ನವದೆಹಲಿ, ಜನವರಿ 15: ಐಐಟಿ ಸಂಸ್ಥೆಗಳಲ್ಲಿ ಓದಿರುವ ಪದವೀಧರರು ಪ್ರಸ್ತುತ ವಿಶ್ವದ ಹಲವು ದೊಡ್ಡ ದೊಡ್ಡ ಟೆಕ್ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಅದೇ ರೀತಿ ಐಐಟಿ ಓದಿರುವ ವ್ಯಕ್ತಿಯೊಬ್ಬರು ಹೊಸ ವರ್ಷದ ಮೊದಲ ವಾರದಲ್ಲೇ ಎಲ್ಲೆಡೆ ಗಮನಸೆಳೆದಿದ್ದಾರೆ.
ಐಐಟಿಯಲ್ಲಿ ಓದು ಮುಗಿಸಿರುವ ನಿಕೇಶ್ ಅರೋರೊ ಅವರ ಬಗ್ಗೆ ಉದ್ಯಮ ವಲಯದಲ್ಲಿ ಇದೀಗ ವ್ಯಾಪಕ ಚರ್ಚೆ ಆಗುತ್ತಿದೆ. ಏಕೆಂದರೆ, ಅವರು ಈಗ ಬಿಲಿಯನೇರ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ. ವಿಶೇಷವೆಂದರೆ, ವಿಶ್ವದಲ್ಲಿ ಕಂಪನಿ ಸ್ಥಾಪಕರಲ್ಲದ ಕೆಲವೇ ಕೆಲವು ವ್ಯಕ್ತಿಗಳು ಬಿಲಿಯನೇರ್ ಕ್ಲಬ್ ಸೇರಿದ್ದಾರೆ.

ನಿತೇಶ್ ಅರೋರಾ ಅವರು ಪ್ರಸ್ತುತ ಸೈಬರ್ ಸೆಕ್ಯೂರಿಟಿ ಕಂಪನಿ ಪಾಲ್ ಆಲ್ಟ್ ನೆಟ್‌ವರ್ಕ್‌ನ ಸಿಇಒ ಆಗಿದ್ದಾರೆ. ಈ ಕಂಪನಿಯು 91 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪ್ ಅನ್ನು ಹೊಂದಿದೆ. ಅರೋರಾ ಅವರು ಭಾರತೀಯ ಮೂಲದವರಾಗಿದ್ದರೂ, ಅಮೆರಿಕದ ಕಂಪನಿಗಳ ಜತೆಯಲ್ಲಿಯೇ ಸುದೀರ್ಘವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ನಿತೇಶ್ ಅರೋರಾ ಅವರು ದಿಲ್ಲಿಯ ಗಾಝೀಯಾಬಾದ್‌ನಲ್ಲಿ ಜನಿಸಿದ್ದಾರೆ. ಅರೋರಾ ಅವರ ತಂದೆಯು ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು, ಅವರು ಏರ್‌ಫೋರ್ಸ್ ಸ್ಕೂಲ್‌ನಲ್ಲಿ ಓದಿದ್ದಾರೆ. ಶಾಲಾ ವಿದ್ಯಾಭ್ಯಾಸದ ಬಳಿಕ ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಆ ನಂತರದಲ್ಲಿ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ಬೋಸ್ಟನ್ ವಿವಿಗೆ ಸೇರಿದ್ದರು. ಈ ನಡುವೆ ಅವರು ನಾರ್ತ್‌ಈಸ್ಟರ್ನ್ ವಿವಿಯಿಂದ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.
ಅರೋರಾ ಅವರು 1992ರಲ್ಲಿ ಫಿಡಿಲಿಟಿ ಇನ್‌ವೆಸ್ಟ್‌ಮೆಂಟ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ಮುಂದೆ ಅವರು ಫೆಡಿಲಿಟಿ ಟೆಕ್ನಾಲಜಿಯಲ್ಲಿ ಫೈನಾನ್ಸ್ ಉಪಾಧ್ಯಕ್ಷರಾಗಿದ್ದರು. ನಂತರದಲ್ಲಿ ಅವರು ಟಿ-ಮೋಷನ್‌ನಲ್ಲಿಯೂ ಕೆಲವು ವರ್ಷ ಕೆಲಸ ಮಾಡಿದ್ದು, ಬಳಿಕ ಗೂಗಲ್‌ಗೆ ಸೇರಿದ್ದಾರೆ.
ಗೂಗಲ್ ಸಂಸ್ಥೆಯಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅರೋರಾ ಅವರು 2014ರಲ್ಲಿ ಹಿರಿಯ ಉಪಾಧ್ಯಕ್ಷ ಹುದ್ದೆಯಿಂದ ರಾಜೀನಾಮೆ ಕೊಟ್ಟು ಹೊರಬಂದಿದ್ದರು. ಗೂಗಲ್‌ನಲ್ಲಿ ಕೆಲಸ ಮಾಡುತ್ತಿರಬೇಕಾದರೆ, 2012ರಲ್ಲಿ 51 ಮಿಲಿಯನ್ ಡಾಲರ್‌ನ ಭಾರೀ ಮೊತ್ತದ ಪರಿಹಾರ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದರು.
2014ರಲ್ಲಿ ನಿತೇಶ್ ಅರೋರಾ ಅವರು ಸಾಫ್ಟ್‌ಬ್ಯಾಂಕ್ ಗ್ರೂಪ್‌ಗೆ ಸೇರಿದ್ದರು. ಅಲ್ಲಿ ಅವರಿಗೆ ಮೊದಲ ವರ್ಷವೇ 135 ಮಿಲಿಯನ್ ಡಾಲರ್ ಪರಿಹಾರದ ಪ್ಯಾಕೇಜ್ ಲಭಿಸಿತ್ತು. ಸಾಫ್ಟ್‌ಬ್ಯಾಂಕ್‌ನಲ್ಲಿ ಅಧ್ಯಕ್ಷ ಹಾಗೂ ಸಿಇಒ ಆಗಿ 2014ರಿಂದ 2016ರವರೆಗೆ ಕಾರ್ಯನಿರ್ವಹಿಸಿದ್ದರು.
2018ರಲ್ಲಿ ಅರೋರಾ ಅವರು ಪಾಲೋ ಆಲ್ಟೊ ನೆಟ್‌ವರ್ಕ್ ಕಂಪನಿಗೆ ಸಿಇಒ ಆಗಿ ನೇಮಕಗೊಂಡಿದ್ದರು. ಅಲ್ಲಿ ಅವರು 125 ಮಿಲಿಯನ್ ಡಾಲರ್ ಷೇರು ಪಡೆದುಕೊಂಡಿದ್ದರು. ಈಗ ಕಂಪನಿಯ ಷೇರು ಮೌಲ್ಯ ಹೆಚ್ಚಿದ್ದು, ಈಗ ಅರೋರಾ ಅವರು 830 ಮಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇನ್ನು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ನಿತೇಶ್ ಅರೋರಾ ಅವರು 12495 ಕೋಟಿ ರೂ. ನಿವ್ವಳ ಆಸ್ತಿ ಹೊಂದಿದ್ದಾರೆ.


Click it and Unblock the Notifications