ನಿರ್ದಿಷ್ಟ ಬಂಡವಾಳದಲ್ಲಿ ನಿಮ್ಮದೇ ಸ್ಮಾರ್ಟ್ ಬಿಸಿನಸ್ ಆರಂಭ ಮಾಡಬೇಕೆಂದುಕೊಂಡಿದ್ದೀರಾ? ಅತಿ ಕಡಿಮೆ ಬಂಡವಾಳ ಆದರೆ ಸುಭದ್ರ ರೀತಿಯ ಕಂಪನಿ ಕಟ್ಟಬೇಕೆಂದಿದ್ದೀರಾ? ಹಾಗಾದರೆ ಕೆಳಗಿನ ಅಂಶಗಳನ್ನು ಒಮ್ಮೆ ಓದಲೇಬೇಕು.
ಅತಿ ಕಡಿಮೆ ಬಂಡವಾಳದಲ್ಲಿ ಆರಂಭಮಾಡಬಹುದಾದ ವೃತ್ತಿಗಳಾವವು? ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯುವುದು ಹೇಗೆ? ಎಂಬ ಅಂಶಗಳ ಕುರಿತು ಗಮನ ಹರಿಸುವುದು ಅಗತ್ಯವಾಗುತ್ತದೆ. ಅವುಗಳ ಮೇಲಿನ ಒಂದು ನೋಟ ಇಲ್ಲಿದೆ.[ಪರ್ಸನಲ್ ಲೋನ್ ಪಡೆಯಲು ಬೇಕಾದ ದಾಖಲೆಗಳೇನು?]

1. ಟ್ರಾವೆಲ್ ಎಜೆನ್ಸಿ
ನಿಜವಾಗಿಯೂ ನಿಮಗೆ ಬಿಸಿನಸ್ ಮಾಡುವ ಆಸಕ್ತಿಯಿದ್ದು ಕಡಿಮೆ ಬಂಡವಾಳ ಹೂಡಿಕೆಗೆ ಸಿದ್ಧರಿದ್ದರೆ ಟ್ರಾವೆಲ್ ಎಜೆನ್ಸಿಯೊಂದನ್ನು ತೆರೆಯಬಹುದು. ಭಾರತದಲ್ಲಿ ಇದೊಂದು ಉತ್ತಮ ಆದಾಯ ತಂದು ಕೊಡುವ ವೃತ್ತಿಯಾಗಿ ಗುರುತಿಸಲ್ಪಟ್ಟಿದೆ.
2. ಹಣಕಾಸು ಸೇವೆಗಳು
ಹಣಕಾಸು ಸೇವೆಗಳು ಅಂದರೆ ವಿಮಾ ಏಜೆನ್ಸಿ, ಫಿಕ್ಸಿಡ್ ಡಿಪಾಸಿಟ್ ಬಗ್ಗೆ ಮಾಹಿತಿ ನೀಡುವುದು, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ದಲ್ಲಾಳಿ ಪದ್ಧತಿ ಎಲ್ಲವನ್ನು ಹಣಕಾಸು ಸೇವೆಗಳು ಒಳಗೊಂಡಿರುತ್ತವೆ. ಇದಕ್ಕೂ ಸಹ ಸಣ್ಣ ಪ್ರಮಾಣದ ಬಂಡವಾಳ ಸಾಕು.
3. ರಿಯಲ್ ಎಸ್ಟೇಟ್ ಕನ್ಸಲ್ ಟನ್ಸಿ
ರಿಯಲ್ ಎಸ್ಟೇಟ್ ಬಗ್ಗೆ ನಿಮಿಗೆ ನಿಖರ ಮಾಹಿತಿ ಮತ್ತು ತಿಳಿವಳಿಕೆ ಇದ್ದರೆ ಕಡಿಮೆ ಬಂಡವಾಳದಲ್ಲಿ ರಿಯಲ್ ಎಸ್ಟೇಟ್ ಕನ್ಸಲ್ ಟನ್ಸಿ ಏಜೆನ್ಸಿ ಆರಂಭಮಾಡುವುದರಲ್ಲಿ ಯಾವ ತಪ್ಪಿಲ್ಲ.[ಪರ್ಸನಲ್ ಲೋನ್ ಗೆ ವಿವಿಧ ಬ್ಯಾಂಕ್ ಬಡ್ಡಿದರ ಎಷ್ಟು?]
4. ಬ್ಯೂಟಿ ಪಾರ್ಲರ್
ಇಲ್ಲಿಯೂ ಸಹ ಬಂಡವಾಳ ಹೂಡಿಕೆ ಮುನ್ನ ತಕ್ಕ ತಿಳಿವಳಿಕೆ ಇರಬೇಕು. ಯಾವ ಪ್ರದೇಶದಲ್ಲಿ ಪಾರ್ಲರ್ ಹಾಕಿದರೆ ಜನರನ್ನು ಸೆಳೆಯಬಹುದು ಎಂಬುದು ಗೊತ್ತಿರಬೇಕು. ಒಂದು ವೇಳೆ ಜಾಗವನ್ನು ಲೀಸ್ ಗೆ ತೆಗೆದುಕೊಂಡು ಪಾರ್ಲರ್ ಹಾಕುವುದಾದರೆ ಏರಿಯಾವನ್ನು ಒಂದೆರಡು ದಿನ ಪರಿಶೀಲಿಸದ ನಂತರ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ.
5. ಮೊಬೈಲ್ ರೀಜಾರ್ಜ್ ಶಾಪ್
ಸಾಮಾನ್ಯ ಜನರಿಗೆ ಆನ್ ಲೈನ್ ರೀಜಾರ್ಜ್ ಇನ್ನು ಚಿರಪರಿಚಿತವಾಗಿಲ್ಲ. ನಗರವೊಂದರ ರಸ್ತೆಯಲ್ಲಿ ಅನೇಕ ರೀಜಾರ್ಜ್ ಮಳಿಗೆಗಳಿರುತ್ತವೆ. ಜನ ನಿಬಿಡ ಪ್ರದೇಶ ಆಯ್ಕೆ ಮಾಡಿಕೊಂಡು ಇಂಥಹ ಅಂಗಡಿ ಹಾಕಿದರೂ ಹೆಚ್ಚಿನ ಲಾಭ ಗಳಿಕೆ ಸಾಧ್ಯ.
6. ಉದ್ಯೋಗ ಕೇಂದ್ರ
ವಿವಿಧ ಕಂಪನಿಗಳಿಗೆ ಮಾನವ ಸಂಪನ್ಮೂನ ಒದಗಿಸಿಕೊಡುವ ಕೆಲಸವನ್ನು ಆರಂಭಿಸಬಹುದು. ಇಲ್ಲಿ ಸಹ ನೀವು ಜಾಗವನ್ನು ಲೀಸ್ ಗೆ ಪಡೆದು ವೃತ್ತಿ ಕೈಗೊಳ್ಳುವುದಾದರೆ ಇನ್ನೊಮ್ಮೆ ಯೋಚಿಸಿ ಹೆಜ್ಜೆ ಇಡಬೇಕು.
7. ಟ್ಯೂಷನ್
ಕಡಿಮೆ ಬಾಡಿಗೆಗೆ ಜಾಗವೊಂದನ್ನು ಬಾಡಿಗೆ ಪಡೆದು ನೀವು ಟ್ಯೂಷನ್ ತರಗತಿ ಆರಂಭಿಸಿದರೂ ಉತ್ತಮ ಹಣ ಗಳಿಕೆ ಸಾಧ್ಯ. ಇಲ್ಲಿ ವಿದ್ಯಾರ್ಥಿಗಳ ಲಭ್ಯತೆ ಬಗ್ಗೆ ಒಮ್ಮೆ ಯೋಚಿಸಬೇಕಾಗುತ್ತದೆ.
8. ಇವೆಂಟ್ ಮ್ಯಾನೇಜ್ ಮೆಂಟ್
ನಿಮಗೆ ಉತ್ತಮ ಜನ ಸಂಪರ್ಕ ಇದ್ದು, ಜನರೊಂದಿಗೆ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದರೆ, ಇವೆಂಟ್ ಇವೆಂಟ್ ಮ್ಯಾನೇಜ್ ಮೆಂಟ್ ವೊಂದನ್ನು ಆರಂಭಿಸಲು ಅಡ್ಡಿ ಇಲ್ಲ. ಇದಕ್ಕೆ ಬಂಡವಾಳಕ್ಕಿಂತ ಜನರೊಂದಿಗೆ ಹೊಂದಿರುವ ಒಡನಾಟ ಮುಖ್ಯವಾಗುತ್ತದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications