ಪೋಸ್ಟ್ ಆಫೀಸ್ ಯೋಜನೆಯ ಮೂಲಕ ನೀವು ತಿಂಗಳಿಗೆ ಅಧಿಕ ಹಣವನ್ನ ಗಳಿಸಬಹುದು. ಈ ಯೋಜನೆಯ ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ವ್ಯಕ್ತಿಗಳು ಸ್ಥಿರ ಮತ್ತು ಉತ್ತಮ ಆದಾಯವನ್ನ ಗಳಿಸಬಹುದು. ನಿವೃತ್ತಿಯ ನಂತರ ನಿಮ್ಮ ಹಣಕಾಸಿನ ಯೋಜನೆಗಳನ್ನ ಇದು ಪೂರೈಸುತ್ತದೆ. ಹೀಗಾಗಿ ಇದರಲ್ಲಿ ಅನೇಕರು ಹೂಡಿಕೆಯನ್ನ ಮಾಡುತ್ತಾರೆ.
ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವರ್ಗದ ವಯಸ್ಕರರಿಗೂ ಕೂಡ ಭಾರತೀಯ ಅಂಚೆ ಸಾಕಷ್ಟು ಹೂಡಿಕೆ ಯೋಜನೆಗಳನ್ನ ನೀಡುತ್ತಿದೆ. ಭಾರತೀಯ ನಾಗರೀಕರು ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಹೂಡಿಕೆ ಮಾಡಬೇಕು. ಅಲ್ಲದೆ ಈ ಯೋಜನೆ ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ಮಾಡಲಾಗಿದೆ. ಹಾಗೆ ಈ ಯೋಜನೆ ಮೂಲಕ ಸಣ್ಣ ಪ್ರಮಾಣದ ಹೂಡಿಕೆ ನಂತರ ಗಣನೀಯ ಮೊತ್ತವನ್ನು ಇದು ನೀಡುತ್ತದೆ.

ಅಂಚೆ ಕಛೇರಿ ಯೋಜನೆ
ಭಾರತೀಯ ಅಂಚೆ ಕಛೇರಿ ಯೋಜನೆ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಗಳನ್ನ ನೀಡುತ್ತಿದೆ. ಅಲ್ಲದೆ ಈ ಯೋಜನೆ 1,000 ದಿಂದ 30 ಲಕ್ಷದವರೆಗೆ ಹೂಡಿಕೆಯ ಅವಕಾಶವನ್ನ ನೀಡುತ್ತದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸಿದರೆ, ನೀವು ವಾರ್ಷಿಕ 8.2% ದರದಲ್ಲಿ ಬಡ್ಡಿಯನ್ನು ಸ್ವೀಕರಿಸಬಹುದು.
ಈ ಯೋಜನೆಯಡಿ 30 ಲಕ್ಷ ಹೂಡಿಕೆ ಮಾಡಿದ್ರೆ ನೀವು ಪ್ರತೀ ವರ್ಷ 2 ಲಕ್ಷಕ್ಕಿಂತ ನೀವು ಅಧಿಕ ಹಣವನ್ನ ಗಳಿಸಬಹುದು. ಹಾಗೆ ತಿಂಗಳಿಗೆ 20 ಸಾವಿರಕ್ಕೂ ಹೆಚ್ಚು ಹಣವನ್ನ ನಿಮ್ಮದಾಗಿಸಿಕೊಳ್ಳಬಹುದು. ಇದು ನಿಮ್ಮ ನಿವೃತ್ತಿಯ ನಂತರ ನಿಮಗೆ ಸಹಾಐ ಮಾಡುತ್ತದೆ. ನಿಮ್ಮ ದಿನನಿತ್ಯದ ವೆಚ್ಚಗಳನ್ನ ಇದು ಪೂರೈಸುತ್ತದೆ.
ಭಾರತೀಯ ಅಂಚೆ ಇಲಾಖೆಯ ಯೋಜನೆಯ ಪ್ರಯೋಜನಗಳೇನು?
ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ನಿಮಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಅಲ್ಲದೆ ಇದು ಸರ್ಕಾರದ ಯೋಜನೆಯಾಗಿರುವುದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಪುರುಷರು ಹಾಗೆ ಮಹಿಳೆಯರು ಎಲ್ಲರಿಗೂ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹತ್ತಿಎರ ಅಂಚೆ ಕಚೇರಿ ಅಥವಾ ಬದಯಾಂಕ್‌ಗೆ ಹೋಗಿ ನೀವು ಹೂಡಿಕೆ ಆರಂಭಿಸಬಹುದು. ಇದರಲ್ಲಿ ನೀವು 5 ವರ್ಷಗಳ ಕಾಳ ಹೂಡಿಕೆ ಮಾಡುವ ಅವಕಾಶ ಇರುತ್ತದೆ. ಜೊತೆಗೆ ನಿಮಗೆ ಅವಶ್ಯಕತೆ ಇದ್ದರೆ ನೀವು ಇನ್ನು 3 ವರ್ಷಗಳ ಕಾಲ ಹೂಡಿಕೆಯನ್ನ ಮುಂದುವರೆಸಬಹುದು. ಹಾಗೆ ಮಧ್ಯದಲ್ಲೇ ನೀವು ಈ ಠೇವಣಿಯನ್ನ ಹಿಂಪಡೆಯಬಹುದು, ಆದ್ರೆ ಅದಕ್ಕೆ ಕೆಲವು ನಿಯಮಗಳು ಅನ್ವಯವಾಗುತ್ತವೆ.
ಈ ಯೋಜನೆಗೆ ಬೇಕಾಗುವ ಅರ್ಹತೆಗಳು
ಹಿರಿಯ ನಾಗರಿಕರು ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಾಗರಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಹಾಗೆ ರಕ್ಷಣಾ ಸೇವೆಯಿಂದ ನಿವೃತ್ತರಾಗಿರುವವರು ಕೂಡ ಈ ಖಾತೆಯನ್ನು ತೆರೆಯಬಹುದು. ಇದಕ್ಕೆ ನಾಗರಿಕರು ಪ್ರಮುಖ ದಾಖಲೆಗಳನ್ನ ಹೊಂದಿರಬೇಕಾಗುತ್ತದೆ. ಹಾಗೆ ಭಾರತೀಯ ಪ್ರಜೆಯಾಗಿರಬೇಕು. ಕನಿಷ್ಠ ಹೂಡಿಕೆ ಮೊತ್ತದಿಂದ ನಿಮ್ಮ ಹೂಡಿಕೆ ಆರಂಭಿಸಬಹುದು.
ಈ ಯೋಜನೆಗೆ ಬೇಕಾಗುವ ದಾಖಲೆಗಳು
ಈ ಯೋಜನೆಯಲ್ಲಿ ಹೂಡಿಕೆ ಂಆಡಲು ಬಯಸುವವರು ಪ್ರಮುಖ ದಾಖಲೆಗಳನ್ನ ಹೊಂದಿರಬೆಕಾಗುತ್ತದೆ. ಆಧಾರ್‌ಕಾರ್ಡ್, ಪ್ಯಾನ್‌ಕಾರ್ಡ್, ವಿಳಾಸ ಪುರಾವೆ, ಪಾಸ್‌ಪೋರ್ಟ್ ಸೈಜ್ ಫೋಟೋ, ಅರ್ಜಿ ನಮೂನೆ, ಮೊಬೈಲ್ ಸಂಖ್ಯೆ ಮುಖ್ಯವಾಗುತ್ತದೆ.
ಭಾರತೀಯ ಅಂಚೆ ಇಲಾಖೆ ಯೋಜನೆಯಲ್ಲಿ ಖಾತೆ ತೆರೆಯುವುದು ಹೇಗೆ?
ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೂಲಕ ಖಾತೆ ತೆರೆಯಲು ಬಯಸುವವರು ನಿಮ್ಮ ಹತ್ತಿರದ ಅಂಚೆ ಕಛೇರಿ ಹಾಗೆ ನಿಮ್ಮ ಹತ್ತಿರದ ಬ್ಯಾಂಕ್‌ಗಳ ಮೂಲಕ ಈ ಖಾತೆಯನ್ನ ತೆರೆಯಬಹುದು. ನೀವು ಈ ಯೋಜನೆಗೆ ಸೂಕ್ತರೋ ಇಲ್ಲವೋ ಎಂದು ಅರಿತುಕೊಂಡು ನೀವು ಈ ಕಾತೆಯನ್ನ ತೆರೆಯಬೇಕಾಗುತ್ತದೆ. ಇದಕ್ಕೆ ಬೇಕಾಗುವ ದಾಖಲೆಗಳು ಹಾಗೆ ಇದಕ್ಕೆ ಬೇಕಾಗುವ ಫೋಟೋಕಾಪಿಗಳನ್ನ ಲಗತ್ತಿಸಬೇಕಾಗುತ್ತದೆ. ಒಮ್ಮೆ ನಿಮ್ಮ ಖಾತೆ ತೆರೆದರೆ ನೀವು ಅದರಲ್ಲಿ ಹೂಡಿಕೆಯನ್ನ ಮಾಡಲು ಆರಂಭಿಸಬಹುದು.
ಈ ಯೋಜನೆಯು ನಿಮಗೆ ಸಾಕಷ್ಟು ಪ್ರಯೋಜನಗಳನ್ನ ನೀಡುತ್ತದೆ. ಪ್ರತೀ ತೀಮಗಳು ಅತೀ ಹೆಚ್ಚು ಆದಾಯವನ್ನ ನೀವು ಗಳಿಸಬಹುದು. ಆದ್ರೆ ಇದರಲ್ಲಿ ಹೂಡಿಕೆಯ ಕನಿಷ್ಠ ಮೊತ್ತ 1000 ರೂ ಆಗಿರುತ್ತದೆ. ನಿಮ್ಮ ನಿವೃತ್ತಿ ವೇಳೆಗೆ ನೀವು ನಿಶ್ಚಿಂತೆಯಾಗಿರಬಹುದು. ಈ ಮೂಲಕ ನೀವು ವಾಇFಕವಾಗಿ 1 ಲಕ್ಷಕ್ಕೂ ಹೆಚ್ಚು ಗಳಿಸಬಹುದು.


Click it and Unblock the Notifications