ಭಾರತದ ಪ್ರಮುಖ ಬ್ರೋಕರೇಜ್ ಕಂಪನಿಯಾದ ಜೆರೋಧಾ ಸಾಕಷ್ಟು ಉಪಯುಕ್ತವಾದ ಸೇವೆಗಳನ್ನು ಒದಗಿಸುತ್ತಿದೆ. . 2010ರಲ್ಲಿ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಸಹೋದರರು ಸ್ಥಾಪಿಸಿದ ಈ ಕಂಪನಿ ಪ್ರಮುಖವಾಗಿ ಷೇರು ಮಾರುಕಟ್ಟೆ, ಕರೆನ್ಸಿ, ಮತ್ತು ಕಮೋಡಿಟಿ ವ್ಯಾಪಾರ ಸೇವೆಗಳನ್ನು ಪೂರೈಸುತ್ತದೆ. ಇದೀಗ ಈ ಸಂಸ್ಥೆ ಒಂದು ಹೆಜ್ಜೆ ಮುಂದಿಟ್ಟುಕೊಂಡು ಬಂದಿದೆ. ಅದೇನೆಂದರೆ, ತನ್ನ ವ್ಯಾಪಾರ ವೇದಿಕೆಯಾದ ಕೈಟ್‌ಗೆ ಮಹತ್ವದ ನವೀಕರಣಗಳನ್ನು ಪರಿಚಯಿಸಿದೆ.

ನೂತನವಾಗಿ ಪರಿಚಯಿಸಲಾಗಿರುವ ಈ ನವೀಕರಣಗಳು, ಬಳಕೆದಾರರ ಅನುಭವವನ್ನು ಉತ್ತಮಗೊಳಿಸುವುದರ ಜೊತೆಗೆ, ವ್ಯಾಪಾರವನ್ನು ಹೆಚ್ಚು ಸುಲಭಗೊಳಿಸುವುದು ಮತ್ತು ಪರಿಣಾಮಕಾರಿ ಮಾಡುವುದು ಎಂಬ ಉದ್ದೇಶವನ್ನು ಹೊಂದಿವೆ. ಜೆರೋಧಾದ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಈ ಹೊಸ ಬದಲಾವಣೆಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಈ ಹೊಸ ನವೀಕರಣದ ಬಗ್ಗೆ ಘೋಷಣೆ ಮಾಡಿದ್ದಾರೆ.
ಜೆರೋಧಾ ಕೈಟ್‌ನ ಹೊಸ ವೈಶಿಷ್ಟ್ಯಗಳು:
ಆರ್ಡರ್ ಸ್ಲೈಸಿಂಗ್:
ಜೆರೋಧಾ ಕೈಟ್‌ನ ಹೊಸ ನವೀಕರಣದಲ್ಲಿ, ಆರ್ಡರ್ ಸ್ಲೈಸಿಂಗ್ ಎಂಬ ವೈಶಿಒಷ್ಟ್ಯ ಒಳಗೊಂಡಿದೆ. ಹೂಡಿಕೆದಾರರು ಅಥವಾ ವ್ಯಾಪಾರಿಗಳು ಬಹಳ ದೊಡ್ಡ ಮೊತ್ತದ ಷೇರುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಬಯಸಿದ್ದಾರೆ ಎಂದಾಗ, ವಿನಿಮಯದ ನಿಯಮಗಳು ಅಥವಾ ಮಾರುಕಟ್ಟೆಯ ದ್ರವ್ಯತೆ ಸಮಸ್ಯೆಗಳ ಕಾರಣದಿಂದ, ದೊಡ್ಡ ಆರ್ಡರ್‌ಗಳನ್ನು ನಿರ್ವಹಿಸಲು ತೊಂದರೆ ಎದುರಾಗಬಹುದು. ಆರ್ಡರ್ ಸ್ಲೈಸಿಂಗ್ ಎಂಬ ಹೊಸ ವೈಶಿಷ್ಟ್ಯವು ಹೀಗಾದ ಸಂದರ್ಭದಲ್ಲಿ ಆರ್ಡರ್ ಅನ್ನು ಸ್ವಯಂಚಾಲಿತವಾಗಿ ಸಣ್ಣ-ಸಣ್ಣ ಭಾಗಗಳಾಗಿ ವಿಭಜಿಸುತ್ತದೆ, ಇದರಿಂದಾಗಿ ಮಾರುಕಟ್ಟೆಯಲ್ಲಿ ಸುಲಭವಾಗಿ ಕಾರ್ಯಗತಗೊಳಿಸಬಹುದು.
ಲಭ್ಯವಿರುವ ಮಾರ್ಜಿನ್ ಪ್ರದರ್ಶನ:
ವ್ಯಾಪಾರ ಮಾಡುವ ಎಷ್ಟು ಹಣ ಲಭ್ಯವಿದೆ ಎಂಬ ಮಾರ್ಜಿನ್ ಅಷ್ಟು ನಿಖರವಾಗಿ ತಿಳಿದಿರುವುದಿಲ್ಲ. ಹಾಗೆಯೇ ಅದನ್ನು ಹೇಗೆ ಉಪಯೋಗಿಸಬಹುದು ಎಂಬ ಗೊಂದಲಗಳುಂಟಾಗುವುದು ಸಾಮಾನ್ಯ. ಆದರೆ ಈಗ ಕೈಟ್ ಆರ್ಡರ್ ವಿಂಡೋದಲ್ಲಿಯೇ ಲಭ್ಯವಿರುವ ಹಣದ ವಿವರಗಳನ್ನು ನೇರವಾಗಿ ತೋರಿಸುತ್ತದೆ, ಇದರಿಂದ ವ್ಯಾಪಾರಿಗಳಿಗೆ ಸ್ಪಷ್ಟತೆ ಹೆಚ್ಚಾಗುತ್ತದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
ವರ್ಧಿತ ಮಾರುಕಟ್ಟೆ ಆಳ:
ಇನ್ನು ಮಾರುಕಟ್ಟೆಯಲ್ಲಿ ದ್ರವ್ಯತೆ ಮತ್ತು ಬಿಡ್-ಆಸ್ಕ್‌ನ ಸೂಕ್ಷ್ಮವಾಗಿ ಗಮನಿಸಲು ಜೆರೋಧಾ ಕೈಟ್ ಸಹಕಾರಿಯಾಗಲಿದೆ. ಇದು ಮಾರುಕಟ್ಟೆಯ ಆಳದ ಮಾಹಿತಿಯನ್ನು ತನ್ನ ಆರ್ಡರ್ ವಿಂಡೋದಲ್ಲಿಯೂ ನೀಡುತ್ತದೆ. ಇದರಿಂದ ಬೇರೆ ಪರದೆಗಳಿಗೆ ಹೋಗುವ ಅಗತ್ಯವೂ ಇರುವುದಿಲ್ಲ. ಹಾಗೆಯೇ ತಮ್ಮ ವ್ಯಾಪಾರ ತಕ್ಷಣದ ಮಾಹಿತಿಯ ಆಧಾರದಲ್ಲಿ ನಿರ್ಧಾರ ಮಾಡಬಹುದು.
F&O ಪ್ರಮಾಣವನ್ನು ನೆನಪಿಡುವ ಸೌಲಭ್ಯ:
ಮತ್ತು ಈ ಹೊಸ ನವೀಕರಣದಲ್ಲಿ ಫ್ಯೂಚರ್ಸ್ ಮತ್ತು ಆಯ್ಕೆಗಳಿರುವುದರಿಂದ, ವ್ಯಾಪಾರ ಮಾಡುವವರು ಹಲವು ಬಾರಿ ನಿಗದಿತ ಪ್ರಮಾಣದ ಷೇರುಗಳನ್ನು ನಿರಂತರವಾಗಿ ಖರೀದಿಸುತ್ತಾ ಅಥವಾ ಮಾರುತ್ತಾ ಇರುತ್ತಾರೆ. ಆದರೆ ಪ್ರತಿಯೊಮ್ಮೆ ಪ್ರಮಾಣವನ್ನು ನಮೂದಿಸುವುದರಿಂದ ಸಮಯ ವ್ಯರ್ಥವಾಗಬಹುದು. ಈಗ ಕೈಟ್ ನಾವು ಹಿಂದೆ ನಮೂದಿಸಿದ ಪ್ರಮಾಣವನ್ನು ನೆನಪಿಟ್ಟುಕೊಳ್ಳುತ್ತದೆ. ಹೀಗಾಗಿ, ಆರ್ಡರ್ ವಿಂಡೋ ಮತ್ತೆ ತೆರೆಯಿದಾಗ, ಹಿಂದಿನ ಪ್ರಮಾಣ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತದೆ.
ಮಾರುಕಟ್ಟೆ ರಕ್ಷಣೆ:
ಒಂದುವೇಲೆ ಮಾರುಕಟ್ಟೆಯಲ್ಲಿ ಇದ್ದಕ್ಕಿದ್ದಂತೆ ಏರಿಳಿತ ಉಂಟಾದರೆ, ಅನೇಕ ವ್ಯಾಪಾರಿಗಳು ತೊಂದರೆಗೆ ಗುರಿಯಾಗುತ್ತಿದ್ರು. ವಿಶೇಷವಾಗಿ, ಮಾರುಕಟ್ಟೆ ಆದೇಶ ನೀಡಿದಾಗ, ಅದು ನಿರೀಕ್ಷೆಯಾದ ದರಕ್ಕಿಂತ ಹೆಚ್ಚಿನ ದರದಲ್ಲಿ ಕಾರ್ಯಗತಗೊಳ್ಳಬಹುದಾಗಿತ್ತು. ಆದರೆ ಇದನ್ನು ತಪ್ಪಿಸಲು ಹೊಸದಾಗಿ ಮಾರುಕಟ್ಟೆ ರಕ್ಷಣೆ ವೈಶಿಷ್ಟ್ಯವನ್ನು ಕೈಟ್ ಪರಿಚಯಿಸಿದೆ. ಇದು ಹಠಾತ್ತನೆ ಬದಲಾವಣೆಯಾದ ಸಂದರ್ಭದಲ್ಲಿ, ಮಾರುಕಟ್ಟೆ ಆರ್ಡರ್‌ನ ಕಾರ್ಯಗತಗೊಳಿಕೆಯನ್ನು ನಿಯಂತ್ರಿಸುವ ಮೂಲಕ ವ್ಯಾಪಾರ ಭದ್ರತೆಯನ್ನು ಹೆಚ್ಚಿಸುತ್ತದೆ.
ಹೊಸ ಬ್ಯಾಸ್ಕೆಟ್ ಐಕಾನ್:
ಇನ್ನು ಕೆಲವು ಹೂಡಿಕೆದಾರರು ಅಥವಾ ವ್ಯಾಪಾರಿಗಳು, ಒಂದೇ ಸಮಯದಲ್ಲಿ ಹಲವಾರು ಷೇರುಗಳನ್ನು ಖರೀದಿ ಮಾಡಲು ಅಥವಾ ಮಾರಾಟ ಮಾಡಲು ಬಯಸುತ್ತಾರೆ. ಅಂಥವರಿಗೆ ಇದು ಉಪಯುಕ್ತವಾಗಿದೆ. . ಇದರಿಂದ ಕೇವಲ ಕೆಲವು ಕ್ಲಿಕ್‌ಗಳಲ್ಲಿ ಒಂದೇ ಬಾರಿಗೆ ಹಲವಾರು ಷೇರುಗಳಾದರೂ ವ್ಯವಹರಿಸಬಹುದು. ಹೀಗಾಗಿ, ಸಂಕೀರ್ಣ ವ್ಯಾಪಾರ ತಂತ್ರಗಳು ಹೆಚ್ಚು ಸುಲಭವಾಗುತ್ತದೆ ಮತ್ತು ವ್ಯಾಪಾರದ ದಕ್ಷತೆಯನ್ನು ಹೆಚ್ಚಿಸುತ್ತದೆ..
ಒಟ್ಟಾರೆ, ಜೆರೋಧಾ ಈ ಹೊಸ ಫೀಚರ್‌ಗಳ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ನಿರ್ಧರಿಸಿದೆ ಮತ್ತು ವ್ಯಾಪಾರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವತ್ತ ಒತ್ತಾಯ ನೀಡಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications