ಹೂಡಿಕೆಯ ವಿಷಯಕ್ಕೆ ಬಂದಾಗ, ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಇರುತ್ತವೆ. ಆದರೂ, ದೀರ್ಘಾವಧಿಯ ಹೂಡಿಕೆ ವಿಭಾಗದಲ್ಲಿ ಮ್ಯೂಚುಯಲ್ ಫಂಡ್‌ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP) ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ, ಇದು ಹೂಡಿಕೆಗೆ ಒಂದು ವ್ಯವಸ್ಥಿತ ಮತ್ತು ಶಿಸ್ತಿನ ವಿಧಾನವಾಗಿದೆ, ಅಲ್ಲಿ ಹೂಡಿಕೆದಾರರು ನಿಯಮಿತವಾಗಿ ನಿಗದಿತ ಮೊತ್ತವನ್ನು ಕೊಡುಗೆ ನೀಡಬಹುದು. ಹೂಡಿಕೆದಾರರ ಅನುಕೂಲಕ್ಕೆ ತಕ್ಕಂತೆ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಹೂಡಿಕೆ ಮಾಡಬಹುದು.
ವ್ಯವಸ್ಥಿತ ಹೂಡಿಕೆ ಯೋಜನೆಯ ಪ್ರಯೋಜನಗಳು:
SIP (ವ್ಯವಸ್ಥಿತ ಹೂಡಿಕೆ ಯೋಜನೆ) ಗಳು ಹೂಡಿಕೆದಾರರಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತವೆ. ಇದು ವೆಚ್ಚ-ಪರಿಣಾಮಕಾರಿ ಹೂಡಿಕೆಯಾಗಿದ್ದು, ಕಡಿಮೆ ಹೂಡಿಕೆ ಮಿತಿಗಳನ್ನು ಹೊಂದಿದ್ದು, ಯಾವುದೇ ಪ್ರವೇಶ ಅಥವಾ ನಿರ್ಗಮನ ಲೋಡ್‌ಗಳನ್ನು ವಿಧಿಸುವುದಿಲ್ಲ. ಮಾರುಕಟ್ಟೆ ಕುಸಿದಾಗ ಹೆಚ್ಚಿನ ಯೂನಿಟ್‌ಗಳನ್ನು ಮತ್ತು ಮಾರುಕಟ್ಟೆ ಹೆಚ್ಚಿದ್ದಾಗ ಕಡಿಮೆ ಯೂನಿಟ್‌ಗಳನ್ನು ಖರೀದಿಸಲು SIP ನಿಮಗೆ ಅನುವು ಮಾಡಿಕೊಡುತ್ತದೆ. ಇದು ದೀರ್ಘಾವಧಿಯಲ್ಲಿ ಹೂಡಿಕೆಯ ವೆಚ್ಚವನ್ನು ಸರಾಸರಿ ಮಾಡಲು ಸಹಾಯ ಮಾಡುತ್ತದೆ.

SIP ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಸೂಕ್ತವಾಗಿದೆ ಏಕೆಂದರೆ ಇದು ಒಂದು ನಿರ್ದಿಷ್ಟ ಅವಧಿಯಲ್ಲಿ ಸಂಯೋಜಿತ ಆದಾಯವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, SIP ಗಳು ಹೂಡಿಕೆದಾರರಿಗೆ ಶಿಸ್ತುಬದ್ಧ ಹೂಡಿಕೆ ವಿಧಾನವನ್ನು ಒದಗಿಸುತ್ತದೆ. ನಿಯಮಿತವಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ, ಹೂಡಿಕೆದಾರರು ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಚಿಂತಿಸದೆ, ಹೂಡಿಕೆದಾರರು ಸ್ಥಿರವಾಗಿ ಹೂಡಿಕೆ ಮಾಡಬಹುದು, ಇದು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ.
SIP ಗಳು ಹೂಡಿಕೆದಾರರಿಗೆ ಅನುಕೂಲಕರ ಮತ್ತು ಹೊಂದಿಕೊಳ್ಳುವ ಆಯ್ಕೆಯಾಗಿದೆ. ಹೂಡಿಕೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಹೂಡಿಕೆಯ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಮತ್ತು ತಂತ್ರವನ್ನು ಹುಡುಕುತ್ತಿದ್ದರೆ, 15x15x15 SIP ಸೂತ್ರವು ನಿಮಗೆ ಉಪಯುಕ್ತವಾಗಬಹುದು.
15x15x15 SIP ಸೂತ್ರ ಎಂದರೇನು?
ಈ SIP ಫಾರ್ಮುಲಾವನ್ನು ಹೂಡಿಕೆದಾರರಿಗೆ ಕೇವಲ 15 ವರ್ಷಗಳಲ್ಲಿ ಸುಮಾರು 1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಹೇಗೆ ಎಂದು ಯೋಚಿಸುತ್ತಿದ್ದೀರಾ? ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ
ಈ ಸೂತ್ರದ ಮುಖ್ಯ ಉದ್ದೇಶವು ದೀರ್ಘಾವಧಿಯಲ್ಲಿ ಸಂಪತ್ತನ್ನು ಸೃಷ್ಟಿಸುವುದು. ಸೂತ್ರದ ಪ್ರಕಾರ, ಮೊದಲ "15" SIP ನಲ್ಲಿ ತಿಂಗಳಿಗೆ ರೂ. 15,000 ಹೂಡಿಕೆ ಮಾಡಬೇಕೆಂಬುದನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಹೂಡಿಕೆಯ ಮೇಲೆ ನಿರೀಕ್ಷಿತ ವಾರ್ಷಿಕ ಆದಾಯವನ್ನು ಸೂಚಿಸುತ್ತದೆ. ಅಂದರೆ, ನಿಮ್ಮ ಹೂಡಿಕೆಯು ವಾರ್ಷಿಕವಾಗಿ ಸುಮಾರು 15% ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಮತ್ತು, ಮೂರನೆಯ "15" ಇದು ನೀವು ಹೂಡಿಕೆ ಮಾಡಬೇಕಾದ ವರ್ಷಗಳ ಸಂಖ್ಯೆಯನ್ನು ಸೂಚಿಸುತ್ತದೆ. ಅಂದರೆ, ನೀವು ಕನಿಷ್ಠ 15 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬುವುದನ್ನು ಸೂಚಿಸುತ್ತದೆ.
15x15x15 SIP ಸೂತ್ರದ ಪ್ರಕಾರ, 15 ವರ್ಷಗಳ ಕಾಲ ಪ್ರತಿ ತಿಂಗಳು 15,000 ರೂಪಾಯಿಗಳನ್ನು 15% ವಾರ್ಷಿಕ ಬಡ್ಡಿದರದೊಂದಿಗೆ ಹೂಡಿಕೆ ಮಾಡಿದರೆ, ಹೂಡಿಕೆದಾರರು 1 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಗ್ರಹಿಸಬಹುದು. ಈ ಸೂತ್ರವನ್ನು ಅನ್ವಯಿಸಿದಾಗ, 15 ವರ್ಷಗಳಲ್ಲಿ ಒಟ್ಟು ಹೂಡಿಕೆಯು 27,00,000 ರೂಪಾಯಿಗಳಾಗುತ್ತದೆ. ಅಂದರೆ, ಪ್ರತಿ ತಿಂಗಳು 15,000 ರೂಪಾಯಿಗಳಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಒಟ್ಟು 27,00,000 ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ.
15% ವಾರ್ಷಿಕ ಬಡ್ಡಿದರದೊಂದಿಗೆ, ಈ ಹೂಡಿಕೆಯು ಸುಮಾರು 74,52,946 ರೂಪಾಯಿಗಳ ಬಂಡವಾಳ ಲಾಭವನ್ನು ನೀಡುತ್ತದೆ. ಅಂದರೆ, ಹೂಡಿಕೆಯ ಮೌಲ್ಯವು 74,52,946 ರೂಪಾಯಿಗಳಷ್ಟು ಹೆಚ್ಚಾಗುತ್ತದೆ.ಹೀಗಾಗಿ, 15 ವರ್ಷಗಳ ಕೊನೆಯಲ್ಲಿ, ಹೂಡಿಕೆದಾರರು ಒಟ್ಟು 1,01,52,946 ರೂಪಾಯಿಗಳನ್ನು ಪಡೆಯುತ್ತಾರೆ. ಅಂದರೆ, ಹೂಡಿಕೆದಾರರು 27,00,000 ರೂಪಾಯಿಗಳನ್ನು ಹೂಡಿಕೆ ಮಾಡಿ 1,01,52,946 ರೂಪಾಯಿಗಳನ್ನು ಪಡೆಯುತ್ತಾರೆ.
Disclaimer
The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications