For Quick Alerts
ALLOW NOTIFICATIONS  
For Daily Alerts

ಘೋಷಿತ ಬಡ್ಡಿ ದರವನ್ನು ಕಡಿತಗೊಳಿಸಲು ಮುಂದಾದ EPFO

|

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2020 ಕ್ಕೆ ಘೋಷಿಸಿದ್ದ ಶೇ 8.5 ಬಡ್ಡಿದರವನ್ನು ಕಡಿಮೆಗೊಳಿಸಬಹುದು ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಹೂಡಿಕೆಗಳ ಮೇಲಿನ ಆದಾಯ ಕಡಿಮೆಯಾಗುತ್ತಿರುವುದರಿಂದ ಮತ್ತು ಹಣದ ಹರಿವು ಕಡಿಮೆಯಾಗುತ್ತಿರುವುದರಿಂದ EPFO ಬಡ್ಡಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಿದೆ.

2020 ಕ್ಕೆ ಗಳಿಕೆಯ ಆಧಾರದ ಮೇಲೆ ಬಡ್ಡಿದರವನ್ನು ಘೋಷಿಸಲಾಯಿತು. ಘೋಷಿತ ಬಡ್ಡಿ ಪಾವತಿಸುವ ಸಾಮರ್ಥ್ಯವನ್ನು ನಿರ್ಣಯಿಸಲು EPFOದ ಹಣಕಾಸು, ಹೂಡಿಕೆ ಮತ್ತು ಲೆಕ್ಕಪರಿಶೋಧನಾ ಸಮಿತಿ (ಎಫ್‌ಐಎಸಿ) ಶೀಘ್ರದಲ್ಲೇ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.

ಮುದ್ರಾ ಸಾಲ ಯೋಜನೆಯಲ್ಲಿ 2 ಪರ್ಸೆಂಟ್ ಬಡ್ಡಿ ಸಬ್ಸಿಡಿ ಯಾರಿಗೆ ಸಿಗುತ್ತೆ ಗೊತ್ತಾ?ಮುದ್ರಾ ಸಾಲ ಯೋಜನೆಯಲ್ಲಿ 2 ಪರ್ಸೆಂಟ್ ಬಡ್ಡಿ ಸಬ್ಸಿಡಿ ಯಾರಿಗೆ ಸಿಗುತ್ತೆ ಗೊತ್ತಾ?

ಕಳೆದ ಮಾರ್ಚ್ ಮೊದಲ ವಾರದಲ್ಲಿ ಘೋಷಿಸಲಾದ 8.5% ಬಡ್ಡಿದರವನ್ನು ಹಣಕಾಸು ಸಚಿವಾಲಯ ಇನ್ನೂ ಅನುಮೋದಿಸಿಲ್ಲ. ಕಾರ್ಮಿಕ ಸಚಿವಾಲಯವು ಹಣಕಾಸು ಸಚಿವಾಲಯದ ತೀರ್ಮಾನದ ನಂತರವೇ ಬಡ್ಡಿ ದರವನ್ನು ತಿಳಿಸಬಹುದು. ಹಣಕಾಸು ಸಚಿವಾಲಯವು ಅನುಮೋದಿಸಿದ ನಂತರವೇ ಕಾರ್ಮಿಕ ಸಚಿವಾಲಯವು ದರವನ್ನು ತಿಳಿಸುತ್ತದೆ.

ಘೋಷಿತ ಬಡ್ಡಿ ದರವನ್ನು ಕಡಿತಗೊಳಿಸಲು ಮುಂದಾದ EPFO

ಕಳೆದ ವರ್ಷ ಘೋಷಿಸಿದ ಬಡ್ಡಿದರದ ಆಧಾರದ ಮೇಲೆ ಹಣವನ್ನು ವಿತರಿಸುವುದು ಇಪಿಎಫ್‌ಒಗೆ ಕಷ್ಟಕರವಾಗುತ್ತದೆ ಎನ್ನಲಾಗಿದೆ. ಏಕೆಂದರೆ ಹಣದ ಹರಿವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತ ಸುನಿಲ್ ಬಾರ್ತ್ವಾಲ್ ಅವರು ತಿಳಿಸಿದ್ದಾರೆ. ಲಾಕ್‌ಡೌನ್ ಪರಿಣಾಮವಾಗಿ ಸರ್ಕಾರ ಭವಿಷ್ಯ ನಿಧಿ ಕೊಡುಗೆಯನ್ನು ನೌಕರರು ಮತ್ತು ಉದ್ಯೋಗದಾತರಿಗೆ ಮೂರು ತಿಂಗಳವರೆಗೆ ಮೂಲ ವೇತನದ 12% ರಿಂದ 10% ಕ್ಕೆ ಇಳಿಸಲಾಗಿದೆ.

Read more about: provident fund fund epfo
English summary

You May Not Get 8.5% Interest on Your EPF Deposits for FY20. Here Is Why

The Employees Provident Fund Organisation May Cut 2020 Interest Rate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X