ಬೆಂಗಳೂರು, ಅಕ್ಟೋಬರ್ 09: ಆನ್‌ಲೈನ್ ಮೂಲಕ ವಸ್ತುಗಳನ್ನು ವಿತರಣೆ ಮಾಡುವ ಜಿಪ್ಟೋ ತನ್ನ ಮುಖ್ಯ ಕಛೇರಿಯನ್ನು ಮುಂಬೈನಿಂದ ಉದ್ಯಾನ ನಗರಿ ಬೆಂಗಳೂರಿಗೆ ಸ್ಥಳಾಂತರ ಮಾಡಲಿದೆ. 2025ನೇ ವರ್ಷದ ಮೊದಲ ಅವಧಿಯಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರು ನಗರದ ಟೋಟಲ್ ಮಾಲ್ ಜಿಪ್ಟೋದ ಮುಖ್ಯ ಕಛೇರಿಯಾಗಲಿದೆ.
ಜಿಪ್ಟೋ ತನ್ನ ಮುಂಬೈ ಮುಖ್ಯ ಕಛೇರಿಯ ಸಿಬ್ಬಂದಿಗಳನ್ನು ಸಹ ಬೆಂಗಳೂರಿಗೆ ಕರೆಸಿಕೊಳ್ಳಲಿದೆ. ಮುಖ್ಯ ಕಛೇರಿ ಸ್ಥಳಾಂತರಕ್ಕೆ ಸುಮಾರು 3 ರಿಂದ 4 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿಗೆ ಕಛೇರಿ ಸ್ಥಳಾಂತರ ಮಾಡುವುದರಿಂದ ಜಿಪ್ಟೋಗೆ ತಿಂಗಳಿಗೆ ಸುಮಾರು 40-50 ಲಕ್ಷ ರೂ. ಉಳಿತಾಯವಾಗಲಿದೆ.

ಬೆಂಗಳೂರು ನಗರದಲ್ಲಿರುವ ಟೋಟಲ್ ಮಾಲ್ ಜಿಪ್ಟೋ ಪ್ರಧಾನ ಕಛೇರಿಯಾಗಲಿದೆ. 2025ರ ಮೊದಲ ಭಾಗದಲ್ಲಿ ಸಂಪೂರ್ಣ ಕಛೇರಿ ಸ್ಥಳಾಂತರ ಪ್ರಕ್ರಿಯೆಯನ್ನು ಜಿಪ್ಟೋ ಮಾಡಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಸರ್ಜಾಪುರದಲ್ಲಿರುವ ಟೋಟಲ್ ಮಾಲ್ ಜಿಪ್ಟೋದ ಹೊಸ ಕಛೇರಿಯಾಗಲಿದೆ.
ಈ ಕುರಿತ ಒಪ್ಪಂದಕ್ಕೆ ಈಗಾಗಲೇ ಎರಡೂ ಕಂಪನಿಗಳು ಸಹಿ ಹಾಕಿವೆ. ಸುಮಾರು 1,800 ಸಿಬ್ಬಂದಿಗಳು ಜಿಪ್ಟೋದ ಮುಂಬೈ ಪ್ರಧಾನ ಕಛೇರಿಯಿಂದ ಬೆಂಗಳೂರು ನಗರಕ್ಕೆ ಆಗಮಿಸಲಿದ್ದಾರೆ. ಈ ವರ್ಷದ ನವೆಂಬರ್ ಅಂತ್ಯಕ್ಕೆ ಈ ಪ್ರಕ್ರಿಯೆ ಮುಗಿಸಬೇಕು ಎಂದು ಮೊದಲು ಗಡುವು ನೀಡಲಾಗಿತ್ತು. ಆದರೆ ಬಳಿಕ 2025ರ ಮೊದಲ ಭಾಗಕ್ಕೆ ಅದನ್ನು ಮುಂದೂಡಿಕೆ ಮಾಡಲಾಯಿತು.
ಮುಂಬೈನಲ್ಲಿ ಜಿಪ್ಟೋದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಶೇ 90ರಷ್ಟು ಸಿಬ್ಬಂದಿಗಳು ಬೆಂಗಳೂರು ನಗರಕ್ಕೆ ಸ್ಥಳಾಂತರವಾಗಲು ಒಪ್ಪಿಕೊಂಡಿದ್ದಾರೆ. "ಶೇ 90ರಷ್ಟು ಸಿಬ್ಬಂದಿಗಳು ಬೆಂಗಳೂರಿಗೆ ಸ್ಥಳಾಂತರವಾಗಲು ಒಪ್ಪಿಕೊಂಡಿದ್ದಾರೆ. ಉಳಿದ ಶೇ 10ರಷ್ಟು ಉದ್ಯೋಗಿಗಳ ಜೊತೆ ಮಾತುಕತೆ ನಡೆದಿದೆ" ಎಂದು ಜಿಪ್ಟೋ ಹೇಳಿದೆ.
ಉದ್ಯೋಗಿಗಳ ಬೆಂಗಳೂರು ಸ್ಥಳಾಂತರದ ಖರ್ಚನ್ನು ಸಹ ಜಿಪ್ಟೋ ಭರಿಸಲಿದೆ. ಅಲ್ಲದೇ ಅವರು ಬೆಂಗಳೂರಿಗೆ ಸ್ಥಳಾಂತರವಾಗಲು ಸಾಕಷ್ಟು ಸಮಯವನ್ನು ಸಹ ಜಿಪ್ಟೋ ನೀಡಲಿದೆ. ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಜಿಪ್ಟೋವನ್ನು ಬೆಂಗಳೂರು ನಗರಕ್ಕೆ ಸ್ವಾಗತಿಸಿತ್ತು. ಪ್ರಮುಖ ಸ್ಟಾಟ್‌ಅಪ್‌ಗಳು ನಗರದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂದು ಕರೆ ನೀಡಿತ್ತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಜೈವಿಕ ತಂತ್ರಜ್ಞಾನ (ಬಿಟಿ) ಖಾತೆಯ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಭಾರತದಲ್ಲಿ ಬೆಂಗಳೂರು ಸ್ನೇಹಯುತ ನಗರವಾಗಿದೆ, ಏಷ್ಯಾ ಪೆಸಿಫಿಕ್‌ನಲ್ಲಿ ನಗರ 18ನೇ ಸ್ಥಾನದಲ್ಲಿದೆ. 3,600 ಹಣಕಾಸು, ತಂತ್ರಜ್ಞಾನದ ಸ್ಟಾರ್ಟಪ್‌ಗಳಿಗೆ ಬೆಂಗಳೂರು ತಾಣವಾಗಿದೆ. ಜಿಪ್ಟೋಗೆ ಸ್ವಾಗತ, ನಾನು ಇನ್ನಷ್ಟು ಸ್ಟಾರ್ಟಪ್‌ಗಳನ್ನು ಭಾರತದ ಅತ್ಯುತ್ತಮ ಸ್ಟಾರ್ಟಪ್ ಪರಿಸರದಲ್ಲಿ ಬೆಳೆಯಲು ಆಹ್ವಾನಿಸುತ್ತೇನೆ" ಎಂದು ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications