LPG Subsidy: ಎಲ್‌ಪಿಜಿ ಗ್ಯಾಸ್‌ ಬಳಕೆದಾರರಿಗೆ ಬಿಗ್‌ ಶಾಕ್‌! ಈ ಕೆಲಸ ಮಾಡದಿದ್ರೆ ಸಿಗಲ್ಲ ಸಬ್ಸಿಡಿ

ಸಾರ್ವಜನಿಕ ವಲಯದ ತೈಲ ಕಂಪನಿಗಳು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಜನರಿಗೆ ಎಲ್‌ಪಿಜಿ ಅಡುಗೆ ಅನಿಲಗಳನ್ನು (LPG Gas) ವಿತರಿಸುತ್ತಾ ಬಂದಿದೆ. ಇನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ದೇಶಾದ್ಯಂತ ಬಡ ಜನರಿಗೆ ಸಬ್ಸಿಡಿ (Subsidy) ದರದಲ್ಲಿ ಎಲ್‌ಪಿಜಿ ಗ್ಯಾಸ್‌ ಕೊಡಲಾಗುತ್ತಿದೆ. 2016 ರಲ್ಲಿ ಆರಂಭವಾದ ಈ ಪಿಎಂ ಉಜ್ವಲ ಯೋಜನೆ (PM Ujwala Yojana), ಎಲ್‌ಪಿಜಿ ಕನೆಕ್ಷನ್‌ ಸಂಖ್ಯೆಯಲ್ಲೂ ಹೊಸ ಕ್ರಾಂತಿಗೂ ಕಾರಣವಾಗಿದೆ.

LPG Subsidy: ಎಲ್‌ಪಿಜಿ ಗ್ಯಾಸ್‌ ಬಳಕೆದಾರರಿಗೆ ಬಿಗ್‌ ಶಾಕ್‌!

ಇದೀಗ ಸಾರ್ವಜನಿಕ ವಲಯದ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ವಿಷಯದಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಅಂದರೆ ಎಲ್‌ಪಿಜಿ ಗ್ಯಾಸ್‌ ಪಡೆಯಲು ಕೆವೈಸಿ ಅಪ್ಡೇಟ್‌ ಅನ್ನು ಕಡ್ಡಾಯಗೊಳಿಸಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಬರುವ ಗ್ರಾಹಕರು ಮಾರ್ಚ್ 31, 2026 ರೊಳಗೆ ತಮ್ಮ ಕೆವೈಸಿ ಅಪ್ಡೇಟ್‌ ಮಾಡಬೇಕು ಎಂದು ಸೂಚನೆ ನೀಡಿದೆ. ಅಲ್ಲದೇ ಯಾರೇ ಆಗಲಿ, ಈಗಾಗಲೇ ಸಬ್ಸಿಡಿ ಪಡೆಯುತ್ತಿದ್ದರೆ, ಮುಂದೆಯೂ ಸಬ್ಸಿಡಿ ಸೌಲಭ್ಯ ಮುಂದುವರಿಸಲು ಪ್ರತಿ ವರ್ಷ ಈ ಪ್ರಕ್ರಿಯೆ ಅಗತ್ಯವೆಂದು ಸರ್ಕಾರ ಸೂಚನೆಯಲ್ಲಿ ತಿಳಿಸಿದೆ.

ಈ ಕೆಲಸ ಮಾಡದಿದ್ರೆ ಸಿಗಲ್ಲ ಸಬ್ಸಿಡಿ!
ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಇ-ಕೆವೈಸಿ ಪೂರ್ಣಗೊಳಿಸದವರಿಗೆ ಇನ್ಮೇಲೆ ಸಬ್ಸಿಡಿ ಲಭ್ಯವಾಗುವುದಿಲ್ಲ. ಮನೆ ಅಡುಗೆಗಳಿಗೆ ನೀಡುವ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಈಗಾಗಲೇ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಕೆವೈಸಿ ಪೂರ್ಣಗೊಳಿಸದಿದ್ದರೆ, 8ನೇ ಮತ್ತು 9ನೇ ಸಿಲಿಂಡರ್‌ಗಳ ಸಬ್ಸಿಡಿಯನ್ನು ತಡೆಹಿಡಿಯಲಾಗುವುದು ಎಂದು ವರದಿಯಾಗಿದೆ.

ಆದ್ದರಿಂದ 2026 ರ ಮಾರ್ಚ್ 31ರೊಳಗೆ ಕೆವೈಸಿ ಪೂರ್ಣಗೊಳಿಸಿದರೆ, ಸಬ್ಸಿಡಿ ಮರಳಿ ಪಡೆಯಬಹುದು. ಅಂತಿಮ ದಿನಾಂಕದೊಳಗೆ ಅಪ್ಡೇಟ್‌ ಮಾಡದಿದ್ದರೆ, ಸಬ್ಸಿಡಿ ರದ್ದುಗೊಳಿಸಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ. ಇನ್ನು ಕೇವಲ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿದವರೂ ಸಹ ಮಾರ್ಚ್ 31 ರೊಳಗೆ ಕೆವೈಸಿ ನವೀಕರಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಅಪ್ಡೇಟ್‌ ಮಾಡದಿದ್ದರೆ ಆರ್ಥಿಕ ವರ್ಷದ 8 ಮತ್ತು 9ನೇ ಗ್ಯಾಸ್‌ ಸಿಲಿಂಡರ್‌ನ ಸಬ್ಸಿಡಿಗೆ ಅರ್ಹರಾಗಿರುವುದಿಲ್ಲ ಎನ್ನಲಾಗಿದೆ.

ಅದೇ ತಪ್ಪು ಮುಂದುವರೆದರೆ, ನಂತರ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ದೇಶೀಯ ಸಿಲಿಂಡರ್‌ಗಳಿಗೆ ಒಟ್ಟು 9 ರೀಫಿಲ್‌ಗಳಿಗೆ ತಲಾ ₹300 ಸಬ್ಸಿಡಿ ಲಭ್ಯವಿದೆ. ಈ ಅಪ್‌ಡೇಟ್‌ನ ಮುಖ್ಯ ಉದ್ದೇಶ, ಅರ್ಹ ಫಲಾನುಭವಿಗಳಿಗೆ ಹಣ ತಲುಪುತ್ತಿದ್ಯಾ ಎಂಬುದನ್ನು ಖಚಿತಪಡಿಸುವುದಾಗಿದೆ.

ಎಲ್‌ಪಿಜಿ ಇ-ಕೆವೈಸಿ ನವೀಕರಿಸುವುದು ಹೇಗೆ?
ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಗ್ರಾಹಕರು ತಮ್ಮ ಕಂಪನಿಯ ಮೊಬೈಲ್ ಅಪ್ಲಿಕೇಶನ್ ಬಳಸಿ ಇ-ಕೆವೈಸಿ ಅಪ್‌ಡೇಟ್ ಸುಲಭವಾಗಿ ಮಾಡಬಹುದು. ಇನ್ನು ಇಕೆವೈಸಿ ಅಪ್ಡೇಟ್‌ ಮಾಡಲು ಹೆಚ್ಚುವರಿಯಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಬಯಸಿದರೆ, http://www.pmuy.gov.in/e-kyc.html ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+