ಬೆಂಗಳೂರು ಮೆಟ್ರೋ ಸೇವೆ, ಜನರ ಅಗತ್ಯ ಸೌಕರ್ಯಗಳಲ್ಲಿ ಒಂದಾಗಿದೆ. ಈಗಾಗಲೇ ಸರ್ಕಾರ ಕೂಡಾ ಬೆಂಗಳೂರಿನಾದ್ಯಂತ ಮೆಟ್ರೋ ಸೇವೆಯನ್ನು ವಿಸ್ತರಿಸಲು ಪ್ಲಾನ್ ಮಾಡುತ್ತಿದೆ. ಕಳೆದ 2025 ರಲ್ಲಿ ಆರಂಭವಾದ ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಸ್ತುತ ಭಾರೀ ಬೇಡಿಕೆಯಲ್ಲಿದೆ. ಆರಂಭದಲ್ಲಿ ಕೇವಲ 5 ಮೆಟ್ರೋ ಕಾರ್ಯನಿರ್ವಹಿಸುತ್ತಿದ್ದ ಯೆಲ್ಲೋ ಲೈನ್‌ನಲ್ಲಿ, ಪ್ರಸ್ತುತ 7 ಮೆಟ್ರೋಗಳು ಸೇವೆ ಸಲ್ಲಿಸುತ್ತಿದೆ. ಇದೀಗ 8 ನೇ ರೈಲಿನ (New Metro Train) ಆಗಮನವಾಗಿದ್ದು, ಯಾವಾಗ ಆರಂಭವಾಗುತ್ತೆ ಎಂದು ಕಾದು ನೋಡಬೇಕಿದೆ.

ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಇದೀಗ ಮತ್ತೊಂದು ಹಂತಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು ಯೆಲ್ಲೋ ಲೈನ್ ಮಾರ್ಗಕ್ಕೆ, ಎಂಟನೇ ಚಾಲಕರಹಿತ ರೈಲು ಕೋಲ್ಕತ್ತಾದಿಂದ ಹೆಬ್ಬಗೋಡಿ ಡಿಪೋಗೆ ಆಗಮಿಸಿದೆ. ಇದು ಮೆಟ್ರೋ ಸೇವೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲಿದೆ.
ಬೆಂಗಳೂರಿಗೆ ಮತ್ತೊಂದು ಮೆಟ್ರೋ!
ಕೋಲ್ಕತ್ತಾದಿಂದ ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದ ಈ ರೈಲು, ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸುವ ಮುನ್ನ ತಾಂತ್ರಿಕ ಮತ್ತು ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಕಡ್ಡಾಯ ಪರಿಶೀಲನೆಗಳು ಯಶಸ್ವಿಯಾದ ನಂತರವೇ ರೈಲಿಗೆ ವಾಣಿಜ್ಯ ಕಾರ್ಯಾಚರಣೆಗೆ ಅನುಮತಿ ದೊರೆಯಲಿದೆ.
ಪ್ರಸ್ತುತ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಕೇವಲ 7 ಚಾಲಕರಹಿತ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಯೋಗಿಕವಾಗಿ ಪ್ರತೀ ಹತ್ತು ನಿಮಿಷಗಳ ಅಂತರದಲ್ಲಿ ಸಂಚರಿಸುವ ಈ ರೈಲುಗಳು, ಕಾರಿಡಾರ್‌ನಲ್ಲಿರುವ ಪ್ರಮುಖ ಕೈಗಾರಿಕಾ ಮತ್ತು ವಸತಿ ಪ್ರದೇಶಗಳಿಗೆ ಅವಶ್ಯಕ ಸಂಪರ್ಕವನ್ನು ನೀಡುತ್ತದೆ.
ಎಂಟನೇ ರೈಲಿನ ಆಗಮನವು ಕಾರ್ಯಾಚರಣೆಯ ಒತ್ತಡವನ್ನು ನಿವಾರಿಸುವುದರ ಜೊತೆಗೆ ಪ್ರಯಾಣಿಕರಿಗೂ ಉತ್ತಮ ಸೇವೆ ನೀಡಲಿದೆ. ಈ ನೂತನ ರೈಲು ಕಾರ್ಯಾಚರಣೆ ಆರಂಭಿಸಿದರೆ, ಹಳದಿ ಮಾರ್ಗದಲ್ಲಿನ ಸೇವೆಗಳ ಸಮಯದಲ್ಲಿ ಭಾರೀ ಇಳಿಕೆಯಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ 10-12 ನಿಮಿಷ ಪ್ರಯಾಣಿಕರು ಕಾಯಬೇಕು. ಒಂದು ವೇಳೆ 8 ನೇ ರೈಲು ಸೇರಿದರೆ, 8 ರಿಂದ 10 ನಿಮಿಷಕ್ಕೆ ಇಳಿಯಲಿದೆ.
ಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದ ಯೋಜನೆಯಡಿ, ಒಟ್ಟು 16 ಚಾಲಕರಹಿತ ಮೆಟ್ರೋ ರೈಲುಗಳು ಸಂಚರಿಸಲಿದೆ ಎಂದು ಹೇಳಲಾಗಿದೆ. ಈಗ ಎಂಟು ರೈಲುಗಳು ಬೆಂಗಳೂರಿಗೆ ತಲುಪುವುದರೊಂದಿಗೆ, ಯೆಲ್ಲೋ ಲೈನ್ ಮೆಟ್ರೋ ಮಹತ್ತರ ಹೆಜ್ಜೆಯನ್ನಿಟ್ಟಿದೆ. ಹೆಚ್ಚು ರೈಲುಗಳು ಕಾರ್ಯಾಚರಣೆಗೆ ಸೇರಿದಂತೆ ಪ್ರಯಾಣಿಕರ ಕಾಯುವ ಸಮಯ ಹಂತ ಹಂತವಾಗಿ ಕಡಿಮೆಯಾಗಲಿದೆ. ಆದ್ದರಿಂದ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಗ್ರೀನ್ ಲೈನ್, ಪರ್ಪಲ್ ಲೈನ್, ಯೆಲ್ಲೋ ಲೈನ್ ಮೆಟ್ರೋಗಳು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಬ್ಲೂ ಮತ್ತು ಆರೆಂಜ್ ಲೈನ್ ಮೆಟ್ರೋಗಳು ಸ್ಥಾಪಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿದೆ. ಒಂದು ವೇಳೆ ಈ ಲೈನ್‌ಗಳು ಬೆಂಗಳೂರಿನಲ್ಲಿ ನಿರ್ಮಾಣವಾದ್ರೆ, ಬಹುತೇಕ ಸಿಲಿಕಾನ್ ಸಿಟಿ ಬೆಂಗಳೂರಿನಾದ್ಯಂತ ನಮ್ಮ ಮೆಟ್ರೋ


Click it and Unblock the Notifications