ದೇಶದಲ್ಲಿ ಒಂದರ ನಂತರ ಒಂದರಂತೆ ಹತ್ತು ಹಲವು ಆಹಾರ ಡೆಲಿವರಿ ಆಪ್‌ಗಳು ಲಗ್ಗೆ ಇಟ್ಟಿವೆ. ಇವುಗಳಲ್ಲಿ ಜನರ ಬಾಯಲ್ಲಿ ಹರಿದಾಡುವ ಆಪ್‌ಗಳಂದ್ರೆ ಸ್ವಿಗ್ಗಿ ಮಾತ್ತು ಝೊಮ್ಯಾಟೋ. ಆದ್ರೆ ಇದೇ ಸಂಸ್ಥೆಗಳು ಗ್ರಾಹಕರನ್ನು ಆಕರ್ಷಿಸಲು ದಿನಸಿ ಸಾಮಗ್ರಿಗಳನ್ನ ಡೆಲಿವರಿ ಮಾಡುವಂತಹ ಆಪ್‌ಗಳನ್ನ ಸಹ ಹೊಂದಿದೆ. ಹೀಗಿರುವಾಗ ಸ್ವಿಗ್ಗಿ ಕೂಡ ದಿನಸಿ ಸಾಮಗ್ರಿಗಳನ್ನ ಗ್ರಾಹಕರಿಗೆ ನೀಡುವ ಸಲುವಾಗಿ ಸ್ವಿಗ್ಗಿ ಇನ್ಸ್ಟಾಮಾರ್ಟ್ ಇದರ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.
ಇದರ ಮಧ್ಯೆ ಝೆಪ್ಟೋ ಸಧ್ಯದಲ್ಲೇ ಸ್ವಿಗ್ಗಿ ಇನ್ಸ್ಟಾಮಾರ್ಟ್‌ಅನ್ನು ಹಿಂದಿಕ್ಕಲಿದೆ, ಮಾರುಕಟ್ಟೆಯಲ್ಲಿ ಸ್ವಿಗ್ಗಿಇನ್ಸ್ಟಾ ಮಾರ್ಟ್ 2ನೇ ಸ್ಥಾನವನ್ನ ಪಡೆದೊಕೊಳ್ಳಲಿದೆ ಎಂದು ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾದ ಮೋತಿಲಾಲ್ ಓಸ್ವಾಲ್ ಭವಿಷ್ಯ ನುಡಿದಿದ್ದಾರೆ.

ಮೋತಿಲಾಲ್ ಓಸ್ವಾಲ್ ಅವರ ಇತ್ತೀಚಿನ ವರದಿ ಹೇಳುವ ಪ್ರಕಾರ, ವೇಗವಾಗಿ ತನ್ನ ಗ್ರಾಹಕರನ್ನು ತಲುಪುತ್ತಿರುವ ಝೆಪ್ಟೊ, ಈಗ ಸ್ವಿಗ್ಗಿಇನ್ಸ್ಟಾಮಾರ್ಟ್‌ಅನ್ನು ಸೋಲಿಸಿ ಎರಡನೇ ಅತಿ ದೊಡ್ಡ ಸಂಸ್ಥೆಯಾಗಿ ವಾಣಿಜ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲಿದೆ, ಅಲ್ಲದೆ ಈಗಾಲೇ ಇದು ಜೊಮಾಟೊ ಮಾಲೀಕತ್ವದ ಬ್ಲಿಂಕಿಟ್ ಅನ್ನು ಕೂಡ ಹಿಂದಿಕ್ಕಿದೆ.
ನಿಖರವಾಗಿ ಹೇಳಬೇಕೆಂದರೆ, ಮನಿ ಕಂಟ್ರೋಲ್ ವರದಿ ಪ್ರಕಾರ, ಮೋತಿಲಾಲ್ ಓಸ್ವಾಲ್ ಅವರ ತಂಡವು ಇತ್ತೀಚೆಗೆ ಝೆಪ್ಟೊ ಮೇಲು ಕೂಡ ಹೂಡಿಕೆ ಮಾಡ್ತಿದೆ ಎಂಬ ಮಾತು ಕೇಲೀ ಬರ್ತಿದೆ. ಇದಲ್ಲದೆ, ಮೋತಿಲಾಲ್ ಓಸ್ವಾಲ್ ಅವರ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ರಾಮ್‌ದೇವ್ ಅಗರವಾಲ್ ಅವರು ಝೆಪ್ಟೊ ಮತ್ತು ಸ್ವಿಗ್ಗಿಯ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಎಂದು ವರದಿ ಹೇಳಲಾಗಿದೆ.
ಹಾಗೆ ಝೆಪ್ಟೊಗಿಂತ 46 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಬ್ಲಿಂಕ್‌ಇಟ್ ವಾಣಿಜ್ಯ ಕ್ಷೇತ್ರದಲ್ಲಿ ಮೊದಲ ಸ್ಥಾನವನ್ನ ಪಡೆದುಕೊಂಡಿದೆ. ಹಾಗೆ 29 ಪ್ರತಿಶತದಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿರುವ ಸ್ವಿಗ್ಗಿ ಇನ್ಸ್ಟಾಮಾರ್ಟ್ ವಾಣಿಜ್ಯ ಕ್ಷೇತ್ರದಲ್ಲಿ ಮೂರನೇ ಸ್ಥಾನವನ್ನ ಗಿಟ್ಟಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಿಂದಿನ, ತಜ್ಞರ ವರದಿ ಪ್ರಕಾರ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಎರಡನೇ ಸ್ಥಾನವನ್ನ ಪಡೆದುಕೊಂಡಿತ್ತು ಎನ್ನಲಾಗ್ತಿದೆ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗಿಂತ ಝೆಪ್ಟೋ ಏಕೆ ಮುಂದೆ ಇದೆ ಎಂಬುದರ ಕುರಿತು ಮೋತಿಲಾಲ್ ಓಸ್ವಾಲ್ ಅವರು ಹೆಚ್ಚಿನ ಮಾಹಿತಿಯನ್ನ ನೀಡಿಲ್ಲ. ಇದೇ ವಿಚಾರವಾಗಿ ಎಚ್‌ಎಸ್‌ಬಿಸಿಯ ತಜ್ಞರು ಹೇಳಿದ್ದು, "ಬಹುಶಃ ಆಶ್ಚರ್ಯವೆನ್ನುವ ರೀತಿಯಲ್ಲಿ, ಝೆಪ್ಟೋ ಮೊದಲ ಮತ್ತು ಎರಡರ ಮಧ್ಯದಲ್ಲಿರಬಹುದು. ಅಲ್ಲದೆ ಖಾಸಗಿ ಒಡೆತನದ ಕಂಪನಿಯಾಗಿರುವುದರಿಂದ, ರಿಯಾಯಿತಿಯಲ್ಲಿ ಝೆಪ್ಟೋ ಅತ್ಯಂತ ಆಕ್ರಮಣಕಾರಿ ಎಂದು ನಾವು ಭಾವಿಸುತ್ತೇವೆ, ಆದರೆ ಅದು ಮೊದಲ ಸ್ಥಾನದಲ್ಲಿದೆ ಎಂದು ಹೇಳಲು ಬರುವುದಿಲ್ಲ ಎಂದಿದ್ದಾರೆ.
"ಕಡಿಮೆ ರಿಯಾಯಿತಿಗಳನ್ನ ಹೊರತುಪಡಿಸಿದರೂ ಕೂಡ, ಬ್ಲಿಂಕಿಟ್ ಮತ್ತು ಝೆಪ್ಟೋಗೆ ಅವರ ಬೆಳವಣಿಗೆ, ಹಾಗೆ ಅವರ ಉನ್ನತ ಕಾರ್ಯಗಳನ್ನ ವಿವರಿಸುತ್ತದೆ" ಎಂದು HSBC ವರದಿಯಲ್ಲಿ ಹೇಳಲಾಗ್ತಿದೆ.
ಈ ಹಿಂದೆ ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ ಝೆಪ್ಟೋ ಈ ವರ್ಷದ ಮೇ ತಿಂಗಳಲ್ಲಿ 35-40 ಕೋಟಿ ರೂಪಾಯಿ ($4-5 ಮಿಲಿಯನ್) ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಿದೆ ಎಂದು ವರದಿ ಹೇಳಿದೆ. ಆದರೆ ಇದು ಕಳೆದ ಮೂರು ತಿಂಗಳಲ್ಲಿ ಆರು ಪಟ್ಟು ಹೆಚ್ಚು 250 ಕೋಟಿ ರೂಪಾಯಿಗೆ ಏರಿಕೆಯಾಗಿದೆ, ಅಂದರೆ ಸುಮಾರು 30 ಡಾಲರ್ ಮಿಲಿಯನ್ ಆಗಿದೆ ಎನ್ನಲಾಗ್ತಿದೆ. ಹಾಗೆ ಸೆಪ್ಟೆಂಬರ್‌ನಲ್ಲಿ, ಮಾಸಿಕ ನಗದು ಮತ್ತಷ್ಟು ಏರಿಕೆಯಾಗಿ ಅಕ್ಟೋಬರ್‌ನಲ್ಲಿ ರೂ 300 ಕೋಟಿಗೆ (ಸುಮಾರು $35 ಮಿಲಿಯನ್) ತಲುಪಿತು ಎಂದು ವರದಿ ಹೇಳಿದೆ.
ಒಟ್ನಲ್ಲಿ ಬಿರುಸಾಗಿ ಸಾಗುತ್ತಿರುವ ಮಾರುಕಟ್ಟೆಯಲ್ಲಿ ಝೆಪ್ಟೋ ಮತ್ತು ಸ್ವಿಗ್ಗಿ ಇನ್ಸ್ಟಾಮಾರ್ಟ್‌ಗಳ ಸರ್ಧೆಯ ಮಧ್ಯೆ ಉದ್ಯಮಿ ಮೋತಿಲಾಲ್ ಓಸ್ವಾಲ್ ಅವರ ಭವಿಷ್ಯ ನಿಜವಾಗುತ್ತಾ ಅಥವಾ ಸ್ವಿಗ್ಗಿ ಇನ್ಸ್ಟಾಮಾರ್ಟ್ ತನ್ನ ಗ್ರಾಹಕರನ್ನ ಸೆಳೆಯಲು ಮತ್ತಷ್ಟು ಹೊಸ ತಂತ್ರಗಳ ಜೊತೆಗೆ ಮಾರಿಕಟ್ಟೆಗೆ ಕಾಲಿಡುತ್ತದಾ ಎಂದು ಕಾದು ನೋಡಬೇಕಿದೆ.


Click it and Unblock the Notifications