ಪ್ರಸ್ತುತ ಬೆಂಗಳೂರಿನ (Bengaluru) ಬಹುಮುಖ್ಯ ಸಾರಿಗೆ ಸೇವೆಗಳಲ್ಲಿ ನಮ್ಮ ಮೆಟ್ರೋ ಕೂಡಾ ಒಂದು. ಪ್ರಯಾಣಿಕರ ಅನುಕೂಲದ ದೃಷ್ಟಿಯಿದೆ, ದಿನ ಹೋದಂತೆ ಬೇಡಿಕೆ ಕೂಡಾ ಹೆಚ್ಚಾಗುತ್ತಿರುವುದರಿಂದ ನಮ್ಮ ಮೆಟ್ರೋ ಸೇವೆಯನ್ನು ಬೆಂಗಳೂರಿನಾದ್ಯಂತ ವಿಸ್ತರಿಸಲು ಬಿಎಂಆರ್‌ಸಿಎಲ್ (BMRCL) ಸಜ್ಜಾಗಿದೆ. ಈಗಾಗಲೇ ಗ್ರೀನ್, ಪರ್ಪಲ್, ಯೆಲ್ಲೋ ಲೈನ್‌ಗಳು ವಾಣಿಜ್ಯ ಸೇವೆ ನಡೆಸುತ್ತಿದೆ. ಇನ್ನೇನು ಈ ವರ್ಷಾಂತ್ಯದ ಒಳಗೆ ಮತ್ತೊಂದು ಹೊಸ ಲೈನ್ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಇದೀಗ ಕೆಲ ತಿಂಗಳ ಹಿಂದಷ್ಟೇ ಆರಂಭವಾಗಿದ್ದ ಯೆಲ್ಲೋ ಮೆಟ್ರೋ ಮಾರ್ಗ (Yellow Metro Line), ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅದೇನೆಂದು ತಿಳಿಯುವ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ.

ಹೌದು, ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ ಸಂಕ್ರಾಂತಿ ದಿನ ಅಂದರೆ ಇಂದಿನಿಂದ ಮತ್ತೊಂದು ರೈಲಿನ ಆಗಮನವಾಗಲಿದೆ. ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರ ಸಂಪರ್ಕಿಸುವ ಈ ಮಾರ್ಗದಲ್ಲಿ ಈ ಹಿಂದೆ 6 ರೈಲುಗಳು ಸಂಚರಿಸುತ್ತಿತ್ತು. ಆದ್ರೆ ಇನ್ಮುಂದೆ 7 ರೈಲುಗಳು ಸಂಚಾರ ಮಾಡಲಿದೆ. 7ನೇ ರೈಲು ಇಂದು ಸೇರ್ಪಡೆಯಾಗಿದ್ದು, ಇದರಿಂದ ಪ್ರಯಾಣಿಕರು ಕಾಯುವ ಸಮಯ ಮತ್ತಷ್ಟು ಇಳಿಕೆಯಾಗಲಿದೆ.
ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ 7ನೇ ಮೆಟ್ರೋ ರೈಲು ಸೇವೆ ಸಂಚಾರ ಆರಂಭಸಲಿದೆ. ಬೆಳಗ್ಗೆ 6 ಗಂಟೆಯಿಂದ ಯೆಲ್ಲೋ ಮಾರ್ಗದಲ್ಲಿ ಮತ್ತೊಂದು ಹೊಸ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಇದರಿಂದ ರೈಲುಗಳ ಸಂಚಾರದ ನಡುವಿನ ಅಂತರ ಕೂಡಾ ಕಡಿಮೆಯಾಗಲಿದೆ. ಈ ಹಿಂದೆ ಯೆಲ್ಲೋ ಲೈನ್‌ನಲ್ಲಿ ಪ್ರತೀ ರೈಲಿಗಾಗಿ 13 ನಿಮಿಷ ಕಾಯಬೇಗಿತ್ತು. ಆದ್ರೆ ಇದೀಗ 7 ರೈಲಿನ ಆಗಮನದೊಂದಿಗೆ ಸೋಮವಾರದಿಂದ ಶನಿವಾರದವರೆಗೆ ಪ್ರತೀ 10 ನಿಮಿಷಕ್ಕೋಂದು ರೈಲು ಸಂಚಾರ ನಡೆಸಲಿದೆ. ಇನ್ನು ಈ ಬಗ್ಗೆ ಬಿಎಂಆರ್‌ಸಿಎಲ್ ಸ್ವತಃ ತಿಳಿಸಿದೆ.
ಭಾನುವಾರವೂ ಶುಭ ದಿನ
ಉಳಿದ ದಿನಗಳಲ್ಲಿ ಕಡಿಮೆಯಾದ್ರೆ ಭಾನುವಾರ ಮಾತ್ರ ಪ್ರತೀ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸುತ್ತಿತ್ತು. ಆದ್ರೆ ಇದೀಗ ಹೊಸ ರೈಲಿನ ಆಗಮನವಾಗಿದೆ. ಆದ್ದರಿಂದ ಭಾನುವಾರ ಇನ್ಮುಂದೆ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚಾರ ಮಾಡಲಿದೆ. ಆದರೆ ಮೊದಲ ಹಾಗೀ ಕೊನೆಯ ಮೆಟ್ರೋ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬೆಂಗಳೂರು ಮೆಟ್ರೋದ ಯೆಲ್ಲೋ ಲೈನ್ ಸೇವೆ ನಮ್ಮ ಮೆಟ್ರೋದ 2ನೇ ಹಂತದ ಅತ್ಯಂತ ಮಹತ್ವದ ಮಾರ್ಗವಾಗಿದೆ. ಬೆಂಗಳೂರಿನ ದಕ್ಷಿಣ ಭಾಗದ ಜನಸಾಂದ್ರತೆಯನ್ನು ಹೊಂದಿರುವ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಲೈನ್ ಇದಾಗಿದೆ. ಇದು ಆರ್‌ವಿ ರೋಡ್‌ಜಿಂದ ಬೊಮ್ಮಸಂದ್ರವರೆಗೆ ಸುಮಾರು 19.15 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗವನ್ನು ಹೊಂದಿದೆ. ಅದರಲ್ಲಿ ಒಟ್ಟು 16 ನಿಲ್ದಾಣಗಳಿದ್ದು, ಜಯನಗರ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಟ್, ಎಚ್‌ಎಸ್‌ಆರ್ ಲೇಔಟ್, ಕೂಡ್ಲುಗೇಟ್, ಬೊಮ್ಮಸಂದ್ರದಂತಹ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ. ಅಲ್ಲದೇ ಹೊಸೂರು ರಸ್ತೆಯಂತಹ ಟ್ರಾಫಿಕ್ ಜಾಮ್‌ಗೆ ದೊಡ್ಡ ಪರಿಹಾರವಾಗಿ ಇದು ಬದಲಾಗಿದೆ.


Click it and Unblock the Notifications