ಇತ್ತೀಚಿಗೆ ಭಾರತೀಯ ಕ್ರಿಕೇಟಿಗ ಯುಜ್ವೇಂದ್ರ ಚಹಾಲ್ ಅವರ ಕುರಿತು ಒಂದಿಷ್ಟು ವದಂತಿಗಳು ಹರಿದಾಡುತ್ತಿವೆ. ಯುಜ್ವೇಂದ್ರ ಚಹಾಲ್ ಅವರು ತಮ್ಮ ಪತ್ನಿಯಿಂದ ಬೇರ್ಪಟ್ಟಿದ್ದಾರೆ ಎಂದು ಹಲವಾರು ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇಂತಹ ವದಂತಿಗಳ ಮಧ್ಯೆಯೆ ಯುಜ್ವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ ಒಬ್ಬರನ್ನೊಬ್ಬರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಅನ್ ಫಾಲೋ ಮಾಡಿಕೊಂಡಿದ್ದಾರೆ. ಹಾಗೆ ಎಲ್ಲಾ ಪೋಸ್ಟ್‌ಗಳನ್ನ ಡಿಲೀಟ್ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಯಾರೊಬ್ಬರು ಕೂಡ ಪ್ರತಿಕ್ರಿಯೆಯನ್ನ ನೀಡಿಲ್ಲ. ಹೀಗಿರುವಾಗ ಕ್ರಿಗೇಟಿಗನ ಆಸ್ತಿ ಎಷ್ಟಿರಬಹುದು, ನಿವ್ವಳ ಮೌಲ್ಯ ಎಷ್ಟಿರಬಹುದು ಎಂದು ಆನ್‌ಲೈನ್‌ನಲ್ಲಿನೆಟ್ಟಿಗರು ಹುಡುಕುತ್ತಿದ್ದಾರೆ. ಹಾಗಾದ್ರೆ ಚಹಾಲ್ ಅವರ ನಿವ್ವಳ ಮೌಲ್ಯ ಎಷ್ಟಿದೆ, ಅವರ ಆದಾಯದ ಮೂಲಗಳು ಯಾವುವು ಇಲ್ಲಿ ತಿಳಿಯಿರಿ.

ಯುಜ್ವೇಂದ್ರ ಚಹಾಲ್ ಅವರ ನಿವ್ವಳ ಮೌಲ್ಯ ಎಷ್ಟಿದೆ?
ಆರ್‌ಸಿಬಿಯ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ ಅವರು 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಯುಝಿ ಭಾರತದ ಅಗ್ರ ಮತ್ತು ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಅಲ್ಲದೆ ಇತ್ತೀಚೆಗೆ ಇಂಡಿಯಾ ಪ್ರೀಮಿಯರ್ ಲೀಗ್ ( ಐಪಿಎಲ್ ) 2025 ಗಾಗಿ ಇತ್ತೀಚೆಗೆ ನಡೆದ ಹರಾಜಿನಲ್ಲಿ , ಯುಜ್ವೇಂದ್ರ ಚಹಾಲ್ ಅವರನ್ನು 18 ಕೋಟಿ ರೂ.ಗೆ ಖರೀದಿಸಲಾಯಿತು. ಚಹಾಲ್ ಅವರಿಗೆ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಕೂಡ ಅವರು ಹಣವನ್ನ ಸಂಪಾದನೆ ಮಾಡುತ್ತಾರೆ. ಅವರ ನಿವ್ವಳ ಮೌಲ್ಯ ಸುಮಾರು 45 ಕೋಟಿ ಎಂದು ಹೇಳಲಾಗಿದೆ. ಯುಜ್ವೇಂದ್ರ ಚಹಾಲ್ ಪೋರ್ಷೆ ಕೆಯೆನ್ನೆ ಎಸ್, ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಲಂಬೋರ್ಘಿನಿ ಸೆಂಟೆನಾರಿಯೊ ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಅವರ ಪತ್ನಿ ಧನಶ್ರೀ ದಂತವೈದ್ಯೆಯಾಗಿದ್ದಾರೆ ಅಲ್ಲದೆ ನೃತ್ಯ ನಿರ್ದೇಶಕಿ ಕೂಡ ಹೌದು. ಅವರ YouTube ಚಾನಲ್ ಮತ್ತು Instagram ಫೀಡ್ ನೃತ್ಯ ವೀಡಿಯೊಗಳು ಮತ್ತು ಹಲವಾರು ಬ್ರ್ಯಾಂಡ್ ಪ್ರೊಮೋಷನ್‌ಗಳಿಂದ ಅವರು ಹೆಚ್ಚು ಗಳಿಸುತ್ತಾರೆ. ಅವರು ಡ್ಯಾನ್ಸ್ ಅಕಾಡೆಮಿಯನ್ನು ಸುಮಾರು 25 ಕೋಟಿ ರೂಗಳನ್ನ ಅವರು ಹೊಂದಿದ್ದಾರೆ.
ಯುಜ್ವೇಂದ್ರ ಚಹಾಲ್ ಅವರ ಬಗ್ಗೆ ತಿಳಿಯಿರಿ
ಯುಜ್ವೇಂದ್ರ ಚಹಾಲ್ ಒಬ್ಬ ಭಾರತೀಯ ಕ್ರಿಕೆಟಿಗ, ಇವರು ಲೆಗ್ ಸ್ಪಿನ್ ಬೌಲರ್ ಆಗಿ ಆಡುತ್ತಾರೆ. ಅವರು ತಮ್ಮ ವಿಕೆಟ್-ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ, ವಿಶೇಷವಾಗಿ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಚಹಾಲ್ ಜುಲೈ 23, 1990 ರಂದು ಹರಿಯಾಣದ ಜಿಂದ್‌ನಲ್ಲಿ ಜನಿಸಿದರು . ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿನ ಅವರ ಪ್ರದರ್ಶನಗಳೊಂದಿಗೆ ಅವರ ಹೆಸರು ಎಲ್ಲರ ಕಿವಿಗೆ ಬೀಳತೊಡಗಿತು.
ಚಾಹಲ್ 2016 ರಲ್ಲಿ ಜಿಂಬಾಬ್ವೆ ವಿರುದ್ಧ ಭಾರತಕ್ಕಾಗಿ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು ಅದೇ ವರ್ಷ ಅವರ T20I ಚೊಚ್ಚಲ ಪಂದ್ಯದಲ್ಲಿ ಕೂಡ ಆಟ ಆಡಿದ್ರು .
ಅವರು ವೈಟ್-ಬಾಲ್ ಫಾರ್ಮ್ಯಾಟ್‌ಗಳಲ್ಲಿ (ODIಗಳು ಮತ್ತು T20Is) ಭಾರತದ ಪ್ರಾಥಮಿಕ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ, ಅವರ ಬೌಲಿಂಗ್ ಶೈಲಿ ಮತ್ತು ವಿಕೆಟ್‌ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸದ್ಯಕ್ಕೆ, ಚಹಾಲ್ ODI ಮತ್ತು T20I ಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಅವರು ಭಾರತಕ್ಕಾಗಿ ವಿವಿಧ ಪಂದ್ಯಗಳನ್ನು ಗೆಲ್ಲುವ ಸಂದರ್ಭಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚಾಹಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ರಾಜಸ್ಥಾನ್ ರಾಯಲ್ಸ್‌ನಂತಹ ತಂಡಗಳಲ್ಲಿ ಆಡಿದ್ದಾರೆ.
ಐಪಿಎಲ್ 2025 ರ ಹರಾಜಿನಲ್ಲಿ , ರಾಜಸ್ಥಾನ್ ರಾಯಲ್ಸ್ ಅವರನ್ನು ₹18 ಕೋಟಿ ಮೊತ್ತಕ್ಕೆ ಖರೀದಿಸಿದೆ.
ಚಹಾಲ್ ಅವರು ದಂತವೈದ್ಯರು ಹಾಗೆ ನೃತ್ಯ ನಿರ್ದೇಶಕಿಯಾಗಿರುವ ಧನಶ್ರೀ ವರ್ಮಾ ಅವರನ್ನು 2020 ರಲ್ಲಿ ವಿವಾಹವಾಗುತ್ತಾರೆ. ಧನಶ್ರೀ ಜನಪ್ರಿಯ ಯೂಟ್ಯೂಬರ್ ಮತ್ತು ಇನ್‌ಸ್ಟಾಗ್ರಾಮ್ ಇನ್‌ಫ್ಲೂಯೆನ್ಸರ್ ಕೂಡ ಹೌದು. ನೃತ್ಯ ವೀಡಿಯೊಗಳನ್ನು ಹಂಚಿಕೊಳ್ಳಲು ಮತ್ತು ಬ್ರ್ಯಾಂಡ್‌ಗಳ ಪ್ರೋಮೋಷನ್‌ಗಳನ್ನ ಕೂಡ ಅವರು ನೀಡುತ್ತಾರೆ.COVID-19 ಸಾಂಕ್ರಾಮಿಕ ಸಮಯದಲ್ಲಿ ಚಾಹಲ್ ಧನಶ್ರೀ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ನಂತರ ಮದುವೆಯನ್ನ ಕೂಡ ಆಗುತ್ತಾರೆ.
ಯುವ ಕ್ರಿಕೆಟಿಗನಿಂದ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಯುಜ್ವೇಂದ್ರ ಚಹಾಲ್ ಅವರ ಪ್ರಯಾಣವು ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಸ್ಥಿರ ಪ್ರದರ್ಶನದಿಂದ ಗುರುತಿಸಲ್ಪಟ್ಟಿದೆ ಮತ್ತು ಅವರನ್ನು ಭಾರತೀಯ ತಂಡದಲ್ಲಿ ಅವರನ್ನ ಪ್ರಮುಖ ವ್ಯಕ್ತಿಯನ್ನಾಗಿ ಮಾಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications