ಜಗತ್ತಿನ ಪ್ರಮುಖ ಸಂಸ್ಥೆಗಳಲ್ಲಿ ಬ್ಯಾಂಕಿಂಗ್ ಕೂಡ ಒಂದಾಗಿದೆ. ಜಗತ್ತು ಆರ್ಥಿಕ, ಸಾಮಾಜಿಕ ಸೇರಿದಂತೆ ವಿವಿಧ ರೀತಿಯಲ್ಲಿ ಮುಂದುವರೆಯಬೇಕಾದರೆ ಹಣಕಾಸಿನ ಸಂಸ್ಥೆಗಳ ಪಾತ್ರ ಹಿರಿದಾಗಿದೆ. ಜಗತ್ತಿನ ಬಹುತೇಕ ಎಲ್ಲಾ ದೇಶಗಳಲ್ಲಿ ಹಣಕಾಸಿನ ಸೇರಿದಂತೆ ಬ್ಯಾಂಕಿಂಗ್ ವಲಯಗಳು ಕಾರ್ಯನಿರ್ವಹಿಸುತ್ತದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಕೆಲವೊಂದು ಬ್ಯಾಂಕ್‌ಗಳು ಜಗತ್ತಿನಲ್ಲೇ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹಲವಾರು ಹಣಕಾಸು ಸಂಸ್ಥೆಗಳು ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳಷ್ಟು ಆಸ್ತಿಯನ್ನು ಹೊಂದಿವೆ. ಅವುಗಳ ಕಾರ್ಯಾಚರಣೆಗಳು, ಹಣಕಾಸಿನ ಕಾರ್ಯಕ್ಷಮತೆ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಒಟ್ಟಾರೆ ಪ್ರಭಾವದ ಸಮಗ್ರ ವಿಶ್ಲೇಷಣೆಯನ್ನು ಒದಗಿಸುತ್ತೇವೆ. ಅಂಥ ಬ್ಯಾಂಕ್‌ಗಳ ಬಗ್ಗೆ ತಿಳಿದುಕೊಳ್ಳೋಣ.
ಬ್ಯಾಂಕ್-ಹಿಡುವಳಿ ಕಂಪೆನಿಗಳ ಪ್ರಾಬಲ್ಯ
ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಂಕ್-ಹಿಡುವಳಿ ಕಂಪನಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ನಿಗಮಗಳು ಒಂದು ಅಥವಾ ಹೆಚ್ಚಿನ ಬ್ಯಾಂಕುಗಳನ್ನು ನಿಯಂತ್ರಿಸುತ್ತವೆ. ಆದರೆ ಬ್ಯಾಂಕಿಂಗ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿಲ್ಲ. ಒಂದು ವಿಭಾಗದಡಿ ವೈವಿಧ್ಯಮಯ ಶ್ರೇಣಿಯ ಹಣಕಾಸು ಸೇವೆಗಳಿಗೆ ಅವಕಾಶ ನೀಡುವ ಮೂಲಕ ಅವರು ಕಾರ್ಯತಂತ್ರದ ಪ್ರಯೋಜನವನ್ನು ಒದಗಿಸುತ್ತದೆ. ಹೀಗಾಗಿ ಅವರು ಹೊಂದಿರುವ ಬ್ಯಾಂಕುಗಳ ಒಟ್ಟಾರೆ ಸ್ಥಿರತೆಯನ್ನು ಹೆಚ್ಚಿಸುತ್ತದೆ.

ವಿಶ್ವದ ಟಾಪ್ ಟೆನ್ ಬ್ಯಾಂಕ್‌ಗಳು
1. ಜೆಪಿ ಮೋರ್ಗಾನ್ ಚೇಸ್
JP ಮೋರ್ಗಾನ್ ಚೇಸ್ ಅಮೆರಿಕಾ ಮೂಲದ ಅತಿದೊಡ್ಡ ಬ್ಯಾಂಕ್ ಮತ್ತು ಒಟ್ಟು ಆಸ್ತಿಗಳ ವಿಷಯದಲ್ಲಿ ವಿಶ್ವದ ಐದನೇ-ಅತಿದೊಡ್ಡ ಬ್ಯಾಂಕ್ ಆಗಿದೆ. ಇದು ಹೂಡಿಕೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಪ್ರಮುಖ ಹಣಕಾಸಿನ ಸಂಸ್ಥೆಯಾಗಿದೆ. ಜೆಪಿ ಮೋರ್ಗಾನ್ ಈಗಾಗಲೇ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನು ಬ್ಯಾಂಕ್ ಒಟ್ಟು 4.210 ಟ್ರಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿ, ವಿಶ್ವದಲ್ಲೇ ಪ್ರಮುಖ ಸ್ಥಾನದಲ್ಲಿದೆ.
2. ಬ್ಯಾಂಕ್ ಆಫ್ ಅಮೆರಿಕಾ
ಬ್ಯಾಂಕ್ ಆಫ್ ಅಮೇರಿಕಾ 68 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ಮತ್ತು 3 ಮಿಲಿಯನ್ ಸಣ್ಣ ವ್ಯಾಪಾರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಈ ಬ್ಯಾಂಕ್‌ನ ಒಟ್ಟು ಆಸ್ತಿ 3.324 ಟ್ರಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದೆ. ಸುಮಾರು 288.96 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳದೊಂದಿಗೆ ಬ್ಯಾಂಕ್ ಆಫ್ ಅಮೆರಿಕಾ ವಿಶ್ವದ ಎರಡನೇ ಅತಿದೊಡ್ಡ ಬ್ಯಾಂಕ್ ಮತ್ತು ವಿಶ್ವದ ಆರನೇ ಅತಿದೊಡ್ಡ ಬ್ಯಾಂಕ್ ಆಗಿದೆ.
3. ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ (ICBC)
ಹೆಸರೇ ಸೂಚಿಸುವಂತೆ ಇದೊಂದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಬ್ಯಾಂಕ್ ಆಗಿದ್ದು, ಒಟ್ಟು ಆಸ್ತಿ ವಿಚಾರವನ್ನು ಪರಿಗಣಿಸುವುದಾದರೆ ವಿಶ್ವದ ಅತೀ ದೊಡ್ಡ ಬ್ಯಾಂಕ್ ಎಂಬ ಹೆಗ್ಗಲಿಕೆಗೆ ಪಾತ್ರವಾಗಿದೆ. ಬ್ಯಾಂಕ್ ಸುಮಾರು 6.898 ಟ್ರಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ.
4. ವೆಲ್ಸ್ ಫಾರ್ಗೋ
ಅಮೇರಿಕನ್ ಮೂಲದ ವೆಲ್ಸ್ ಫಾರ್ಗೋ ಮತ್ತು ಕಂಪನಿಯು ಸುಮಾರು 35 ದೇಶಗಳಲ್ಲಿ ಅಡಮಾನ ಬ್ಯಾಂಕಿಂಗ್, ಸಲಕರಣೆಗಳ ಗುತ್ತಿಗೆ, ವಿಮಾ ಏಜೆನ್ಸಿ ಮತ್ತು ಹೆಚ್ಚಿನವುಗಳಂತಹ ಹಣಕಾಸು ಸೇವೆಗಳನ್ನು ನೀಡುತ್ತದೆ. ವೆಲ್ಸ್ ಫಾರ್ಗೋ 70 ದಶಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಅಗ್ರ ಐದು ಬ್ಯಾಂಕ್‌ಗಳಲ್ಲಿ ಒಂದಾಗಿದೆ.ಈ ಬ್ಯಾಂಕ್ ಸುಮಾರು 1.922 ಟ್ರಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿದೆ.
5. ಅಗ್ರಿಕಲ್ಚರ್ ಬ್ಯಾಂಕ್ ಆಫ್ ಚೀನಾ
1979 ರಲ್ಲಿ ಸ್ಥಾಪನೆಯಾಗಿದ್ದ ಅಗ್ರಿಕಲ್ಚರ್ ಬ್ಯಾಂಕ್ ಆಫ್ ಚೀನಾ, ಒಟ್ಟು ಆಸ್ತಿಯ ದೃಷ್ಟಿಯಿಂದ ವಿಶ್ವದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿದೆ. ಇತ್ತೀಚಿನ ಹಣಕಾಸು ವರದಿಗಳ ಪ್ರಕಾರ ಕಂಪನಿಯ ಪ್ರಸ್ತುತ ಗಳಿಕೆಯು 43.41 ಶತಕೋಟಿ ಡಾಲರ್ ಎಂದು ಹೇಳಲಾಗಿದೆ. ಈ ಬ್ಯಾಂಕ್ ಸುಮಾರು 6.212 ಟ್ರಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದೆ. ಚೀನಾದ ಕೃಷಿ ಕ್ಷೇತ್ರದ ಬೆನ್ನೆಲುಬಾಗಿ ಈ ಬ್ಯಾಂಕ್ ನಿಲ್ಲುತ್ತದೆ. ಏಷ್ಯಾ ಪೆಸಿಫಿಕ್, ಮಧ್ಯಪ್ರಾಚ್ಯ, ಯುರೋಪ್ ಮತ್ತು ಅಮೆರಿಕ ಸೇರಿದಂತೆ ಜಗತ್ತಿನ ಇತರ ಭಾಗಗಳಲ್ಲಿಯೂ ಈ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ.
6. ಮೋರ್ಗನ್ ಸ್ಟಾನ್ಲಿ
ಇದು ಅಮೆರಿಕಾ ಮೂಲದಾಗಿದ್ದು, ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಇತ್ತೀಚಿಗಷ್ಟೇ ಮೋರ್ಗನ್ ಸ್ಟಾನ್ಲಿ ಹಾಗೂ ಜಪಾನ್‌ನ ಮಿತ್ಸುಬಿಷಿ UFJ ಫೈನಾನ್ಶಿಯಲ್ ಸಂಸ್ಥೆಗಳು ತಮ್ಮ 15 ವರ್ಷಗಳ ಮೈತ್ರಿಯನ್ನು ಮುಂದುವರಿಸಲು ಮತ್ತು ವಿದೇಶಿ ವಿನಿಮಯ ವ್ಯಾಪಾರ ಮತ್ತು ಜಪಾನೀಸ್ ಸಂಶೋಧನೆ ಮತ್ತು ಜಾಗತಿಕ ಗ್ರಾಹಕರ ನೆಲೆಗಾಗಿ ಇಕ್ವಿಟಿ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಈ ಬ್ಯಾಂಕ್ ಸುಮಾರು 1.258 ಟ್ರಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದೆ.
7. ಚೀನಾ ಕನ್‌ಸ್ಟ್ರಕ್ಷನ್ ಬ್ಯಾಂಕ್ (CCB)
CCB ಒಟ್ಟು ಆಸ್ತಿಯ ವಿಷಯದಲ್ಲಿ ಜಾಗತಿಕವಾಗಿ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿದ್ದು,ಇದು ಚೀನಾದ ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳ ಮೇಲೆ ಹೆಚ್ಚಿನ ಪ್ರಭಾವ ಹೊಂದಿದೆ. ಅಲ್ಲದೆ ಚೀನಾದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇದು ಒಂದಾಗಿದೆ. 3.48 ಮಿಲಿಯನ್ ಕಾರ್ಪೊರೇಟ್ ಗ್ರಾಹಕರನ್ನು ಹೊಂದಿರುವ ಚೈನೀಸ್ ಕನ್‌ಸ್ಟ್ರಕ್ಷನ್ ಬ್ಯಾಂಕ್ ICBCಯ ನಂತರ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿದೆ. CCB ಯ ವಿವಿಧ ಅಂಗಸಂಸ್ಥೆಗಳು, ಸಾಫ್ಟ್‌ವೇರ್, ಶಕ್ತಿ, ಚಿಲ್ಲರೆ ವ್ಯಾಪಾರ ಮತ್ತು ಇನ್ನೂ ಹೆಚ್ಚಿನವುಗಳನ್ನು ಸೇರಿ ವಿವಿಧ ಕೈಗಾರಿಕೆಗಳನ್ನು ಸಹ ಒಳಗೊಂಡಿದೆ.
8. ಗೋಲ್ಡ್ಮನ್ ಸ್ಯಾಚ್ಸ್
1869 ರಲ್ಲಿ ಸ್ಥಾಪಿತವಾದ ಗೋಲ್ಡ್‌ಮನ್ ಸ್ಯಾಚ್ಸ್ ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕಿಂಗ್, ಸೆಕ್ಯುರಿಟೀಸ್ ಮತ್ತು ಹೂಡಿಕೆ ನಿರ್ವಹಣಾ ಸಂಸ್ಥೆಯಾಗಿದ್ದು, ನ್ಯೂಯಾರ್ಕ್ ನಗರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ಹೂಡಿಕೆ ಬ್ಯಾಂಕಿಂಗ್, ಆಸ್ತಿ ನಿರ್ವಹಣೆ, ಭದ್ರತೆಗಳು ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಈ ಬ್ಯಾಂಕ್ ಸುಮಾರು 1.728 ಟ್ರಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದೆ.
9. ಬ್ಯಾಂಕ್ ಆಫ್ ಚೀನಾ
ಬ್ಯಾಂಕ್ ಆಫ್ ಚೀನಾ ಜಾಗತಿಕವಾಗಿ ಒಟ್ಟು ಆಸ್ತಿಯಲ್ಲಿ ನಾಲ್ಕನೇ ದೊಡ್ಡ ಬ್ಯಾಂಕ್ ಆಗಿದೆ. ಇದು ಚೀನಾದ ಅತ್ಯಂತ ಹಳೆಯ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಅದೂ ಅಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಈ ಬ್ಯಾಂಕ್ ಶಾಖೆಗಳನ್ನು ಹೊಂದಿದೆ. ಕರೆನ್ಸಿಯ ಮೌಲ್ಯದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಬ್ಯಾಂಕ್ ಆಫ್ ಚೀನಾದ ಗುರಿಗಳಲ್ಲಿ ಒಂದಾಗಿದೆ. ಈ ಬ್ಯಾಂಕ್ ಸುಮಾರು 4.859 ಟ್ರಿಲಿಯನ್ ಡಾಲರ್‌ನ ಆಸ್ತಿಯನ್ನು ಹೊಂದಿದೆ.
10. ರಾಯಲ್ ಬ್ಯಾಂಕ್ ಆಫ್ ಕೆನಡಾ
ರಾಯಲ್ ಬ್ಯಾಂಕ್ ಆಫ್ ಕೆನಡಾವು ಮಾರುಕಟ್ಟೆ ಬಂಡವಾಳೀಕರಣದ ದೃಷ್ಟಿಯಿಂದ ಕೆನಡಾದ ಅತಿದೊಡ್ಡ ಬ್ಯಾಂಕ್ ಆಗಿದ್ದು, ಟೊರಾನಾಟೊದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಬ್ಯಾಂಕ್ ಸುಮಾರು ಇದು 27 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಪ್ರಪಂಚದಾದ್ಯಂತ ಸುಮಾರು 17 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಬ್ಯಾಂಕ್ ವೈಯಕ್ತಿಕ ವಾಣಿಜ್ಯ ಬ್ಯಾಂಕಿಂಗ್‌ನಿಂದ ಸಂಪತ್ತು ನಿರ್ವಹಣೆ ಮತ್ತು ವಿಮಾ ಹೂಡಿಕೆದಾರರ ಸೇವೆಗಳವರೆಗೆ ಸೇವೆಗಳನ್ನು ನೀಡುತ್ತದೆ. ಈ ಬ್ಯಾಂಕ್ ಸುಮಾರು 1.499 ಟ್ರಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದೆ.


Click it and Unblock the Notifications