ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ ಎಂದು ಹೆಚ್ಚಿನವರು ಹೇಳುತ್ತಾರೆ. ಆದ್ರೆ ಇತ್ತೀಚೆಗೆ ಚಿನ್ನ, ಬೆಳ್ಳಿ ದರ ನೋಡಿದ್ರೆ ಹೂಡಿಕೆ ಮಾಡೋದೆ ಬೇಡ ಎಂದು ಅನ್ನಿಸಿಬಿಟ್ಟಿದೆ. ಇದಕ್ಕೆ ಕಾರಣ ಬೆಲೆ ಏರಿಕೆ. ಹೌದು, 2025 ರ ಆರಂಭದಿಂದ ಅಂತ್ಯದವರೆಗೂ ಚಿನ್ನ ಬೆಲೆಯಲ್ಲಿ (Gold Rate) ಇಳಿಕೆಯಾಗಿದ್ದಕ್ಕಿಂದ ಏರಿಕೆಯಾಗಿದ್ದೇ ಜಾಸ್ತಿ. ಆದ್ದರಿಂದ ಜನಸಾಮಾನ್ಯರಿಗೆ ಚಿನ್ನ ಮುಟ್ಟೋಕು ಸಾಧ್ಯವಾಗುತ್ತಿಲ್ಲ. ಹಾಗಿದ್ರೆ ಇಂದು (ನ.09) ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಿಂತ ನೀರಾದ ಚಿನ್ನದ ದರ:
ಹೌದು, ಇಂದು ಬೆಂಗಳೂರಿನಲ್ಲಿ ಚಿನ್ನದ ದರ ನಿಂತ ನೀರಿನಂತಾಗಿದೆ. ಏಕೆಂದರೆ ನಿನ್ನೆಯ ಬೆಲೆಯನ್ನೇ ಇಂದೂ ಕಾಯ್ದುಕೊಂಡಿದೆ. ಹಾಗಿದ್ರೆ ಇಂದು 18K, 22K, 24K ಚಿನ್ನದ ಪ್ರತೀ ಗ್ರಾಂ ಬೆಲೆ ಎಷ್ಟಾಗಿದೆ ಎಂದು ನೋಡೋಣ.
ಬೆಂಗಳೂರಿನಲ್ಲಿ 24k ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಸಾಮಾನ್ಯವಾಗಿ 24K ಚಿನ್ನ ಶುದ್ಧತೆಯಿಂದ ಕೂಡಿರುತ್ತದೆ. ಅದೇ ಕಾರಣದಿಂದ ಬೆಲೆ ಕೂಡಾ ಹೆಚ್ಚಿರುತ್ತದೆ. ಅದೇ ರೀತಿ ಇಂದು 24K ಚಿನ್ನದ 1 ಗ್ರಾಂ ಬೆಲೆ 12,202 ರೂ. ಆಗಿದ್ದು, ನಿನ್ನೆಯೂ ಇಷ್ಟೇ ಬೆಲೆ ಇತ್ತು. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹97,616 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಇಂದು ಮುಂದುವರೆದಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,22,020 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ.
ಬೆಂಗಳೂರಿನಲ್ಲಿ 22k ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ₹11,185 ಗ್ರಾಂ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿದೆ. ಅದೇ ರೀತಿ 8 ಗ್ರಾಂ ಬೆಲೆ ₹89,480 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,11,850 ರೂ. 100 ಗ್ರಾಂ ₹11,18,500 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಈ ಮೂಲಕ 22K ಚಿನ್ನದ ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ.
ಬೆಂಗಳೂರಿನಲ್ಲಿ 18k ಚಿನ್ನದ ಬೆಲೆ:
ಇನ್ನು 18K ಚಿನ್ನದ 1 ಗ್ರಾಂ ಬೆಲೆ ₹9,152 ರೂ ಆಗಿದ್ದು, ನಿನ್ನೆಗೂ ಇಂದಿಗೂ ಶೂನ್ಯ ಬದಲಾವಣೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹73,216 ರೂ., 10 ಗ್ರಾಂ ಚಿನ್ನದ ಬೆಲೆ ₹91,520 ರೂ., 100 ₹9,15,200 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಈ ಗ್ರಾಂಗಳ ಬೆಲೆಯಲ್ಲಿ ಶೂನ್ಯ ಬದಲಾವಣೆ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ:
ಇನ್ನು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಬೆಂಗಳೂರಿನಲ್ಲಿ ಆಗಿಲ್ಲ. ಅದೇ ರೀತಿ ಇದೀಗ ಬೆಳ್ಳಿಯ ಬೆಲೆಯೂ ಇಂದು ನಿನ್ನೆಯ ಬೆಲೆಯಷ್ಟೇ ಇದೆ. ನಿನ್ನೆ ಬೆಂಗಳೂರಿನಲ್ಲಿ ಒಂದು ಗ್ರಾಂ ಬೆಳ್ಳಿ ದರ ₹152.50 ರೂ. ಆಗಿದ್ದು, ನಿನ್ನೆಯೂ 152.50 ರೂ. ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ ಇಂದು ₹1,220 ರೂ., 10 ಗ್ರಾಂ ಬೆಳ್ಳಿ ದರ ₹1,525 ರೂ., 100 ಗ್ರಾಂ ಬೆಳ್ಳಿ ಬೆಲೆ ₹15,250 ರೂ., 1000 ಗ್ರಾಂ ಬೆಳ್ಳಿ ದರ ₹1,52,500 ರೂ. ಆಗಿದೆ.
ಸ್ಪಾಟ್ ಚಿನ್ನದ ದರ:
ನವೆಂಬರ್ 7ರ ರಾಯಿಟರ್ಸ್ ವರದಿ ಪ್ರಕಾರ, ಡಾಲರ್ ಮೌಲ್ಯ ಕಡಿಮೆಯಾದ ಹಿನ್ನೆಲೆ ಮತ್ತು ಅಮೆರಿಕ ಸರ್ಕಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಶುಕ್ರವಾರ ಏರಿಕೆಯಾಗಿತ್ತು. ET (2015 GMT) ಮಧ್ಯಾಹ್ನ 3:15 ರಂತೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.7% ಶೇ.ದಷ್ಟು ಏರಿಕೆಯಾಗಿ $4,005.21 ಕ್ಕೆ ಏರಿಕೆಯಾಗಿದೆ


Click it and Unblock the Notifications