ಹಲವಾರು ವಿಮಾ ಪಾಲಿಸಿಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಎಲೆಕ್ಟ್ರಾನಿಕ್ ಖಾತೆಯೊಂದನ್ನು ತೆರೆಯುವ ಮೂಲಕ ನಿಮ್ಮ ಎಲ್ಲ ಪಾಲಿಸಿಗಳನ್ನು ಬಹಳ ಸುಲಭವಾಗಿ ಹ್ಯಾಂಡಲ್ ಮಾಡಬಹುದು.
ಇಂಥ ಒಂದು ಪದ್ಧತಿ ಯುಪಿಎ ಸರ್ಕಾರದ ಅವಧಿಯಲ್ಲೇ ಜಾರಿಗೆ ಬಂದಿದೆ. ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಐಆರ್ ಡಿಎ ಯೋಜನೆ ಮೂಲಕ ಇಂಥದ್ದೊಂದು ಪದ್ಧತಿ ಜಾರಿ ಮಾಡಿದ್ದರೂ ಹಲವರಿಗೆ ಈ ಬಗ್ಗೆ ಸ್ಪಷ್ಟ ತಿಳಿವಳಿಕೆಯಿಲ್ಲ. ವಿಮಾ ಕಂಪನಿಗಳಲ್ಲಿ ಪಾರದರ್ಶಕತೆ ಸಾಧಿಸಲು ಈ ಯೋಜನೆ ನೆರವಾಗಿದೆ.[ಕಡಿಮೆ ಬಂಡವಾಳದ 8 ಬಿಸಿನಸ್ ತಂತ್ರಗಳು]

ಈ ಎಲೆಕ್ಟ್ರಾನಿಕ್ ಖಾತೆ ಅನೇಕ ಲಾಭಗಳನ್ನು ತಂದು ಕೊಡುತ್ತದೆ. ಜೀವ ವಿಮೆ, ಸಾಮಾನ್ಯ ಪಾಲಿಸಿಗಳು, ಆರೋಗ್ಯ ಸುರಕ್ಷತಾ ವಿಮೆಗಳು ಎಲ್ಲವನ್ನು ಒಂದೇ ಖಾತೆಯ ಮೂಲಕ ವ್ಯವಹರಿಸಲು ಸಾಧ್ಯವಾಗುತ್ತದೆ. ಆನ್ ಲೈನ್ ಮುಖಾಂತರ ಯಾವುದೇ ಜಾಗದಲ್ಲಿ, ಎಲ್ಲಿ ಬೇಕಾದರೂ ನಿಮ್ಮ ಖಾತೆಯ ವಿವರ ನೋಡಬಹುದು. ಅಲ್ಲದೇ ಕಂತು ಪಾವತಿಸಲು ಅವಕಾಶವಿರುತ್ತದೆ.
ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣ ಪಾವತಿ ಮಾಡಬಹುದು. ಅಂದರೆ ಸೆಂಟ್ರಲ್ ಇನ್ಶೂರೆನ್ಸ್ ರೆಪೊಸಿಟರಿ(ಸಿಐಆರ್ಎಲ್), ನ್ಯಾಶನಲ್ ಇನ್ಶೂರೆನ್ಸ್ ಪಾಲಿಸಿ(ಎನ್ಐಆರ್) ರೆಪೊಸಿಟರಿ, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ(ಎಸ್ ಎಚ್ ಸಿಎಲ್)ದ ಮೂಲಕ ವ್ಯವಹಾರ ನಡೆಸಬಹುದು.[ಪರ್ಸನಲ್ ಲೋನ್ ಗೆ ವಿವಿಧ ಬ್ಯಾಂಕ್ ಬಡ್ಡಿದರ ಎಷ್ಟು?]
ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?
1. ಇ-ಇನ್ಶೂರೆನ್ಸ್ ಖಾತೆ ತೆರೆಯುವ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ
2. ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಿ
3. ಹಣ ಮರುಪಾವತಿ ಮಾಡಲಿಚ್ಛಿಸುವ ರೆಪೊಸಿಟರಿ ಆಯ್ಕೆ ಮಾಡಿಕೊಂಡು ಅರ್ಜಿಯನ್ನು ನಿರ್ದಿಷ್ಟ ವಿಮಾ ರೆಪೊಸಿಟರಿ ಸಂಸ್ಥೆಗೆ ಕಳುಹಿಸಿಕೊಡಬೇಕು.(ಮೇಲೆ ಹೇಳಿದ ಸಿಐಆರ್ಎಲ್, ಎನ್ಐಆರ್ ಯಾವುದಾದರೂ ಆಗಬಹುದು)
4. ಇದಾದ ನಂತರ ನಿಮಗೆ ಇ-ಇನ್ಶೂರೆನ್ಸ್ ಖಾತೆ ನಂಬರ್ ಕಳುಹಿಸಿ ಕೊಡಲಾಗುವುದು.
5. ಖಾತೆ ನಂಬರ್ ದೊರೆತ ಮೇಲೆ ಅಪ್ ಡೇಟ್ ಆರಂಭಿಸಬಹುದು.
6. ಒಂದು ವೇಳೆ ಹಣ ಪಾವತಿ ಮಾಡಿದರೆ ಟ್ರಾನ್ಸಾಕ್ಷನ್ ಯಶಸ್ವಿಯಾದ ಬಗ್ಗೆ ಮೆಸೇಜ್ ಬರುತ್ತದೆ.
ಸೂಚನೆ: ಈ ಇ-ಇನ್ಶೂರೆನ್ಸ್ ಖಾತೆ ತೆರೆಯುವಾಗ ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನಂಬರ್ ಅಗತ್ಯ.(ಗುಡ್ ರಿಟರ್ನ್ಸ್. ಇನ್)


Click it and Unblock the Notifications