ಬೆಂಗಳೂರು, ಜುಲೈ 13: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಸಕ್ತ ಅವಧಿ ಆಡಳಿತದಲ್ಲಿನ ಮೊದಲ ಬಜೆಟ್‌ಮಂಡನೆಗೆ ಕೌಂಟ್‌ಡೌನ್‌ಶುರುವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳು, ಹಣಕಾಸು ನೀತಿ ಸುಧಾರಣೆ ಹಾಗೂ ಉದ್ಯೋಗಾವಕಾಶ ಸೃಷ್ಟಿಯ ಯೋಜನೆಗಳು ಪ್ರಸ್ತಾಪವಾಗುವ ನಿರೀಕ್ಷೆಯಲ್ಲಿ ವಿವಿಧ ವಲಯಗಳ ಜನರಿದ್ದಾರೆ.
ಹೀಗಿರುವಾಗ, ದೇಶದ ಸ್ಟಾಕ್‌ಮಾರ್ಕೆಟ್‌ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಝೆರೋಧಾ ಕಂಪೆನಿಯ ಸಹ ಸಂಸ್ಥಾಪಕರಾದ ನಿತಿನ್‌ಕಾಮತ್‌ಅವರು ಪ್ರಸ್ತಾಪಿಸಿರುವ ವಿಚಾರವೊಂದು ಸಾಕಷ್ಟು ಗಮನಸೆಳೆಯುತ್ತಿವೆ. ಭಾರತೀಯ ಆರ್ಥಿಕತೆಯು ಸದ್ಯ ಎದುರಿಸುತ್ತಿರುವ ದೊಡ್ಡ ಸವಾಲುಗಳ ಪೈಕಿ ನಿರುದ್ಯೋಗ ಸಮಸ್ಯೆಯೂ ಒಂದು ಎಂದು ಹೇಳಿದ್ದಾರೆ. ತಮ್ಮ ಎಕ್ಸ್‌ಖಾತೆಯಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಕಾಮತ್‌ಅವರು, ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ದೇಶದ ಆರ್ಥಿಕ ಬೆಳವಣಿಗೆಯು ಏರುಪೇರು ಸೃಷ್ಟಿಸುತ್ತದೆ ಎಂದಿದ್ದಾರೆ.

ಹಾಗಾದರೆ ಇದಕ್ಕೆ ಪರಿಹಾರ ಏನು ಎನ್ನುವುದರ ಬಗ್ಗೆಯೂ ನಿತಿನ್‌ಕಾಮತ್‌ಅಭಿಪ್ರಾಯ ನೀಡಿದ್ದಾರೆ. ಸಣ್ಣ ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಉದ್ಯಮವನ್ನು ಫೋಷಿಸಿ ಬೆಳೆಸುವ ಕಾರ್ಯ ಆಗಬೇಕು. ವೆಂಚರ್‌ಕ್ಯಾಪಿಟಲ್ಸ್‌ನವರು ಈ ಪ್ರದೇಶಗಳಿಗೆ ಹೋಗುವುದಿಲ್ಲ. ಹೀಗಿರುವಾಗ, ಆರ್ಥಿಕವಾಗಿ ಸದೃಢವಾಗಿರುವ ಇತರೆ ವ್ಯಕ್ತಿಗಳು ಈ ಭಾಗದ ಉದ್ಯಮಶೀಲತೆಯನ್ನು ಬೆಳೆಸುವುದಕ್ಕೆ ಉತ್ತಮ ಆಯ್ಕೆಯಾಗಿದೆ.
ನಿತಿನ್‌ಕಾಮತ್‌ಹೇಳುವ ಪ್ರಕಾರ, ಮುಂಬರುವ ಬಜೆಟ್‌ಮಂಡನೆಯಲ್ಲಿ ಸೆಕ್ಷನ್ 54 ಎಫ್ ಬಗ್ಗೆ ಗಮನಹರಿಸಬೇಕು. ಇದು ಪ್ರಸ್ತುತ ವಸತಿ ಆಸ್ತಿಯಲ್ಲಿ ಮರುಹೂಡಿಕೆ ಮಾಡಿದರೆ ಆಸ್ತಿಗಳ ಮಾರಾಟದಿಂದ ಬಂಡವಾಳ ಲಾಭದ ಮೇಲೆ ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ಈ ವಿನಾಯಿತಿಯೊಳಗೆ ಸ್ಟಾರ್ಟ್‌ಅಪ್‌ಗಳಲ್ಲಿನ ಹೂಡಿಕೆಗಳು ಕೂಡ ಆರಂಭಿಕ ಹೂಡಿಕೆಗೆ ಮುಖ್ಯವಾಹಿನಿಯಾಗಬಹುದು ಎನ್ನುವ ಸಲಹೆ ನೀಡಿದ್ದಾರೆ.
ಹೀಗಿರುವಾಗ, ಸರ್ಕಾರವು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದಕ್ಕೆ ಒತ್ತು ನೀಡಬೇಕು. ಭಾರತದ ಶೇ.7ರಷ್ಟು ಆರ್ಥಿಕ ಬೆಳವಣಿಗೆಯ ನಡುವೆಯೂ ಸರಿಯಾದ ಉದ್ಯೋಗಾವಕಾಶಗಳು ಸೃಷ್ಟಿಯಾಗದಿರುವುದು ಸರ್ಕಾರದಲ್ಲಿ ನೀತಿಗಳನ್ನು ರೂಪಿಸುವವರ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿಯೂ ಈ ವಿಚಾರ ಮಹತ್ವದ ವಿಚಾರವಾಗಿ ಚರ್ಚೆ ಹುಟ್ಟು ಹಾಕಿತ್ತು. ಹೀಗಿರುವಾಗ, ಮುಂಬರುವ ಬಜೆಟ್‌ನಲ್ಲಿ ಅತಿಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದು ಎನ್ನುವ ಬಹುದೊಡ್ಡ ನಿರೀಕ್ಷೆ ಕೂಡ ಜನರ ನಡುವೆ ಇದೆ.
ವಿಶ್ವಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ, ಭಾರತವು 593.7 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದ್ದು, ವ್ಯವಸ್ಥಿತ ವಲಯದಲ್ಲಿಯೂ ಅಂದಾಜು 90%ರಷ್ಟುನ್ನು ಹೊಂದಿದೆ. ವಾರ್ಷಿಕ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಪ್ರಕಾರ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ದರವು 2017-18ರಲ್ಲಿ 6.1% ಇದ್ದು, ಅದು 2022-23ರ ಅವಧಿಯಲ್ಲಿ 3.2% ಕ್ಕೆ ಕುಸಿದಿದೆ. ಆದಾಗ್ಯೂ, ಬ್ಯಾಂಕಿಂಗ್, ಸರ್ಕಾರಿ, ಶಿಕ್ಷಣ ಸೇರಿದಂತೆ ವ್ಯವಸ್ಥಿತವಾದ ಉದ್ಯೋಗಾವಕಾಶಗಳು ಕಡಿಮೆಯಾಗಿದೆ.
ಇನ್ನೊಂದೆಡೆ, ವಿಶ್ವ ಬ್ಯಾಂಕ್‌ಕೂಡ ಉದ್ಯೋಗ ಸೃಷ್ಟಿ ಕೊರತೆ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ವಿಫಲವಾದಲ್ಲಿ ಅದು ತನ್ನ ಜನಸಂಖ್ಯಾ ಲಾಭಾಂಶವನ್ನು ಕಳೆದುಕೊಳ್ಳಬಹುದು ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ. ಇನ್ನು ಭಾರತದಲ್ಲಿ ಶೇ.82.9ರಷ್ಟು ನಿರುದ್ಯೋಗಿಗಳು ಯುವ ಸಮುದಾಯದವರು ಎನ್ನುವುದು ಮತ್ತೊಂದು ಆತಂಕಕಾರಿ ವಿಚಾರವಾಗಿದೆ ಎಂದು ವರದಿಯಾಗಿದೆ.


Click it and Unblock the Notifications