್ಟು ಪ್ರಖ್ಯತಿಯನ್ನ ಇವರು ಗಳಿಸಿದ್ದಾರೆ.

6. ಕರೀನಾ ಕಪೂರ್ ಖಾನ್

ಬಾಲಿವುಡ್‌ನ ಸಿನಿರಂಗವನ್ನ ಹಲವು ವರ್ಷಗಳಿಂದ ರಾರಾಜಿಸುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‌ ಖಾನ್‌ ಕೂಡ ಒಬ್ಬರು. ಇವರು ತಮ್ಮ ಒಂದು ಚಲನಚಿತ್ರಕ್ಕೆ 8 ಕೋಟಿಗಳಿಂದ 18 ಕೋಟಿಗಳವರೆಗೆ ಸಂಭಾವನೆಯನ್ನ ಪಡೆಯುತ್ತಾರೆ. ಜಬ್‌ ವಿ ಮೆಟ್‌, ತ್ರೀ ಇಡಿಯೆಟ್ಸ್‌ನಂತಹ ಸಿನಿಮಾಗಳಲ್ಲಿ ತಮ್ಮ ಉತ್ತಮ ನಟನೆಗೆ ಇವರು ಹೆಸರುವಾಸಿಯಾಗಿದ್ದಾರೆ.

7. ಶ್ರದ್ಧಾ ಕಪೂರ್

ಆಶಿಕಿ 2, ABCD2 ಸಿನಿಮಾಗಳಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಜನರನ್ನ ರಂಜಿಸಿರುವ ಇವರು ತಮ್ಮ ಒಂದು ಸಿನಿಮಾಗೆ 7 ರಿಂದ ₹ 15 ಕೋಟಿ ಸಂಭಾವನೆಯನ್ನ ಪಡೆಯುತ್ತಾರೆ. ಈಗಂತು ಬಹುಬೇಡಿಕೆಯ ನಟಿಯಾಗಿರುವ ಶ್ರದ್ದಾ ತಮ್ಮ ಇತ್ತೀಚಿನ ಹಾರರ್‌ ಕಾಮಿಡಿ ಸಿನಿಮಾ ಸ್ತ್ರೀ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿದ್ದಾರೆ. ಇನ್ನು ತಮ್ಮ ವಿಭಿನ್ನ ನಟನೆಯ ಮೂಲಕ ಯುವಕರ ಮನಸ್ಸು ಗೆದ್ದಿರುವ ಶ್ರದ್ದಾ ಬಾಲಿವುಡ್‌ನಲ್ಲಿ ಪ್ರಸಿದ್ದ ನಟಿಯರಲ್ಲಿ ಒಬ್ಬರಾಗಿದ್ದಾರೆ.

8. ವಿದ್ಯಾ ಬಾಲನ್

ತಮ್ಮ ಅಭಿನಯದ ಮೂಲಕ ಹೆಸರುವಾಸಿಯಾಗಿರುವ ವಿದ್ಯಾ ಬಾಲನ್ ಅವರು ತಮ್ಮ ಪ್ರತೀ ಸಿನಿಮಾಗೆ 8 ರಿಂದ 14 ಕೋಟಿ ರೂ. ಸಮಭಾವನೆಯನ್ನ ಪಡೆಯುತ್ತಾರೆ. ಬಾಲಿವುಡ್‌ನಲ್ಲಿ ವಿಬಿನ್ನ ಪಾತ್ರಗಳನ್ನ ಮಾಡುವ ಮೂಲಕ ಜನರ ಮನಸ್ಸನ್ನ ಗೆದ್ದಿದ್ದಾರೆ. ಕಹಾನಿ, ದಿ ಡರ್ಟಿ ಪಿಕ್ಚರ್‌ ಸಿನಿಮಾಗಳ ಮೂಲಕ ಪ್ರಖ್ಯತಿ ಹೊಂದಿರುವ ಇವರು ಸಾಕಷ್ಟು ಅಭಿಮಾನಿಗಳನ್ನ ಕೂಡ ಹೊಂದಿದ್ದಾರೆ.

9. ಅನುಷ್ಕಾ ಶರ್ಮಾ

ರಬ್‌ನೇ ಬನಾ ದಿ ಜೋಡಿ ಖ್ಯತಿಯ ಅನುಷ್ಕಾ ಶರ್ಮಾ ಅವರು ತಮ್ಮ ಪ್ರತಿ ಸಿನಿಮಾಗೆ 8 ಕೋಟಿಗಳಿಂದ 12 ಕೋಟಿಗಳವರೆಗೆ ಸಂಭಾವನರಯನ್ನ ಪಡೆಯುತ್ತಾರೆ. ಬಾಲಿವುಡ್‌ನ ದಿಗ್ಗಜರ ಜೊತೆ ಪರದೆಯನ್ನ ಹಂಚಿಕೊಳ್ಳೂವುದಲ್ಲದೆ ತಮ್ಮ ಉತ್ತಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ಆನ್‌ ಸ್ಕ್ರೀನ್‌ ಹಾಗು ಆಫ್‌ ಸ್ಕ್ರೀನ್‌ನಲ್ಲೂ ಇವರು ಸಾಕಷ್ಟು ಪ್ರಸಿದ್ಧಿಯನ್ನ ಹೊಂದಿದ್ದಾರೆ. ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಇವರು ಕೂಡ ಒಬ್ಬರು.

10. ಐಶ್ವರ್ಯಾ ರೈ ಬಚ್ಚನ್

ಬಾಲಿವುಡ್‌ಅನ್ನು ಆಳುತ್ತಿರುವ ನಟಿಯರಲ್ಲಿ ವಿಶ್ವ ಸುಂದರಿ ಪಟ್ಟವನ್ನ ಗಿಟ್ಟಿಸಿಕೊಂಡಿರುವ ಐಶ್ವರ್ಯಾ ರೈ ಬಚ್ಚನ್ ಅವರು ಕೂಡ ಒಬ್ಬರು. ಇವರು ತಮ್ಮ ಪ್ರತೀ ಸಿನಿಮಾಗೆ 10 ಕೋಟಿ ರೂಗಳನ್ನ ಪಡೆಯುತ್ತಾರೆ. ದೇವ್‌ದಾಸ್‌ ಸಿನಿಮಾದಲ್ಲಿ ಪಾರು ಆಗಿ ಎಲ್ಲರ ಹೃದಯ ಕದ್ದ ಇವರು ತಮ್ಮ ಸೌಂದರ್ಯ ಹಾಗು ಉತ್ತಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇಯಾದ ನಟನೆಯ ಮೂಲಕ ಬಾಲಿವುಡ್‌ನ ಪ್ರಖ್ಯಾತ ನಟಿ ಇವರಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+