ಕ್ರೆಡಿಟ್ ಕಾರ್ಡ್ ಹಲವರಿಗೆ ಉಪಯುಕ್ತವಾದ ಸೌಲಭ್ಯವಾಗಿ ಬಳಕೆಯಲ್ಲಿದೆ. ಕಾರ್ಡ್ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ, ಒಮ್ಮೆ ಕಾರ್ಡ್ ಕಳೆದುಕೊಂಡರೆ ಸಾಲು ಸಾಲು ತೊಂದರೆ, ಕ್ರೆಡಿಟ್ ಕಾರ್ಡ್ ಕಣ್ಮರೆಯಾದರೆ ತಕ್ಷಣಕ್ಕೆ ಎಲ್ಲರೂ ಕಂಗಲಾಗುತ್ತಾರೆ. ಅದರಲ್ಲೂ ಹೆಚ್ಚಿನ ಮೊತ್ತ ಮಿತಿ ಇರುವ ಕಾರ್ಡ್ ಆದರೆ, ಆತಂಕ ಇನ್ನಷ್ಟು ಹೆಚ್ಚುತ್ತದೆ.
ಕೆಲವು ಬ್ಯಾಂಕ್ ಗಳು ಕಾರ್ಡ್ ಗಳ ಮೇಲೆ ವಿಮೆ ಸೌಲಭ್ಯಗಳನ್ನು ನೀಡುತ್ತವೆ. ಅದರೆ, ಈ ಬಗ್ಗೆ ಹೆಚ್ಚಿನ ಗ್ರಾಹಕರಿಗೆ ಅರಿವಿರುವುದಿಲ್ಲ, ಕಾರ್ಡ್ ದಾರರು ತಮ್ಮ ಕಾರ್ಡಿಗೆ ನಾಮಂಕಿತರನ್ನು ಸೂಚಿಸಬಹುದು. ಅಕಾಲಿಕ ಮರಣ ಹಾಗೂ ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ಈ ಸೌಲಭ್ಯ ಅನುಕೂಲಕ್ಕೆ ಬರುತ್ತದೆ.
ಕ್ರೆಡಿಟ್ ಕಾರ್ಡ್ ನಲ್ಲಿ 'ನಂಬರ್' ಮಹತ್ವದ ಪಾತ್ರವಹಿಸುತ್ತದೆ. ಸಂಖ್ಯೆ ಇತರರಿಗೆ ರವಾನಿಸುವುದು ಭಾರಿ ತೊಂದರೆ ಆಹ್ವಾನಿಸಿದಂತಾಗುತ್ತದೆ.
ಒಂದು ವೇಳೆ ಈ ಎಲ್ಲಾ ಎಚ್ಚರಿಕೆಗಳನ್ನು ಕೈಗೊಳ್ಳದೆ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು? ಮುಂದೆ ಓದಿ...
1. ಕಾರ್ಡ್ ಕಳೆದುಕೊಂಡರೆ ತಕ್ಷಣವೇ ನಿಮ್ಮ ಬ್ಯಾಂಕಿಗೆ ಕರೆ ಮಾಡಿ, ಕಾರ್ಡ್ ಬ್ಲಾಕ್ ಮಾಡಿಸಿ.
* ಕಾರ್ಡ್ ಬ್ಲಾಕ್ ಮಾಡಲು ನಿಮ್ಮ ಖಾತೆ ಸಂಖ್ಯೆ, ಕೊನೆಯ ಬಾರಿಗೆ ಖರೀದಿಸಿದ ಮೊತ್ತ, ಕಾರ್ಡ್ ಕಳೆದುಕೊಂಡ ದಿನಾಂಕ/ಸಮಯ..ಇತ್ಯಾದಿ ವಿವರಗಳನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ. [ಕ್ರೆಡಿಟ್ ಕಾರ್ಡ್ ಬೇಕೆ? ಆನ್ ಲೈನ್ ನಲ್ಲೇ ಅಪ್ಲೈ ]
* ನಿಮ್ಮ ಕ್ರೆಡಿಟ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಹೊಂದಿಕೊಂಡಿದ್ದರೆ, ನೆಟ್ ಬ್ಯಾಂಕಿಂಗ್ ಮೂಲಕ ಕಾರ್ಡ್ ಸೌಲಭ್ಯವನ್ನು ನಿಷ್ಕ್ರಿಯಗೊಳಿಸಬಹುದು.

2. ಕಾರ್ಡ್ ಬ್ಲಾಕ್ ಬಗ್ಗೆ ಬ್ಯಾಂಕ್ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡುವುದರ ಜೊತೆಗೆ ಅಧಿಕೃತವಾಗಿ ಬ್ಯಾಂಕಿಗೆ ಇ ಮೇಲ್ ಕಳಿಸುವುದು ಒಳಿತು. ಇದರಿಂದ ನಿಮ್ಮ ದೂರಿಗೆ ಪ್ರತಿ ರಸೀತಿ ಸಿಕ್ಕಂತಾಗುತ್ತದೆ. ಮುಂದಿನ ಪ್ರಕ್ರಿಯೆಗಳಿಗೆ ಇದು ಪುರಾವೆಯೂ ಆಗಬಹುದು.
3. ಕಾರ್ಡ್ ಈಗಾಗಲೇ ದುರ್ಬಳಕೆಯಾಗಿದ್ದರೆ ತಕ್ಷಣವೇ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಕಾರ್ಡ್ ಬಳಸಿ ಹೆಚ್ಚಿನ ಮೊತ್ತ ಖಾಲಿ ಮಾಡಿದ್ದರೆ ಪೊಲೀಸ್ ನೆರವು ಅತ್ಯಗತ್ಯ.
4. ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ಹಳೆ ಕಾರ್ಡಿನ ಎಲ್ಲಾ ಲಿಂಕ್ಡ್ ಖಾತೆಗಳ ಸಂಪರ್ಕ ಕಡಿತಗೊಳಿಸಬಹುದು. ಹೊಸ ಕಾರ್ಡ್ ಪಡೆಯಲು ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ವಿಧಾನಗಳಿವೆ.
ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ
* ಕ್ರೆಡಿಟ್ ಕಾರ್ಡ್ ಸುರಕ್ಷಿತವಾಗಿ ಇರಿಸಿಕೊಳ್ಳಿ
* ನಿಮ್ಮ ಕಾರ್ಡ್ ಸಂಖ್ಯೆ ಯಾವುದೇ ಕಾರಣಕ್ಕೂ ಇತರರೊಡನೆ ಹಂಚಿಕೊಳ್ಳಬೇಡಿ.
* ಹಳೆ ಕಾರ್ಡ್ ಗಳನ್ನು ನಾಶಗೊಳಿಸಿ
* ನಿಮ್ಮ ಖಾತೆ ವಿವರಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಿರಿ.
* ಪಿನ್ ಬದಲಾಯಿಸಿದರೂ ಗೆಳೆಯರ ಕೈಗೆ ಕ್ರೆಡಿಟ್ ಕಾರ್ಡ್ ನೀಡಬೇಡಿ.
* ಕಾರ್ಡ್ ಬಳಸಿ ಆನ್ ಲೈನ್ ಶಾಂಪಿಂಗ್, ಇ ಕಾಮರ್ಸ್ ವೆಬ್ ತಾಣಗಳಲ್ಲಿ ವ್ಯವಹರಿಸುವಾಗ ಹುಷಾರಾಗಿರಿ.
ಕೊನೆ ಮಾತು: ಕ್ರೆಡಿಟ್ ಕಾರ್ಡ್ ಕಳೆದುಕೊಳ್ಳದಂತೆ ಇಟ್ಟುಕೊಳ್ಳುವುದು ಒಳ್ಳೆ ಅಭ್ಯಾಸ. ಈಗ ಸುರಕ್ಷತಾ ನಿಯಮಗಳು ಹೆಚ್ಚಾಗಿರುವುದರಿಂದ ಕಾರ್ಡ್ ಕಳೆದುಕೊಂಡರೂ ಸರಳವಾಗಿ ದುರ್ಬಳಕೆ ತಡೆಯಬಹುದು. ಅದರೆ, ಕೆಲಸ ಕಾರ್ಯ ಬಿಟ್ಟು ಬ್ಯಾಂಕಿನ ಜೊತೆ ವ್ಯವಹರಿಸುವ ಸಮಯವನ್ನು ಹಿಂಪಡೆಯಲಾಗುವುದಿಲ್ಲ. (ಗುಡ್ ರಿಟರ್ನ್ಸ್.ಇನ್)


Click it and Unblock the Notifications