ಒಂದು ಸಮಯದಲ್ಲಿ ಭಾರತೀಯರು ಹೊಟೇಲ್ ಅಥವಾ ರೆಸ್ಟೋರೆಂಟ್ ಆಹಾರಗಳನ್ನು ಅಲ್ಲಿಯೇ ಮುಖತಃ ಭೇಟಿ ನೀಡಿ ಖರೀದಿಸುವ ಸಮಯವಿತ್ತು. ಆದರೆ ಸದ್ಯ ಆಧುನಿಕ ಜಗತ್ತಿನಲ್ಲಿ ಮಹತ್ತರ ಬದಲಾವಣೆ ಕಂಡಿದ್ದು, ಭಾರತದಲ್ಲಿ ಇದು ಪ್ರತಿಫಲನವಾಗಿದೆ. ಸದ್ಯ ಝೊಮ್ಯಾಟೋ, ಸ್ವಿಗ್ಗಿಯಂಥ ಸಂಸ್ಥೆಗಳು ಬಂದ ಬಳಿಕ ರೆಸ್ಟೋರೆಂಟ್ ಗಳಿಂದ ನೇರವಾಗಿ ಆಹಾರವನ್ನು ಮನೆಗೆ ಆರ್ಡರ್ ಮನೆಗೆ ಆರ್ಡರ್ ಮಾಡಿಕೊಳ್ಳುವ ವ್ಯವಸ್ಥೆ ಬಂದಿದೆ. ಅದರಲ್ಲೂ 2.83 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಝೊಮ್ಯಾಟೋ ಕ್ರಾಂತಿಕಾರಕ ಬದಲಾವಣೆ ಮೂಲಕ ಭಾರತದೆಲ್ಲೆಡೆ ಈಗಾಗಲೇ ಜನಮನ್ನಣೆ ಪಡೆದುಕೊಂಡಿದೆ. ದೀಪಿಂದರ್ ಗೋಯಲ್ ಅವರ ನೇತೃತ್ವದ ಗುರ್ಗಾಂವ್ ಮೂಲದ ಆಹಾರ ಮತ್ತು ದಿನಸಿ ವಿತರಣಾ ಸಂಸ್ಥೆ ಝೊಮ್ಯಾಟೋ ಸದ್ಯ ತನ್ನ ಕೆಲಸ ಕಾರ್ಯದ ನೀತಿಯಲ್ಲಿ ಹತ್ತು ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಮತ್ತಷ್ಟು ಕ್ರಾಂತಿಕಾರಕ ರೀತಿಯಲ್ಲಿ ಮುನ್ನಡೆಯುತ್ತಿದೆ. ಆದರೆ ಇದೇ ಹಂತದಲ್ಲಿ ಸಂಸ್ಥೆಗೆ ದೊಡ್ಡ ಆಘಾತ ಎದುರಾಗಿದ್ದು, ಕಂಪೆನಿಯಲ್ಲಿ ಕಳೆದ ಆರು ವರ್ಷಗಳಿಂದ ಕಂಪೆನಿಯ ಜಾಗತಿಕ ಹಣಕಾಸು ಮುಖ್ಯಸ್ಥ ಮತ್ತು ಬಿಸಿನೆಸ್-ಟು-ಬಿಸಿನೆಸ್ ಕಿರಾಣಿ ಸರಬರಾಜು ಲಂಬವಾದ ಹೈಪರ್‌ಪ್ಯೂರ್‌ನ ಮುಖ್ಯ ಹಣಕಾಸು ಅಧಿಕಾರಿ (CFO) ಹುದ್ದೆಯಲ್ಲಿದ್ದ ಹೇಮಲ್ ಜೈನ್ ಅವರು ಸದ್ಯ ರಾಜೀನಾಮೆ ನೀಡಿದ್ದು, ಸಹಜವಾಗಿಯೇ ಆಘಾತ ಕಂಪೆನಿಗೆ ಆಘಾತ ತಂದಿದೆ. ಈಗಾಗಲೇ ಕಂಪೆನಿಯ ಪ್ರಮುಖ ಹುದ್ದೆಗೆ ರಾಜೀನಾಮೆ ನೀಡಿರುವ ಹೇಮಲ್ ಅವರ ಕೆಲಸದ ಅವಧಿ ಮುಂದಿನ ವರ್ಷದ ಜನವರಿ 31ಕ್ಕೆ ಮುಕ್ತಾಯವಾಗಲಿದೆ.
ಹೇಮಲ್ ಕಾರ್ಯವೈಖರಿ ಹೇಗಿತ್ತು?
ಸದ್ಯ ಝೊಮ್ಯಾಟೊ ಭಾರತದಲ್ಲಿ ತನ್ನದೇ ಆದ ಯಶಸ್ಸಿನ ವೇಗದಲ್ಲಿ ಮುಂದುವರೆಯುತ್ತಿರುವುದಕ್ಕೆ ಹೇಮಲ್ ಕೂಡ ಕಾರಣಕರ್ತರಾಗಿದ್ದರು ಎಂದರೆ ತಪ್ಪಾಗಲಾರದು. 2018ರಲ್ಲಿ ಝೊಮ್ಯಾಟೋ ಸಂಸ್ಥೆಗೆ ಸೇರಿದ್ದ ಹೇಮಲ್ ಅವರು ತನ್ನ ಅಧಿಕಾರಾವಧಿಯಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದು, ಕಂಪೆನಿಯನ್ನು ಸಶಕ್ತರನ್ನಾಗಿ ಮಾಡಿದ್ದರು. ಆದರೆ ಸದ್ಯ ʻಇತರೆಡೆಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಯೋಜನೆಯಡಿಯಲ್ಲಿ ಹೇಮಲ್ ರಾಜೀನಾಮೆ ನೀಡಿದ್ದಾರೆʼ ಎಂದು ಕಂಪೆನಿ ತಿಳಿಸಿದೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಝೊಮ್ಯಾಟೊ ಕಂಪೆನಿಯು ಬಡ್ಡಿ ಮತ್ತು ದಂಡ ಸೇರಿದಂತೆ 803.4 ಕೋಟಿ ರೂಪಾಯಿಗಳ ತೆರಿಗೆ ಬೇಡಿಕೆಯನ್ನು ಪಡೆದುಕೊಂಡಿತ್ತು. ತೆರಿಗೆ ಬೇಡಿಕೆ ಪಡೆದುಕೊಂಡ ಕೆಲವೇ ದಿನಗಳಲ್ಲಿ ಇದೀಗ ಹೇಮಲ್ ಅವರು ಕಂಪೆನಿಯ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹೇಮಲ್ ಅವರು ಎಫ್‌ಎಂಸಿಜಿ, ಆಹಾರ ತಂತ್ರಜ್ಞಾನ ಮತ್ತು ಇ-ಕಾಮರ್ಸ್‌ನಂತಹ ಕ್ಷೇತ್ರಗಳಲ್ಲಿ ಸುಮಾರು 18 ವರ್ಷಗಳ ಅಗಾಧ ಅನುಭವವನ್ನು ಹೊಂದಿದ್ದಾರೆ.

ಮುಂಚೆ ಯಾವ ಹುದ್ದೆಯಲ್ಲಿದ್ದರು
ಇನ್ನು 2018ರಲ್ಲಿ ಝೊಮ್ಯಾಟೋ ಸಂಸ್ಥೆಗೆ ಸೇರಿದ್ದ ಹೇಮಲ್ ಅವರು ಇದಕ್ಕೂ ಮುನ್ನ ಹಿಂದೂಸ್ತಾನ್ ಯೂನಿಲಿವರ್‌ನಲ್ಲಿ ಸುಮಾರು 12 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಅನುಭವ ಹೊಂದಿದ್ದರು. ಅದೂ ಅಲ್ಲದೆ ಹೇಮಲ್ ಐಐಎಂ ಬೆಂಗಳೂರಿನ ಹಳೆ ವಿದ್ಯಾರ್ಥಿನಿ ಕೂಡ ಆಗಿದ್ದಾರೆ. ಲಿಂಕ್ಡ್‌ಇನ್ ಮಾಹಿತಿ ಪ್ರಕಾರ, ಹೇಮಲ್ ಅವರು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಚಾರ್ಟರ್ಡ್ ಅಕೌಂಟೆಂಟ್ ಅನ್ನು ಪೂರ್ಣಗೊಳಿಸಿದ್ದಾರೆ.
ರಾಜೀನಾಮೆ ಪತ್ರ
" ಕಳೆದ ಆರು ವರ್ಷಗಳಿಂದ ಝೊಮಾಟೊದ ಪಯಣ ಮತ್ತು ಅದರ ಉದ್ಯಮಶೀಲ ತಂಡದ ಭಾಗವಾಗಲು ನಾನು ಸಂತಸ ಪಡೆದಿದ್ದೇನೆ. ನಾನು ಬೇರೆ ಮಾರ್ಗವನ್ನು ಅನ್ವೇಷಿಸಲು ಸಲುವಾಗಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದು ಜೈನ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಕಂಪೆನಿ ತೊರೆದ ಹಲವು ಪ್ರಮುಖರು
ಇನ್ನು ಝೊಮ್ಯಾಟೋ ಸಂಸ್ಥೆಯ ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಪ್ರಮುಖ ನಾಯಕರು ರಾಜೀನಾಮೆ ನೀಡಿರುವುದು ಸದ್ಯ ಬೆಳಕಿಗೆ ಬಂದಿದೆ. ಹೇಮಲ್ ಅವರಿಗೂ ಮುನ್ನ ಝೊಮ್ಯಾಟೋ ಸಂಸ್ಥೆಯ ಸಹ-ಸಂಸ್ಥಾಪಕಿ ಮತ್ತು ಮುಖ್ಯ ಜನರ ಅಧಿಕಾರಿ ಅಕೃತಿ ಚೋಪ್ರಾ ಅವರು ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಅದೂ ಅಲ್ಲದೆ ಬಳಿಕ ಝೊಮ್ಯಾಟೋದ ಸ್ವತಂತ್ರ ನಿರ್ದೇಶಕ ಗುಂಜನ್ ತಿಲಕ್ ರಾಜ್ ಸೋನಿ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಸದ್ಯ ಸಂಸ್ಥೆಯ ಮುಖ್ಯ ಹುದ್ದೆಯಲ್ಲಿದ್ದ ಹೇಮಲ್ ಕೂಡ ಕಂಪೆನಿ ತೊರೆದಿದ್ದಾರೆ.


Click it and Unblock the Notifications