2024ನೇ ವರ್ಷ ಇನ್ನೇನು ಕೆಲ ವಾರದಲೇ ಮುಗಿಯಲಿದ್ದು, ನಾವೆಲ್ಲರೂ ವರ್ಷದ ಹಿನ್ನೋಟವನ್ನು ಒಮ್ಮೆ ಮೆಲುಕು ಹಾಕುವ ಹೊತ್ತು ಇದಾಗಿದೆ. ನಾವು ಕೇವಲ ಕ್ರಿಕೆಟ್ ಕ್ಷೇತ್ರವನ್ನು ಮಾತ್ರ ನೋಡುವುದಾದರೆ ಈ ವರ್ಷದ ಭಾರತೀಯ ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಆಟಗಾರರ ಪಟ್ಟಿ ಬಹಿರಂಗವಾಗಿದೆ. ಅವುಗಳ ವಿವರವನ್ನು ಮುಂದೆ ನೋಡೋಣ.
ಭಾರತದಲ್ಲಿ ಕ್ರಿಕೆಟ್‌ನ ಬೆಳೆಯುತ್ತಿರುವ ಜನಪ್ರಿಯತೆ ಮತ್ತು ಅದರೊಂದಿಗೆ ಬೆಳೆಯುತ್ತಿರುವ ವಾಣಿಜ್ಯೀಕರಣದ ಪರಿಣಾಮವಾಗಿ, ಈ ಆಟಗಾರರು ಅಗಾಧ ಸಂಪತ್ತನ್ನು ಗಳಿಸುತ್ತಿದ್ದಾರೆ. ಇಂದು ಕ್ರಿಕೆಟ್ ಕೇವಲ ಒಂದು ಆಟವಲ್ಲ, ಇದು ಲಕ್ಷಾಂತರ ಜನರಿಗೆ ಬದುಕು ನೀಡುವ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಭಾರತದ ಕ್ರಿಕೆಟಿಗರು ತಮ್ಮ ಪ್ರತಿಭೆಯಿಂದ ಮಾತ್ರವಲ್ಲದೆ, ಬ್ರಾಂಡ್ ಅಂಬಾಸಿಡರ್‌ಗಳು, ವ್ಯಾಪಾರೋದ್ಯಮಿಗಳು ಮತ್ತು ಹೂಡಿಕೆದಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ಪ್ರತಿಭೆ, ಕೌಶಲ್ಯ ಮತ್ತು ಮಾರುಕಟ್ಟೆ ಮೌಲ್ಯದ ಸಂಯೋಜನೆಯು ಈ ಆಟಗಾರರನ್ನು ಕ್ರಿಕೆಟ್ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳನ್ನಾಗಿಸಿದೆ. ಜೊತೆಗೆ ತಾವು ಬೆಳೆಸಿಕೊಂಡಿರುವ ಬ್ರಾಂಡ್ ವ್ಯಾಲ್ಯೂ ಮೂಲಕ, ಜಾಹಿರಾತುಗಳು ಕಾಣಿಸಿಕೊಳ್ಳುತ್ತಾ ಅಪಾರ ಹಣ ಗಳಿಸುತ್ತಿದ್ದಾರೆ.

2024ನೇ ವರ್ಷ ಶ್ರೀಮಂತ ಭಾರತೀಯ ಕ್ರಿಕೆಟಿಗರ ಲಿಸ್ಟ್ ನ್ನು ನೋಡುವಾಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಅಪಾರ ಸಂಪತ್ತು ಪಂದ್ಯಗಳಿಂದ ಬರುವ ಆದಾಯ, ವಿವಿಧ ಕಂಪನಿಗಳ ಜಾಹೀರಾತುಗಳಿಂದ ಬರುವ ಆದಾಯ ಮತ್ತು ಅವರ ಸ್ವಂತ ವ್ಯಾಪಾರ ಉದ್ಯಮಗಳಿಂದ ಬರುವ ಆದಾಯದ ಸಂಯೋಜನೆಯಾಗಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವಿವಿಧ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕೊಹ್ಲಿ ಅವರು ಬಹಳ ಜನಪ್ರಿಯರಾಗಿದ್ದಾರೆ.
ಭಾರತೀಯ ಕ್ರಿಕೆಟ್‌ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಹೇಂದ್ರ ಸಿಂಗ್ ಧೋನಿ ಅವರು ಆರ್ಥಿಕವಾಗಿಯೂ ಯಶಸ್ವಿ ವ್ಯಕ್ತಿಯಾಗಿದ್ದಾರೆ. ಅವರ ಶಾಂತ ಸ್ವಭಾವ ,ನಾಯಕತ್ವದ ಗುಣಗಳು ಮತ್ತು ಜನಪ್ರಿಯತೆಯಿಂದಾಗಿ ಅನೇಕ ಜನರ ಪ್ರೀತಿಯನ್ನು ಅಭಿಮಾನವನ್ನು ಸಂಪಾದಿಸಿಕೊಂಡಿದ್ದಾರೆ. ಅವರಿಗಿರುವ ಅಪಾರ ಜನಪ್ರಿಯತೆಯಿಂದಾಗಿ ಅವರು ಅನೇಕ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಜಾಹೀರಾತು ಒಪ್ಪಂದಗಳು ಅವರ ಒಟ್ಟಾರೆ ಸಂಪತ್ತಿಗೆ ಗಣನೀಯ ಕೊಡುಗೆ ನೀಡಿದ್ದು, ಈ ಮೂಲಕ ಅವರನ್ನು ಭಾರತದ ಎರಡನೇ ಶ್ರೀಮಂತ ಕ್ರಿಕೆಟಿಗರನ್ನಾಗಿ ಮಾಡಿವೆ.
"ಕ್ರಿಕೆಟ್ ದೇವರು" ಎಂದು ಕರೆಯಲ್ಪಡುವ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ನಿವೃತ್ತಿಯ ನಂತರವೂ ಸಂಪತ್ತನ್ನು ಹೆಚ್ಚಾಗುತ್ತಲೇ ಇದೆ. ಅವರು ಸಂಪಾದಿಸಿರುವ ಅಭಿಮಾನಿಗಳ ಬಳಗ ಹಾಗೂ ಅವರಿಗಿರುವ ಬ್ರ್ಯಾಂಡ್ ವಾಲ್ಯೂ ನಿಂದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಅವರ ಸ್ಥಾನವನ್ನು ಟಾಪ್ ನಲ್ಲಿಯೇ ಇರುವಂತೆ ಮಾಡಿದೆ. ತೆಂಡೂಲ್ಕರ್ ಅವರು ಮಾಡಿದ ಹೂಡಿಕೆಗಳು ಕೂಡಾ ನಿವ್ವಳ ಮೌಲ್ಯಕ್ಕೆ ಕೊಡುಗೆ ನೀಡುತ್ತವೆ. ಅಲ್ಲದೇ ಅದು ಕ್ರಿಕೆಟ್ ಐಕಾನ್ ಆಗಿ ಅವರ ಸ್ಥಾನಮಾನವನ್ನು ಭದ್ರಪಡಿಸುತ್ತದೆ.
ಇವರ ನಂತರ ಸ್ಥಾನದಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇದ್ದು, ಇವರು ತಮ್ಮ ಅತ್ಯುತ್ತಮ ಆಟದ ಮೂಲಕ ಮಾತ್ರವಲ್ಲದೆ, ಬ್ರಾಂಡ್ ಅಂಬಾಸಿಡರ್‌ಗಳಾಗಿ ಮತ್ತು ಉದ್ಯಮಿಗಳಾಗಿ ಕೂಡ ಯಶಸ್ವಿಯಾಗಿದ್ದಾರೆ. ಇದು ಅವರಿಗೆ ಕ್ರೀಡಾ ಜಗತ್ತಿನಲ್ಲಿ ಮಾತ್ರವಲ್ಲದೆ ವ್ಯಾಪಾರ ಜಗತ್ತಿನಲ್ಲಿಯೂ ಪ್ರಭಾವಿ ವ್ಯಕ್ತಿಗಳಾಗುವಂತೆ ಮಾಡಿದೆ.
ದಾದಾ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸಿರಿವಂತ ಕ್ರಿಕೆಟಿಗರಾಗಿದ್ದಾರೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸ್ಪರ್ಧಾತ್ಮಕ ಶಕ್ತಿಯಾಗಿ ಪರಿವರ್ತಿಸುವಲ್ಲಿ ಗಂಗೂಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು 2008 ರಲ್ಲಿ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತರಾಗಿದ್ದರೂ ,ನಿರ್ವಾಹಕರಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್‌ರಂತಹ ಯುವ ಪ್ರತಿಭೆಗಳು ಸೇರ್ಪಡೆಯಾಗಿರುವುದು ಭಾರತೀಯ ಕ್ರಿಕೆಟ್‌ನಲ್ಲಿ ಅವರ ಬೆಳವಣಿಗೆಯನ್ನು ಮತ್ತು ಅದರೊಂದಿಗೆ ಬರುವ ಆರ್ಥಿಕ ಲಾಭವನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಅವರ ವೈಯಕ್ತಿಕ ಸಾಧನೆಗಳನ್ನು ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಪೀಳಿಗೆಯ ಆಟಗಾರರಿಗೆ ತೆರೆದುಕೊಳ್ಳುತ್ತಿರುವ ಅಪಾರ ಅವಕಾಶಗಳನ್ನು ಸೂಚಿಸುತ್ತದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ, ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಅನುಭವಿ ಆಟಗಾರರು ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಹಲವು ವರ್ಷಗಳ ಕಾಲ ಹಣ ಸಂಪಾದಿಸುತ್ತಿದ್ದಾರೆ. ಅವರ ಬ್ರ್ಯಾಂಡ್ ಮೌಲ್ಯ ಮತ್ತು ಸ್ಮಾರ್ಟ್ ಹೂಡಿಕೆಗಳಿಂದ ಅವರು ಭಾರತ ಅಗ್ರಗಣ್ಯ ಸಿರಿವಂತರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications