ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳಾದ ಝೊಮ್ಯಾಟೊ ಮತ್ತು ಸ್ವಿಗ್ಗಿ ಹಬ್ಬದ ಸೀಸನ್ ನಡುವೆಯೇ ಕೆಲವು ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 10 ರೂಪಾಯಿಗೆ ಏರಿಕೆ ಮಾಡಿದೆ.
ಹಬ್ಬದ ಸಮಯದಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಶುಲ್ಕವನ್ನು ಹೆಚ್ಚುಸುವ ಮೂಲಕ ಶಾಕ್ ನೀಡಿದ್ದು ಹಬ್ಬದ ಸೀಸನ್‌ನಲ್ಲಿ ಆರ್ಡರ್‌ಗಳು ಹೆಚ್ಚಾಗಿರುವುದರಿಂದ ಪ್ರತಿ ಆರ್ಡರ್‌ಗೆ ರೂ. 10 ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಿದೆ. ಈ ಹೊಸ ಶುಲ್ಕವು 'ಫೆಸ್ಟಿವ್ ಸೀಸನ್ ಪ್ಲಾಟ್‌ಫಾರ್ಮ್ ಫೀ' ಎಂದು ಕರೆಯಲಾಗಿದೆ.
ಕೆಲವು ನಗರಗಳಲ್ಲಿ ಈ ಹೊಸ ಶುಲ್ಕವು ಈಗಾಗಲೇ ಜಾರಿಯಾಗಿದೆ ಮತ್ತು ದೆಹಲಿಯಲ್ಲಿ ಈಗಾಗಲೇ ಪ್ರತಿ ಆರ್ಡರ್‌ಗೆ ರೂ. 10 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ.
ಹಬ್ಬದ ಸೀಸನ್ ನಲ್ಲಿ ನಮ್ಮ ಪ್ಲಾಟ್‌ಫಾರ್ಮ್ ಶುಲ್ಕವನ್ನು 10 ರೂ.ಗೆ ಹೆಚ್ಚಿಸಿದೆ ಎಂಬ ವರದಿಯ ಮೇಲೆ ಕಂಪನಿಯು ತನ್ನ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಸ್ಪಷ್ಟನೆ ನೀಡಿದ್ದು "ನಾವು ನಿರ್ದಿಷ್ಟ ನಗರಗಳಲ್ಲಿ ಬುಧವಾರ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದ್ದೇವೆ" ಎಂದು ಹೇಳಿದೆ.

ರಾಷ್ಟ್ರ ರಾಜಧಾನಿಯಲ್ಲಿ, ಝೊಮ್ಯಾಟೊ ಈಗ "ಹಬ್ಬದ ಋತುವಿನ ವೇದಿಕೆ ಶುಲ್ಕ" ಎಂದು 10 ರೂಗಳನ್ನು ವಿಧಿಸುತ್ತಿದೆ. ನಮ್ಮ ಪ್ಲಾಟ್‌ಫಾರ್ಮ್ ಶುಲ್ಕದಲ್ಲಿನ ಇಂತಹ ಬದಲಾವಣೆಗಳು ವಾಡಿಕೆಯ ವ್ಯವಹಾರದ ವಿಷಯವಾಗಿದೆ ಮತ್ತು ಕಾಲಕಾಲಕ್ಕೆ ಮಾಡಲಾಗುತ್ತದೆ ಮತ್ತು ನಗರದಿಂದ ನಗರಕ್ಕೆ ಬದಲಾಗಬಹುದು" ಎಂದು ಕಂಪನಿಯು ಯಾವ ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಮತ್ತು ಎಷ್ಟು ಹೆಚ್ಚಿಸಿದೆ ಎಂಬುದನ್ನು ನಿಖರವಾಗಿ ಉಲ್ಲೇಖಿಸದೆ ಹೇಳಿದೆ.
ಇನ್ನೊಂದೆಡೆ ಸ್ವಿಗ್ಗಿ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಏರಿಕೆ ಮಾಡಿದ್ದು ಆದರೆ ಈ ಹೆಚ್ಚಳದ ಬಗ್ಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. Swiggy 2023 ರಲ್ಲಿಏಪ್ರಿಲ್ ನಲ್ಲಿ ₹2 ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತ್ತು. ಇದಾದ ಬೆನ್ನಲ್ಲೇ ಅದೇ ವರ್ಷ ಆಗಸ್ಟ್‌ನಲ್ಲಿ Zomato ಕೂಡಾ ರೀತಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿತು. ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಸದಸ್ಯತ್ವ ಯೋಜನೆಗಳಿಗೆ ದಾಖಲಾದ ಗ್ರಾಹಕರು ಇವುಗಳನ್ನು ಲೆಕ್ಕಿಸದೆ ಆಹಾರವನ್ನು ಆರ್ಡರ್ ಮಾಡುವುದು ಮುಂದುವರಿಸಿದ್ದಾರೆ. ಪ್ಲಾಟ್‌ಫಾರ್ಮ್ ಶುಲ್ಕವು ವಿತರಣಾ ಶುಲ್ಕ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ರೆಸ್ಟೋರೆಂಟ್ ಶುಲ್ಕಗಳು ಮತ್ತು ವಿಧಿಸಲಾಗುವ ನಿರ್ವಹಣಾ ಶುಲ್ಕಗಳಿಗಿಂತ ವಿಭಿನ್ನ ಶುಲ್ಕವಾಗಿದೆ.
ಸ್ವಿಗ್ಗಿ ಆರಂಭಿಸಿದೆ 'ಸ್ವಿಗ್ಗಿ ಸೀಲ್'
ಇನ್ನೊಂದು ಕಡೆ ಸ್ವಿಗ್ಗಿ ಭಾರತದ 650 ನಗರಗಳಲ್ಲಿ 'ಸ್ವಿಗ್ಗಿ ಸೀಲ್' ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ. ಇದು ತನ್ನ ಪಾಲುದಾರ ರೆಸ್ಟೋರೆಂಟ್ ಒದಗಿಸುವ ಆಹಾರದ ನೈರ್ಮಲ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 'ಸ್ವಿಗ್ಗಿ ಸೀಲ್' ರೆಸ್ಟೋರೆಂಟ್‌ಗಳು ಸರಿಯಾದ ಗುಣಮಟ್ಟ ಮತ್ತು ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸುವುದಾಗಿದೆ. ಸ್ವಿಗ್ಗಿ ಸೀಲ್ ಎಂಬ ಹೊಸ ಯೋಜನೆಯನ್ನು ಪುಣೆಯಲ್ಲಿ ಪ್ರಾರಂಭಿಸಲಾಗಿದ್ದು, ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ.
ಸ್ವಿಗ್ಗಿ ಸೀಲ್ ಎಂದರೇನು?
ಇದು ರೆಸ್ಟೋರೆಂಟ್‌ಗಳಿಗೆ ನೀಡಲಾಗುವ ಒಂದು ರೀತಿಯ ಗೌರವದ ಬ್ಯಾಡ್ಜ್ ಆಗಿದೆ. ಈ ಬ್ಯಾಡ್ಜ್ ಅನ್ನು ಪಡೆಯಲು ರೆಸ್ಟೋರೆಂಟ್‌ಗಳು ಸ್ವಿಗ್ಗಿ ನಿಗದಿಪಡಿಸಿದ ಕೆಲವು ಮಾನದಂಡಗಳನ್ನು ಪೂರೈಸಬೇಕು. ಈ ಮಾನದಂಡಗಳನ್ನು ಪರಿಶೀಲಿಸಲು ಸ್ವಿಗ್ಗಿ ತಂಡವು ರೆಸ್ಟೋರೆಂಟ್‌ಗಳನ್ನು ಆಡಿಟ್ ಮಾಡುತ್ತದೆ. ಗ್ರಾಹಕರ ವಿಮರ್ಶೆಗಳು ಮತ್ತು ಪ್ರತಿಕ್ರಿಯೆಗಳನ್ನೂ ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮಾನದಂಡಗಳ ಮೇಲೆ ಯಾವುದೇ ರೆಸ್ಟೋರೆಂಟ್ ರಾಜಿ ಮಾಡಿಕೊಂಡರೆ ಅದು ಅಸ್ಕರ್ ಸೀಲ್ ಅನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು Swiggy ಸ್ಪಷ್ಟಪಡಿಸಿದೆ.


Click it and Unblock the Notifications