ಶ್ರೀಲಕ್ಷ್ಮಿ ಸುರೇಶ್, 26 ವರ್ಷದ ಯುವ ಪ್ರತಿಭೆ, ತಮ್ಮ ಅದ್ಭುತ ಸಾಧನೆಗಳ ಮೂಲಕ ದೇಶದ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿಯೇ ಸ್ವತಃ ಒಂದು ಸ್ಟಾರ್ಟ್‌ಅಪ್ ಕಂಪನಿಯನ್ನು ಪ್ರಾರಂಭಿಸಿದ ಶ್ರೀಲಕ್ಷಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ಕಂಪನಿಯು ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಕೆಲಸ ಮಾಡುತ್ತಿದೆ.
1998 ರಂದು ಫೆಬ್ರವರಿ 5ಯಲ್ಲಿ ಜನಿಸಿದ ಸುರೇಶ್, ಚಿಕ್ಕ ವಯಸ್ಸಿನಲ್ಲೇ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ತಮ್ಮ ಕನಸುಗಳನ್ನು ಬೆನ್ನಟ್ಟಬೇಕು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಹತೊರೆಯುವವ್ರಿಗೆ ಶ್ರೀಲಕ್ಷ್ಮಿ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಹಾಗಿದ್ರೆ ಶ್ರೀಲಕ್ಷ್ಮಿ ಸುರೇಶ್ ಅವರ ಸಾಧನೆಯ ಪ್ರಯಾಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಶ್ರೀಲಕ್ಷ್ಮಿ ಸುರೇಶ್ ಯಾರು?
ಶ್ರೀಲಕ್ಷ್ಮಿ ಸುರೇಶ್ ಅವರು ಫೆಬ್ರವರಿ 5, 1998 ರಂದು ಕೇರಳದ ಕೋಝಿಕೋಡ್ (ಕ್ಯಾಲಿಕಟ್) ನಲ್ಲಿ ಸುರೇಶ್ ಮೆನನ್ (ಅಡ್ವೊಕೇಟ್, ಕ್ಯಾಲಿಕಟ್ ಬಾರ್ ಕೌನ್ಸಿಲ್) ಮತ್ತು ಶ್ರೀಮತಿ ವಿಜು ಸುರೇಶ್ ದಂಪತಿಗಳ ಪುತ್ರಿಯಾಗಿದ್ದಾರೆ.
ಶ್ರೀಲಕ್ಷ್ಮಿಗೆ ಕಂಪ್ಯೂಟರ್‌ನಲ್ಲಿ ಆಸಕ್ತಿ ಮೂಡಿದ್ದು ಕೇವಲ 3ನೇ ವಯಸ್ಸಿನಲ್ಲಿ. ತಮ್ಮ 4ನೇ ವಯಸ್ಸಿನಿಂದಲೇ ವೆಬ್ ಸೈಟ್ ವಿನ್ಯಾಸದ ಕಡೆಗೆ ಒಲವು ತೋರಿದ ಅವರು, ತಮ್ಮ 8ನೇ ವಯಸ್ಸಿನಲ್ಲಿ ತಮ್ಮ ಶಾಲೆಯ ಅಧಿಕೃತ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು.
2008 ರಲ್ಲಿ, ಶ್ರೀಲಕ್ಷ್ಮಿ ತಮ್ಮ ಶಾಲೆ, ಪ್ರೆಸೆಂಟೇಶನ್ ಹೈಯರ್ ಸೆಕೆಂಡರಿ ಸ್ಕೂಲ್, ಕೋಝಿಕೋಡ್‌ನ ಅಧಿಕೃತ ವೆಬ್‌ಸೈಟ್ www.presentationhss.com ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದರು. ಆ ಸಮಯದಲ್ಲಿ ಶಾಲೆಗೆ ಸರಿಯಾದ ವೆಬ್‌ಸೈಟ್ ಇರಲಿಲ್ಲ. ಶ್ರೀಲಕ್ಷಿ ಅವರ ಈ ಸಾಧನೆಯನ್ನು 2007 ರಲ್ಲಿ ಕೇರಳ ಸರ್ಕಾರದ ಅರಣ್ಯ ಸಚಿವ ಬಿನೋಯ್ ವಿಶ್ವಮ್ ಉದ್ಘಾಟಿಸಿದರು.
eDesign: ಒಂದು ಹೊಸ
ತಮ್ಮ ಈ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, 2009 ರಲ್ಲಿ ಶ್ರೀಲಕ್ಷ್ಮಿ eDesign ಎಂಬ ವೆಬ್ ಡೆವಲಪ್‌ಮೆಂಟ್ ಕಂಪನಿಯನ್ನು ಸ್ಥಾಪಿಸಿದರು. ತಮ್ಮ 11 ನೇ ವಯಸ್ಸಿನಲ್ಲಿ, "TinyLogo" ಒಂದು ಲೋಗೋ ಆಧಾರಿತ ಸರ್ಚ್ ಇಂಜಿನ್ ಸ್ಥಾಪಿಸಿದರು. ಈ ಕಂಪನಿಯು ಎಸ್‌ಇಒ, ಡಿಸೈನಿಂಗ್ ಮತ್ತು ಇತರ ವೆಬ್ ಡಿಸೈನಿಂಗ್-ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ.
ಇದಲ್ಲದೆ, ಮೈಕ್ರೋಸಾಫ್ಟ್, ನೋಕಿಯಾ ಮತ್ತು ಕೋಕಾ ಕೋಲಾದಂತಹ ವಿಶ್ವವಿಖ್ಯಾತ ಬ್ರಾಂಡ್‌ಗಳಂತಹ ದೊಡ್ಡ ಕಂಪನಿಗಳು ತಮ್ಮ ಕ್ಲೈಂಟ್‌ಗಳ ಪಟ್ಟಿಯಲ್ಲಿ ಶ್ರೀಲಕ್ಷ್ಮಿ ಸುರೇಶ್ ಅವರನ್ನು ಸೇರಿಸಿಕೊಂಡಿರುವುದು ಅವರ ಯಶಸ್ಸನ್ನು ಸೂಚಿಸುತ್ತದೆ.ಶ್ರೀಲಕ್ಷ್ಮಿ ಸುರೇಶ್ ಅವರು ಭಾರತದಾದ್ಯಂತ ಹೆಸರಾಂತ ಸಂಸ್ಥೆಗಳು ಮತ್ತು ಸಂಸ್ಥೆಗಳಿಗಾಗಿ 100 ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಶ್ರೀಲಕ್ಷ್ಮಿ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ
"ಐಟಿ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಸಾಧಿಸುವ ಕನಸು": ಶ್ರೀಲಕ್ಷ್ಮಿ ಸುರೇಶ್
ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸಿರುವ ಅವರು, ಕೆಲವೇ ವರ್ಷಗಳಲ್ಲಿ ಅದನ್ನು ಉನ್ನತ ಶ್ರೇಣಿಯ ಕಂಪನಿಯನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಸಿಲಿಕಾನ್ ಇಂಡಿಯಾ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "2008ರಲ್ಲಿ ನಾನು ಎಡಿಸೈನ್ ಟೆಕ್ನಾಲಜೀಸ್ ಎಂಬ ವೆಬ್ ಡಿಸೈನಿಂಗ್ ಕಂಪನಿಯನ್ನು ಪ್ರಾರಂಭಿಸಿದೆ. ಈ ಕಂಪನಿಯನ್ನು ಭಾರತದ ಅಗ್ರಗಣ್ಯ ಐಟಿ ಕಂಪನಿಯನ್ನಾಗಿ ಮಾಡುವುದು ನನ್ನ ಗುರಿ. ಹೀಗಾಗಿ, ಕೆಲವೇ ವರ್ಷಗಳಲ್ಲಿ ಒಂದು ಪ್ರಮುಖ ಐಟಿ ಕಂಪನಿಯ ಮುಖ್ಯಸ್ಥನಾಗುವ ಆಶಯ ನನ್ನದು" ಎಂದು ಹೇಳಿದ್ದಾರೆ.


Click it and Unblock the Notifications