ಜನಪ್ರಿಯ ಆಹಾರ ವಿತರಕರಲ್ಲಿ ಒಂದಾಗಿರುವ ಝೊಮ್ಯಾಟೋ ಒಂದು ಹೊಸ ಆಫರ್ ಅನ್ನ ಜನರ ಮುಂದೆ ಇಡ್ತಿದೆ. ಝೊಮ್ಯಾಟೋ ಗ್ರಹಕರನ್ನ ಸೆಳೆಯಲು ಈ ಆಫರ್‌ಅನ್ನ ಝೊಮ್ಯಾಟೊ ತರ್ತಿದೆ.
ಝೊಮಾಟೊ ಬ್ಲ್ಯಾಕ್ ಫ್ರೈಡೇ ಆಫರ್ ನೀಡುವ ಮೂಲಕ ಝೋಮ್ಯಾಟೊ ತನ್ನ ಝೊಮ್ಯಾಟೊ ಗೋಲ್ಡ್ ಸದಸ್ಯತ್ವಕ್ಕಾಗಿ ವಿಶೇಷ ಕೊಡುಗೆಯನ್ನು ಬಿಡುಗಡೆ ಮಾಡಿದೆ, ಇದು ಕೇವಲ 30 ರೂಗಳಿಂದ ಶುರುವಾಗಿದ್ದು, ಆರು ತಿಂಗಳ ಕಾಲ ಗ್ರಹಕರು ಈ ಸದಸ್ಯತ್ವವನ್ನ ಇಟ್ಟುಕೊಂಡು 200 ರೂಗಳಿಗಿಂತ ಹೆಚ್ಚಿನ ಆರ್ಡರ್‌ಗಳಿಗೆ ಉಚಿತ ವಿತರಣೆಯನ್ನ ನೀಡುವ ಭರವಸೆಯನ್ನ ಝೊಮ್ಯಾಟೊ ನೀಡುತ್ತಿದೆ, ಆದ್ರೆ ಡೆಲಿವರಿ ಸ್ಥಳವು ಬಳಕೆದಾರರ ಮನೆ ಅಥವಾ ಆಫಿಸ್‌ನಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿರಬೇಕು.

ಅಲ್ಲದೆ, Zomatoನ ಸ್ವಂತ ಡೆಲಿವರಿ ಸಿಬ್ಬಂದಿಯನ್ನು ಬಳಸಿಕೊಳ್ಳುವ ರೆಸ್ಟೋರೆಂಟ್‌ಗಳಿಗೆ ಮಾತ್ರ ಉಚಿತ ಡೆಲಿವರಿ ನೀಡಲಾಗವುದು ಎಂಬುದನ್ನು ನೀವು ಗಮನಿಸಬೇಕಾಗುತ್ತದೆ. ಈ ಕೊಡುಗೆಯ ಮೂಲಕ ಗ್ರಾಹಕರಿಗೆ ಆಹಾರವನ್ನು ಹೆಚ್ಚು ಕೈಗೆಟುಕುವ ರೀತಿ ತಲುಪಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆಯನ್ನ ಹೆಚ್ಚಿಸುವ ಗುರಿಯನ್ನ Zomato ಹೊಂದಿದೆ.
ಈಗಾಗಲೇ Zomato ಗೋಲ್ಡ್ ಸದಸ್ಯತ್ವ ಹೊಂದಿದ್ದರೆ ಏನು ಮಾಡಬೇಕು?
ಝೊಮಾಟೊ ಗೋಲ್ಡ್ ಆಫರ್‌ನ ಭಾಗವಾಗಿರುವ ಸದಸ್ಯರಿಗೆ, ಕಂಪನಿಯು ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಕೇವಲ 20 ರೂಪಾಯಿಗೆ ಅವರ ಅಸ್ತಿತ್ವದಲ್ಲಿರುವ ಸದಸ್ಯತ್ವಕ್ಕೆ ಇನ್ನೂ ಆರು ತಿಂಗಳುಗಳನ್ನು ಸೇರಿಸಲು ಝೊಮ್ಯಾಟೊ ಅವಕಾಶ ನೀಡುತ್ತದೆ. ಜುಲೈ 2024ರಲ್ಲಿ ತನ್ನ 16ನೇ ವಾರ್ಷಿಕೋತ್ಸವದ ನೆನಪಿಗಾಗಿ Zomato ಈ ಉಪಕ್ರಮವನ್ನು ಪ್ರಾರಂಭ ಮಾಡಿತ್ತು ಆದ್ರೀಗ ಇದೇ ಉಪಕ್ರಮದ ಜೊತೆಗೆ ಇನ್ನಷ್ಟು ಸೇವೆಗಳನ್ನ ಝೊಮ್ಯಾಟೊ ನೀಡುತ್ತಿದೆ.
ಹಾಗೆ, ಈ Zomato ಗೋಲ್ಡ್ ಸದಸ್ಯರು ಕೇವಲ ಉಚಿತ ವಿತರಣೆ ಅಲ್ಲದೆ ಹೆಚ್ಚಿನ ಪ್ರಯೋಜನಗಳನ್ನ ಕೂಡ ಆನಂದಿಸಬಹುದು. ಸದಸ್ಯತ್ವವು ಅನೇಕ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಇನ್ನು ಈ ಪಾಲುದಾರ ರೆಸ್ಟೋರೆಂಟ್‌ಗಳಲ್ಲಿ 30% ವರೆಗಿನ ಹೆಚ್ಚುವರಿ ರಿಯಾಯಿತಿಗಳು ಅತ್ಯಂತ ಗಮನಾರ್ಹವಾಗಿದೆ.
ಎಲ್ಲಾ Zomato ಅಪ್ಲಿಕೇಶನ್ ಬಳಕೆದಾರರಿಗೆ ಲಭ್ಯವಿರುವ ಈ ವಿಶೇಷ ಬ್ಯಾಕ್ ಫ್ರೈಡೇ ಆಫರ್ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ಮೂಲಕ ಊಟದ ಅನುಭವವನ್ನು ಹೆಚ್ಚಿಸುತ್ತದೆ. ಇದರ ಮಧ್ಯೆ ಈ, ರಿಯಾಯಿತಿ ಮತ್ತು ಸದಸ್ಯತ್ವದ ಕೊಡುಗೆಯು Zomato ಜೊತೆಗೆ ರೆಸ್ಟೋರೆಂಟ್ ಪಾಲುದಾರರಾಗಿರುವ ನಗರಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗ್ರಾಹಕರು ಗಮನಿಸಬೇಕಾಗುತ್ತದೆ.
ಝೊಮ್ಯಾಟೊ ಈಗಾಗಲೇ ಹೇಳಿಕಂಡಿರುವಂತೆ ಕಂಪನಿಯು 20,000ಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎನ್ನಲಾಗ್ತಿದೆ. ಇದು ಗೋಲ್ಡ್ ಸದಸ್ಯರು ಈ ರಿಯಾಯಿತಿಯನ್ನು ಆನಂದಿಸಬಹುದಾದ ರೆಸ್ಟೋರಂಟ್‌ಗಳ ದೊಡ್ಡ ಜಾಲವನ್ನು ತೋರಿಸುತ್ತದೆ.
ಅದರ ಲಾಭವನ್ನು ಪಡೆದುಕೊಳ್ಳುವುದು ಹೇಗೆ?
Zomato ಗೋಲ್ಡ್‌ನ ಈ ಸದಸ್ಯತ್ವಕ್ಕಾಗಿ, ಈಗಾಗಲೇ ಝೊಮ್ಯಾಟೊ ಸೇವೆಗಳನ್ನ ಪಡೆಯುತ್ತಿರುವ ಜನರಿಗೆ ಕಂಪನಿಯು WhatsApp ಸಂದೇಶಗಳನ್ನು ಸಹ ಕಳುಹಿಸಿದೆ. ಆಫರ್ ಅನ್ನು ಕ್ಲೈಮ್ ಮಾಡಲು, ನಿಮಗೆ ಬಂದಿರುವ ಮೆಸೇಜ್‌ನ ಲಿಂಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದಲ್ಲದೆ, ನೀವು ಕಂಪನಿಯ ಅಪ್ಲಿಕೇಶನ್ ಮೂಲಕ ಈ ಸದಸ್ಯತ್ವವನ್ನು ತೆಗೆದುಕೊಳ್ಳಬಹುದು.
Zomato ಕಂಪನಿಯ ಜಾಣತನ ಮತ್ತೆ ಮಾರುಕಟ್ಟೆಯಲ್ಲಿ ಎಲ್ಲರ ಗಮನವನ್ನ ಸಳಯುತ್ತಿದೆ. ಅದರಲ್ಲೂ ವಿಶೇಷವಾಗಿ ಅದರ CEO ದೀಪಿಂದರ್ ಗೋಯಲ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ರೀತಿಯ ಕೋಲಾಹಲವನ್ನ ಸೃಷ್ಟಿ ಮಾಡಿದ್ದರು. ಗೋಯಲ್ ಅವರು 20 ಲಕ್ಷ ರೂ. ಪ್ರವೇಶ ವೆಚ್ಚದೊಂದಿಗೆ ಉದ್ಯೋಗಾವಕಾಶವನ್ನು ಘೋಷಿಸಿದ್ದರು. ಇನ್ನು ಈ ಉದ್ಯೋಗಕ್ಕಾಗಿ 18,000 ಅರ್ಜಿಗಳ ಮೂಲಕ ಕಂಪನಿಗೆ ಅಗಾಧವಾದ ಪ್ರತಿಕ್ರಿಯೆಯನ್ನು ಅವರು ಸ್ವೀಕರಿಸಿದ್ದರು. ಇದಾದ ನತರ, ದೀಪಿಂದರ್ ಗೋಯಲ್ ಅವರು ತಮ್ಮ ಹೇಳಿಕೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದರು. ಈ ಮೂಲಕ ವೃತ್ತಿಗಾಗ ಕಾಯುತ್ತಿರುವ, ಹಾಗು ಅವಕಾಶಗಳಿಗಾಗಿ ಕಾಯುತ್ತಿರುವ ಜನರನ್ನ ಫಿಲ್ಟರ್ ಾುವ ಗುರಿಯಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದರು.
ಈ ಮಾರ್ಕೆಟಿಂಗ್ ಪ್ರಚಾರಗಳಲ್ಲಿ Zomatos ಸಾಮಾಜಿಕ ಮಾಧ್ಯಮ ಪುಟಗಳು ಯಾವಾಗಲೂ ಎದ್ದುಕಾಣುತ್ತವೆ. ಹಾಗೆ ಹೆಚ್ಚಿನ ಗ್ರಾಹಕರ ಗಮನವನ್ನ ಸಳೆಯಲು ಸಮಾಜಿಕ ಜಾಲತಾಣಗಳು ಝೊಮ್ಯಾಟೋಗೆ ಮಾಧ್ಮಗಳ ರೀತಿ ಕಾರ್ಯ ನಿರ್ವಹಿಸುತ್ತಿವೆ. ಈ ಆಫರ್‌ಗಾಗಿ ಹಾಗೂ Zomato ನ ಸಾಮಾಜಿಕ ಹ್ಯಾಂಡಲ್‌ನಲ್ಲಿ ಝೊಮ್ಯಾಟೊ CEO ಮತ್ತೆ ತಮ್ಮ ಸ್ಟೇಟಸ್ ಅನ್ನು ನವೀಕರಿಸಿದ್ದು, ₹20 ಲಕ್ಷ ಪಾವತಿಸುವ ಅಗತ್ಯವಿಲ್ಲ. ಆರು ತಿಂಗಳ Zomato ಗೋಲ್ಡ್‌ಗೆ ₹30 ಪಾವತಿಸಿ ಎಂದು ಬರೆದಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications