ಆಹಾರ ವಿತರಣಾ ದೈತ್ಯ ಸಂಸ್ಥೆಯಾಗಿರುವ ಝೊಮ್ಯಾಟೊದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಅಕೃತಿ ಚೋಪ್ರಾ ಅವರು ಕಂಪನಿಯಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. ಹೌದು.. ಝೊಮ್ಯಾಟೊದ ಸಹ ಸಂಸ್ಥಾಪಕಿಯಾಗಿದ್ದ ಝೊಮ್ಯಾಟೊದ ಸಹ ಸಂಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆಕೃತಿ ಚೋಪ್ರಾ ಆಹಾರ ವಿತರಣಾ ಸಂಸ್ಥೆ ಝೊಮ್ಯಾಟೊದೊಂದಿಗೆ ಸುಮಾರು 13 ವರ್ಷಗಳ ಸುದೀರ್ಘ ಪ್ರಯಾಣದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬ್ಲಿಂಕಿಟ್ ಸಹ-ಸಂಸ್ಥಾಪಕ, ಸಿಇಒ ಅಲ್ಬಿಂದರ್ ದಿಂಡ್ಸಾ ಅವರ ಪತ್ನಿಯಾಗಿರುವ ಶ್ರೀಮತಿ ಆಕೃತಿ ಅವರು ಒಂದು ದಶಕದಿಂದ ಝೊಮ್ಯಾಟೊದ ಬೆಳವಣಿಗೆಯಲ್ಲಿ ಪ್ರಮುಖ ಭಾಗವಾಗಿದ್ದರು. ಕಂಪನಿಯಿಂದ ಉನ್ನತ ಮಟ್ಟದ ಅನೇಕರ ನಿರ್ಗಮನಗಳ ನಡುವೆಯೇ ಸ್ಥಾಪಕ ಸದಸ್ಯರಲ್ಲಿ ಪ್ರಮುಖರಾಗಿದ್ದ ಅಕೃತಿಯವರ ರಾಜೀನಾಮೆಯು ಬಂದಿದೆ.

ಇತ್ತೀಚಿನ ಕೆಲ ವರ್ಷಗಳ ಬೆಳವಣಿಗೆಯನ್ನು ಗಮನಿಸುವುದಾದರೆ, ಕಂಪನಿಯು ಮಾಜಿ CTO ಗುಂಜನ್ ಪಾಟಿದಾರ್, ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಮತ್ತು ರಾಹುಲ್ ಗಂಜೂ ಮತ್ತು ಸಿದ್ಧಾರ್ಥ್ ಝಾವರ್ ಅವರಂತಹ ಪ್ರಮುಖ ನಾಯಕರು ಸೇರಿದಂತೆ ಹಲವಾರು ಹಿರಿಯ ಕಾರ್ಯನಿರ್ವಾಹಕರ ನಿರ್ಗಮನವನ್ನು ಕಂಡಿದೆ. ಅನೇಕ ಸಹ-ಸಂಸ್ಥಾಪಕರು ಮತ್ತು ಹಿರಿಯ ಕಾರ್ಯನಿರ್ವಾಹಕರ ನಿರ್ಗಮನವು ಝೊಮ್ಯಾಟೊ ಆಂತರಿಕ ಮತ್ತು ಕಾರ್ಯತಂತ್ರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕಂಪನಿಯು ರಾಹುಲ್ ಗಂಜೂ ಅವರಂತಹ ಪ್ರಮುಖ ಸಿಬ್ಬಂದಿಯನ್ನು ಸ್ಥಾನವನ್ನು ಮರು ತುಂಬುವ ಮೂಲಕ ಕೆಲಸವನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಕಳವಳಕಾರಿಯಾಗಿದೆ. ಕಂಪನಿಯು ಸೆಪ್ಟೆಂಬರ್ 27ರಂದು ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು, ಸೆಬಿ ಲಿಸ್ಟಿಂಗ್ ರೆಗ್ಯುಲೇಷನ್‌ನ ನಿಯಮ 30ರ ಅನುಸಾರವಾಗಿ, ಹಿರಿಯ ನಿರ್ವಹಣಾ ಸಿಬ್ಬಂದಿ (SMP) ಎಂದು ಗೊತ್ತುಪಡಿಸಿದ ಸಹ ಸಂಸ್ಥಾಪಕಿ ಮತ್ತು ಮುಖ್ಯ ಜನರ ಅಧಿಕಾರಿ ಶ್ರೀಮತಿ ಅಕ್ರಿತಿ ಚೋಪ್ರಾ ಸೆಪ್ಟೆಂಬರ್ 27, 2024ರಂದು ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದೆ.
ಝೊಮ್ಯಾಟೊದ ಮಾಜಿ ಸಹ-ಸಂಸ್ಥಾಪಕರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಅವರಿಗೆ ಇಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. "ನಾನು ನಿಮ್ಮಲ್ಲಿ ಚರ್ಚಿಸಿದಂತೆ, ಇಂದು ಸೆಪ್ಟೆಂಬರ್ 27, 2024 ರಿಂದ ಜಾರಿಗೆ ಬರುವಂತೆ ನನ್ನ ರಾಜೀನಾಮೆಯನ್ನು ಔಪಚಾರಿಕವಾಗಿ ನೀಡುತ್ತಿದ್ದೇನೆ. ಈ 13 ವರ್ಷಗಳ ಪಯಣ ಅನನ್ಯ ಮತ್ತು ಸಮೃದ್ಧವಾದ್ದವಾಗಿತ್ತು. ಎಲ್ಲದಕ್ಕೂ ಧನ್ಯವಾದಗಳು. ನಿಮಗೆ ಮತ್ತು ಎಟರ್ನಲ್‌ಗೆ ಶುಭ ಹಾರೈಸುತ್ತೇನೆ" ಚೋಪ್ರಾ ಅವರು ತನ್ನ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಇದನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಚೋಪ್ರಾ ಅವರು ನವೆಂಬರ್ 2011ರಲ್ಲಿ ಹಣಕಾಸು ಮತ್ತು ಕಾರ್ಯಾಚರಣೆಗಳ ಹಿರಿಯ ವ್ಯವಸ್ಥಾಪಕರಾಗಿ ಝೊಮ್ಯಾಟೊಗೆ ಸೇರ್ಪಡೆಗೊಂಡರು. 2012ರ ಸೆಪ್ಟೆಂಬರ್‌ನಲ್ಲಿ ಮೇಲೆ ತಿಳಿಸಿದ ಇಲಾಖೆಯ ಉಪಾಧ್ಯಕ್ಷ ಹುದ್ದೆಗೆ ಬಡ್ತಿ ಪಡೆದರು. 6 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಅವರು 2019ರಲ್ಲಿ ಏಪ್ರಿಲ್ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ನಂತರ ಅವರು ಅಕ್ಟೋಬರ್ 2020ರಲ್ಲಿ ಪೀಪಲ್ ಡೆವಲಪ್‌ಮೆಂಟ್ ಮುಖ್ಯಸ್ಥ ಹುದ್ದೆಗೆ ಏರಿದರು. ಜೂನ್ 2021ರಲ್ಲಿ ಸಂಸ್ಥಾಪಕರಾಗಿ ಪರಿವರ್ತನೆಗೊಂಡು, 2024ರ ಸೆಪ್ಟೆಂಬರ್ 27ರವರೆಗೆ ಅಂದರೆ ರಾಜೀನಾಮೆ ಸಲ್ಲಿಸುವವರೆಗೆ ಇದೇ ಹುದ್ದೆಯಲ್ಲಿ ಮುಂದುವರೆದರು.
ಸೆಪ್ಟೆಂಬರ್ 27ರಂದು Zomato Ltd.ನ ಷೇರುಗಳು NSE ನಿಫ್ಟಿ 50ನಲ್ಲಿ 0.14% ಕುಸಿತಕ್ಕೆ ಹೋಲಿಸಿದರೆ, NSEನಲ್ಲಿ 2.08%ನಷ್ಟು ರೂ.278ಕ್ಕೆ ಕಡಿಮೆಯಾಗಿದೆ. ಇನ್ನು relative strength ಸೂಚ್ಯಂಕವು 49.60ರಷ್ಟಿತ್ತು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications