ಬೆಂಗಳೂರು, ಜುಲೈ 9: ಆನ್ ಲೈನ್ ಆಹಾರ ವಿತರಣಾ ಪ್ಲಾಟ್ ಫಾರ್ಮ್ ಝೊಮ್ಯಾಟೊ ಇಂಟರ್‌ಸಿಟಿ ಲೆಜೆಂಡ್ಸ್ ಸೇವೆಯನ್ನು ಮತ್ತೆ ಪ್ರಾರಂಭಿಸಿದ್ದು ಆದರೆ ಈ ಬಾರಿ ಈ ಸೇವೆಯ ಹೆಸರನ್ನು ಬದಲಿಸಿ 'ಲೆಜೆಂಡ್ಸ್' ಎಂದು ಮರುನಾಮಕರಣ ಮಾಡಿದೆ. 2022 ರಲ್ಲಿ ಪ್ರಾರಂಭವಾದ ಇಂಟರ್ ಸಿಟಿ ಆಹಾರ ವಿತರಣಾ ಸೇವೆಯನ್ನು ಝೊಮ್ಯಾಟೊ ಕಳೆದ ಏಪ್ರಿಲ್ ನಲ್ಲಿ ಸ್ಥಗಿತಗೊಳಿಸಿತ್ತು.
ಅಲ್ಪಾವಧಿಗೆ ಸ್ಥಗಿತದ ಬಳಿಕ ಝೊಮ್ಯಾಟೊ ತನ್ನ ಲೆಜೆಂಡ್ಸ್ ಸೇವೆಯಲ್ಲಿ ಒಂದಷ್ಟು ಮಾರ್ಪಾಡು ಮಾಡಿಕೊಂಡಿದ್ದು, ಪ್ರತಿ ವಿತರಣೆಯನ್ನು ಮೊದಲಿಗಿಂತ ಹೆಚ್ಚು ಲಾಭದಾಯಕವಾಗಿಸಲು ಕನಿಷ್ಠ ಆರ್ಡರ್ ಮೌಲ್ಯವನ್ನು 5,000 ರೂ.ಗೆ ಹೆಚ್ಚಿಸಿದೆ. ಸದ್ಯಕ್ಕೆ ದೆಹಲಿ NCR, ಬೆಂಗಳೂರು, ಮುಂಬೈ ಮತ್ತು ಇತರ ಕೆಲವು ನಗರಗಳಲ್ಲಿ ಆಯ್ದ ಗ್ರಾಹಕರಿಗೆ ಮಾತ್ರ ಈ ಸೇವೆ ಲಭ್ಯವಿದೆ.

ಹಿಂದಿನ ಇಂಟರ್‌ಸಿಟಿ ಲೆಜೆಂಡ್ಸ್ ಸೇವೆಯಲ್ಲಿ ಈ ಹಿಂದೆ ಯಾವುದೇ ಸ್ಥಿರವಾದ ಕನಿಷ್ಠ ಆರ್ಡರ್ ಮೌಲ್ಯ ಇರಲಿಲ್ಲ. ಆರ್ಡರ್ ಗಳು ಬಳಕೆದಾರರಿಂದ ಬಳಕೆದಾರರಿಗೆ ಭಿನ್ನವಾಗಿರುತ್ತಿತ್ತು. ಆದರೆ ಈಗ ಈ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದರೆ 5,000 ರೂ.ಗೆ ಹೆಚ್ಚಿಸಿದೆ. ಹೀಗಾಗಿ ಪ್ರತಿ ಆರ್ಡರ್ ಕೂಡಾ ಲಾಭದಾಯವಾಗಿಸಿಕೊಳ್ಳಲು ಕನಿಷ್ಠ ಆರ್ಡರ್ ಮೌಲ್ಯ ಸೇರಿದಂತೆ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿದೆ.
ಝೊಮ್ಯಾಟೊ ಲೆಜೆಂಡ್ಸ್ ಸೇವೆ ಎಂದರೇನು?
ಈ ಸೇವೆಯೂ ಗ್ರಾಹಕರಿಗೆ ಭಾರತದ ಇತರ ನಗರಗಳಿಂದ ಸಾಂಪ್ರದಾಯಿಕ ಮತ್ತು ಪ್ರಸಿದ್ದ ತಿನಿಸು, ಭಕ್ಷ್ಯಗಳನ್ನು ಆರ್ಡರ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಈ ಹಿಂದೆ ಝೊಮ್ಯಾಟೊ ಅದೇ ದಿನ ಮಾಡಿದ ಆರ್ಡರ್ ಗಳನ್ನು ವಿತರಿಸುತ್ತಿತ್ತು. ಹೀಗಾಗಿ ಸ್ಟಾಲ್ ಲಭ್ಯವಿದ್ದರೆ ಮಾತ್ರ ಈ ಸೇವೆ ನೀಡಲಾಗುತ್ತಿತ್ತು. ಇದೀಗ ಕೊಂಚ ಬದಲಾವಣೆ ಮಾಡಿದ್ದು ಸಂಜೆ ೭ ಗಂಟೆಗೆ ಮಾಡಿದ ಆರ್ಡರ್ ಗಳನ್ನು ಮರುದಿನ ತಲುಪಿಸುವ ಆಯ್ಕೆ ಇದೆ. ಗ್ರಾಹಕರ ರಿಕ್ವೆಸ್ ಆಧರಿಸಿ ಈ ಸೇವೆ ನೀಡಲಾಗುತ್ತಿದೆ.
ಇಂಟರ್‌ಸಿಟಿ ಲೆಜೆಂಡ್ಸ್ ಸೇವೆಗೆ ಏಪ್ರಿಲ್‌ನಲ್ಲಿ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.. ಇದು ಅಲ್ಪಾವಧಿಗೆ ಸ್ಥಗಿತಗೊಂಡಿದ್ದರೂ ಸಹ, ಸರಿಯಾದ ಪ್ರೋಡಕ್ಟ್ ಮಾರ್ಕೆಟ್ ಫಿಟ್ (PMF) ಆದ ಬಳಿಕ ತನ್ನ ಸೇವೆಯನ್ನು ಮರುಪ್ರಾರಂಭಿಸುವುದಾಗಿ ಕಂಪನಿ ಹೇಳಿತ್ತು.
ಈ ನಡುವೆ, Zomato ತನ್ನ ಚಲನಚಿತ್ರಗಳು ಮತ್ತು ಇತರ ಟಿಕೆಟಿಂಗ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳಲು ಹಣಕಾಸು ಸೇವೆಗಳ ಪ್ರಮುಖವಾದ ಪೇಟಿಎಂನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಖಚಿತಪಡಿಸಿದೆ . ಸಂಭಾವ್ಯ ಒಪ್ಪಂದವು Paytm ನ ಸಿನಿಮಾ ಟಿಕೆಟಿಂಗ್ ವ್ಯವಹಾರವನ್ನು ಸುಮಾರು 1,500 ಕೋಟಿ ರೂಪಾಯಿಗಳ ಮೌಲ್ಯದ್ದಾಗಿರಬಹುದು ಎಂದು ಹಿಂದಿನ ವರದಿಗಳು ಸೂಚಿಸಿವೆ.ಅದರೂ, ಈ ಹಂತದಲ್ಲಿ Zomato ಯಾವುದೇ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಪ್ರಸ್ತುತ ಮಾರುಕಟ್ಟೆ ಝೊಮ್ಯಾಟೊ ಪ್ರತಿ ಷೇರಿನ ಬೆಲೆ 208 ರೂ. ಆಗಿದ್ದು 18.26 ಕೋಟಿ ಷೇರುಗಳು ಅಂದಾಜು 3,800 ಕೋಟಿ ರೂ. ಮೌಲ್ಯದ್ದಾಗಿದೆ.


Click it and Unblock the Notifications